ಶಿವನಂದಿ ಟೈಟಲ್ ರಿಜಿಸ್ಟರ್ ಮಾಡಿಸಿದ ದಿನಕರ್!
ಇತ್ತೀಚಿಗೆ ರಿಲೀಸ್ ಆಗಿ ಶತದಿನೋತ್ಸವವನ್ನು ಆಚರಿಸಿಕೊಂಡು ಯಜಮಾನ ಚಿತ್ರದಲ್ಲಿ ಬಳಕೆಯಾಗಿದ್ದ ಶಿವನಂದಿ ಎಂಬ ಎಣ್ಣೆ ಬ್ರ್ಯಾಂಡ್ ನಲ್ಲಿಯೇ ಹೊಸ ಸಿನಿಮಾ ಸೆಟ್ಟೇರಲಿದೆ. ಹೌದು ಶಿವನಂದಿ ಟೈಟಲ್ ರಿಜಿಸ್ಟಾರ್ ಆಗಿದ್ದು, ವಿಶೇಷವೆಂದರೆ ಈ ಟೈಟಲನ್ನು ದರ್ಶನ್ ಸಹೋದರ ದಿನಕರ್ ತೂಗುದೀಪ್ ನೊಂದಣಿ ಮಾಡಿಸಿದ್ದಾರೆ. ಇನ್ನು ಟೈಟಲ್ ರಿಜಿಸ್ಟಾರ್ ಮಾಡಿಸಿದ ಬೆನ್ನಲ್ಲೇ ದಿನಕರ್ ಹೊಸ ಸಿನಿಮಾ ಇದೇ ಆಗಿರಬಹುದೆಂಬ ಡೌಟು ಗಾಂಧೀನಗರದಲ್ಲಿದೆ. ಈಗಾಗಲೇ ದಿನಕರ್ ಮತ್ತು ದರ್ಶನ್ ಕಾಂಬಿನೇಷನ್ನಿನಲ್ಲಿ ಸರ್ವಾಂತರ್ಯಾಮಿ ಸಿನಿಮಾ ಅನೌನ್ಸ್ ಆಗಿದ್ದು, ಶಿವನಂದಿ ದಿನಕರ್ ಅವರ ಮತ್ತೊಂದು […]
ಹಗಲು ಕನಸಿನಲ್ಲಿ ಮಾಸ್ಟರ್ ಆನಂದ್!
ಮಾಸ್ಟರ್ ಆನಂದ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಹಗಲು ಕನಸು ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಸದ್ಯ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಈ ಸಿನಿಮಾವನ್ನು ದಿನೇಶ್ ಬಾಬು ನಿರ್ದೆಶನ ಮಾಡಿದ್ದಾರೆ. ನೈಜ ಘಟನೆಗಳನ್ನು ಆಧರಿಸಿದ ಚಿತ್ರ ಇದಾಗಿದ್ದು, ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಹಗಲು ಕನಸು ಮೂಡಿಬಂದಿದೆ. ಮೂವರು ಸಹೋದರರು ಮತ್ತು ಇಬ್ಬರು ಸಹೋದರಿಯರ ನಡುವೆ ನಡೆಯುವ ಘಟನೆಗಳೇ ಹಗಲು ಕನಸಿಗೆ ವಸ್ತುವಿಷಯವಾಗಿದೆ. ವಿಶೇಷವೆಂದರೆ ದಿನೇಶ್ ಬಾಬು ಹಗಲು ಕನಸು ಚಿತ್ರಕ್ಕೆ ನಿರ್ದೇಶನದ ಜತೆಗೆ ಛಾಯಾಗ್ರಹಣವನ್ನು ಮಾಡಲಿದ್ದಾರೆ. ಇನ್ನು […]
ದಿಯಾ ಪೋಸ್ಟರ್ ರಿಲೀಸ್ ಆಯ್ತು!
