ಮಂಡ್ಯ, ಮುದ್ದೆ ಮತ್ತು ಆನೆ ಬಲ
ಮಂಡ್ಯ, ಅಲ್ಲಿನ ಪರಿಸರ, ಅದರ ಸೌಂದರ್ಯ, ಮಾತು, ಜನ, ಬದುಕಿನ ಶೈಲಿ ಎಲ್ಲವೂ ಒಂದು ಸಿನಿಮಾದಲ್ಲಿ ಕಣ್ಣಿಗೆ ಕಟ್ಟುವಂತೆ ರೂಪುಗೊಂಡಿದೆ. ರಾಗಿಮುದ್ದೆ ಸ್ಪರ್ಧೆ, ಸ್ಪರ್ಧಿಗಳು, ಅದರ ಸುತ್ತ ಒಂದಷ್ಟು ಕ್ಯಾರೆಕ್ಟರುಗಳು – ಇವುಗಳ ಜೊತೆಗೆ ತೆರೆದುಕೊಳ್ಳುವ ಚೆಂದನೆಯ ಕತೆ. ಅದು ಆನೆಬಲ. ಕಲಾ ನಿರ್ದೇಶಕ ಈಶ್ವರಿ ಕುಮಾರ್ ಅವರ ಮಗ ಸಾಗರ್ ಈ ಹಿಂದೆ ಕೂಡಾ ಒಂದು ಸಿನಿಮಾದಲ್ಲಿ ಪಾತ್ರ ನಿರ್ವಹಸಿದ್ದರು. ಆದರೆ ಅದು ಅಂಥಾ ಹೆಸರು ತಂದುಕೊಟ್ಟಿರಲಿಲ್ಲ. ಈ ಬಾರಿ ಆನೆಬಲ ಚಿತ್ರದಲ್ಲಿ ಸಾಗರ್ ಪೂರ್ಣಪ್ರಮಾಣದಲ್ಲಿ […]
ಭರಮಣ್ಣ ನಾಯಕನ ಬಿಚ್ಚುಗತ್ತಿ!
ಕೋಟೆ ನಾಡು ಚಿತ್ರದುರ್ಗಕ್ಕೆ ದೊಡ್ಡ ಇತಿಹಾಸವಿದೆ. ಈ ಮಣ್ಣಿನ ಕಣಕಣಗಳಲ್ಲೂ ವೀರರ ರಕ್ತ ಬೆರೆತುಹೋಗಿದೆ. ಅಂಥಾ ಒಬ್ಬ ಮಹಾನ್ ಪುರುಷ ರಾಜಾ ಬಿಚ್ಚುಗತ್ತಿ ಭರಮಣ್ಣ ನಾಯಕ. ಈತನ ಜೀವನಗಾಥೆಯನ್ನು ಹಿರಿಯ ಕಾದಂಬರಿಕಾರ ಬಿ.ಎಲ್.ವೇಣು ಪುಸ್ತಕರೂಪದಲ್ಲೂ ಹೊರತಂದಿದ್ದರು. ಅದನ್ನು ಆಧರಿಸಿ ಅವರೇ ಬರೆದ ಚಿತ್ರಕತೆಯನ್ನು ನಿರ್ದೇಶಕ ಹರಿ ಸಂತು ಪರಿಣಾಮಕಾರಿಯಾಗಿ ತೆರೆ ಮೇಲೆ ಕಟ್ಟಿಕೊಟ್ಟಿದ್ದಾರೆ. ಅರಸೊತ್ತಿಗೆಗಾಗಿ ನಡೆಯುತ್ತಿದ್ದ ಅನಾಚಾರಗಳು, ದೊರೆಯ ವಿರುದ್ಧವೇ ನಡೆಯುತ್ತಿದ್ದ ಸಂಚು, ಅಧಿಕಾರ ಉಳಿಸಿಕೊಳ್ಳಲು ನಡೆಸುತ್ತಿದ್ದ ನೀಚ ಕೃತ್ಯಗಳು, ಆ ಕಾಲದ ರಾಜಕೀಯ, ಕಾದಾಟ, ಕ್ರೌರ್ಯಗಳನ್ನೆಲ್ಲಾ […]
ಬಿಳೀ ಶರ್ಟು ಪಂಚೆಯಲ್ಲಿ ಬಾಸ್ ಫುಲ್ ಮಿಂಚಿಂಗ್!
