ಹುಚ್ಚವೆಂಕಟ್ ರನ್ನು ಹೊಡೆಯಬೇಡಿ: ಭುವನ್ ಪೊನ್ನಣ್ಣ
ಸೋಶಿಯಲ್ ಮೀಡಿಯಾದ ವೈಭವೀಕರಣದ ಜತೆ ಜತೆಗೆ ಸುದ್ದಿ ಮಾಧ್ಯಮದವರು ಟಿ ಆರ್ ಪಿ ಹುಚ್ಚಿಗೆ ಬಿದ್ದು ವೆಂಕಟ್ ನನ್ನು ಹುಚ್ಚ ವೆಂಕಟ್ ರನ್ನಾಗಿ ಮಾರ್ಪಡಿಸಿದ ಶಾಪ ತಡ್ಡದೇ ಬಿಡುವುದಿಲ್ಲ. ಸಿನಿಮಾವನ್ನೇ ಉಸಿರಾಗಿಸಿಕೊಂಡಿದ್ದ ವೆಂಕಟ್ ರ ಸಾಮಾಜಿಕ ಕಳಕಳಿ ವಿಶಾಲವಾಗಿದ್ದರೂ ಅದನ್ನು ಸಮಾಜಕ್ಕೆ ತಲುಪಿಸುವ ಸಂವಹನದ ಕೊರತೆ ಅವರಲ್ಲಿ ಬಹಳವಿತ್ತು. ಉತ್ತಮ ಉದ್ದೇಶದೊಂದಿಗೆ ಸಿನಿಮಾ ಮಾಡುತ್ತಿದ್ದ ವೆಂಕಟ್ ಗೆ ಉಂಟಾದ ಸೋಲು ಆತನನ್ನು ಮಾನಸಿಕವಾಗಿ ದ್ವಂದ್ವಕ್ಕೆ ಸಿಲುಕುವಂತೆಯೂ ಮಾಡಿಬಿಟ್ಟಿತು. ಸದ್ಯ ಆ ದ್ವಂದ್ವ ಯಾವುದೋ ಬೀದಿಯಲ್ಲಿ ಯಾರೊಂದಿಗೂ ಜಗಳಕ್ಕೆ […]
ಡೋಂಟ್ ವರಿ ಕೋಮಲ್!
ಮೊದಲಿನಿಂದಲೂ ಅಷ್ಟೇ! ತಾನು ಅಂದುಕೊಂಡಿದ್ದನ್ನು ಸಾಧಿಸಿಯೇ ತೀರಬೇಕೆನ್ನು ವ್ಯಕ್ತಿ; ಹಠಕ್ಕೆ ಬಿದ್ದರೆ ಥೇಟು ರಾಕ್ಷಸನಂತೆ ಕೆಲಸ ಮಾಡುವ ಮನುಷ್ಯ ಕೋಮಲ್. ಅಣ್ಣನ ಜೊತೆ ಸಣ್ಣ ಪುಟ್ಟ ಕಾಮಿಡಿ ರೋಲುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಕೋಮಲ್ ಮನಸ್ಸಿನಲ್ಲಿ ತಾನೊಬ್ಬ ಪರಿಪೂರ್ಣ ಹಾಸ್ಯ ನಟ ಅನ್ನಿಸಿಕೊಳ್ಳಬೇಕು ಅನ್ನೋ ಬಯಕೆ ಹುಟ್ಟಿತ್ತು. ಕೂಡಲೇ ಅದಕ್ಕೆ ಬೇಕಿರುವ ತಯಾರಿಗಳನ್ನು ಮಾಡಿಕೊಂಡರು, ಒಂದರ ಹಿಂದೊಂದು ಅವಕಾಶ ಪಡೆದು ಕನ್ನಡದ ಯಾವ ಸ್ಟಾರ್’ಗಳಿಗೂ ಕಡಿಮೆಯಿಲ್ಲದಷ್ಟು ವರ್ಚಸ್ಸು ಪಡೆದರು. ಅದೇ ಹೊತ್ತಿಗೆ ‘ಇನ್ನೂ ಎಷ್ಟು ದಿನ ಈ ಕಾಮಿಡಿ ರೋಲ್ ಮಾಡೋದು? […]
ನೆರವೇರಿತು ತಮಸ್ ಚಿತ್ರದ ಮುಹೂರ್ತ ಸಮಾರಂಭ!
