ಎಲ್ಲಿಗ್ ಬಂದು ನಿಂತ್ಕೊಂಬುಡ್ತು ಕಾಲ…
ಕನ್ನಡದ ಸಾಕಷ್ಟು ಸ್ಟಾರ್ ಸಿನಿಮಾಗಳಿಗೆ ಸಂಭಾಷಣೆ ಬರೆಯುತ್ತಲೇ ಬೆಳಕಿಗೆ ಬಂದವರು ಮಂಜು ಮಾಂಡವ್ಯ. ಆ ನಂತರ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮಾಸ್ಟರ್ ಪೀಸ್ ಸಿನಿಮಾವನ್ನು ನಿರ್ದೇಶನ ಕೂಡಾ ಮಾಡಿದರು. ಚಿತ್ರರಂಗದಲ್ಲಿ ಹಂತ ಹಂತ ಹಂತವಾಗಿ ಮೇಲೆ ಬಂದಿರುವ ಮಂಜು ಮಾಂಡವ್ಯ ಈಗ ‘ಶ್ರೀ ಭರತ-ಬಾಹುಬಲಿ’ ಸಿನಿಮಾದ ಮೂಲಕ ಹೀರೋ ಆಗಿ ಲಾಂಚ್ ಆಗುತ್ತಿದ್ದಾರೆ. ಇದೇ ಜನವರಿ ೧೭ಕ್ಕೆತೆರೆಗೆ ಬರಲು ಅಣಿಯಾಗಿರುವ ಈ ಚಿತ್ರದ ಎಣ್ಣೆ ಸಾಂಗು ಈಗ ಹೊಸ ವರ್ಷಕ್ಕೆ ರಂಗು ತುಂಬಿದೆ. ನ್ಯೂ ಇಯರ್ […]
ರಿಯಲ್ ಸ್ಟಾರ್ ಅಭಿಮಾನಿ ಹೀರೋ ಆಗಿದ್ದು ಹೇಗೆ?
ವೇಷಾಧಾರಿ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ಈ ಚಿತ್ರದ ಮೂಲಕ ಚಿತ್ರರಂಗದಲ್ಲಿ ಪರ್ಮನೆಂಟಾದ ಸ್ಥಾನ ಪಡೆಯುವ ಕನಸು ಹೀರೋ ಆರ್ಯನ್ ಅವರದ್ದು. ಆರ್ಯನ್ ಈ ಚಿತ್ರದ ಬಗ್ಗೆ ಆರ್ಯನ್ ಏನು ಹೇಳುತ್ತಾರೆ? ಅವರ ಹಿನ್ನೆಲೆ ಏನು ಅನ್ನೋದರ ವಿವರ ಇಲ್ಲಿದೆ… ನಿರೂಪಣೆ: ಸುಮ ಜಿ ನಾನು ಹುಟ್ಟಿ ಬೆಳೆದದ್ದು ಪುತ್ತೂರಿನ ಸರ್ವೆ ಎಂಬ ಚಿಕ್ಕ ಹಳ್ಳಿಯಲ್ಲಿ. ಚಿಕ್ಕ ವಯಸ್ಸಿನಿಂದಲೂ ಒಬ್ಬ ಆಕ್ಟರ್ ಆಗ್ಬೇಕು ಅಂತ ಆಸೆ ಇತ್ತು. ಉಪೇಂದ್ರ ಹಾಗೂ ವಿಷ್ಣುವರ್ಧನ್ ಅವರ ಚಿತ್ರಗಳನ್ನು ಹೆಚ್ಚು […]
ಬಡ್ಡಿ ಮಗನ್ ಲವ್ ಕೇಸು ತಕೊ!
