ಎಕೆ 50 ಹಿಡಿದ ತಲಾ ಅಜಿತ್
‘ತಲಾ ಎನ್ನುವ ಬಿರುದಿನಿಂದಲೇ ಫೇಮಸ್ಸಾಗಿರುವ ತಮಿಳು ನಟ ಅಜಿತ್. ಯಾರೊಂದಿಗೂ ಬೆರೆಯದೆ, ಅಭಿಮಾನಿ ಸಂಘಗಳೂ ಸೃಷ್ಟಿಯಾಗದಂತೆ ನೋಡಿಕೊಂಡು, ಸಿನಿಮಾ ಚಿತ್ರೀಕರಣ ಬಿಟ್ಟು ಬೇರೆ ಯಾವ ಸಭೆ ಸಮಾರಂಭಗಳಲ್ಲಿ ಭಾಗವಹಿಸದೆ, ಶೂಟಿಂಗ್ ಮುಗಿದ ಮೇಲೆ ಕಾರ್ ರೇಸು, ಅದೂ ಇದೂ ಅಂತಾ ತೊಡಗಿಸಿಕೊಳ್ಳುವ ನಟ ಈತ. ಆದರೆ ಬೇಡವೆಂದರೂ ಅಭಿಮಾನಿಗಳು ಅಜಿತ್ ಬೆನ್ನು ಬೀಳುತ್ತಾರೆ, ಸಿನಿಮಾಗಳನ್ನು ಗೆಲ್ಲಿಸುತ್ತಾರೆ. ಅದಕ್ಕೆ ಕಾರಣ ಆತನಲ್ಲಿರುವ ಅಸಾಧಾರಣ ಪ್ರತಿಭೆ! ಈಗಿನ ವಿಚಾರವೇನೆಂದರೆ, ಅಜಿತ್ ನಟಿಸಿರುವ ‘ನೇರ್ ಕೊಂಡ ಪಾರ್ವೈ ಎನ್ನುವ ತಮಿಳು ಸಿನಿಮಾ […]
ಅಧ್ಯಕ್ಷ ಇನ್ ಅಮೆರಿಕಾ ರಾಗಿಣಿ ದ್ವಿವೇದಿಯ 25ನೇ ಚಿತ್ರ!
ಹತ್ತು ವರ್ಷಗಳ ಹಿಂದೆ ಈಕೆ ಯಾರೆನ್ನೋದು ಜಗತ್ತಿಗೆ ಗೊತ್ತಿರಲಿಲ್ಲ. ರಾಗಿಣಿ ಮೊದಲು ನಟಿಸಿದ್ದು ‘ಹೋಳಿ ಎನ್ನುವ ಸಿನಿಮಾದಲ್ಲಿ. ಉದ್ದಕ್ಕಿದ್ದ ಈ ಹುಡುಗಿಯನ್ನು ಕಿಚ್ಚ ಸುದೀಪ ಕರೆದು ವೀರಮದಕರಿ ಸಿನಿಮಾದಲ್ಲಿ ಛಾನ್ಸು ಕೊಡದೇ ಹೋಗಿದ್ದರೆ ಬಹುಶಃ ಈಕೆ ಸ್ಟಾರ್ ನಟಿಯಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವ ಛಾನ್ಸೇ ಇರುತ್ತಿರಲಿಲ್ಲವೇನೋ?! ಯಾವಾಗ ಸುದೀಪ್ ಗುರುತಿಸಿ ರಾಗಿಣಿಗೆ ಅವಕಾಶ ಕೊಟ್ಟರೋ? ಈಕೆಯ ನಸೀಬೇ ಬದಲಾಗಿಹೋಗಿತ್ತು. ತಾನು ನಟಿಸಿದ ಮೊದಲ ಸಿನಿಮಾ ಹೋಳಿ ಅಂತಾ ಹೇಳೋದನ್ನೂ ಮರೆಯುವಷ್ಟು ಅವಕಾಶಗಳು ರಾಗಿಣಿ ಪಾಲಿಗೆ ಒದ್ದೊದ್ದುಕೊಂಡು ಬಂದವು. […]
ಕಾಜಲ್ ಅಗರ್ವಾಲ್ ಕಾಲ್ ಸೆಂಟರ್!