ಲೇಖಕಿ ವಿಜಯಲಕ್ಷ್ಮಿ ಮಂಜುನಾಥರೆಡ್ಡಿ ಅವರು ಬರೆದಿರುವ ಕತ್ತಲು ಕಾದಂಬರಿಯ ಆಧಾರಿತ ಚಿತ್ರವೊಂದು ಸ್ಯಾಂಡಲ್ ವುಡ್ ನಲ್ಲಿ ಸೆಟ್ಟೇರಿದ್ದು ಅದಕ್ಕೆ ತಮಸ್ ಎಂದು ಟೈಟಲ್ ಫಿಕ್ಸ್ ಮಾಡಲಾಗಿದೆ. ಇತ್ತೀಚಿಗಷ್ಟೇ ವಿಜಯನಗರದ ಆದಿಚುಂಚನಗಿರಿ ಮಠದ ಕಾಲಭೈರವೇಶ್ವರ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಸಮಾರಂಭ ನಡೆದಿದ್ದು, ಕಾರ್ಯಕ್ರಮದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ಉಪಾಧ್ಯಕ್ಷ ಉಮೇಶ್ ಬಣಕಾರ್ ಅವರು ಆಗಮಿಸಿ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದರು. ತಮಸ್ ಸಿನಿಮಾವೊಂದು ಟ್ರೈಯಾಂಗಲ್ ಲವ್ ಸ್ಟೋರಿಯಾಗಿದ್ದು, ಈ ಚಿತ್ರವನ್ನು ರೆಬಲ್ […]
ಫ್ಯಾನು ತಿರುಗಲೇ ಇಲ್ಲ!
ಸಿನಿಮಾಗೆ ಬರುವ ಹೊಸಾ ಪ್ರತಿಭೆಗಳಲ್ಲಿ ಒಂದು ಭ್ರಮೆಯಿದೆ. ‘ದೊಡ್ಡ ನಟರ ಹೆಸರನ್ನು ಬಳಸಿಕೊಂಡು ಸಿನಿಮಾ ಮಾಡಿದರೆ, ಅದನ್ನು ನೋಡಲು ಜನ ರಭಸವಾಗಿ ಥಿಯೇಟರಿಗೆ ನುಗ್ಗಿಬಿಡುತ್ತಾರೆ’ ಎಂದು. ಅದು ನಿಜವೇ ಆಗಿದ್ದಿದ್ದರೆ ಈ ಹೊತ್ತಿಗೆ ‘ಫ್ಯಾನ್’ ಅನ್ನೋ ಸಿನಿಮಾ ಸೂಪರ್ ಹಿಟ್ ಆಗಿ ಥಿಯೇಟರಿನ ಮುಂದೆ ಜನಸ್ತೋಮ ನೆರೆದಿರಬೇಕಿತ್ತು. ಹೇಳಿ ಕೇಳಿ ಇದು ಶಂಕರ್ ನಾಗ್ ಅವರ ಹೆಸರನ್ನು ಬಳಸಿಕೊಂಡು ತಯಾರಾಗಿರುವ ಚಿತ್ರ. ಸಿನಿಮಾದ ಬಿಡುಗಡೆಯ ದಿನ ಆಟೋ ಚಾಲಕರಿಗೆ ಉಚಿತ ಪ್ರದರ್ಶನವನ್ನೂ ಏರ್ಪಡಿಸಿದ್ದರು. ಯಾವಾಗ ಉಚಿತ ಅಂತಾ […]
ನಟ ರೋಹನ್ ಪಬ್ ಮೇಲೆ ಸಿಸಿಬಿ ದಾಳಿ!
