ಲವಲವಿಕೆಯ ಲವ್ ಮಾಕ್ಟೇಲ್!
ಕಿರುತೆರೆಯಿಂದ ಬಂದು ಕಳೆದ ನಾಲ್ಕೈದು ವರ್ಷಗಳಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಾಯಕನಟನಾಗಿ ಕಾಣಿಸಿಕೊಂಡಿರುವವರು ಡಾರ್ಲಿಂಗ್ ಕೃಷ್ಣ. ಈ ಸಲ ಸ್ವತಃ ತಾವೇ ನಿರ್ದೇಶನವನ್ನೂ ಮಾಡಿ ಲವ್ ಮಾಕ್ಟ್ರೈಲ್ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಸಾಕಷ್ಟು ಕುತೂಹಲ ಕೆರಳಿಸುವ ಅಂಶಗಳಿವೆ ಅನ್ನೋದು ಈಗಾಗಲೇ ಜಾಹೀರಾಗಿದೆ. ನಾಲ್ಕಾರು ಹಣ್ಣುಗಳ ಮಿಶ್ರಣದ ರಸವನ್ನು ಮಾಕ್ಟೇಲ್ ಅನ್ನುತ್ತಾರಲ್ಲಾ? ಹಾಗೆಯೇ ಈ ಸಿನಿಮಾದ ಕತೆಯಲ್ಲಿ ಮೂರು ಘಟ್ಟದ ಪ್ರೀತಿ ಸನ್ನಿವೇಶಗಳು ಬರುತ್ತವಂತೆ. ಹೀಗಾಗಿ ಇದೇ ಶೀರ್ಷಿಕೆಯನ್ನು ಇಡಲಾಗಿದೆ. ಕಾಲೇಜು, ಯೌವ್ವನ ಮತ್ತು ಜವಬ್ದಾರಿ ಹುಡುಗನಾಗಿ ಕೃಷ್ಣ […]
ಡಿಂಗನ ಜೊತೆಯಾದ ಅರ್ಜುನ್ ಜನ್ಯಾ!
ಶೀ ರ್ಷಿಕೆಯಲ್ಲೇ ವಿಶೇಷತೆ ಹೊಂದಿರುವ ಚಿತ್ರ ’ಡಿಂಗ’ ನಾಳೆ ರಿಲೀಸ್ ಆಗುತ್ತಿದೆ. ಈ ಸಿನಿಮಾಗೆ ಸಾಹಿತಿ ಡಾ. ವಿ. ನಾಗೇಂದ್ರ ಪ್ರಸಾದ್ ಸಲಹೆ, ಪ್ರೋತ್ಸಾಹ ನೀಡುತ್ತಿದ್ದಾರೆ ಅಂತಾ ಸ್ವತಃ ಚಿತ್ರತಂಡ ಹೇಳಿಕೊಂಡಿದೆ. ಇವರದ್ದೆ ಸಾಹಿತ್ಯದ ಗೀತೆಯೊಂದು ವೈರಲ್ ಆಗಿದ್ದು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಇತ್ತೀಚೆಗೆ ನಡೆದ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಆಗಮಿಸಿದ್ದರು. ಐ ಫೋನಿನಲ್ಲಿ ಸಿನಿಮಾ ಮಾಡುವುದು ಅಷ್ಟು ಸುಲಭವಲ್ಲ. ಈ ಸಿನಿಮಾದ ಒಂದು ಗೀತೆ ಹಾಡಲು ಅವಕಾಶ […]
ಹಾಟ್ ಹುಡುಗಿಯ ಡೆಡ್ಲಿ ಅಫೇರ್!
