‘ಶಿವ’ಭಕ್ತನ ಪುರಾಣ!
ಬಹುಶಃ ಇದು ಸಿನಿಮಾ ಮಾಧ್ಯಮಕ್ಕಿರುವ ಶಕ್ತಿಯಿರಬೇಕು. ಹೆತ್ತ ತಂದೆ ತಾಯಿಗೆ ಅನ್ನವಿಕ್ಕದ, ಒಡಹುಟ್ಟಿದವರೊಂದಿಗೆ ಯಾವತ್ತಿಗೂ ಪ್ರೀತಿತೋರದ, ಸಂವೇದನೆಯೇ ಇಲ್ಲದವರಂತೆ ಬದುಕುವವರೂ ಸಿನಿಮಾ ನಟರನ್ನು ಆರಾಧಿಸುವ ಪರಿ ಇದೆಯಲ್ಲಾ? ಅಬ್ಬಾ… ನೆಚ್ಚಿನ ನಟರ ಸಿನಿಮಾ ಬಿಡುಗಡೆಯಾದ ದಿನ ಅವರ ಕಟೌಟುಗಳಿಗೆ ಹಾಲಭಿಷೇಕ ಮಾಡೋದು, ಸ್ಟಾರ್ ಕಟ್ಟೋದು, ಪಟಾಕಿ ಸಿಡಿಸೋದು, ತೆರೆ ಮೇಲೆ ಹೀರೋ ಎಂಟ್ರಿ ಕೊಡುತ್ತಿದ್ದಂತೇ ಕಾಯಿನ್ನುಗಳನ್ನು ರಪರಪ ಎರಚೋದೇನು… ಇಂಥಾ ಅಭಿಮಾನ ಸುಮ್ಮನೇ ಯಾರಿಗೂ ಗಿಟ್ಟುವಂಥದ್ದಲ್ಲ. ಇತ್ತೀಚೆಗೆ ಮೊದಲ ಸಿನಿಮಾಗೆ ಅಥವಾ ಕೆಲವು ನಿರ್ಮಾಪಕರ ಮಕ್ಕಳ ಸಿನಿಮಾಕ್ಕೆ […]
ಇರ್ಫಾನ್ ಖಾನ್ ಕಣ್ಮರೆ…
ಬಾಲಿವುಡ್ ಕಂಡ ಅಪ್ಪಟ ಪ್ರತಿಭಾವಂತ ಕಲಾವಿದ ಇರ್ಫಾನ್ ಖಾನ್. ಚಿತ್ರನಿರ್ದೇಶಕರು ಅವರಿಗೆಂದೇ ಚಿತ್ರಕಥೆ ಹೆಣೆಯುತ್ತಿದ್ದುದು ಹೌದು. ಪವರ್ಹೌಸ್ ಟ್ಯಾಲೆಂಟ್ ಎಂದೇ ಗುರುತಿಸಿಕೊಳ್ಳುವ ಇರ್ಫಾನ್ ಹಾಲಿವುಡ್ನಲ್ಲೂ ಛಾಪು ಮೂಡಿಸಿದ್ದರು. ಭಾರತ ಚಿತ್ರರಂಗದ ಅತ್ಯದ್ಭುತ ನಟ ಇರ್ಫಾನ್ ಖಾನ್ ಇನ್ನಿಲ್ಲವಾಗಿದ್ದಾರೆ. ೫೪ ವರ್ಷ ವಯಸ್ಸಿನ ಇರ್ಫಾನ್ ಭಾರತದ ಹಿರಿಮೆಯನ್ನು ವಿಶ್ವಮಟ್ಟದಲ್ಲಿ ಹೆಚ್ಚಿಸಿದ ಅಪರೂಪದ ನಟ. ಕಳೆದ ಮೂರು ದಿನಗಳ ಹಿಂದಷ್ಟೇ ಇವರ ತಾಯಿ ಸಯಿದಾ ಬೇಗಂ ತೀರಿಕೊಂಡಿದ್ದರು. ಲಾಕ್ಡೌನ್ ಕಾರಣಕ್ಕಾಗಿ ಜೈಪುರದಲ್ಲಿ ನಡೆದ ಅವರ ಅಂತಿಮ ಸಂಸ್ಕಾರಕ್ಕೆ ಇರ್ಫಾನ್ ಹೋಗಲು […]
ಬಿಕಾಂ ಗಣಿ ಥೇಟರಲ್ಲಿ ಪಾಸಾಗಿ ಪ್ರೈಮಲ್ಲಿ ರ್ಯಾಂಕು ಪಡೆದ…
