ಇದು ಮೊಟ್ಟಮೊದಲ ಹಾಲಿವುಡ್ ಕನ್ನಡ ಚಿತ್ರ!
ಸುಮನ್ ನಗರ್’ಕರ್ ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತ ನಟಿ. ಕನ್ನಡಿಗರ ಪಾಲಿಗೆ ಬೆಳದಿಂಗಳ ಬಾಲೆ ಎಚಿದೇ ಚಿರಪರಿಚಿತರಾಗಿರುವ ಸುಮನ್ ಬಬ್ರೂ ಸಿನಿಮಾವನ್ನು ನಿರ್ಮಿಸಿ ನಟಿಸಿದ್ದಾರೆ. ಅವರ ಅನುಭವಗಳು ಅವರದ್ದೇ ಮಾತುಗಳಲ್ಲಿ ಕೇಳಿದರೆ ಚೆಂದ… ನಿರೂಪಣೆ: ಸುಮ ಜಿ ಸುಮನ್ ನಗರ್ಕರ್ ಮತ್ತು ಯುಗ ಕ್ರಿಯೇಷನ್ಸ್ ನಿರ್ಮಾಣ ಮಾಡಿರುವ ಮೊಟ್ಟಮೊದಲ ಹಾಲಿವುಡ್ ಕನ್ನಡ ಚಿತ್ರ ಬಬ್ರು. ಇಷ್ಟು ದಿನ ನಟನೆ ಆಯಿತು, ಈಗ ನಿರ್ಮಾಣದ ಒಂದು ಅನುಭವ ಸಹ ಆಗ್ತಿದೆ. ಇದು ಪೂರ್ತಿಯಾಗಿ ಅಮೆರಿಕಾದಲ್ಲಿ ಚಿತ್ರೀಕರಣಗೊಂಡಿರುವ ಒಂದು ಜರ್ನಿ […]
ಗುಲಾಬಿ ಮಂಜ ಬಾಲು ಈಗ 19ಏಜಲ್ಲಿ ಏನು ಮಾಡಿದ್ದಾರೆ?!
ಪೂಜಾ ಗಾಂಧಿ ಅಭಿನಯದ ಅನು ಅನ್ನೋ ಸಿನಿಮಾ ಬಂದಿತ್ತಲ್ಲಾ? ಅದರಲ್ಲಿ ಗುಲಾಬಿ ಮಂಜನ ಕ್ಯಾರೆಕ್ಟರಿನಲ್ಲಿ ನಟಿಸಿದ್ದವರು ಬಾಲು. ಅನು ನಂತರ ಮೇಸ್ತ್ರಿ ಸಿನಿಮಾದಲ್ಲಿ ಹೀರೋ ಆಗಿ, ಲೂಸ್ ಮಾದ ಯೋಗಿಯ ಕಾಲಭೈರವ ಚಿತ್ರದಲ್ಲಿ ವಿಲನ್ ಆಗಿ ನಟಿಸಿದ್ದ ಬಾಲು ಈಗ ಯಾರೂ ಊಹಿಸಲೂ ಸಾಧ್ಯವಾಗದ, ಎಂಥವರೂ ಅಚ್ಛರಿಗೊಳ್ಳುವಂಥಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದು ೧೯ ಏಜ್ ನಾನ್ಸೆನ್ಸ್ ಸಿನಿಮಾ! ಅನು ಸಿನಿಮಾದ ಪಾತ್ರಕ್ಕಾಗಿ ಬಾಲು ಸಾಕಷ್ಟು ರಿಸ್ಕು ತೆಗೆದುಕೊಂಡಿದ್ದರು. ಪಾತ್ರಕ್ಕಾಗಿ ಏನು ಬೇಕಾದರೂ ಮಾಡುತ್ತೀನಿ ಅನ್ನೋರನ್ನ ನೋಡಿದ್ದೇವೆ. ಆದರೆ, […]
ಕಥಾಸಂಗಮಕ್ಕೆ ಸರ್ಕಾರಿ ಸೂತ್ರ!