ಬೆಂಗಳೂರಿನಲ್ಲಿ ನಿಯಮ ಬಾಹಿರವಾಗಿ ನಡೆಸುತ್ತಿದ್ದ ಪಬ್ ಮೇಲೆ ಸಿಸಿಬಿ ಪೊಲೀಸ್ ದಿಢೀರ್ ದಾಳಿ ನಡೆಸಿದ್ದಾರೆ. ಅಲ್ಲದೇ ಪಬ್ ಮಾಲೀಕರಾದ ನಟ ರೋಹನ್ ರನ್ನು ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಕಾನೂನಿನ ನಿಯಮ ಮೀರಿ ಬೆಳಿಗಿನ ಜಾವ 3 ಗಂಟೆಯವರೆಗೂ ಪಬ್ ಮತ್ತು ಡಿಸ್ಕೋಥೆಕ್ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಲೀ ಮೆರಿಡಿಯನ್ ಹೋಟೆಲನಲ್ಲಿ ನಟ ರೋಹನ್ ಮಾಲೀಕತ್ವದ ಶುಗರ್ ಫ್ಯಾಕ್ಟರಿ ಪಬ್ ಮೇಲೆ ದಾಳಿ ನಡೆದಿದೆ. ಈಗಾಗಲೇ ಲೈಸೆನ್ಸ್ ರದ್ದಾಗಿ 5 ತಿಂಗಳು ಮುಗಿದಿದ್ದರೂ ಇನ್ನು ಅದನ್ನು ನವೀಕರಿಸದೇ ರೋಹನ್ ಅಕ್ರಮವಾಗಿ ಪಬ್ […]
ಸೆಪ್ಟೆಂಬರ್ ನಿಂದ ರಾಬರ್ಟ್ ಎರಡನೇ ಹಂತದ ಚಿತ್ರೀಕರಣ!
ಹಿಂದೊಂದು ಜಮಾನವಿತ್ತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಂದೋ ಎರಡೋ ಸಿನಿಮಾಗಳಷ್ಟೇ ವರ್ಷಕ್ಕೆ ಬಿಡುಗಡೆಯಾಗುತ್ತಿತ್ತು. ಅದೂ ಆದರಾಯಿತು. ಇಲ್ಲವೆಂದರೆ ಇಲ್ಲ. ಅಭಿಮಾನಿಗಳ ಒತ್ತಾಯದ ಮೇರೆಗೆ ದರ್ಶನ್ ಮತ್ತಷ್ಟೂ ಸಿನಿಮಾಗಳಲ್ಲಿ ನಟಿಸುವ ಮೂಲಕ ಅಭಿಮಾನಿಗಳ ಕನಸನ್ನು ನನಸು ಮಾಡಿದ್ದರು. ಸದ್ಯ ಬರೋಬ್ಬರಿ 3/4 ಚಿತ್ರಗಳು ಬಿಡುಗಡೆಯಾಗುವ ಸಾಧ್ಯತೆ ಇದೆ. ಈಗಾಗಲೇ ಕುರುಕ್ಷೇತ್ರದ ಸಕ್ಸಸ್ ನ ಖುಷಿಯಲ್ಲಿರುವ ಡಿ ಬಾಸ್ ಬತ್ತಳಿಕೆಯಲ್ಲಿ ಒಡೆಯ, ರಾಬರ್ಟ್ ಇನ್ನೂ ಸಾಕಷ್ಟು ಚಿತ್ರಗಳು ಇದ್ದು, ಒಡೆಯ ರಿಲೀಸ್ ಗೆ ರೆಡಿಯಾಗಿದೆ. ರಾಬರ್ಟ್ ಸದ್ದಿಲ್ಲದೇ ಚಿತ್ರೀಕರಣವನ್ನು […]
2020ಕ್ಕೆ ಬರಲಿದೆ ಬೆಲ್ ಬಾಟಂ ಪಾರ್ಟ್ 2!