ನಮ್ಮ ಚಿತ್ರರಂಗ ಇರೋದೇ ಹೀಗೆ- ಆರಂಭದಲ್ಲಿ ಯಾರೂ ಕೈ ಹಿಡಿಯೋದಿಲ್ಲ. ಗೆದ್ದೆತ್ತಿನ ಬಾಲ ಹಿಡಿಯುವ ಚಾಳಿ ಇಲ್ಲಿನವರಿಗೆ ಹೊಸದೂ ಅಲ್ಲ. ನಟ ಅಭಿಷೇಕ್, ನಿರ್ಮಾಪಕ ನಾಗೇಶ್ ಕುಮಾರ್ ಆದಿಯಾಗಿ ಗಣಿ ತಂಡ ದೊಡ್ಡದೊಂದು ಗೆಲುವನ್ನು ದಕ್ಕಿಸಿಕೊಳ್ಳಲಿ. ಸಿನಿಮಾವೊಂದು ಬಿಡುಗಡೆಯಾಗುತ್ತದೆ. ವಿಮರ್ಶಕರು ಮೆಚ್ಚಿ ಬರೆಯುತ್ತಾರೆ. ನೋಡಿದ ಪ್ರೇಕ್ಷಕರೂ ಅಪಾರವಾಗಿ ಇಷ್ಟಪಡುತ್ತಾರೆ. ಆದರೆ ಅಂದುಕೊಂಡಂತೆ ಜನ ಥೇಟರಿಗೆ ಬರೋದಿಲ್ಲ… ಇನ್ನು ಸುಮ್ಮನಿದ್ದರೆ ಸಿನಿಮಾವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಅಂತಾ, ವಿತರಕರಿಂದ ಚಿತ್ರವನ್ನು ವಾಪಾಸು ಪಡೆದು ತಾವೇ ಮುಂದುವರೆಸುತ್ತಾರೆ. ಬೆಂಗಳೂರಿನ ಮೇನಕಾ ಥಿಯೇಟರಿನಲ್ಲಿ […]
ದೂದ್ ಪೇಡಾ ಪಾಲಿಗೆ ಎರಡನೇ ಇನ್ನಿಂಗ್ಸ್!
ಕನ್ನಡದ ಮುದ್ದುಮುದ್ದಾದ ಹೀರೋ ದಿಗಂತ್. ಕರೋನಾ ಕ್ಲಿಯರ್ ಆಗುತ್ತಿದ್ದಂತೇ ಚಿತ್ರರಂಗದ ಜೊತೆಗೆ ದಿಗಂತ್ಗೆ ಕೂಡಾ ಮರುಹುಟ್ಟು ಸಿಗಲಿದೆ. ದೂದ್ ಪೇಡಾ ಪಾಲಿಗೆ ಎರಡನೇ ಇನ್ನಿಂಗ್ಸ್ ಆರಂಭವಾಗುತ್ತದೆ ಅಂತಾ ಸ್ಟುಡಿಯೋಗಳಿಂದ ರಿಪೋರ್ಟು ಬರುತ್ತಿವೆ. ಯಾವುದೇ ಒಂದು ಚಿತ್ರದ ಗೆಲುವಿನ ಭವಿಷ್ಯ ಮೊದಲಿಗೆ ಹೊರಬೀಳುವುದು ವರ್ಕಿಂಗ್ ಟೇಬಲ್ಲುಗಳಿಂದ. ಆ ಪ್ರಕಾರವಾಗಿ ಹೇಳುವುದಾದರೆ ನಾಗರಾಜ್ ಬೇತೂರು ನಿರ್ದೇಶನದ ಹುಟ್ಟುಬ್ಬದ ಶುಭಾಶಯಗಳು ಸಿನಿಮಾ ಬ್ಯೂಟಿಫುಲ್ಲಾಗಿ ಮೂಡಿಬಂದಿದೆಯಂತೆ. ಯಾವತ್ತು ಅನೌನ್ಸ್ ಆಯಿತೋ ಅವತ್ತೇ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸೌಂಡು ಮಾಡುತ್ತದೆ ಅಂತಾ ಚಿತ್ರರಂಗಕ್ಕೆ […]
ಮಾಧ್ಯಮಗಳ ಮುಖ್ಯಸ್ಥರೇ ಈ ಪ್ರಶ್ನೆಗಳಿಗಾದ್ರೂ ಸತ್ಯ, ಪ್ರಾಮಾಣಿಕತೆ, ವಸ್ತುನಿಷ್ಠ ಉತ್ತರ ನೀಡುವಿರಾ?