ವಿಭಿನ್ನ ಕಥಾ ಹಂದರಗಳ ಮೂಲಕ ಪ್ರೇಕ್ಷಕರಲ್ಲಿ ದಿಗಿಲು ಹುಟ್ಟಿಸಿದ್ದ ನಿರ್ದೇಶಕ ಅಶೋಕ್ ಮತ್ತೊಮ್ಮೆ ನಿರ್ದೇಶನ ಮಾಡುತ್ತಿದ್ದು, ಈ ಬಾರಿ ರೊಮ್ಯಾಂಟಿಕ್ ಕಥೆಯೊಂದನ್ನು ಹೇಳಹೊರಟಿದ್ದಾರೆ. ಚಿತ್ರಕ್ಕೆ ದಿಯಾ ಎಂದು ಹೆಸರಿಟ್ಟಿದ್ದು, ಇತ್ತೀಚಿಗಷ್ಟೇ ಚಿತ್ರದ ಫಸ್ಟ್ ಲುಕ್ ಸಹ ಬಿಡುಗಡೆಯಾಗಿದೆ. ಈ ಚಿತ್ರದ ಕುರಿತು ಫೇಸ್ ಬುಕ್ ನಲ್ಲಿ ಅಧಿಕೃತವಾಗಿ ನಿರ್ದೆಶಕ ಅಶೋಕ್ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ದಿಯಾ ಸಿನಿಮಾವನ್ನು ಫ್ಯಾಮಿಲಿ ಫಿಲ್ಮ್ ಫ್ಯಾಕ್ಟರಿಯಲ್ಲಿ ಕೃಷ್ಣ ಚೈತನ್ಯ ನಿರ್ಮಾಣ ಮಾಡುತ್ತಿದ್ಧಾರೆ. ಉಳಿದಂತೆ ವಿಶಾಲ್ ವಿಠ್ಠಲ್ ಮತ್ತು ಸೌರಭ ವಾಘಮರೆ ಛಾಯಾಗ್ರಹಂ […]
ಅಲ್ಲು ಅರ್ಜುನ್ ಸಿನಿಮಾದಲ್ಲಿ ಜೋಡಿಯಾಗಿ ಆಲಿಯಾ ಸಾಧ್ಯತೆ!
ಲಾಂಗ್ ಗ್ಯಾಪ್ ನ ನಂತರ ಅಲ್ಲು ಅರ್ಜುನ್ ಮತ್ತೆ ಸಿನಿಮಾ ಮಾಡುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಮೂರು ಚಿತ್ರಗಳಲ್ಲಿ ಅಲ್ಲು ಅರ್ಜುನ್ ನಟಿಸುತ್ತಿದ್ದು, ಕ್ರಮವಾಗಿ ತ್ರಿವಿಕ್ರಮ್, ಸುಕುಮಾರ್, ವೇಣು ಶ್ರೀರಾಮ್ ಅವರ ನಿರ್ದೇಶನದಲ್ಲಿ ಅಭಿನಯಿಸಲಿದ್ದಾರೆ. ತ್ರಿವಿಕ್ರಮ್ ಅವರ ಚಿತ್ರದಲ್ಲಿ ಪೂಜಾ ಹೆಗ್ಡೆ ಮತ್ತು ನಿವೇತಾ ಪೆತುರಾಜ್ ಮುಖ್ಯ ಪಾತ್ರದಲ್ಲಿದ್ದರೆ, ಸುಕುಮಾರ್ ಅವರ ಚಿತ್ರ ರಶ್ಮಿಕಾ ಮಂದಣ್ಣ ಕನ್ ಫರ್ಮ್ ಆಗಿದ್ದಾರೆ. ಇನ್ನು ಐಕಾನ್ ಚಿತ್ರಕ್ಕಾಗಿ ನಿರ್ಮಾಪಕ ದಿಲ್ ರಾಜು ಬಾಲಿವುಡ್ ನ ಟಾಪ್ ನಟಿಯನ್ನು ಕರೆಸಲು ನಿರ್ಧರಿಸಿದ್ದಾರೆ […]
ಪ್ರಿಯಾ ಸೆರಾವ್ ಗೆ ಯೂನಿವರ್ಸ್ ಆಸ್ಟ್ರೇಲಿಯಾ ಪ್ರಶಸ್ತಿ!
ಭಾರತ ಮೂಲದ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದ ಪ್ರಿಯಾ ಸೆರಾವ್ ಗೆ 2019ರ ಯೂನಿವರ್ಸ್ ಆಸ್ಟ್ರೇಲಿಯಾ ಪ್ರಶಸ್ತಿ ಲಭಿಸಿದೆ. ಮೆಲ್ಬೋರ್ನ್ನಲ್ಲಿ ದೇಶಾದ್ಯಂತ ಇತರ 26 ಮಹಿಳೆಯರನ್ನು ಹಿಂದಿಕ್ಕಿ ಪ್ರಿಯಾ ವಿಜಯದ ಮಾಲೆಯನ್ನು ಧರಿಸಿದ್ದಾರೆ. 26 ವರ್ಷದ ಈ ಬೆಡಗಿ, ವರ್ಷದ ಕೊನೆಯಲ್ಲಿ ನಡೆಯುವ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಆಸ್ಟ್ರೇಲಿಯಾವನ್ನು ಪ್ರತಿನಿಧಿಸಲಿದ್ದಾರೆ. ಇದು ಪ್ರಿಯಾ ಅವರ ಮೊದಲ ಸೌಂದರ್ಯ ಸ್ಪರ್ಧೆಯಾಗಿರುವುದರಿಂದ ಪ್ರಶಸ್ತಿಯನ್ನು ಗೆದ್ದಿರುವುದು ಪ್ರಿಯಾ ಸಂತಸಕ್ಕೆ ಕಾರಣವಾಗಿದೆ. ವೆಸ್ಟರ್ನ್ ಆಸ್ಟ್ರೇಲಿಯಾದ ಬೆಲ್ಲಾ ಕಾಸಿಂಬಾ ಮತ್ತು ಇನ್ನೊಬ್ಬ ವಿಕ್ಟೋರಿಯನ್ ಮರಿಜಾನಾ ರಾಡ್ಮನೋವಿಕ್ ಅವರು […]
`ಸೈಡ್ ವಿಂಗ್’ ನಲ್ಲಿ `ಕನ್ನಡಕ್ಕಾಗಿ ಒಂದನ್ನು ಒತ್ತಿ’ದ್ದ ನಟ!