ದರ್ಶನ್ ಅವರ ಯಾವುದೇ ನಿರ್ಧಾರದ ಹಿಂದೆ ಸಮಾಜಮುಖಿ ಚಿಂತನೆಗಳಿರುತ್ತವೆ. ಈ ಹಿಂದೆ ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಿಂದ ಬಂದ ಹಣವನ್ನು ರೈತರಿಗೆ ನೀಡಿದ್ದರು. ರೈತರ ಪ್ರತಿಯೊಂದು ಸಮಸ್ಯೆಗಳಿಗೂ ಪ್ರತ್ಯಕ್ಷವಾಗಿಯೇ ನೆರವಾಗುತ್ತಾ ಬಂದಿದ್ದಾರೆ. ಈಬಾರಿ ರಾಮರಾಜ್ ಸಂಸ್ಥೆಯ ರಾಯಭಾರಿಯಾಗುವ ಮುಖಾಂತರ ನೇಕಾರರ ಸಂಕಷ್ಟಕ್ಕೆ ಪರೋಕ್ಷವಾಗಿ ಮಿಡಿದಿದ್ದಾರೆ ಎನ್ನಬಹುದು. ಪಾರಂಪರಿಕ ಶೈಲಿಯ ಉಡುಗೆಗಳನ್ನು ತಯಾರಿಸಿ, ವ್ಯಾಪಾರ ಮಾಡುತ್ತಿರುವ ಕಂಪೆನಿಗಳಲ್ಲಿ ರಾಮರಾಜ್ ಮುಂಚೂಣಿಯಲ್ಲಿದೆ. ಭಾರತದ ಬಹುತೇಕ ಸೂಪರ್ ಸ್ಟಾರ್ಗಳು ರಾಮರಾಜ್ ರಾಯಭಾರಿಗಳಾಗಿದ್ದಾರೆ. ಈಗ ಕರ್ನಾಟಕದ ಪ್ರಚಾರ ರಾಯಭಾರಿಯಾಗಿ ಛಾಲೆಂಜಿಂಗ್ ಸ್ಟಾರ್ […]
ಟ್ರೇಲರ್ ತೋರಿಸಿ ಮದುವೆ ಆಗ್ತಾನೆ!
ರಂಕಲ್ ರಾಟೆ ಎನ್ನುವ ಸಿನಿಮಾದ ಮೂಲಕ ನಿರ್ದೇಶಕರಾಗಿದ್ದ ಗೋಪಿ ಕೆರೂರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಎರಡನೇ ಸಿನಿಮಾ ‘ಮದುವೆ ಮಾಡ್ರಿ ಸರಿಹೋಗ್ತಾನೆ’. ಸಾಮಾನ್ಯಕ್ಕೆ ಪೋಲಿಬಿದ್ದ ಹುಡುಗರನ್ನು ಹದ್ದುಬಸ್ತಿಗೆ ತರಲು ಮದುವೆ ಮಾಡ್ರಿ ಸರಿಹೋಗ್ತಾನೆ ಅನ್ನೋದು ಲೋಕಾರೂಢಿ ಮಾತು. ಅದನ್ನೇ ಶೀರ್ಷಿಕೆಯನ್ನಾಗಿಸಿಕೊಂಡಿರುವ ಗೋಪಿ ಕೆರೂರ್ ಅದಕ್ಕೆ ಪೂರಕವಾದ ಕಥೆ ರೆಡಿ ಮಾಡಿ ಎಲ್ಲ ವರ್ಗದವರಿಗೂ ಇಷ್ಟವಾಗುವ ರೀತಿಯಲ್ಲಿ ಸಿನಿಮಾವನ್ನು ರೂಪಿಸಿದ್ದಾರೆ. ಬರೋಬ್ಬರಿ ಹನ್ನೊಂದು ಹಾಡುಗಳನ್ನು ಹೊಂದಿರುವುದು ಈ ಚಿತ್ರದ ವಿಶೇಷ. ಈಗಾಗಲೇ ವೈರಲ್ ಆಗಿರುವ ಗುಳೇದಗುಡ್ಡದ ಹುಡುಗಿ ಸೇರಿದಂತೆ ೪ […]
ಲೂಸಿಯಾ ಪೂರ್ಣಚಂದ್ರ ತೇಜಸ್ವಿ ಹಾಡುಗಳ ಆನೆಬಲ!