ದಕ್ಷಿಣ ಭಾರತದ ಬಹುತೇಕ ಸ್ಟಾರ್ ಹೀರೋಗಳ ಜೊತೆಗೆ ನಟಿಸಿ ಹೆಸರು ಮಾಡಿದಾಕೆ ಕಾಜಲ್ ಅಗರ್ವಾಲ್. ಇತ್ತೀಚೆಗಷ್ಟೇ ಈಕೆ ನಟಿಸಿದ್ದ ತಮಿಳಿನ ಕೋಮಾಲಿ ಮತ್ತು ತೆಲುಗಿನ ರಣರಂಗಂ ಸಿನಿಮಾಗಳು ಹಿಟ್ ಆಗಿವೆ. ನಮ್ಮ ರಮೇಶ್ ಅರವಿಂದ್ ನಿರ್ದೇಶಿಸಿರುವ ‘ಬಟರ್ಫ್ಲೈ ಸಿನಿಮಾ ತಮಿಳಿನಲ್ಲಿ ‘ಪ್ಯಾರಿಸ್ ಪ್ಯಾರಿಸ್ ಹೆಸರಿನಲ್ಲಿ ತಯಾರಾಗಿದ್ದು ಅದೂ ಕೂಡಾ ಇನ್ನೇನು ಬಿಡುಗಡೆ ಹಂತದಲ್ಲಿದೆ. ಶಂಕರ್ ನಿರ್ದೇಶಿಸಲಿರುವ, ಕಮಲ್ ಹಾಸನ್ ಅವರ ಇಂಡಿಯನ್-೨ ಚಿತ್ರಕ್ಕೂ ಇದೇ ಕಾಜಲ್ ಅಗರ್ವಾಲ್ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ. ಇದರ ನಡುವೆ ಜೆಫ್ರಿ ಗೀ ಚಿನ್ […]
ಆ ನಟ, ಈ ನಟನ ವಿಷಯವಲ್ಲ… ಇದು ಕನ್ನಡ ಚಿತ್ರರಂಗದ ಭವಿಷ್ಯ!
ಇದು ಆ ನಟನ ವಿಷಯ, ಈ ನಟನ ವಿಷಯ ಅಂತೆಲ್ಲಾ ನೋಡದೆ ಕನ್ನಡ ಚಿತ್ರರಂಗದ ಭವಿಷ್ಯವೆಂದು ನೋಡಿ ಪ್ರತಿಯೊಬ್ಬರೂ ಧ್ವನಿ ಎತ್ತಬೇಕಿದೆ. ಬನ್ನಿ ಕನ್ನಡ ಚಿತ್ರರಂಗವನ್ನು ಉಳಿಸೋಣ. ಪೈರಸಿ ಮಾಡಿದವರಿಗೆ ಶಿಕ್ಷೆಯಾಗುವ ತನಕ ವಿರಮಿಸದಿರೋಣ. ಕನ್ನಡ ಚಿತ್ರರಂಗದ ಮೇಲೆ ಪೈರಸಿ ದಾಳಿ ಕುರಿತಂತೆ.. ಹತ್ತಿರ ಹತ್ತಿರ ಶತಮಾನದ ಇತಿಹಾಸವಿರುವ ಕನ್ನಡ ಚಿತ್ರರಂಗದಲ್ಲಿ ಕೆಟ್ಟ ಸಂಪ್ರದಾಯವೊಂದು ಶುರುವಾಗಿ ಹೋಗಿದೆ. ಅದು ಪೈರೇಸಿ ಎಂಬ ಭೂತ. ಈ ಭೂತವನ್ನು ಸುದೀಪ್ ಸಿನಿಮಾ, ಅಪ್ಪು ಸಿನಿಮಾ, ದರ್ಶನ್ ಸಿನಿಮಾ, ಶಿವಣ್ಣ ಸಿನಿಮಾ, […]
ಹೆಣ್ಣುಮಗಳಿಗೆ ಹೀಗೆಲ್ಲಾ ಅಂದವನನ್ನು ಏನೆನ್ನಬೇಕು?