ಕಳೆದ ವರ್ಷ ರಿಲೀಸ್ ಆಗಿ ಪ್ರೇಕ್ಷಕರಿಂದ ಪ್ರಶಂಸೆ ಪಡೆದ ‘ಕನ್ನಡಕ್ಕಾಗಿ ಒಂದನ್ನು ಒತ್ತಿ’ ಚಿತ್ರದ ಮೂಲಕ ನಾಯಕ ನಟರಾಗಿ ಪರಿಚಿತರಾಗಿದ್ದ ಅವಿನಾಶ್ ಇದೀಗ ನಿರ್ದೇಶಕರಾಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಹೌದು, ಅವಿನಾಶ್ ರವರು ಇದೀಗ ‘ಸೈಡ್ ವಿಂಗ್’ ಚಿತ್ರದ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಅಂದ ಹಾಗೆ ಅವರು ನಿರ್ದೇಶನ ಮಾಡಿರುವ ‘ಸೈಡ್ ವಿಂಗ್’ ಚಿತ್ರದ ಟೀಸರ್ ಇಂದು ಸಂಜೆ ಯುಟ್ಯೂಬ್ ನಲ್ಲಿ ರಿಲೀಸ್ ಆಗಲಿದೆ. ಇದೊಂದು ರಂಗಭೂಮಿಯ ಕಥೆಯನ್ನು ಒಳಗೊಂಡ ಸಿನಿಮಾವಾಗಿದ್ದು, ರಂಗಭೂಮಿಯಲ್ಲಿ ಸೈಡ್ ವಿಂಗ್ […]
ಗ್ಯಾಂಗ್ ಸ್ಟಾರ್ ವೇಷ ತೊಟ್ಟ ಪ್ರಜ್ವಲ್ ದೇವರಾಜ್!
ಲವ್ವರ್ ಬಾಯ್ ಕ್ಯಾರೆಕ್ಟರ್ ಗಳಲ್ಲೇ ಹೆಚ್ಚಾಗಿ ಮಿಂಚಿದ್ದ ನಟ ಪ್ರಜ್ವಲ್ ದೇವರಾಜ್. ಇದೀಗ ಪಕ್ಕಾ ಆ್ಯಕ್ಷನ್ ಲುಕ್ ನಲ್ಲಿ ತೆರೆಮೇಲೆ ಬರೋದಕ್ಕೆ ರೆಡಿಯಾಗಿದ್ದಾರೆ. ಈ ಹಿಂದೆ ನಟಿಸಿದ್ದ ಗೆಳೆಯ ಸಿನಿಮಾದ ನಂತರ ಪ್ರಜ್ವಲ್ 12ನೇ ವರ್ಷದ ನಂತರ ಮತ್ತದೇ ರೀತಿಯ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗೆಳೆಯ ಚಿತ್ರದಲ್ಲಿ ಗ್ಯಾಂಗ್ ಸ್ಟರ್ ರೋಲ್ನಲ್ಲಿ ಮಿಂಚಿದ್ದ ಪ್ರಜ್ವಲ್ ದೇವರಾಜ್ ಇದೀಗ ಹೆಸರಿಡದ ಹೊಸ ಚಿತ್ರದಲ್ಲಿ ಮತ್ತೊಮ್ಮೆ ಗ್ಯಾಂಗ್ ಸ್ಟಾರ್ ಆಗಲಿದ್ದಾರೆ. ಪ್ರಜ್ವಲ್ ಚಿತ್ರದಲ್ಲಿ 3 ವಿಭಿನ್ನ ಶೇಡ್ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ […]
ಪುತ್ತೂರಿನ ಖಾಸಗಿ ಕಾರ್ಯಕ್ರಮದಲ್ಲಿ ದರ್ಶನ್ ಪ್ರತ್ಯಕ್ಷ!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಖಾಸಗಿ ಕಾರ್ಯಕ್ರಮವೊಂದಕ್ಕೆ ಹೋಗಿದ್ದರು. ಅಲ್ಲಿನ ಪ್ರಸಿದ್ಧ ಮಹತೋಭಾರ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಬಳಿಕ ಅಲ್ಲಿ ನೆರೆದಿದ್ದ ತಮ್ಮ ಅಭಿಮಾನಿಗಳ ಜತೆ ಬೆರೆತು ಅವರೊಂದಿಗೆ ಕಾಲ ಕಳೆದಿದ್ಧಾರೆ. ಸಿನಿಮಾದಲ್ಲಿ ಮಾತ್ರ ಸ್ಟಾರ್ಡರ್ಮ್ ತೋರದೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿಜ ಜೀವನದಲ್ಲಿಯೂ ಥೇಟ್ ಯಜಮಾನನಂತೆ ಕಂಗೊಳಿಸತೊಡಗಿದ್ದಾರೆ. ಸದ್ಯ ನಟ ದರ್ಶನ್ ಅವರು ಇದೀಗ ‘ರಾಬರ್ಟ್’ ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿ ಆಗಿದ್ದಾರೆ. ಚಿತ್ರದ ಎರಡನೇ ಶೆಡ್ಯೂಲ್ ನಡೆಯುತ್ತಿದ್ದು, ಇನ್ನೂ […]
ತೆಲುಗಿನ ರಿಮೇಕ್ ನಲ್ಲಿ ಕಿಂಗ್ ಖಾನ್!