ರಾಜೇಶ್ಮೂರ್ತಿ ಅವರ ನಿರ್ದೇಶನದ ಬಹುತೇಕ ಚಿತ್ರಗಳಲ್ಲಿ ಬಾಲಿವುಡ್ ಖ್ಯಾತ ನಿರ್ದೇಶಕ ಮಹೇಶ್ಭಟ್ ರವರ ಸಿನಿಮಾಗಳ ಛಾಯೆ ಎದ್ದು ಕಾಣುತ್ತದೆ. ಈ ವಿಷಯವನ್ನು ಅವರೂ ಕೂಡ ಒಪ್ಪಿಕೊಳ್ಳುತ್ತಾರೆ. ನಾನು ಎರೋಟಿಕ್ ಥ್ರಿಲ್ಲರ್ ಜಾನರ್ ಸಿನಿಮಾಗಳನ್ನು ನಿರ್ದೇಶಿಸಲು ನನಗೆ ಮಹೇಶ್ಭಟ್ ಅವರೇ ಸ್ಪೂರ್ತಿ. ಅವರು ೮೦ರ ದಶಕದಲ್ಲೇ ಆರ್ಟಿಸ್ಟಿಕ್ ಹಾಗೂ ಕಲರ್ಫುಲ್ ಆಗಿ ಚಿತ್ರಗಳನ್ನು ತೆರೆಯ ಮೇಲೆ ಮೂಡಿಸಿದ್ದರು. ಅವರ ಮರ್ಡರ್ ಚಿತ್ರದ ಮೂಲಕ ನಟಿ ಮಲ್ಲಿಕಾಶೆರಾವತ್ ಜಿಸಂ ಮೂಲಕ ಬಿಪಾಷಾ ಬಸು, ಅಲ್ಲದೆ ಜಿಸಂ-೨ ಮೂಲಕ ಸನ್ನಿಲಿಯೋನ್ರನ್ನು ಬೆಳಕಿಗೆ […]
ಸುನಿಲ್ ರಾವ್ ಸಡನ್ ಎಂಟ್ರಿ!
ಎಕ್ಸ್ಕ್ಯೂಸ್ ಮಿ ಚಿತ್ರದ ಮೂಲಕ ಪ್ರೇಕ್ಷಕರ ಮನ ಗೆದ್ದಿದ ಸುನೀಲ್ ರಾವ್ ಹಲವು ವರ್ಷಗಳ ನಂತರ ‘ತುರ್ತು ನಿರ್ಗಮನ‘ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮರಳಿ ಬಂದಿದ್ದಾರೆ. ಈ ಚಿತ್ರದ ಮುಖ್ಯಪಾತ್ರದಲ್ಲಿ ಸುನೀಲ್ ರಾವ್ ಅಭಿನಯಿಸಿದ್ದಾರೆ. ಕುಮಾರ್ & ಕುಮಾರ್ ಫ಼ಿಲಂಸ್ ಲಾಂಛನದಲ್ಲಿ, ಶೈಲಜಾ ಪಿಕ್ಚರ್ಸ್ ಸಹಭಾಗಿತ್ವದಲ್ಲಿ ಭರತ್ ಕುಮಾರ್, ಹೇಮಂತ್ ಕುಮಾರ್ ಅವರು ನಿರ್ಮಿಸುತ್ತಿರುವ ‘ತುರ್ತು ನಿರ್ಗಮನ‘ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಸದ್ಯ ಚಿತ್ರಕ್ಕೆ visual effects ಕೊಚ್ಚಿನ್ನ ಸೂತ್ರ […]
ಮಾಯವಾಗಿದ್ದ ಸಿಂಧೂ ಕಾಣಿಸಿದ್ದಾರೆ!