ನಿರ್ದೇಶಕನಾಗಿ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡಿದ್ದ ರಿಷಬ್ ಶೆಟ್ಟಿ ನಾಯಕನಾಗಿಯೂ ನಟಿಸಿ ಸೈ ಎನ್ನಿಸಿಕೊಂಡ ಬ್ಲಾಕ್ ಬಸ್ಟರ್ ಸಿನಿಮಾ ಬೆಲ್ ಬಾಟಂ. ಪತ್ತೇದಾರಿ ಕಥೆಯಾಧಾರಿತ ಈ ಸಿನಿಮಾದಲ್ಲಿ ರೆಟ್ರೋ ಲುಕ್ ನಲ್ಲಿ ಡಿಟೆಕ್ಟೀವ್ ದಿವಾಕರನಾಗಿ ರಿಷಬ್ ಶೆಟ್ಟಿ ಕಮಾಲು ಮಾಡಿದ್ದರು. ಬೆಲ್ ಬಾಟಂ ರಿಷಬ್ ಶೆಟ್ಟಿಗೆ ಒಳ್ಳೆಯ ಇಮೇಜ್ ತಂದುಕೊಟ್ಟದಲ್ಲದೇ ನಿರ್ಮಾಪಕರಿಗೆ ಒಳ್ಳೆ ಕಮಾಯಿಯಾಗುವಂತೆಯೂ ಮಾಡಿತ್ತು. ಈ ಚಿತ್ರವನ್ನು ಒಲವೇ ಮಂದಾರ ಖ್ಯಾತಿಯ ನಿರ್ದೇಶಕ ಜಯತೀರ್ಥ ನಿರ್ದೇಶಿಸಿದ್ದರು. ಬೆಲ್ ಬಾಟಂ ಸಕ್ಸಸ್ ನ ನಂತರ ಬೆಲ್ ಬಾಟಂ […]
ಗಾಂಧಿನಗರದಲ್ಲಿ ಶುರುವಾಯ್ತು ತನಿಖೆ!
ತನಿಖೆ ಎಂಬ ಪದವನ್ನು ಪೊಲೀಸ್ ಸ್ಟೇಷನ್ನಿನಲ್ಲಿಯೇ ಹೆಚ್ಚಾಗಿ ಕೇಳುವ ಕಾಲವೊಂದಿತ್ತು. ಈಗೀಗ ಕೊಲೆ ಪ್ರಕರಣಗಳ ಪಟ್ಟಿ ದೊಡ್ಡದಾಗುತ್ತಾ ಹೋಗುತ್ತಿದ್ದಂತೆ ಸುದ್ದಿ ವಾಹಿನಿಗಳಲ್ಲಿ ಆ ಪದ ದೇವರ ನಾಮವಾಗಿಬಿಟ್ಟಿದೆ. ಅಪರಾಧಗಳ ಕುರಿತಾದ ಸುದ್ದಿಗಳನ್ನು ಹೇಳುವಾಗ ಆ ಪದವನ್ನು ಬಳಸದಿದ್ದರೆ ಹೇಗೆ. ಸದ್ಯ ಗಾಂಧಿನಗರದಲ್ಲಿ ಇಂತಹುದೇ ತನಿಖೆಯೊಂದು ಶುರುವಾಗಿದೆ. ಆದರೆ ಈ ತನಿಖೆಯನ್ನು ಪೊಲೀಸರಿಂದಾಗದೇ ಸ್ಯಾಂಡಲ್ ವುಡ್ ನ ಮಂದಿ ಮಾಡುತ್ತಿದ್ಧಾರೆ. ಯೆಸ್.. ತನಿಖೆ ಎಂಬ ಹೆಸರಿನ ಸಿನಿಮಾವೊಂದು ರೆಡಿಯಾಗಿದ್ದು, ಸದ್ಯದಲ್ಲಿಯೇ ಬಿಡುಗಡೆಯಾಗಲಿದೆ. ಹಲವು ದಶಕಗಳ ಹಿಂದೆ ಕನಕಪುರದಲ್ಲಿ ನಡೆದ […]
ದೀಪಿಕಾ ಪಡುಕೋಣೆ ಗರ್ಭಿಣಿ ಡೌಟಿನಲ್ಲಿ ಬಿ ಟೌನು!
