ಬಿಳಿ ಡ್ರೆಸ್ಸಿನಲ್ಲಿ ಕಂಗೊಳಿಸಿದ ಕಂಗನಾ!
ನರೇಂದ್ರ ಮೋದಿ ಅವರ ಪ್ರಮಾಣ ವಚನ ಕಾರ್ಯಕ್ರಮದ ನಿಮಿತ್ತ ಗಣ್ಯಾತಿಗಣ್ಯರೆಲ್ಲರೂ ಭಾಗಿಯಾಗಿದ್ದರು. ಸಿನಿ ತಾರೆಯರ ದಂಡು ಆ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದು, ಬಾಲಿವುಡ್ ನ ಬಹುತೇಕರು ಮತ್ತೊಮ್ಮೆ ಮೋದಿ ಪ್ರಧಾನಿಯಾಗಿ ಪದಗ್ರಹಣ ಮಾಡಿದ್ದನ್ನು ನೋಡಿ ಕಣ್ತುಂಬಿಕೊಂಡರು. ಈ ಪೈಕಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಾಲಿವುಡ್ ನಟಿ ಕಂಗನಾ ರಣಾವತ್ ಮುಂಬೈ ಏರ್ ಫೋರ್ಟ್ ಗೆ ಬಂದಾಗ ಅವರು ಧರಿಸಿದ್ದ ಬಿಳಿ ಬಣ್ಣದ ಡ್ರೆಸ್ಸು ಕ್ಯಾಮೆರಾ ಕಣ್ಣಿಗೆ ಬಿದ್ದಿತ್ತು. https://www.instagram.com/p/ByEr7O8F2Io/?utm_source=ig_web_copy_link ಸೋಶಿಯಲ್ ಮೀಡಿಯಾದಲ್ಲಿ ಕಂಗನಾ ಧರಿಸಿದ್ದ ಡ್ರೆಸ್ಸಿನ ಕುರಿತಾಗಿಯೇ ಮಾತುಕತೆಗಳಾಗುತ್ತಿದ್ದು, […]
ಬಾಗೀನ ಕೊಟ್ಟು ಬೈಸಿಕೊಂಡ ಯುವ ಸಂಸದೆಯರು!
2019ರ ಲೋಕಸಭಾ ಚುನಾವಣೆ ಹಾಟ್ ಅಂಡ್ ಕ್ಯೂರಿಯಸ್. ಮೋದಿ ಮತ್ತೊಮ್ಮೆ ಪ್ರಧಾನಿಯಾದದ್ದು ಒಂದು ಕಡೆಯಾದರೆ, ಈ ಬಾರಿ ಸಂಸತ್ತಿಗೆ ಹಲವು ಸಿನಿಮಾ ತಾರೆಯರ ಪ್ರವೇಶವಾದದ್ದು ಮತ್ತೊಂದು ಕಡೆ. ಹೇಮಾ ಮಾಲಿನಿ, ಸ್ಮೃತಿ ಇರಾನಿ, ಸನ್ನಿ ಡಿಯೋಲ್, ರವಿ ಕಿಶನ್, ಬಾಬುಲ್ ಸುಪ್ರಿಯೋ, ಮನೋಜ್ ತಿವಾರಿ ಆಯ್ಕೆಯಾಗಿದ್ದಾರೆ. ಜತೆಗೆ ಯುವ ಚೆಲುವೆಯರಾದ ನುಸ್ರತ್ ಜಹಾನ್, ಮಿಮಿ ಚಕ್ರಬೋರ್ತಿ, ನವನೀತ್ ಕೌರ್ ಸಹ ಸಂಸತ್ತಿಗೆ ಎಂಟ್ರಿ ಪಡೆದಿದ್ದಾರೆ. ಮಮತಾ ಬ್ಯಾನರ್ಜಿ ಸಾರಥ್ಯದ ತೃಣಮೂಲ ಕಾಂಗ್ರೆಸ್ ಪಕ್ಷದ ನೂತನ ಸಂಸದೆಯರಾಗಿ ಆಯ್ಕೆಯಾಗಿರುವ […]
ಕತ್ರಿನಾ ಇಂದಿರಾಗಾಂಧಿ ಪಾತ್ರ ಮಾಡ್ಬೇಕಂತೆ!