ಯಾರ ಬದುಕಿನಲ್ಲಿ ಸೋಲು, ಗೆಲುವುಗಳಿಲ್ಲ ಹೇಳಿ? ಸ್ವಯಂಕೃತ ಅಪರಾಧಗಳು ಕೆಲವಾದರೆ, ಕಾರಣವೇ ಇಲ್ಲದೆ ಸಮಸ್ಯೆಗಳಿಗೆ ಸಿಲುಕುವ ನಸೀಬು ಹಲವರದ್ದು. ಐಪಿಎಲ್ ಬಟ್ಟಿಂಗು, ಬಡ್ಡಿ ದಂಧೆ, ಜಗಳ, ಯಾರದ್ದೋ ಕಷ್ಟದಲ್ಲಿ ಲಾಭ ಮಾಡಿಕೊಳ್ಳುವ ಕೀಳು ಮನಸ್ಥಿತಿ, ಜಾಮೀನು ಕೊಟ್ಟವನ ಸಂಕಟ… ಹೀಗೆ ನಮ್ಮ ನಡುವೆಯೇ ನಡೆಯುವ ಹತ್ತು ಹಲವು ವಿಚಾರಗಳನ್ನು ನಮ್ಮ ಕಣ್ಮುಂದೆಯೇ ನಡೆಯುತ್ತಿದೆಯೇನೋ ಎನ್ನುವಷ್ಟರ ಮಟ್ಟಿಗೆ ಸಹಜವಾಗಿ ರೂಪಿಸಿರುವ ಸಿನಿಮಾ ಬಡ್ಡಿ ಮಗನ್ ಲೈಫು! ದುಡ್ಡಿನ ಸಿರಿಯಲ್ಲಿ ಮೆರೆಯುವ ಬಡ್ಡಿ ಸೀನಪ್ಪ, ಆತನ ಮುದ್ದದ ಮಗಳು, ಅದರ […]
ಹಿಕೋರಾ ಅತಿಥಿ ಮನೋಜ್
ಇನ್ನೇನು ತೆರೆಗೆ ಬರಲು ತಯಾರಾಗಿರುವ, ನಾಗೇಶ್ ಕೋಗಿಲು ನಿರ್ಮಾಣದ ಚಿತ್ರ ‘ಟಕ್ಕರ್. ಈ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸೋದರಳಿಯ ಮನೋಜ್ ಹೀರೋ ಆಗಿರೋದು ಈಗಾಗಲೇ ಎಲ್ಲೆಡೆ ದೊಡ್ಡ ಮಟ್ಟದಲ್ಲೇ ಸುದ್ದಿಗಳಾಗಿವೆ. ಟಕ್ಕರ್ ರಿಲೀಸಿಗೆ ಮುನ್ನವೇ ಮನೋಜ್ಗಾಗಿ ಸಿನಿಮಾ ಮಾಡಲು ಸಾಕಷ್ಟು ಜನ ನಿರ್ದೇಶಕರು ಕಥೆ ಹೇಳುವುದರಲ್ಲಿ ನಿರತರಾಗಿದ್ದಾರೆ. ಶೀಘ್ರದಲ್ಲೇ ಮನೋಜ್ ಅಭಿನಯದ ಹೊಸ ಚಿತ್ರಗಳು ಅನೌನ್ಸ್ ಆಗುವ ಸಾಧ್ಯತೆಗಳೂ ಇವೆ. ಈ ನಡುವೆ ಮನೋಜ್ ನೀನಾಸಂ ರತ್ನಕ್ಕ ನಿರ್ಮಾಣದ ಹಿಕೋರಾ ಚಿತ್ರದ ಹಾಡೊಂದರಲ್ಲಿ […]
ಟ್ರಿಮ್ ನಾರಾಯಣ!