ಕಿರಿಕ್ ಪಾರ್ಟಿ, ಬೆಲ್ ಬಾಟಮ್, ಸರ್ಕಾರಿ ಪ್ರಾಥಮಿಕ ಶಾಲೆ ಖ್ಯಾತಿಯ ರಿಷಭ್ ಶೆಟ್ಟಿ ಮುಖ್ಯಸ್ಥಿಕೆಯಲ್ಲಿ ಕಥಾ ಸಂಗಮ ಚಿತ್ರ ಡಿಸೆಂಬರ್ ೬ ಕ್ಕೆ ತೆರೆಗೆ ಬರುತ್ತಿದೆ. ಸದ್ಯಕ್ಕೀಗ ಸ್ಯಾಂಡಲ್ವುಡ್ ರಿಲೀಸ್ ಸಿನಿಮಾಗಳ ಅತಿವೃಷ್ಟಿಗೆ ಸಿಲುಕಿದೆ. ಡಿಸೆಂಬರ್ ೬ಕ್ಕೆ ಕೂಡಾ ಸಾಕಷ್ಟು ಸಿನಿಮಾಗಳು ರಿಲೀಸಾಗುತ್ತಿವೆ. ಅಷ್ಟೊಂದು ಸಿನಿಮಾಗಳ ನಡುವೆ ಕಥಾ ಸಂಗಮವೂ ಬಿಡುಗಡೆ ಆಗುತ್ತಿದೆ. ಈ ಪ್ರವಾಹದಲ್ಲಿ ತಾವು ಕೊಚ್ಚಿಕೊಂಡು ಹೋಗುವ ಅಪಾಯದಿಂದ ಪಾರಾಗಲು ನಿರ್ಮಾಪಕರಲ್ಲಿ ಒಬ್ಬರಾದ ರಿಷಭ್ ಶೆಟ್ಟಿ ಈ ಚಿತ್ರವನ್ನು ತಮ್ಮದೇ ಲೆಕ್ಕಾಚಾರದಲ್ಲಿ ಬಿಡುಗಡೆ ಮಾಡಲು […]
ರಾಹುಲ್ ಐನಾಪುರ ಗತ್ತು ನೋಡಿ!
ತ್ರಾಟಕ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿದ ನಟ ರಾಹುಲ್ ಐನಾಪುರ.ಮನೆಯ ತುಂಬಾ ರಾಜಕೀಯ ವಾತಾವರಣವಿದ್ದರೂ ಮನಸನ್ನು ಕಲೆಯ ವಶಕ್ಕೊಪ್ಪಿಸಿದ ವಿರಳ ವ್ಯಕ್ತಿ ರಾಹುಲ್. ತ್ರಾಟಕ ಚಿತ್ರದ ಮೂಲಕ ನಾಯಕ ನಟನಾಗಿ, ನಿರ್ಮಾಪಕನಾಗಿಯೂ ಪಾದಾರ್ಪಣೆ ಮಾಡಿದ್ದ ರಾಹುಲ್ ಐನಾಪುರ ಈ ನಟನೆಗೆ ಪೂರ್ತಿ ಸಮಯ ನೀಡಿದ್ದಾರೆ. ತ್ರಾಟಕ ಚಿತ್ರದ ಮೂಲಕ ಸದ್ದು ಮಾಡುತ್ತಿರುವ ರಾಹುಲ್ ಬಿಜಾಪುರದವರು. ಅವರದ್ದು ಪಕ್ಕಾ ರಾಜಕೀಯದ ಹಿನ್ನೆಲೆ ಇರುವ ಕುಟುಂಬ. ರಾಹುಲ್ ತಂದೆ ಮನೋಹರ ಐನಾಪುರ ಕಾಂಗ್ರೆಸ್ ನಾಯಕ, ಮಾಜೀ ಶಾಸಕ. […]
ಥಿಯೇಟರಿನಲ್ಲಿ ಖದರು ಹೆಚ್ಚಿಸಿಕೊಂಡ ಕನ್ನಡ್ ಗೊತ್ತಿಲ್ಲ!