ಬಹುನಿರೀಕ್ಷಿತ ಭಾರತ್ ಸಿನಿಮಾ ಸದ್ಯದಲ್ಲೇ ರಿಲೀಸ್ ಆಗಲಿದೆ. ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ಕತ್ರಿನಾ ಕೈಫ್ ಕಲರ್ ಫುಲ್ ಆಗಿ ಮಿಂಚಿದ್ದಾರೆ. ಈಗಾಗಲೇ ಟ್ರೇಲರ್ ಮತ್ತು ಆಡಿಯೋ ಮೂಲಕ ಉತ್ತಮ ಪ್ರತಿಕ್ರಿಯೆಗಳನ್ನು ಪಡೆದಿರುವ ಈ ಸಿನಿಮಾದ ಹೈಪ್ ನ ಮಧ್ಯೆ ಕತ್ರಿನಾ ಕೈಫ್ ಮತ್ತೊಂದು ಪಾತ್ರದಲ್ಲಿ ನಟಿಸುವ ಆಸೆಯನ್ನು ಹೊರಹಾಕಿದ್ದಾರೆ. ಹೌದು ಭಾರತದ ಉಕ್ಕಿನ ಮಹಿಳೆ ಹಾಗೂ ಮೊದಲ ಮಹಿಳಾ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಬಯೋಪಿಕ್ ನಲ್ಲಿ ತಾನು ನಟಿಸಲು ಉತ್ಸುಕಳಾಗಿದ್ದೇನೆಂದು ಕತ್ರಿನಾ ತಿಳಿಸಿದ್ದಾರೆ. ಬಹಳ […]
ನಗುವಾ ನಯನಾ ಮಧುರಾ ಮೌನ!
1983ರಲ್ಲಿ ರಿಲೀಸ್ ಆದ ಪಲ್ಲವಿ ಅನುಪಲ್ಲವಿ ಕನ್ನಡ ಸಿನಿಮಾ ಹೆಸರಾಂತ ನಟ ಹಾಗೂ ನಿರ್ದೇಶಕನ ಹುಟ್ಟಿಗೆ ಕಾರಣವಾಗಿತ್ತು. ಅನಿಲ್ ಕಪೂರ್ ಮತ್ತು ಮಣಿರತ್ನಂ ಅವರ ಚೊಚ್ಚಲ ಸಿನಿಮಾವದು. ಅದಾದಮೇಲೆ ಅನಿಲ್ ಕಪೂರ್ ಬಾಲಿವುಡ್ ನಲ್ಲಿ ಬೇಡಿಕೆಯ ನಟನಾಗಿ ಬೆಳೆದರೆ, ಮಣಿರತ್ನಂ ಭಾರತದ ಜನಮೆಚ್ಚಿದ ನಿರ್ದೇಶಕರಾಗಿ ಬೆಳೆದದ್ದು ಇತಿಹಾಸ. ಎರಡು ದಶಕಗಳ ಹಿಂದಿನ ವಿಚಾರ ಹೀಗ್ಯಾಕಪ್ಪ ಅಂತ ಯೋಚಿಸ್ತಿದ್ದೀರಾ.. ಇತ್ತೀಚಿಗೆ ನ್ಯಾಷನಲ್ ಫಿಲ್ಮ್ ಆರ್ಕೈವ್ ಆಫ್ ಇಂಡಿಯಾ ‘ಪಲ್ಲವಿ ಅನುಪಲ್ಲವಿ’ ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿತ್ತು. […]
ಭಾರತದಲ್ಲಿ ಚಿತ್ರೀಕರಣವಾಗಲಿದೆ ಹಾಲಿವುಡ್ ಸಿನಿಮಾ!