ಎಲ್ಲಿ ನೋಡಿದರೂ ಮೊನ್ನೆ ದಿನ ತೆರೆಗೆ ಬಂದ ಶ್ರೀಮನ್ನಾರಾಯಣನ ಬಗ್ಗೇನೆ ಮಾತುಗಳು ಕೇಳಿಬರುತ್ತಿವೆ. ಸಿನಿಮಾ ನೋಡಿದ ಒಬ್ಬೊಬ್ಬರದ್ದೂ ಒಂದೊಂದು ಬಗೆಯ ಅಭಿಪ್ರಾಯ. ತೀರಾ ನಿರೀಕ್ಷೆ ಹುಟ್ಟಿಸಿ ತೆರೆಗೆ ಬಂದ ಯಾವುದೇ ಚಿತ್ರದ ಬಗ್ಗೆ ಬಿಡುಗಡೆಯ ನಂತರ ಡಿಬೇಟುಗಳು ಶುರುವಾಗುತ್ತವೆ. ಸಿನಿಮಾಸಕ್ತರು, ಚಿತ್ರೋದ್ಯಮದವರ ನಡುವೆ ಅದರದ್ದೇ ಮಾತುಗಳು ಮಥಿಸುತ್ತಿರುತ್ತವೆ. ಹೀಗಿರುವಾಗ ‘ಅವನೇ ಶ್ರೀಮನ್ನಾರಾಯಣ ಚಿತ್ರದ ಕುರಿತು ಒಂಚೂರು ಹೆಚ್ಚೇ ಪ್ರತಿಕ್ರಿಯೆಗಳು ಬರುತ್ತಿವೆ. ಶ್ರೀಮನ್ನಾರಾಯಣನ ಬಗ್ಗೆ ಬರುತ್ತಿರುವ ವಿಮರ್ಶೆಗಳಲ್ಲಂತೂ ಬಹುತೇಕರು ಸಿನಿಮಾ ವಿಪರೀತ ದೀರ್ಘವಾಯಿತು ಎಂದಿದ್ದಾರೆ. ಒಂದಿಷ್ಟಾದರೂ ಅವಧಿ ಕಡಿತ […]
ಬುದ್ಧಿವಂತ ಕಾದಾಟಕ್ಕೆ ನಿಂತಿದ್ದೇಕೆ?
ಚಿಕ್ಕಬಳ್ಳಾಪುರದ ರಂಗಸ್ಥಳಂ ದೇವಸ್ಥಾನದ ಬಳಿ ನೂರಾರು ಜನ ನೆರೆದಿದ್ದಾರೆ. ಮದುವೆಯಾಗಲು ಬಂದ ಉಪೇಂದ್ರ ಮತ್ತು ಸೋನಾಲ್ ಅವರನ್ನು ತಡೆಯಲೋ ಏನೋ ಎನ್ನುವಂತೆ ನಲವತ್ತೈವತ್ತು ಮಂದಿ ಧಾಂಡಿಗ ರೌಡಿಗಳು ಅಡ್ಡಗಟ್ಟಿಕೊಂಡಿದ್ದಾರೆ. ಹಾಗೆ ಅಡ್ಡಿ ಪಡಿಸಲು ಬಂದವರನ್ನು ರಿಯಲ್ ಸ್ಟಾರ್ ಉಪ್ಪಿ ಮಾರಾಮಾರಿ ಬಡಿದೆಸೆಯುತ್ತಿದ್ದಾರೆ… ಇದು ಬುದ್ಧಿವಂತ-೨ ಚಿತ್ರದ ಚಿತ್ರೀಕರಣದಲ್ಲಿ ಕಂಡುಬಂದ ದೃಶ್ಯ! ಟಿ.ಆರ್. ಚಂದ್ರಶೇಖರ್ ಅವರ ಕ್ರಿಸ್ಟಲ್ ಪಾರ್ಕ್ ಸಿನೆಮಾಸ್ನ ಈ ಹಿಂದಿನ ಎಲ್ಲ ಸಿನಿಮಾಗಳಿಗಿಂತಲೂ ಹೆಚ್ಚು ಬಜೆಟ್ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ ಬುದ್ಧಿವಂತ-2. ರಿಯಲ್ ಸ್ಟಾರ್ ಉಪೇಂದ್ರ […]
ಸೃಜನ್-ತೇಜಸ್ವಿ ಮತ್ತೆ ಜೊತೆಯಾಗಿದ್ದಾರೆ!