“ಹೆಂಗಸಿನ ಮಾತನ್ನು ಸೀರಿಯಸ್ಸಾಗಿ ಯಾವತ್ತೂ ತೆಗೆದುಕೊಳ್ಳಬೇಡಿ, ಹೆಣ್ಣೊಬ್ಬಳಿಗೆ ಗಂಡಸಾದವನು ಪ್ರೂವ್ ಮಾಡುವುದು ಏನೂ ಇರುವುದಿಲ್ಲ” ಎಂದೆಲ್ಲಾ ಬರೆದುಕೊಂಡಿರುವ ಇವನೆಂತ ಮಾನಸಿಕ ರೋಗಿ ಎಂದು ತೋರಿಸಿಕೊಂಡಿದ್ದಾನೆ. ಇವನು ಯೂಟ್ಯೂಬಿನಲ್ಲಿ ರೆಕಾರ್ಡ್ ಮಾಡಿ ಹಾಕಿರುವ ಮಾತುಗಳೇ ಹೆಣ್ಣು ಮಕ್ಕಳ ಬಗ್ಗೆ ಎಂತಹ ಕೀಳು ಮನಸ್ಥಿತಿ ಇವನಿಗಿದೆ ಎಂದು ತೋರಿಸುತ್ತವೆ…. ಇವನಿಗೆ ಜನ್ಮ ನೀಡಿದ್ದು ಒಬ್ಬ ಹೆಣ್ಣು ಎನ್ನುವ ಕನಿಷ್ಠ ಗೌರವವೂ ಇಲ್ಲದಂತೆ ಹೆಣ್ಣು ಎಂದರೇನೇ ಅನಿಷ್ಟ ಎಂಬ ಕರ್ಮಠ ಮನಸ್ಥಿತಿ ಈ ರೋಗಿಷ್ಟನದು. ವರ್ಷಕ್ಕೆ ಮುಂಚೆ ಟ್ರಂಕ್ ಎನ್ನುವ ಸಿನಿಮಾವೊಂದು […]
ವಿಜಯ್ ಅಭಿಮಾನಿಗಳು ಕೊಟ್ಟ ಲಂಚ ಏನು ಗೊತ್ತಾ?
ತಮಿಳು ನಟ, ಇಳಯ ದಳಪತಿ ಬಿರುದಾಂಕಿದ ವಿಜಯ್ ಸಿನಿಮಾಗಳು ರಿಲೀಸಿಗೆ ರೆಡಿಯಾಗುತ್ತಿದ್ದಂತೇ ಅದರ ವಿರುದ್ಧ ದನಿಯೆತ್ತುವವರು ಗಂಟಲು ಸರಿಮಾಡಿಕೊಳ್ಳೋಕೆ ಶುರು ಮಾಡುತ್ತಾರೆ! ಸದ್ಯ ವಿಜಯ್ ನಟನೆಯ ‘ಬಿಗಿಲ್’ ಸಿನಿಮಾ ತೆರೆಗೆ ಬರಲು ರೆಡಿಯಾಗುತ್ತಿದೆ. ಲಾಂಗು ಹಿಡಿದ ವಿಜಯ್ ಮಾಂಸ ಕತ್ತರಿಸುವ ಮರದ ದಿಮ್ಮಿಯ ಮೇಲೆ ಕಾಲಿಟ್ಟುಕೊಂಡು ಕೂತ ಪೋಸ್ಟರೊಂದು ತಮಿಳುನಾಡಿನಾದ್ಯಂತ ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು. ಕೊಯಂಬತ್ತೂರಿನಲ್ಲಿ ಮಾಂಸ ಮಾರಾಟಗಾರನೊಬ್ಬ ಪೊಲೀಸ್ ಠಾಣೆಯೊಳಗೆ ಹೋಗಿ ‘ಬಿಗಿಲ್’ ಚಿತ್ರದ ಪೋಸ್ಟರನ್ನು ಚಿಂದಿ ಮಾಡುವ ಮೂಲಕ ಪ್ರತಿಭಟಿಸಿದ್ದ. ಈ ಪ್ರತಿರೋಧ ಹೆಚ್ಚಿತ್ತಿರೋದನ್ನು […]
ಪೂರ್ಣಚಂದ್ರ ತೇಜಸ್ವಿ ಸಂಗೀತ