ಕನ್ನಡದ ಎಲ್ಲಾ ದೃಶ್ಯ ಮಾಧ್ಯಮ ಮತ್ತು ಮುದ್ರಣ ಮಾಧ್ಯಮದ ಮಾಲೀಕರಿಗೆ ಒಂದು ನಿವೇದನೆ… ನೀವು ಕರೋನಾ ಕಾಲದ ತುರ್ತಿನ ಕೆಲಸ ಮಾಡ್ತಾ ಇದ್ದೀರಿ. ಜನತೆಯ ಪರವಾಗಿ ಧನ್ಯವಾದಗಳು. ಈಗೀಗ ಹಲವಾರು ಮಾಧ್ಯಮದ ನೌಕರರು ಪತ್ರಕರ್ತರಿಗೆ ಕರೋನಾ ಪಾಸಿಟಿವ್ ಎಂಬ ಸುದ್ದಿಗಳಿವೆ. ಇಡೀ ಜಗತ್ತೇ ಕರೋನಾ ಕಾಲಘಟ್ಟದಲಿ ಹೀಗೀಗಿರಬೇಕು ಎಂದು ಜಾಗೃತಿ ಮೂಡಿಸಿರುವ ನೀವುಗಳು ಈಗ ಮತ್ತೆ ಸತ್ಯ ಸಂಧರಾಗುವ ಸದವಕಾಶ ಬಂದಿದೆ. ನಿಮ್ಮ ಕಛೇರಿಗಳಲ್ಲಿ ಸೋಷಿಯಲ್ ಡಿಸ್ಟೆನ್ಸ್ ನಿಭಾಯಿಸುತ್ತಿದ್ದೀರಾ? ಮೇಂಟೇನ್ ಮಾಡಿದ್ದೇ ಆದರೆ, ಹೇಗೆ ಅಂತಾ ಒಂದರ್ಧ […]
ಅಣ್ಣಾವ್ರ ಅಭಿಮಾನಿಯ ಆಪ್ತ ಬರಹ…
ಕನ್ನಡದ ಬಹುತೇಕ ಹೆಸರಾಂತ ಸಾಹಿತಿಗಳ, ಮೌಲಿಕ ಕೃತಿಗಳನ್ನು ತೆರೆದು, ಒಂದು ಪುಟ ತಿರುವಿದರೆ, ಆರಂಭದ ಟೆಕ್ನಿಕಲ್ ಪೇಜಿನಲ್ಲಿ ಮುದ್ರಣ : ‘ಸ್ವ್ಯಾನ್ ಪ್ರಿಂಟರ್ಸ್’ ಎಂದಿರುತ್ತದೆ. ಗುಣಮಟ್ಟದ ಕಾರಣಕ್ಕೇ ಹೆಸರಾಗಿರುವ ಈ ಮುದ್ರಣಾಲಯದ ಮುಂದಾಳು ಕೃಷ್ಣಮೂರ್ತಿ. ಸಾಹಿತ್ಯವಲಯದಲ್ಲಿ ಸ್ವ್ಯಾನ್ ಕಿಟ್ಟಿ ಅಂತಲೇ ಫೇಮಸ್ಸು. ಪ್ರಿಂಟಿಂಗ್ ಉದ್ಯಮದ ಜೊತೆಗೆ ಹಳೆಯ ಕ್ಯಾಮೆರಾಗಳು, ಆರಂಭ ಕಾಲದ ರೇಡಿಯೋಗಳು, ಪುರಾತನ ದೀಪಗಳು. ಹಳೇ ಕಾಯಿನ್ಸು – ಇವೆಲ್ಲವನ್ನೂ ಸಂಗ್ರಹಿಸುವ ಹವ್ಯಾಸವಿಟ್ಟುಕೊಂಡಿದ್ದಾರೆ. ಆರ್ಡರ್ ಕೊಟ್ಟ ಪುಸ್ತಕಗಳನ್ನು ಕೃಷ್ಣಮೂರ್ತಿ ಎಷ್ಟು ಆಕರ್ಷಕವಾಗಿ ಮುದ್ರಿಸಿಕೊಡುತ್ತಾರೋ, ಅಷ್ಟೇ ಚೆಂದಗೆ […]
ನಿಸ್ವಾರ್ಥ ಸೇವೆ ಅಂದರೆ ಇದಲ್ಲವಾ?