ಸೃಜನ್ ಲೋಕೇಶ್ ಮತ್ತು ನಿರ್ದೇಶಕ ತೇಜಸ್ವಿ ಮತ್ತೆ ಜೊತೆಯಾಗಿ ಬರಲಿದ್ದಾರೆ. ಒಂದು ಸಿನಿಮಾ ಮುಗಿಸಿ ಅದರ ಬೆನ್ನಿಗೇ ಅದೇ ಹೀರೋ ಮತ್ತು ನಿರ್ದೇಶಕ ಒಟ್ಟಿಗೇ ಕೆಲಸ ಮಾಡುವುದು ಕನ್ನಡ ಚಿತ್ರರಂಗದಲ್ಲಿ ಸದ್ಯದ ಮಟ್ಟಿಗೆ ವಿರಳ. ಆದರೆ, ‘ಎಲ್ಲಿದ್ದೆ ಇಲ್ಲಿತನಕ ಚಿತ್ರದ ಯಶಸ್ವೀ ಜೋಡಿ ಮತ್ತೊಂದು ಸಿನೆಮಾದಲ್ಲೂ ಒಂದಾಗಿ ಮುಂದುವರೆಯುತ್ತಿರುವುದು ನಿಜಕ್ಕೂ ಅಭಿನಂದಿಸಬೇಕಾದ ವಿಚಾರ. ಕಳೆದ ಏಳೆಂಟು ವರ್ಷಗಳಿಂದ ಜೊತೆಯಾಗೇ ಇದ್ದು, ಟೀವಿ ಶೋಗಳು, ಧಾರಾವಾಹಿ ಮತ್ತಿತರ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಒಬ್ಬರಿಗೊಬ್ಬರು ನೆರವಾಗುತ್ತಾ, ದುಡಿದವರು ಸೃಜನ್ ಮತ್ತು ತೇಜಸ್ವಿ. […]
ಡ್ರಗ್ ಮಾಫಿಯಾ ಸುತ್ತ ಬ್ಲಾಂಕ್!
ಭ್ರಮೆ ಮತ್ತು ವಾಸ್ತವದ ರೋಚಕ ಕಥಾ ಹಂದರದ ಮೂಲಕ ಪ್ರೇಕ್ಷಕರನ್ನು ರಂಜಿಸಿ ಗಮನ ಸೆಳೆದ ಚಿತ್ರ ‘ಲೂಸಿಯಾ’. ಇದೀಗ ಅಂತಹದೇ ಒಂದು ವಿಭಿನ್ನ ಲುಸಿಡ್ ಡ್ರಿಮಿಂಗ್ ಪರಿಕಲ್ಪನೆಯ ಕಥಾ ಹಂದರದ ಸಿನಿಮಾ ಬರಲಿದೆ. ಅದರ ಹೆಸರು ‘ಬ್ಲಾಂಕ್’. ನಾಯಕಿ ಕೃಷಿ ತಾಪಂಡ ಹೊರತು ಪಡಿಸಿದರೆ ಇಲ್ಲಿರುವವರೆಲ್ಲರೂ ಹೊಸಬರು. ಚಿಕ್ಕಮಗಳೂರು ಮೂಲದ ಉದ್ಯಮಿ ಎಸ್.ಪಿ. ಮಂಜುನಾಥ್ ಪ್ರಸನ್ನ ನಿರ್ಮಾಣದ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದವರು ಯುವ ನಿರ್ದೇಶಕ ಎಸ್.ಜೈ. ಮೈಸೂರು ಮೂಲದ ಎಸ್.ಜೈಗೆ ಇದು ಮೊದಲ ಸಿನಿಮಾ. […]
ಸಾರ್ವಜನಿಕರ ಬಗ್ಗೆ ಧನ್ಯತಾಭಾವ!