ಲೂಸಿಯಾ ಸಿನಿಮಾದ ಮೂಲಕ ಸಂಗೀತದಲ್ಲಿ ಮ್ಯಾಜಿಕ್ ಮಾಡಿದವರು ಪೂರ್ಣಚಂದ್ರ ತೇಜಸ್ವಿ. ಈಗ ಜನತಾ ಟಾಕೀಸ್ ಲಾಂಛನದಲ್ಲಿ ಎ.ವಿ.ವೇಣುಗೋಪಾಲ್ ಅಡಕಿಮಾರನಹಳ್ಳಿ ಅವರು ನಿರ್ಮಿಸಿರುವ, ಸೂನಗಹಳ್ಳಿ ರಾಜು ನಿರ್ದೇಶಿಸಿರುವ ಆನೆಬಲ ಚಿತ್ರದ ಹಾಡುಗಳು ಸಖತ್ ಹಿಟ್ ಆಗಿವೆ. ಇದೇ ವಾರ ಸಿನಿಮಾ ಕೂಡ ತೆರೆಗೆ ಬರುತ್ತಿದೆ. ಈ ಸಂದರ್ಭದಲ್ಲಿ ಪೂರ್ಣಚಂದ್ರ ಏನಂತಾರೆ? ಮಂಡ್ಯ ಅಂದಾಕ್ಷಣ ನೆನಪಾಗೋದು ಅಲ್ಲಿನ ಹಳ್ಳಿಗಳ ಭಾಷೆಯ ಸೊಗಡು. ಇದೇ ಈ ಸಿನಿಮಾದ ವಿಶೇಷತೆ. ನಮಗೂ ಸಹ ಇಲ್ಲಿನ ಪದಗಳು, ನುಡಿಗಟ್ಟುಗಳ ಪರಿಚಯವಾಯಿತು. ಮಂಡ್ಯದ ವಿಶೇಷತೆಗಳನ್ನ ಹಾಗೂ […]
ಸೂಪರ್ ಸ್ಟಾರ್ ರಜನೀಕಾಂತ್ ಬಯಸಿದ್ದ ಪಾತ್ರ!
ಖ್ಯಾತ ಹಾಸ್ಯ ನಟ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ‘ಬಿಚ್ಚುಗತ್ತಿ’ ಚಿತ್ರದ ಮೂಲಕ ವಿಶಿಷ್ಟವಾದ ಪಾತ್ರವೊಂದರೊಂದಿಗೆ ಪ್ರೇಕ್ಷಕರೆದುರು ಬಂದು ನಿಲ್ಲುತ್ತಿದ್ದಾರೆ. ಹೀರೋ ಆಗಲು ಬೇಕಾದ ಅಷ್ಟೂ ಕ್ವಾಲಿಟಿಗಳಿರುವ ರಾಜವರ್ಧನ್ ನಟಿಸಿದ ಮೊದಲ ಚಿತ್ರದಲ್ಲಿಯೇ ಪ್ರೇಕ್ಷಕರನ್ನು ಬೆರಗಾಗಿಸಿದ್ದ ನಟ. ಯಾಕೆಂದರೆ ಭರಮಣ್ಣ ನಾಯಕನ ಪಾತ್ರ ಅಂತಿಂಥಾದ್ದಲ್ಲ. ಅದನ್ನು ಮಾಡಬೇಕೆಂದು ಸೂಪರ್ ಸ್ಟಾರ್ ರಜನೀಕಾಂತ್ ಅವರಂಥಾ ನಟರೇ ಆಸೆ ಪಟ್ಟಿದ್ದರು. ಅನೇಕ ಸಂದರ್ಭಗಳಲ್ಲಿ ರಜನೀಕಾಂತ್ ತಾವು ಭರಮಣ್ಣ ನಾಯಕನ ಕಥೆಯಾಧಾರಿತ ಚಿತ್ರದಲ್ಲಿ ನಟಿಸಬೇಕು, ಬರಮಣ್ಣನ ಪಾತ್ರ ಮಾಡಬೇಕೆಂಬ ಅಭಿಲಾಷೆಯನ್ನು ರಜನಿ […]
ಚೆಕ್ ಮೇಟ್ ಟೀಸರ್ ಬಂದಿದೆ!