ಸಿಂಧು ಲೋಕನಾಥ್ ನಟನೆಯ ಕಾಣದಂತೆ ಮಾಯವಾದನು ಚಿತ್ರ ಇದೇ ತಿಂಗಳ ೩೧ಕ್ಕೆ ತೆರೆಗೆ ಬರುತ್ತಿದೆ. ಇದುವರೆಗೂ ನಟನೆಗೆ ಚಾಲೆಂಜ್ ಅನ್ನಿಸುವಂಥಾ, ಹೊಸತನವಿರೋ ಪಾತ್ರಗಳನ್ನೇ ಒಪ್ಪಿಕೊಂಡು ಬಂದಿರೋ ಸಿಂಧು, ಈ ಚಿತ್ರವನ್ನೂ ಅದೇ ಮಾನದಂಡದಲ್ಲಿ ಒಪ್ಪಿಕೊಂಡಿದ್ದರು. ಈ ಚಿತ್ರ ಸಿಂಧೂ ಸೆಕೆಂಡ್ ಇನ್ನಿಂಗ್ಸ್’ಗೆ ಭರ್ಜರಿ ಓಪನಿಂಗ್ ಕೊಡಲಿದೆ ಅನ್ನೋ ಭರವಸೆ ಎಲ್ಲರಲ್ಲೂ ಇದೆ. ಈ ಬಗ್ಗೆ ಸಿಂಧೂ ಏನಂತಾರೆ…? ಒಂದು ಸಿನಿಮಾಗೆ ಬೇಕಿರುವಂತಹ ಎಲ್ಲಾರೀತಿಯ ವೈವಿಧ್ಯತೆಗಳೂ ಕಾಣದಂತೆ ಮಾಯವಾದನು ಚಿತ್ರದಲ್ಲಿವೆ. ಎಲ್ಲಾ ವಯೋಮಾನದವರೂ ನೋಡುವಂತಹ ಚಿತ್ರ. ಅದರಲ್ಲೂ […]
ವಿಕಾಸ್ ಜೊತೆ ಮಾತುಕತೆ!
ನಟ, ನಿರ್ದೇಶಕ ವಿಕಾಸ್ ಅಭಿನಯದಲ್ಲಿ ಮೂಡಿಬಂದಿರುವ ಕಾಣದಂತೆ ಮಾಯವಾದನು ಚಿತ್ರ ಜನವರಿಯಲ್ಲಿ ತೆರೆಗೆ ಬಂದಿತ್ತು. ಕೋವಿಡ್ ಕಾರಣದಿಂದ ಪ್ರದರ್ಶನ ನಿಂತಿತ್ತು. ಈಗ ಮತ್ತೆ ಮುಂದುವರೆಯುತ್ತಿದೆ… ಹೇಳಿ ಕೇಳಿ ಇದು ಪುನೀತ್ ರಾಜ್ ಕುಮಾರ್ ಹಾಡಿ, ಅಭಿನಯಿಸಿದ್ದ ‘ಕಾಣದಂತೆ ಮಾಯವಾದನು’ ಹಾಡಿನ ಸಾಲನ್ನೇ ಶೀರ್ಷಿಕೆಯನ್ನಾಗಿಸಿಕೊಂಡಿರುವ ಸಿನಿಮಾ. ವಿಕಾಸ್ ಮತ್ತು ಪುನೀತ್ ನಡುವೆ ಯಾವುದೋ ಹೇಳಲಾಗದಂಥ ನಂಟಿದೆ. ಅದೇನೆನ್ನೋದನ್ನು ಸ್ವತಃ ವಿಕಾಸ್ ಹೇಳಿದ್ದಾರೆ. ನೀವು ನೋಡಲೇಬೇಕು… – ಸಂಕಲನ ಕಾರರಾಗಿ, ಧಾರಾವಾಹಿ ನಟರಾಗಿ ನಟನೆ ಆರಂಭಿಸಿ, ಕಮರ್ಷಿಯಲ್ ಸಿನಿಮಾ ನಿರ್ದೇಶಿಸಿ […]
ಬಂತು ನೋಡಿ ಆಸಿಂಕೋಜ಼ಿಲ್ಲ!