ಭಾರತದ ಬಹಳಷ್ಟು ಸಿನಿಮಾಗಳನ್ನು ವಿದೇಶಿ ಲೊಕೇಶನ್ನುಗಳಲ್ಲಿ ಶೂಟಿಂಗ್ ಮಾಡಿಕೊಂಡು ಬರುವ ಹವ್ಯಾಸ ಈಗೀಗ ಹೆಚ್ಚಾಗುತ್ತಿದೆ. ಆದರೆ ಹಾಲಿವುಡ್ ನ ಸಿನಿಮಾವೊಂದನ್ನು ಭಾರತದ ನೆಲದಲ್ಲಿ ಚಿತ್ರೀಕರಣ ಮಾಡಲಿದ್ದಾರೆಂಬ ಅಚ್ಚರಿ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಹೌದು ಹಾಲಿವುಡ್ ನಿರ್ದೇಶಕ ಕ್ರಿಸ್ಟೋಫರ್ ನೊಲನ್ ತಮ್ಮ ಟೆನೆಟ್ ಚಿತ್ರದ ಕೆಲ ಸೀನುಗಳನ್ನು ಭಾರತದಲ್ಲಿ ಚಿತ್ರೀಕರಿಸಲು ಡಿಸೈಡ್ ಮಾಡಿದ್ದಾರೆ ಎನ್ನಲಾಗಿದೆ. ಈ ಚಿತ್ರದಲ್ಲಿ ಬಾಲಿವುಡ್ ತಾರೆ ಡಿಂಪಲ್ ಕಪಾಡಿಯಾ ನಟಿಸುತ್ತಿದ್ದಾರೆ. ಈ ಹಿಂದೆ ಬಾಂಡ್ ಸರಣಿ ಸಿನಿಮಾಗಳಲ್ಲಿ ಒಂದು ಸಿನಿಮಾದ ಕೆಲವು ಭಾಗಗಳನ್ನು […]
ಡೈರೆಕ್ಟರ್ ಆಗಲಿದ್ದಾರೆ ಟಗರು ಪುಟ್ಟಿ!
ಸುಕ್ಕಾ ಸೂರಿ ಡೈರೆಕ್ಷನ್ನಿನ ಕೆಂಡಸಂಪಿಗೆ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ನಟಿ ಮಾನ್ವಿತಾ. ಆನಂತರ ಚೌಕ, ಟಗರು, ಕನಕ ಸಿನಿಮಾಗಳಲ್ಲಿಯೂ ನಟಿಸಿದ್ದರು. ಆನಂತರ ಕಣ್ಮರೆಯಾಗಿದ್ದ ಮಾನ್ವಿತ ಸದ್ಯ ಮತ್ತೆ ಕಮ್ ಬ್ಯಾಕ್ ಆಗಿದ್ದಾರೆ. ಒಟ್ಟೊಟ್ಟಿಗೆ ಮೂರು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಮಾನ್ವಿತಾ ಲವ್ ಇನ್ ಲಂಡನ್, ದಾರಿ ತಪ್ಪಿದ ಮಗ, ರಾಜಸ್ತಾನ ಡೈರೀಸ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದರ ಜತೆಗೆ ವೆಬ್ ಸಿರೀಸ್ ನಲ್ಲಿಯೂ ಆಕರ್ಷಿತರಾಗಿರುವ ಟಗರು ಪುಟ್ಟಿ ವೆಬ್ ಸರಣಿಯೊಂದನ್ನು ಮಾಡುವ ಉತ್ಸಾಹದಲ್ಲಿದ್ದಾರೆ. ಅಲ್ಲದೇ ಮಹಿಳಾ ಪ್ರಧಾನ […]
ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ ಗೀತಾ!