ಸಾಮಾನ್ಯವಾಗಿ ಯಾರೇ ಮದುವೆಯಾಗಲಿ ಕೆಲ ದಿನಗಳು ಕಳೆಯುತ್ತಿದ್ದಂತೆ ಕೇಳೋ ಪ್ರಶ್ನೆ ಏನಾದ್ರೂ ಗುಡ್ ನ್ಯೂಸು.. ಅಂತಾನೇ. ಇನ್ನು ಸೆಲೆಬ್ರೆಟಿಗಳ ವಿಚಾರದಲ್ಲಿ ಇದು ಇನ್ನೂ ಅತಿಯಾಗಿರುತ್ತಾರೆ. ಯಾವುದೇ ಸಿನಿಮಾ ಪ್ರೆಸ್ ಮೀಟ್ ಗಳಿಗೆ ಹೋದರೂ ಸೆಲೆಬ್ರೆಟಿಗಳಿಗೆ ಮುಜುಗರವಾಗುವಂತಹ ಪರ್ಸನಲ್ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾರೆ. ಸಾಕಷ್ಟು ಬಾರಿ ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸುವ ಸೆಲೆಬ್ರೆಟಿಗಳು ಮತ್ತೂ ಕೆಲವು ಬಾರಿ ನಕ್ಕು ಸುಮ್ಮನಾಗುತ್ತಾರೆ. ಸದ್ಯ ಬಾಲಿವುಡ್ ನಲ್ಲಿ ರಣಬೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಜೋಡಿ ಇಂತಹ ಪ್ರಶ್ನೆಗಳಿಂದ ಬೇಸತ್ತಿದೆ. ದೀಪಿಕಾ ಪಡುಕೋಣೆಯಂತೂ […]
ನಿರ್ಮಾಪಕರಾಗುತ್ತಾರಂತೆ ಧೋನಿ!
ಯಾವುದಾದರೂ ಒಂದು ಕ್ಷೇತ್ರದಲ್ಲಿ ಗುರುತಿಸಿಕೊಂಡು ಫೇಮಸ್ ಆದಮೇಲೆ ಮತ್ತೊಂದು ಕ್ಷೇತ್ರದತ್ತ ಸಾಮಾನ್ಯವಾಗಿ ಹೊರಳಿಕೊಳ್ಳೋದು ಕಾಮನ್ನು. ಸದ್ಯ ಮಹೇಂದ್ರ ಸಿಂಗ್ ಧೋನಿ ತಮ್ಮ ಕ್ರಿಕೆಟ್ ಜೀವನದಿಂದ ವಿದಾಯ ಪಡೆದ ನಂತರದಲ್ಲಿ ಸಿನಿಮಾ ನಿರ್ಮಾಣ ಮಾಡುವ ಚಿಂತನೆಯಲ್ಲಿದ್ದಾರೆಂಬ ಸುದ್ದಿ ಬಿ ಟೌನ್ ನಲ್ಲಿ ಹರಿದಾಡುತ್ತಿದೆ. ಯೆಸ್.. ಧೋನಿ ಆಪ್ತರಾಗಿರುವ ಬಾಲಿವುಡ್ ನಟ ಜಾನ್ ಅಬ್ರಾಹಂ ಅವರ ಮುಂದಿನ ಚಿತ್ರಕ್ಕೆ ಧೋನಿ ಬಂಡವಾಳ ಹೂಡಲಿದ್ದಾರೆಂಬ ಸುದ್ದಿಯೂ ಎದ್ದಿದ್ದು ಈ ಕುರಿತು ಧೋನಿಯಾಗಲಿ, ಜಾನ್ ಅಬ್ರಾಹಂ ಅವರಾಗಲಿ ಗುಟ್ಟು ಬಿಟ್ಟುಕೊಟ್ಟಿಲ್ಲ. ಮೊದಲಿನಿಂದಲೂ ಸಿನಿಮಾ […]