ನಕ್ಷೆ ಎನ್ನುವ ಚಿತ್ರದ ಫಸ್ಟ್ ಲುಕ್ ವಿಡಿಯೋ ಬಿಡುಗಡೆಯಾಗಿದೆ. ಕೆ.ಜಿ.ಎಫ್. ಚಿತ್ರದಲ್ಲಿ ಯಶ್ ತಾಯಿಯಾಗಿ ನಟಿಸಿದ್ದ ಅರ್ಚನಾ ಜೋಯಿಸ್ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಗ್ರ ಹೋರಾಟ ಮಾಡಿ ಫೇಮಸ್ಸಾಗಿರುವ, ಕಿರಿಕ್ ಪಾರ್ಟಿ ಪ್ರಮೋದ್ ಶೆಟ್ಟಿ ಈ ಸಿನಿಮಾದ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅರ್ಚನಾ ಜೋಯಿಸ್ ಜರ್ನಲಿಸ್ಟ್ ಅಂಜಲಿಯಾಗಿ ಪಾತ್ರ ನಿರ್ವಹಿಸಿದರೆ, ಪ್ರಮೋದ್ ಶೆಟ್ಟಿ ಪೊಲೀಸ್ ಅಧಿಕಾರಿಯಾಗಿ ಅವತಾರವೆತ್ತಿದ್ದಾರೆ. ರೇಲ್ವೇ ಟ್ರ್ಯಾಕ್ ಒಂದರಲ್ಲಿ ಬಿದ್ದ ಹೆಣ, ಪೊಲೀಸ್ ತನಿಖೆ ಮತ್ತದರ ಸುತ್ತ ಬಿಚ್ಚಿಕೊಳ್ಳುವ ಕತೆ ‘ನಕ್ಷೆ’ಯಲ್ಲಿದೆ. […]
ರಿಷಬ್ ಶೆಟ್ಟಿ ಎಗ್ಗೆಗ್ಗರಿಸಿ ಒದ್ದಿದ್ದರು!
ಎಲ್ಲೆಲ್ಲಿಂದಲೋ ದುಡ್ಡು ಹೊಂಚಿತಂದು, ಪಡಬಾರದ ಪಾಡು ಪಟ್ಟು ಸಿನಿಮಾ ನಿರ್ಮಿಸುವ ನಿರ್ಮಾಪಕರು, ಜೀವವನ್ನೇ ಬಸಿದು ನಿರ್ದೇಶಿಸಿರುವ ಡೈರೆಕ್ಟರುಗಳು ಒಂದು ಕಡೆ ಒದ್ದಾಡುತ್ತಿದ್ದರೆ, ದುಡ್ಡಿನಾಸೆಗೆ ಕನ್ನಡ ಚಿತ್ರಗಳನ್ನು ಪೈರಸಿ ಮಾಡಿ, ನಿರ್ಮಾಪಕರನ್ನು ಹಿಂಡುತ್ತಿರುವ ಪೈಶಾಚಿಕ ಪ್ರವೃತ್ತಿ ಕೆಲವರದ್ದು. ‘ಪೈಲ್ವಾನ್ ಸಿನಿಮಾ ನೋಡಿದ್ರಾ? ಅಂದರೆ ‘ಹೋ.. ಆನ್ಲೈನಲ್ಲಿ ಒಳ್ಳೇ ಪ್ರಿಂಟೇ ಬಿಟ್ಟಿದಾರೆ… ಅಂತಾ ಜನ ಮಾತಾಡುತ್ತಿದ್ದಾರೆ. ಇಂಥ ಮಾತನ್ನು ಕೇಳಿದರೆ ಜೀವ ತೇದು ಕೋಟಿಗಳಿಗೆ ಲೆಕ್ಕವಿಲ್ಲದಂತೆ ಖರ್ಚು ಮಾಡಿ ಸಿನಿಮಾ ಮಾಡಿದ ನಿರ್ಮಾಪಕನ ಎದೆಮೇಲೆ ಒದ್ದಂತಾಗೋದಿಲ್ಲವಾ? ಹಿಂದೆಲ್ಲಾ ಪೈರಸಿ ಸಿಡಿ […]
ಕನ್ನಡದ ಹಿರಿಮೆ ಹೆಚ್ಚಿಸಿದ ಮಹಿಳಾ ನಿರ್ದೇಶಕಿ!