ಕೊಡೋಣ ತಂಡ ಎಷ್ಟು ಸೂಕ್ಷ್ಮವಾಗಿ ಚಿಂತಿಸಿ, ಎಲ್ಲರ ಸಂಕಟಕ್ಕೆ ಮಿಡಿಯುತ್ತಿದೆ ಗೊತ್ತಾ? ಹೆಣ್ಣುಮಕ್ಕಳು ಬಳಸುವ ಸ್ಯಾನಿಟರಿ ಪ್ಯಾಡುಗಳನ್ನು ಸಹಾ ಅಗತ್ಯವಿರುವವರಿಗೆ ವಿತರಿಸಿದ್ದಾರೆ. ಈ ಸಮಯದಲ್ಲಿ ಬ್ಲಡ್ ಬ್ಯಾಂಕ್ಗಳಲ್ಲಿ ರಕ್ತ ಸಿಗದೇ ಪರದಾಟವಾಗುತ್ತಿದೆಯಲ್ಲಾ? ಅದಕ್ಕಾಗಿ ರಕ್ತದಾನ ಮಾಡಿದ್ದಾರೆ. ಸಿನಿಮಾರಂಗಕ್ಕೆ ಸಂಬಂಧಪಟ್ಟ ಹಲವರು ಕೊರೋನಾದಿಂದ ಸಂಕಷ್ಟಕ್ಕೀಡಾದವರಿಗೆ ಕೈಲಾದ ಸಹಾಯ ಮಾಡುತ್ತಲೇ ಬಂದಿದ್ದಾರೆ. ಜನ ಕಷ್ಟಕ್ಕೆ ಸಿಲುಕಿದ್ದಾರೆ, ಅವರಿಗೆ ಸಹಾಯ ಮಾಡಬೇಕು ಅಂತಾ ಎಲ್ಲರೂ ತೀರ್ಮಾನಿಸುವ ಹೊತ್ತಿಗೇ ಇಲ್ಲೊಂದು ಟೀಮು ಕೆಲಸ ಶುರುವಿಟ್ಟುಕೊಂಡಿತ್ತು. ಮನರಂಜನಾ ವಾಹಿನಿಗಳಲ್ಲಿ ಕಾರ್ಯನಿರ್ವಹಿಸುತ್ತಲೇ, ಇವೆಂಟುಗಳನ್ನು ಆಯೋಜಿಸುವ, ಎಲ್ಲಕ್ಕಿಂತಾ […]
ಗಮನ ಸೆಳೆಯುತ್ತಿದೆ ತೂಗುದೀಪ ದರ್ಶನ ಪುಸ್ತಕದ ಕಲರ್ ಫುಲ್ ಕ್ಯಾರಿಕೇಚರ್ಸ್!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೋರಾಟದ ದಿವ್ಯ ಬದುಕಿನ ಸಂಪೂರ್ಣ ಚರಿತ್ರೆ ಹೊಂದಿರುವ ತೂಗುದೀಪ ದರ್ಶನ ಪುಸ್ತಕವನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಕವರ್ ಪೇಜ್ ಲಾಂಚ್ ಮಾಡಿದ್ದು ನಿಮಗೆಲ್ಲಾ ಗೊತ್ತೇ ಇದೆ. ಇದೇ ಪುಸ್ತಕದ ಅಪರೂಪದಲ್ಲಿ ದಾಖಲಾಗಿರುವ ಮರು ಸೃಷ್ಟಿ (ಕ್ಯಾರಿಕೇಚರ್ ಗಳು) ಇದೀಗ ಮತ್ತೆ ಸುದ್ದಿಯಾಗಿದೆ. ಮೀನಾ ತೂಗುದೀಪ ದರ್ಶನ್ ಅವರ ಶ್ರಮದ ಬದುಕಿನ ಜೊತೆ ತೂಗುದೀಪ ಶ್ರೀನಿವಾಸ್ ಅವರ ಅಮರ ಬದುಕಿನ ನೇರ ಚಿತ್ರಣ ಇರುವ […]