ಶ್ರೀ ಮಾರುತಿ ಮೂವಿ ಮೇಕರ್ಸ್ ಲಾಂಛನದಲ್ಲಿ ಸೋಮಶೇಖರ್ ಶೆಟ್ಟಿ ನಿರ್ಮಿಸಿರುವ ಆಸಿಂಕೋಜ಼ಿಲ್ಲ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ವಿಜ್ಞಾನಿಯೊಬ್ಬ ಸಮಾಜದಲ್ಲಿ ಒಂದು ಬದಲಾವಣೆ ತರಬೇಕೆಂದು ಯೋಚಿಸಿ ಕಾಡಿಗೆ ಹೋಗಿ ಹೊಸ ಸಾಹಸವನ್ನು ಮಾಡುತ್ತಾನೆ. ಇದೇ ಸಮಯದಲ್ಲಿ ಆತನ ಜೊತೆಗೆ ಇನ್ನು ೪ ಜನ ವಿಶೇಷ ವ್ಯಕ್ತಿಗಳು ಸೇರಿಕೊಳ್ಳುತ್ತಾರೆ. ಅಲ್ಲಿಗೆ ಶಾಲಾ ವಿದ್ಯಾರ್ಥಿನಿಯೊಬ್ಬಳು ಅಪಹರಣಕ್ಕೊಳಗಾಗಿ ಕಾಡಿಗೆ ಬರುತ್ತಾಳೆ. ಮುಂದೆ ಏನಾಗುತ್ತದೆ ಎಂದು ಹೇಳುವ ಕಥಾಹಂದರವಿರುವ ಈ ಚಿತ್ರವನ್ನು ಶಮನ್ ನಿರ್ದೇಶನ ಮಾಡಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಅವರ ಅಭಿಮಾನಿಯಾಗಿದ್ದುಕೊಂಡು, […]
ಡಿಂಗನ ಹುಡುಗ ಆರ್ವ ಲೈಫ್ ಸ್ಟೋರಿ!
ಅಭಿಷೇಕ್ ಜೈನ್ ನಿರ್ದೇಶನದ ಡಿಂಗ ಚಿತ್ರದಲ್ಲಿ ಹೀರೋ ಆಗಿ ನಟಿಸುತ್ತಿರುವ ಪ್ರತಿಭಾವಂತ ನಟ ಆರ್ವ ಗೌಡ. ಹಾಗೆ ನೋಡಿದರೆ ನಾಯಕನಾಗಿ ಆರ್ವ ಅವರಿಗೆ ಇದು ಮೊದಲ ಸಿನಿಮಾವೇನಲ್ಲ. ಅದಾಗಲೇ ಚತುರ್ಭುಜ ಮತ್ತು ಮತ್ತು ಸುರ್ ಸುರ್ ಬತ್ತಿಯಲ್ಲಿ ನಾಯಕನಾಗಿ ಕಾಣಿಸಿಕೊಂಡಿರುವ ಆರ್ವ ಅವರಿಗಿದು ಡಿಂಗ ಮೂರನೇ ಚಿತ್ರ. ರಂಗ ಭೂಮಿ ಹಿನ್ನೆಲೆಯ ಆರ್ವ ಮಂಡ್ಯ ರಮೇಶ್ ಅವರ ನಟನ ಸಂಸ್ಥೆಯಲ್ಲಿ ಕಲಿತು, ಸರಿಸುಮಾರು ಹದಿನೈದು ವರ್ಷಗಳ ಕಾಲ ನಾಟಕರಂಗದಲ್ಲಿ ಕೆಲಸ ಮಾಡಿ, ನೂರಾರು ನಾಟಕಗಳಲ್ಲಿ ಅಭಿನಯಿಸಿ, ಆ […]