ಸ್ಟಾರ್ ಗಣೇಶ್ ಮತ್ತು ವಿಜಯ್ ನಾಗೇಂದ್ರ ಅವರ ಕಾಂಬಿನೇಷನ್ನಿನಲ್ಲಿ ಮೂಡಿಬರುತ್ತಿರುವ ಸಿನಿಮಾ ಗೀತಾ. ಈಗಾಗಲೇ ಸಿನಿಮಾದ ಶೂಟಿಂಗ್ ಭಾಗಶಃ ಮುಗಿದಿದ್ದು, ಎರಡು ಹಾಡುಗಳ ಚಿತ್ರೀಕರಣವಷ್ಟೇ ಬಾಕಿ ಇದೆ. ಸದ್ಯ ಗೀತಾ ಚಿತ್ರದ ಡಬ್ಬಿಂಗ್ ಕೆಲಸವನ್ನು ಜೂನ್ ನಲ್ಲಿ ಶುರುಮಾಡಲು ಚಿತ್ರತಂಡವು ಪ್ಲ್ಯಾನ್ ಮಾಡಿದೆ. ಗೀತಾ ಸಿನಿಮಾವನ್ನು ಎಸ್. ಎಸ್. ಫಿಲ್ಸ್ಮ್ ಸಹಯೋಗದಲ್ಲಿ ಗೋಲ್ಡನ್ ಫಿಲ್ಮ್ಸ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಎಂಬತ್ತರ ದಶಕದಲ್ಲಿ ಶಂಕರ್ ನಾಗ್ ನಟಿಸಿದ್ದ ಇದೇ ಶೀರ್ಷಿಕೆಯ ಸಿನಿಮಾ ಬಹುದೊಡ್ಡ ಯಶಸ್ಸನ್ನು ಗಳಿಸಿತ್ತು. ತಮ್ಮ ವೃತ್ತಿ […]
ಹೊಸಬರ ಯಾರ್ ಮಗ ಪೋಸ್ಟರ್ ಬಿಡುಗಡೆ!
ಕುಟುಂಬದವರು ಸಿನಿಮಾದಲ್ಲಿದ್ದರೆ ಮಾತ್ರ ಮಕ್ಕಳು ಸಿನಿಮಾಕ್ಕೆ ಬರಬೇಕು. ಆಗಷ್ಟೇ ನೇಮು ಫೇಮು ಎನ್ನುವ ಓಬಿರಾಯನ ಕಾಲದ ಡೈಲಾಗುಗಳು ಈಗೀಗ ಮೂಲೆಗೆ ಸೇರಿದ ಒಳಕಲ್ಲಿನಂತಾಗಿದೆ. ಯಾಕಂದ್ರೆ ಪ್ರತಿಭೆಯ ಹೊರತಾಗಿ ಈಗ ಅವಾವುದೇ ಲೆಕ್ಕಕ್ಕೆ ಬರುತ್ತಿಲ್ಲ. ಸ್ಯಾಂಡಲ್ ವುಡ್ ಗೆ ಅಂತಹ ಹೊಸ ಹೊಸ ಪ್ರತಿಭೆಗಳ ಎಂಟ್ರಿ ಜೋರಾಗಿಯೇ ನಡೆಯುತ್ತಿದೆ. ಡೈರೆಕ್ಟರ್ ನಿಂದ ಹಿಡಿದು, ಮ್ಯೂಜಿಕ್ ಡೈರೆಕ್ಟರ್ರು, ಹೀರೋ, ಹೀರೋಯಿನ್ನು, ವಿಲನ್ನು ಇತ್ಯಾದಿ ಇತ್ಯಾದಿ ಹೊಸಬರೆ ಸದ್ಯ ಸ್ಯಾಂಡಲ್ ವುಡ್ ನಲ್ಲಿ ಬೇಡಿಕೆ ಉಳಿಸಿಕೊಳ್ಳುತ್ತಿದ್ದಾರೆ. ಸದ್ಯ ಯಾರ್ ಮಗಾ ಎನ್ನುವ […]
ಅಮರ ಪ್ರೇಮ ಕಾವ್ಯದಲ್ಲಿ ಅಂಥಾದ್ದೇನಿಲ್ಲ!