ಈ ಹಿಂದೆ ’ಪಾರು ಐ ಲವ್ ಯು’ ಚಿತ್ರವನ್ನು ನಿರ್ಮಾಣದ ಜೊತೆಗೆ ನಾಯಕನಾಗಿದ್ದವರು ರಂಜನ್ ಹಾಸನ್. ಈ ಬಾರಿ ಕುತೂಹಲ ಹುಟ್ಟಿಸುವಂಥ ’ದ ಚೆಕ್ ಮೇಟ್’ ಸಿನಿಮಾಕ್ಕೆ ಎಂದಿನಂತೆ ಎರಡು ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಕತೆಯಲ್ಲಿ ನಾಲ್ಕು ಸ್ನೇಹಿತರು ಬ್ರೇಕಪ್ ಪಾರ್ಟಿ ಮಾಡಲು ದೂರದ ಸ್ಥಳಕ್ಕೆ ಹೋಗುತ್ತಾರೆ. ಅಲ್ಲಿ ತಮ್ಮ ಭಗ್ನ ಪ್ರೇಮದ ಪ್ರಸಂಗಗಳನ್ನು ವಿನೋದದ ರೀತಿಯಲ್ಲಿ ಹಂಚಿಕೊಳ್ಳುತ್ತಾರೆ. ಇದರ ನಡುವೆ ಅವರಿಗೆ ವಿಚಿತ್ರ ಅನುಭವಗಳು ಒದಗಿ ಬಂದು, ಮತ್ತೊಂದು ಕಷ್ಟಕ್ಕೆ ಸಿಲುಕಿಸುತ್ತದೆ. ಆಗ ಅಲ್ಲಿ ಆಡುವ ಚದುರಂಗದ […]
ಯಾವುದೂ ಕೃತಕವಾಗಬಾರದು!
ಧೃವಾ ಸರ್ಜಾ ಕನ್ನಡ ಚಿತ್ರರಂಗದ ಟಾಪ್ ಸ್ಟಾರ್ ಅನ್ನೋದು ಸಾಬೀತಾಗಿತ್ತು. ಒಂದಷ್ಟು ಜನ ನೀವೂ ‘ಡಿ ಬಾಸ್’ ಅಂತಾ ಮರ ಹತ್ತಿಸಲು ಹೊರಟಿದ್ದರು. ಆಗ ಧೃವಾ ಹೇಳಿದ್ದು ಒಂದೇ ಮಾತು ; ‘ಅಭಿಮಾನಿಗಳ ಪಾಲಿಗೆ ಡಿ ಬಾಸ್ ಅಂದರೆ ಅದು ದರ್ಶನ್ ಅಣ್ಣ ಮಾತ್ರ. ನನಗಂತೂ ಆಂಜನೇಯನೇ ಬಾಸು’ ಅಂದಿದ್ದರು. ಎಲ್ಲೋ ಕೆಲವು ಅದೃಷ್ಟವಂತರನ್ನು ಬಿಟ್ಟರೆ, ಎಲ್ಲರೂ ಒಂದೇ ಸಿನಿಮಾಗೆ ಸ್ಟಾರ್ ಆಗಿಬಿಡಲು ಸಾಧ್ಯವಿಲ್ಲ. ಒಂದರ ಹಿಂದೊಂದು ಸಿನಿಮಾಗಳು ಶುರುವಾಗಿ ಅವು ಹಿಟ್ ಆಗಿ, ಅದರಲ್ಲಿ ಅಭಿನಯ, […]
ಬಿಟ್ಟಿಯಾಗಿ ಹಾಡಿದ್ದರಾ?