ಜೀರೋ ಸಿನಿಮಾ ಫೇಲ್ಯೂರ್ ನ ನಂತರ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಯಾವುದೇ ಸಿನಿಮಾಗಳನ್ನು ಒಪ್ಪಿಕೊಂಡಿರಲಿಲ್ಲ. ಸಾಕಷ್ಟು ನಿರ್ದೇಶಕರು ಹೊಸ ಸಿನಿಮಾಗಾಗಿ ಎಷ್ಟೇ ಕಥೆ ಹೇಳಿದ್ದರೂ ಸಹ ಶಾರುಖ್ ಅದ್ಯಾಕೋ ಎಲ್ಲವನ್ನೂ ರಿಜೆಕ್ಟ್ ಮಾಡುತ್ತಲೇ ಬಂದಿದ್ದರು. ಸದ್ಯ ಶಾರುಖ್ ಖಾನ್ ತೆಲುಗು ಜರ್ಸಿ ಸಿನಿಮಾವನ್ನು ನೋಡಿ ಫಿದಾ ಆಗಿದ್ದು, ಅದರ ಹಿಂದಿ ರಿಮೇಕ್ ನಲ್ಲಿ ಕಿಂಗ್ ಖಾನ್ ನಟಿಸುತ್ತಾರೆಂಬ ಮಾಹಿತಿ ಬಿ ಟೌನ್ ನಲ್ಲಿ ಹರಿದಾಡುತ್ತಿದೆ. ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಜರ್ಸಿಯ ಹಿಂದಿ ರೈಟ್ಸ್ […]
ಜಿಮ್ ನಲ್ಲಿ ಬೆವರಿಳಿಸುತ್ತಿದ್ದಾರೆ ಶಾನ್ವಿ!
ಚಂದ್ರಲೇಖ ಸಿನಿಮಾ ಮೂಲಕ ಚಂದನವನಕ್ಕೆ ಎಂಟ್ರಿಕೊಟ್ಟವರು ಶಾನ್ವಿ ಶ್ರೀವಾತ್ಸವ್. ಆ ಚಿತ್ರದ ಯಶಸ್ಸಿನ ನಂತರ ಮಾಸ್ಟರ್ ಪೀಸ್, ಭಲೇ ಜೋಡಿ, ಸುಂದರಾಂಗ ಜಾಣ, ಸಾಹೇಬ, ತಾರಕ್ ಸೇರಿದಂತೆ ಬಹುತೇಕ ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಅವರು, ತೆಲುಗು ಚಿತ್ರರಂಗದಲ್ಲಿಯೂ ಹೆಸರು ಮಾಡಿದ್ದಾರೆ. ಸದ್ಯ ಅವನೇ ಶ್ರೀಮನ್ನಾರಾಯಣ, ಗೀತಾ, ರವಿಚಂದ್ರ ಸಿನಿಮಾ ಕೆಲಸವನ್ನು ಕಂಪ್ಲೀಟ್ ಮಾಡಿಕೊಂಡಿದ್ದು, ಫಿಟ್ ನೆಸ್ ನತ್ತ ಫೋಕಸ್ ಮಾಡಿದ್ದಾರೆ. ಜಿಮ್ ನಲ್ಲಿ ಬಿಡುವಿಲ್ಲದೇ ವರ್ಕ್ ಔಟ್ ಸಹ ಮಾಡುತ್ತಿದ್ದಾರೆ. ಇತ್ತೀಚಿಗೆ ಶಾನ್ವಿ ವರ್ಕ್ ಔಟ್ ಮಾಡುತ್ತಿರುವ […]