ಈ ಮಾತು ಕೇಳಿದರೆ ನಾಡು, ನುಡಿಯ ಬಗ್ಗೆ ಒಲವಿಟ್ಟುಕೊಂಡಿರುವ ಯಾರಿಗೇ ಆದರೂ ಮೈಯೆಲ್ಲಾ ಉರಿಯದೇ ಇರೋದಿಲ್ಲ. ನವೆಂಬರ್ ತಿಂಗಳಲ್ಲಿ ಸಾಕಷ್ಟು ಸಿನಿಮಾಗಳು ಬಿಡುಗಡೆಯಾಗಿವೆ. ಕನ್ನಡದ ಬಗ್ಗೆ ಸಿನಿಮಾ ಮಾಡುವುದಾಗಿ ಹೇಳಿ ಬೋಧನೆ ಕೊಟ್ಟವರೂ ಇದ್ದಾರೆ. ಆದರೆ, ಒಂದೊಳ್ಳೆ ಕಥೆ, ಮನರಂಜನೆ, ಒಂದಿಷ್ಟು ಭಯ ಹುಟ್ಟಿಸುವ ಮೂಲಕ ಕನ್ನಡ ಪ್ರಜ್ಞೆಯನ್ನು ಜಾಗೃತಗೊಳಿಸಿದ ಸಿನಿಮಾ ಕನ್ನಡ್ ಗೊತ್ತಿಲ್ಲ. ದಿನೇ ದಿನೇ ಈ ಚಿತ್ರದ ಕುರಿತಾಗಿ ಒಳ್ಳೇ ಮಾತುಗಳು ಕೇಳಿಬರುತ್ತಿವೆ. ಲಾಟು ಲಾಟು ಸಿನಿಮಾ ಬಿಡುಗಡೆಯಾಗುತ್ತಿದ್ದರೂ, ಜನ ಗೊಂದಲಗಳ ಮಧ್ಯೆಯೂ ‘ಕನ್ನಡ್ […]
ಮದುವೆಯಾದವನಿಗೆ ಅದರದ್ದೇ ಸಮಸ್ಯೆ!
ಶ್ರೀರಾಮಚಂದ್ರನ ಹಾಗೆ ಬದುಕಬೇಕು, ಹೆಣ್ಮಕ್ಕಳನ್ನು ಕಣ್ಣೆತ್ತಿಯೂ ನೋಡಬಾರದು. ಮದುವೆಗೆ ಮುಂಚೆ ಪ್ರೀತಿಸಬಾರದು. ಪ್ರೀತಿ ಮಾಡೋದಿದ್ದರೆ ಅದು ಮದುವೆಯ ನಂತರ ಮಾತ್ರ… ಇಂಥಾ ನಿಬಂಧನೆಗಳನ್ನು ಹಾಕಿಯೇ ಮಕ್ಕಳನ್ನು ಬೆಳೆಸುವವರಿದ್ದಾರೆ. ಎಷ್ಟೋ ಜನ ಮಕ್ಕಳು ಪೋಷಕರ ರೂಲ್ಸು ಮೀರದವರಂತೆ ತೋರ್ಪಡಿಸುತ್ತಲೇ ಮನಸ್ಸಲ್ಲಿ ಬೇರೆಯದ್ದೇ ಲೆಕ್ಕ ಹಾಕೋದೂ ಇದೆ. ಆದರೆ ಎಲ್ಲೋ ಕೆಲವರು ತಂದೆ ತಾಯಿ, ಅಜ್ಜಿ ತಾತ ಹೇಳಿದ್ದನ್ನೇ ಮನಸ್ಸಲ್ಲಿಟ್ಟುಕೊಂಡು ಅದನ್ನೇ ಶಿರಸಾವಹಿಸಿ ಪಾಲಿಸುವವರೂ ಇದ್ದಾರೆ. ದೇಹ ಮತ್ತು ಮನಸ್ಸಿನ ಸ್ವಾಭಾವಿಕ ಗುಣ ಲಕ್ಷಣಗಳಿಗೆ, ಪ್ರಕೃತಿಗೆ ವಿರುದ್ಧವಾಗಿ ನಡೆದುಕೊಳ್ಳುವ ಅಂಥವರು […]
5 ಭಾಷೆಗಳ ಟ್ರೇಲರ್ ಜೊತೆ ಬಂದ ಶ್ರೀಮನ್ನಾರಾಯಣ