ಯೂ ಆರ್ ಮೈ ಪೊಲೀಸ್ ಬೇಬಿ ಅನ್ನೋ ಹಾಡು ಕೇಳಿರುತ್ತೀರ. ಶಿವಣ್ಣ ನಟಿಸಿದ್ದ ರುಸ್ತುಂ ಸಿನಿಮಾಗೆ ಅನೂಪ್ ಸಿಳೀನ್ ಸಂಗೀತ ನಿರ್ದೇಶನದಲ್ಲಿ ರಘು ದೀಕ್ಷಿತ್ ಹಾಡಿದ್ದ ಹಾಡಿದು. ರಘು ದೀಕ್ಷಿತ್ ಈ ಹಾಡು ಹೇಳಿದ್ದಕ್ಕಾಗಿ ಅವರ ಅಭಿಮಾನಿಗಳು ಥೂ ಅಂತಾ ಉಗಿಯುತ್ತಿದ್ದಾರಂತೆ. ನಿನ್ನ ಸನಿಹಕೆ ಎನ್ನುವ ಸಿನಿಮಾಗೆ ರಘು ದೀಕ್ಷಿತ್ ಸಂಗೀತ ಸಂಯೋಜಿಸುತ್ತಿದ್ದಾರೆ. ಈ ಚಿತ್ರದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಾ ”ಕೆಲವೊಮ್ಮೆ ಇಷ್ಟವಿಲ್ಲದಿದ್ದರೂ ಕೆಟ್ಟ ಹಾಡುಗಳಿಗೆ ದನಿ ನೀಡಬೇಕಾಗುತ್ತೆ” ಅಂದರು. ಹಾಗಾದರೆ ನೀವು ಹಾಡಿರುವ ಕೆಟ್ಟ ಗೀತೆ ಯಾವುದು […]
ಇಲ್ಲಿಂದ ವಿಹಾನ್ ಇಮೇಜು ಬದಲಾಗುತ್ತಾ?
ಗ್ರೇಟ್ ಬ್ರೋಸ್ ಪಿಕ್ಚರ್ಸ್ ಲಾಂಛನದಲ್ಲಿ ತಯಾರಾಗುತ್ತಿರುವ ಸಿನಿಮಾ ‘ಲೆಗಸಿ’. ಯೋಗರಾಜ ಭಟ್ಟರ ಪಂಚತಂತ್ರ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಾಯಕನಟನಾಗಿ ನಟಿಸಿರುವ ವಿಹಾನ್ ಅವರ ಹೊಸ ಚಿತ್ರ ಇದಾಗಿದೆ. ಸುಭಾಷ್ ಚಂದ್ರ ನಿರ್ದೇಶನದ ಮೊದಲ ಸಿನಿಮಾ ‘ಲೆಗಸಿ’ಯ ಫಸ್ಟ್ ಲುಕ್ ಈಗ ಹೊರಬಂದಿದೆ. ಇಷ್ಟು ದಿನ ಲವರ್ ಬಾಯ್ ಆಗಿದ್ದ ವಿಹಾನ್ ಗೌಡಗೆ ಹೊಸ ಇಮೇಜು ತಂದುಕೊಡುವ ಸಿನಿಮಾ ಲೆಗಸಿ ಅನ್ನೋದನ್ನು ಫಸ್ಟ್ ಲುಕ್ ಸಾರಿ ಹೇಳುತ್ತಿದೆ. ಆರಂಭದಲ್ಲಿ ೧೯೯೦ ಎಂದು ಬರುತ್ತಿದ್ದಂತೇ ದೊಡ್ಡ ಬಂಗಲೆಯೊಂದು ರಿವೀಲ್ ಆಗುತ್ತದೆ. […]