ವಾರಕ್ಕೆ ಮುನ್ನವಷ್ಟೇ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಚಿತ್ರ ಸಾರ್ವಜನಿಕರಿಗಾಗಿ ಸುವರ್ಣಾವಕಾಶ. ಕನ್ನಡದ ಹುಡುಗಿಯಾಗಿದ್ದರೂ ನೆರೆಯ ರಾಜ್ಯಗಳಲ್ಲಿ ನಟಿಯಾಗಿ ಗುರುತಿಸಿಕೊಂಡಿರುವ ಧನ್ಯಾ ಬಾಲಕೃಷ್ಣ ಈ ಚಿತ್ರದಲ್ಲಿ ನಾಯಕಿಯಾಗಿದ್ದಾರೆ. ಅವರ ಅನುಭವದ ಮಾತುಗಳು ಇಲ್ಲಿವೆ… ಈ ಚಿತ್ರದ ಮೂಲಕ ನಾನು ಲಾಂಛ್ ಆಗಿರೋದು ನನ್ನ ಭಾಗ್ಯ ಅಂದುಕೊಂಡಿದ್ದೇನೆ. ಈ ಚಿತ್ರದ ಮೂಲಕ ನಾನು ಕನ್ನಡ ಸಿನಿಮಾ ಇಂಡಸ್ಟ್ರಿಯ ಜರ್ನಿ ಶುರುವಾಗುತ್ತಿದೆ. ನಾಯಕಿಯಾಗಿ ಈ ಚಿತ್ರದ ಮೂಲಕ ಒಳ್ಳೆಯ ಪಾತ್ರದಲ್ಲಿ ಕನ್ನಡ ಇಂಡಸ್ಟ್ರಿಗೆ ಕಾಲಿಡುತ್ತಿದ್ದೇನೆ. ಇದು ನನ್ನ ಏಳು ವರ್ಷದ […]
ಶ್ರೀಮನ್ನಾರಾಯಣನ ಸಾಹಸಗಾಥೆ!
ಅತೀ ಹೆಚ್ಚು ಪ್ರಚಾರದ ನಡುವೆ ಅವನೇ ಶ್ರೀಮನ್ನಾರಾಯಣ ಚಿತ್ರ ತೆರೆಗೆ ಬಂದಿದೆ. ಮೊದಲ ಬಾರಿಗೆ ಅತಿಹೆಚ್ಚು ಬಜೆಟ್ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ನಟಿಸಿದ್ದಾರೆ. ಈ ಹಿಂದೆ ಚಿತ್ರತಂಡ ಹೇಳಿದಂತೆ ಕನ್ನಡ ಚಿತ್ರರಂಗದ ಮಟ್ಟಿಗೆ ಇದು ತೀರಾ ಹೊಸದೆನ್ನುವ ಬಗೆಯ, ಅದ್ಭುತ ತಾಂತ್ರಿಕತೆ ಹೊಂದಿರುವ ಶ್ರೀಮಂತ ಸಿನಿಮಾ! ಅಮರಾವತಿಯೆನ್ನುವ ಕಾಲ್ಪನಿಕ ಊರು. ಅಲ್ಲಿ ಇಬ್ಬರು ಸಹೋದರರ ಕಾಳಗ. ಗದ್ದುಗೆಗಾಗಿ ಅಪ್ಪನನ್ನೇ ಕೊಂದವನೊಬ್ಬ. ಇಂಥಾ ಊರಲ್ಲಿ ನಾಟಕದ ತಂಡವೊಂದು ಲೂಟಿ ಮಾಡಿ ತಂದ ಪೆಟ್ಟಿಗೆಯೊಂದನ್ನು ಅಡಗಿಸಿಟ್ಟಿರುತ್ತದೆ. ಇದರ ಮೇಲೆ ಎಲ್ಲರ […]