ಗುಂಡಿಗೆ ಗಟ್ಟಿ ಇರುವ ನಿರ್ಮಾಪಕರಿಂದ ಮಾತ್ರ ಇಂಥಾ ಸಿನಿಮಾಗೆ ಬಂಡವಾಳ ಹೂಡಲು ಸಾಧ್ಯ. ಅದನ್ನು ಅವನೇ ಶ್ರೀಮನ್ನಾರಾಯಣ ಚಿತ್ರದ ಮೂಲಕ ಸಾಧ್ಯವಾಗಿಸಿರುವವರು ನಿಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ! ಕಿರಿಕ್ ಪಾರ್ಟಿ ಸಿನಿಮಾ ಬಿಡುಗಡೆಯ ಮುಂಚೆ ಮೂರು ಕೋಟಿ ರುಪಾಯಿಗಳಲ್ಲಿ ನಿರ್ಮಿಸಲು ಪ್ಲಾನು ಮಾಡಿದ್ದ ಸಿನಿಮಾ ಅವನೇ ಶ್ರೀಮನ್ನಾರಾಯಣ. ಆ ನಂತರ ಕಿರಿಕ್ ಪಾರ್ಟಿಯ ಗೆಲುವು ನಿರೀಕ್ಷೆ ಹೆಚ್ಚಿಸಿದೆ ಕಡೇಪಕ್ಷ ಎಂಟು ಕೋಟಿ ಆದರೂ ಖರ್ಚು ಮಾಡಬೇಕು ಅಂದುಕೊಂಡರು. ಸಿನಿಮಾ ಕೂಡಾ ಶುರುವಾಯಿತು. ಹಾಗೇ ಬಜೆಟ್ಟು ಹದಿನಾಲ್ಕು, ಇಪ್ಪತ್ನಾಲ್ಕು… ಹೀಗೆ […]
ಈಶ್ವರಿ ಪ್ರೊಡಕ್ಷನ್ಸ್’ಗೆ ಐವತ್ತೊಂದು!
ಅದು ಆಗಸ್ಟ್ ೨೩ ೧೯೯೨. ಕನ್ನಡ ಚಿತ್ರರಂಗದ ಮೇರು ನಿರ್ಮಾಪಕ, ಈಶ್ವರಿ ಪ್ರೊಡಕ್ಷನ್ಸ್ ಎನ್ನುವ ಸಂಸ್ಥೆಯ ಮೂಲಕ ಹತ್ತು ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಿಸಿ ಎಷ್ಟೋ ಜನ ಕಲಾವಿದ, ನಿರ್ದೇಶಕರನ್ನು ಹುಟ್ಟು ಹಾಕಿದ, ಆ ಮೂಲಕ ಲೆಕ್ಕವಿಲ್ಲದಷ್ಟು ಮನೆ-ಮನಗಳನ್ನು ಬೆಳಗಿದ ಜೀವ ಕಣ್ಮುಚ್ಚಿ ಮಲಗಿತ್ತು. ಅವರು ಎನ್. ವೀರಾಸ್ವಾಮಿ! ಹಿರಿಯ ಮಗ ರವಿಚಂದ್ರನ್ ಆ ಕಾಲಕ್ಕೇ ಕನಸುಗಾರನೆಂಬ ಬಿರುದು ಪಡೆದು ಡೈರೆಕ್ಟರ್ ಅನ್ನಿಸಿಕೊಂಡಿದ್ದರು. ಜೊತೆಗೆ ಕನ್ನಡ ಚಿತ್ರರಂಗದ ಸ್ಟಾರ್ ಕೂಡಾ ಆಗಿದ್ದರು. ಆದರಿನ್ನೂ ವಿದ್ಯಾಭ್ಯಾಸವನ್ನು ಕೂಡಾ […]
ರಣಹೇಡಿ ಬಗ್ಗೆ ನಾಯಕ ನಟ ಕರ್ಣ ಕುಮಾರ್ ಹೀಗಂದ್ರು!