ಕಲಾಂ ಕಂಡ ಕನಸು ಮಗನ ಹೆಸರಲ್ಲಿ ನನಸಾಯಿತು…
ಎಲ್ಲರನ್ನೂ ನಗಿಸುವ ನಟರಿಗೆ ಯಾಕೆ ಇಂತಾ ಸಂಕಟ? ಕಣ್ಣೆದುರಿಗೆ ಬದುಕಿ ಬಾಳಬೇಕಿದ್ದ ಮಗ ಮಣ್ಣಲ್ಲಿ ಮಣ್ಣಾದಾಗ ಆ ತಂದೆಯ ಎದೆಯಲ್ಲಿ ಎಂಥಾ ನೋವಿರಬೇಡ? ನಟ ವಿವೇಕ್ ಸತ್ತ ಮಗನನ್ನು ಜೀವಂತವಾಗಿಸಿದ್ದು ಹೇಗೆ? ಅದೇನು ದುರಂತವೋ ಗೊತ್ತಿಲ್ಲ. ಸಿನಿಮಾರಂಗದಲ್ಲಿ ಕಾಮಿಡಿ ನಟರಾಗಿ ಹೆಸರು ಮಾಡಿರುವ ಸಾಕಷ್ಟು ಮಂದಿ ನಿಜ ಜೀವನದಲ್ಲಿ ಹೇಳಿಕೊಳ್ಳಲಾರದಂಥ ಸಂಕಟ ಅನುಭವಿಸುತ್ತಿದ್ದಾರೆ. ನಮ್ಮ ಕನ್ನಡ ಚಿತ್ರರಂಗದ ಹಾಸ್ಯ ಚಕ್ರವರ್ತಿ ನರಸಿಂಹ ರಾಜು, ಹಿರಿಯ ಹಾಸ್ಯ ಕಲಾವಿದ ಉಮೇಶ್, ಅಪಘಾತದಲ್ಲಿ ಸಾವಿಗೀಡಾದ ಅದ್ಭುತ ನಟ ಕರಿಬಸವಯ್ಯ ಸೇರಿದಂತೆ […]
ಸಂಚಾರಿ ವಿಜಯ್ ಬರೆದಿದ್ದಾರೆ…
ಸಂಚಾರಿ ವಿಜಯ್ ಅದ್ಭುತ ನಟ. ನಟನೆಗೆ ರಾಷ್ಟ್ರ ಪ್ರಶಸ್ತಿ ಪಡೆದು, ಕರ್ನಾಟಕದ ಹಿರಿಮೆಯನ್ನು ಹೆಚ್ಚಿಸಿದವರು. ಇಂಥಾ ಪ್ರತಿಭಾವಂತ ನಟನನ್ನು ಅಣ್ಣಾವ್ರು ನೋಡಿದ್ದಿದ್ದರೆ ಅದೆಷ್ಟು ಖುಷಿ ಪಡುತ್ತಿದ್ದರೋ? ಸ್ವತಃ ಸಂಚಾರಿ ವಿಜಯ್ ರಾಜ್ ಅವರನ್ನು ಕಾಣಲು ಸಾಕಷ್ಟು ಪ್ರಯತ್ನ ಮಾಡಿದ್ದರು. ಅದರ ಬಗ್ಗೆ ವಿಜಯ್ ಅವರೇ ಬರೆದಿದ್ದಾರೆ ಓದಿ… ಸುಮಾರು ಇಪ್ಪತ್ತೈದು ವರ್ಷಗಳ ಹಿಂದಿನ ನೆನಪು. ಡಾ. ರಾಜಕುಮಾರ್ ಎಂಬ ಕನ್ನಡಿಗರ ಆರಾಧ್ಯದೈವ ಕಡೂರಿಗೆ ಬರುವರೆಂಬ ಸುದ್ದಿ ನಮ್ಮ ಜಿಲ್ಲೆಯಾದ್ಯಂತ ಹಬ್ಬಿತ್ತು. ನಮ್ಮ ತಂದೆಯೂ ಕೂಡ ಅವರ ಅಭಿಮಾನಿಯಾಗಿದ್ದರು. […]