ಕನ್ನಡದ ಸಿನಿಮಾವೊಂದು, ಅದರಲ್ಲೂ ಮಹಿಳಾ ನಿರ್ದೇಶಕಿಯೊಬ್ಬರು ನಿರ್ದೇಶಿಸಿದ ಚೊಚ್ಚಲ ಸಿನಿಮಾ ನ್ಯೂಯಾರ್ಕ್ನಲ್ಲಿ ನಡೆಯುವ ಇಂಡಿಯನ್ ಫಿಲ್ಮ್ ಫೆಸ್ಟಿವಲ್ನ ವರ್ಲ್ಡ್ ಪ್ರೀಮಿಯರ್ ಸೇರಿದಂತೆ ಜಗತ್ತಿನ ಆರೇಳು ದೇಶಗಳಲ್ಲಿ ಪ್ರದರ್ಶನಗೊಂಡಿದೆ. ಅದು ರೂಪಾ ರಾವ್ ನಿರ್ದೇಶನದ ಗಂಟುಮೂಟೆ ಚಿತ್ರ. ಸಾಮಾನ್ಯವಾಗಿ ಸಿನಿಮಾ ಕತೆಗಳು ಗಂಡಸರ ದೃಷ್ಟಿಯಲ್ಲೇ ಸಾಗುತ್ತವೆ. ಆದರೆ ಇದು ಹೆಣ್ಣುಮಕ್ಕಳ ದೃಷ್ಟಿಕೋನದಲ್ಲಿ ನಡೆಯುವಂತಾ ಕತೆ ಹೊಂದಿದೆ. ಯೂ ಟರ್ನ್ ಮತ್ತು ಒಂದು ಮೊಟ್ಟೆಯ ಕತೆ ಚಿತ್ರ ಬಿಟ್ಟರೆ ನ್ಯೂಯಾರ್ಕ್ ವರ್ಲ್ಡ್ ಪ್ರೀಮಿಯರ್ನಲ್ಲಿ ಪ್ರದರ್ಶನಗೊಂಡ ಮೂರನೇ ಚಿತ್ರ ಗಂಟುಮೂಟೆ. ಈ […]
ಕನ್ನಡಕ್ಕೆ ಜೈ… ಪ್ರೀತಿಗೆ ಸೈ!!
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಸಿನಿಮಾ ತೆರೆಗೆ ಬಂದಿದೆ. ಈ ಚಿತ್ರದಲ್ಲಿ ಗಣೇಶ್ ಕನ್ನಡ ಮತ್ತು ಕರ್ನಾಟಕದ ಪರ ದನಿ ಎತ್ತಿದ್ದಾರೆ. ಗೋಕಾಕ್ ಚಳವಳಿಯನ್ನು ಮರುಸೃಷ್ಟಿಸಲಾಗಿದೆ. ಸಂತೋಷ್ ಆನಂದ್ ರಾಮ್ ಅವರ ಸಿನಿಮಾಗಳಲ್ಲಿ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದ ವಿಜಯ್ ನಾಗೇಂದ್ರ ನಿರ್ದೇಶನದ ಮೊದಲ ಸಿನಿಮಾ- ಹೀಗೆ ಇತ್ಯಾದಿ ಕಾರಣಗಳಿಗಾಗಿ ಕುತೂಹಲ ಮೂಡಿಸಿದ್ದ ಚಿತ್ರ ಗೀತಾ. 80ರ ದಶಕ, ಆವತ್ತು ಕನ್ನಡ, ಕನ್ನಡತನವನ್ನು ಉಳಿಸಿಕೊಳ್ಳಲು ಈ ನೆಲದಲ್ಲೇ ಎದುರಾಗಿದ್ದ ಪ್ರತಿರೋಧಗಳು, ಆ ಹೊತ್ತಿನ ತಲ್ಲಣಗಳ ಮೂಲಕ […]