ಇಷ್ಟು ದಿನ ಪೋಷಕ ಪಾತ್ರಗಳಲ್ಲಿ ನಟಿಸುತ್ತಾ ಎಲ್ಲರ ಗಮನ ಸೆಳೆದವರು ನಟ ಕರ್ಣ ಕುಮಾರ್. ಈಗ ರಣಹೇಡಿ ಸಿನಿಮಾದ ಮೂಲಕ ಹೀರೋ ಕೂಡಾ ಆಗಿದ್ದಾರೆ. ನಾಯಕನಾಗಿ ನಟಿಸುತ್ತಿರುವ ಮೊದಲ ಸಿನಿಮಾದಲ್ಲೇ ಈ ನಾಡಿನ ಪ್ರಾಣದಂತಾ ರೈತನ ಪಾತ್ರದಲ್ಲಿ ಕರ್ಣಕುಮಾರ್ ನಟಿಸಿದ್ದಾರೆ. ಈ ಚಿತ್ರದ ಕುರಿತು ಅವರೊಂದಿಗೆ ನಡೆಸಿದ ಮಾತುಕತೆಯ ಸಾರಾಂಶ ಹೀಗಿದೆ… ನಿರೂಪಣೆ : ಸುಮ ಜಿ. ರಣಹೇಡಿಯಲ್ಲಿ ನಾಯಕನಾಗಿದ್ದು ಹೇಗೆ? ರಣಹೇಡಿ ಸಿನಿಮಾದಲ್ಲಿ ಅಭಿನಯಿಸುವದಕ್ಕೆ ಅವಕಾಶ ಸಿಕ್ಕಿದ್ದು ಒಂದು ಮಿರಾಕಲ್ ಅಂತಲೇ ಹೇಳಬಹುದು. ನನಗೆ ಈ […]
ಮನೆ ಮಾರಾಟವನ್ನು ನೋಡಿ ಮೆಚ್ಚಿದ ಕಿಚ್ಚ!
ಕೆಲವೊಂದು ಗೆಲುವು ಎಲ್ಲರಿಗೂ ಮುಖ್ಯವಾಗಿರುತ್ತದೆ. ಎರಡು ವಾರಕ್ಕೆ ಮುನ್ನ ರಿಲೀಸಾಗಿದ್ದ ‘ಮನೆ ಮಾರಾಟಕ್ಕಿದೆ ಎನ್ನುವ ಸಿನಿಮಾದ ಅಪ್ಪಟ ಗೆಲುವು ಇಡೀ ಚಿತ್ರತಂಡಕ್ಕೆ ಸಂತಸದ ಟಾನಿಕ್ ಆಗಿದೆ. ಈ ಚಿತ್ರವನ್ನು ನೋಡಿದ ಎಲ್ಲರೂ ಸಖತ್ತಾಗಿದೆ ಎನ್ನುತ್ತಿದ್ದಾರೆ. ಈಗ ಕಿಚ್ಚ ಸುದೀಪ್ ಕೂಡಾ ತಮ್ಮ ಮನೆಯಲ್ಲೇ ಮನೆ ಮಾರಾಟಕ್ಕಿದೆ ಚಿತ್ರದ ಪ್ರದರ್ಶನ ಹಾಕಿಸಿಕೊಂಡು ನೋಡಿ ಅಪಾರವಾಗಿ ಮೆಚ್ಚಿದ್ದಾರೆ. “ಕನ್ನಡ ಚಿತ್ರರಂಗದಲ್ಲಿ ಎಣಿಕೆಗೂ ಸಿಗಲಾರದಷ್ಟು ಸಿನಿಮಾಗಳು ಬರುತ್ತಿವೆ. ಆದರೆ ಅವೆಲ್ಲದರ ನಡುವೆ ಮನೆ ಮಾರಾಟಕ್ಕಿದೆ ಥರದ ಮನರಂಜನಾ ಸಿನಿಮಾವೊಂದು ಎಲ್ಲರನ್ನಊ ಸೆಳೆದಿದೆ. […]