ಸಂಚಾರಿ ವಿಜಯ್ ಸಂದರ್ಶನ
ಕಲಾತ್ಮಕ ಸಿನಿಮಾಗಳ ಕಡೆಯಿಂದ ಕಮರ್ಷಿಯಲ್ ಕಡೆ ಬರುತ್ತಿದ್ದೀರಲ್ಲ? ಇತ್ತೀಚಿನ ದಿನಗಳಲ್ಲಿ ಸಿನಿಮಾ ನೋಡುವಂತಹ ಪ್ರೇಕ್ಷಕರು ಹಾಗೂ ಅವರ ಅಭಿರುಚಿಗಳು ಬದಲಾಗಿವೆ. ಅದಕ್ಕೆ ತಕ್ಕ ಹಾಗೆ ಈಗ ಬರುತ್ತಿರುವ ಸಿನಿಮಾಗಳಲ್ಲಿ ವೈವಿಧ್ಯತೆ ಕಾಣುತ್ತಿವೆ. ಈಗಿನ ಪ್ರೇಕ್ಷಕರ ದೃಷ್ಟಿಕೋನವನ್ನು ಮನಸ್ಸಿನಲ್ಲಿಟ್ಟು ಸಿನಿಮಾ ಮಾಡುವುದು ಬಹಳ ಮುಖ್ಯವಾಗುತ್ತದೆ. ಕಲಾತ್ಮಕ ಮತ್ತು ಕಮರ್ಷಿಯಲ್ ಸಿನಿಮಾಗಳಿಗೆ ಅದರದ್ದೇ ಆದ ವ್ಯಾಕರಣಗಳಿರುತ್ತವೆ. ಎರಡಕ್ಕೂ ಒಗ್ಗಿಕೊಂಡು ನಟಸಿವುದು ನನ್ನ ಕೆಲಸವಷ್ಟೇ… ಜಂಟಲ್ ಮನ್ ಹೇಗೆ ಭಿನ್ನ? ಸ್ಲೀಪಿಂಗ್ ಡಿಸಾರ್ಡರ್ ಇರುವಂತಹ ವ್ಯಕ್ತಿ ಒಂದು ದಿನದಲ್ಲಿ ೧೮ ಗಂಟೆಗಳು […]
ಮೂರು ಹಾಡು ಬರೆದ ಆಟೋ ಚಾಲಕ!
ಆಟೋ ಚಾಲಕರೊಬ್ಬರು ಬರೆದ ಹಾಡಿನ ಲಿರಿಕಲ್ ವಿಡಿಯೋವನ್ನು ಆಟೋ ಚಾಲಕರೇ ಲೋಕಾರ್ಪಣೆ ಮಾಡಿದ ಅಪರೂಪದ ಕಾರ್ಯಕ್ರಮ ಗಣರಾಜ್ಯೋತ್ಸವ ದಿನದಂದು ನೆರವೇರಿದೆ. ಯುವ ನಿರ್ದೇಶಕ ರಾಜ್ ಪಂಡಿತ್ ‘ಮೌನಂ’ ಸಿನಿಮಾವನ್ನು ಆರಂಭಿಸುವ ತಯಾರಿಯಲ್ಲಿದ್ದರು. ಸಿನಿಮಾದಲ್ಲಿ ಬರುವ ಮೂರು ಹಾಡುಗಳಿಗೆ ಟ್ಯೂನ್ ಕೂಡಾ ಕಪೋಸ್ ಆಗಿತ್ತು. ಯಾರದ್ದೋ ಮೂಲಕ ನಂಬರ್ ಪಡೆದು ಬಂದ ಹುಡುಗನೊಬ್ಬ ‘ನಾನು ಹಾಡು ಬರೀತೀನಿ ಅವಕಾಶ ಕೊಡಿ. ಕಳೆದ ಐದು ವರ್ಷಗಳಿಂದಾ ಎಲ್ಲರ ಬಳಿ ಅಲೆಯುತ್ತಿದ್ದೀನಿ. ಪ್ರತಿಯೊಬ್ಬರೂ ‘ಬರೆದಿರೋದನ್ನು ಕೊಟ್ಟು ಹೋಗಿರು. ನಂಬರ್ ಕೂಡಾ ಬರೆದು […]