ತನಗೆ ಸಂಬಂಧವೇ ಇರದ ಜೀವದ ಉಳಿವಿಗಾಗಿ ತನ್ನದಲ್ಲದ ತಪ್ಪನ್ನು ಮೈಮೇಲೆಳೆದುಕೊಳ್ಳುವ ಹುಡುಗ. ಪ್ರಪಾತಕ್ಕೆ ಬಿದ್ದವನನ್ನು ಜೀವದ ಹಂಗು ತೊರೆದು ಕಾಪಾಡುವ, ಪರಿಸರ ರಕ್ಷಣೆಗೆ ಪಣ ತೊಟ್ಟು ನಿಲ್ಲುವ ಹೃದಯ ವೈಶಾಲ್ಯತೆಯ ಗುಣ ಹೊಂದಿರುವ ಕಲಿಯುಗದ ಮರಿ ಕರ್ಣನಂಥಾ ಅದೇ ಹುಡುಗ ದುಡ್ಡಿಗಾಗಿ ಏನು ಬೇಕಾದರೂ ಮಾಡಲು ಹೇಸದ ವ್ಯಕ್ತಿತ್ವದವನು. ಅಪ್ಪನ ಅಪಾರ ಶ್ರೀಮಂತಿಕೆಯ ನಡುವೆಯೂ ಮೆಚ್ಚಿದ ಹುಡುಗನಿಗಾಗಿ ಹಂಬಲಿಸುವ, ಪ್ರೀತಿಯನ್ನೇ ಜಗವೆಂದುಕೊಂಡ ಹುಡುಗಿ. ಹಣದ ವ್ಯಾಮೋಹಕ್ಕೆಬಿದ್ದು ನಂಬಿದವಳಿಗೆ ಕೈ ಕೊಡುವ ಹೀರೋ… ನಾಯಕನಟನ ವ್ಯತಿರಿಕ್ತ ಮನಸ್ಥಿತಿಯನ್ನು ತೆರೆದಿಡುವ […]
ಡಾರ್ಕ್ ಕೇವ್ ನಲ್ಲಿ ಕುಣಿದ ಶ್ರೀಯಾ!
ದಕ್ಷಿಣ ಭಾರತ ಖ್ಯಾತ ಸೂಪರ್ ಸ್ಟಾರ್ ಗಳ ಜತೆ ನಟಿಸಿದ್ದ ಹವಾ ಸೃಷ್ಟಿಸಿದ್ದ ತಮಿಳು ನಟಿ ಶ್ರೀಯಾ ಶರಣ್. ಕನ್ನಡವೂ ಸೇರಿದಂತೆ ಬಹುಭಾಷೆಗಳಲ್ಲಿ ನಟಿಸಿದ್ದ ಈಕೆ ಕೆಲವು ವರ್ಷಗಳ ಹಿಂದಷ್ಟೇ ತಮ್ಮ ಬಹುಕಾಲದ ಪ್ರೇಮಿಯ ಜತೆಗೆ ಮ್ಯಾರೇಜ್ ಆಗಿ ಯುಎಸ್ ನಲ್ಲಿ ಸೆಟಲ್ ಕೂಡ ಆಗಿದ್ದರು. https://www.instagram.com/p/Bx_ItIcFmXT/?utm_source=ig_web_copy_link ಮದುವೆಯ ಬಳಿಕ ಸಿನಿಮಾದಿಂದ ದೂರ ಉಳಿದಿದ್ದ ಶ್ರೀಯಾ ಸದ್ಯಕ್ಕೆ ಕೆಲವೊಂದು ಜಾಹೀರಾತುಗಳಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಆಗಾಗ ದರ್ಶನ ನೀಡುತ್ತಿರುತ್ತಾರೆ. ಕೆಲವು ದಿನಗಳ ಹಿಂದೆ ನಟಿ ಶ್ರೀಯಾ ವಿದೇಶದಲ್ಲಿ ತನ್ನ […]