ಕನಸುಗಾರನ ಹುಟ್ಟಿದ ದಿನಕ್ಕೆ….
ಸದಾ ಹೊಸ ಸಾಹಸಕ್ಕೆ ಕೈ ಹಾಕುತ್ತಾ ಹಿಂದು ಮುಂದು ನೋಡದೆ ಹಣ ವ್ಯಯಿಸುವ ರವಿಚಂದ್ರನ್ ಅದೆಷ್ಟೇ ದೊಡ್ಡ ಪ್ರಮಾಣದ ಸಾಲಗಳಿದ್ದರೂ ಯಾವತ್ತೂ ಅದಕ್ಕೆ ಅಂಜುತ್ತಾ ಕುಳಿತವರಲ್ಲ. ‘ಸಿನಿಮಾನೇ ನನ್ನುಸಿರು’ ಎಂದು ಸಿನಿಮಾವನ್ನೇ ಬದುಕಾಗಿಸಿಕೊಂಡಿರುವ ಕೆಲವೇ ಕೆಲವರ ಪೈಕಿ ರವಿಚಂದ್ರನ್ ಮುಂಚೂಣಿ ನಾಯಕ. ಇಂಥ ರವಿಚಂದ್ರನ್ ಈಗ ಹೊಸ ಹುರುಪಿನೊಂದಿಗೆ ಮತ್ತೆ ಮೈಕೊಡವಿ ನಿಂತಿದ್ದಾರೆ. ೫೯ನೇ ವಸಂತಕ್ಕೆ ಪಾದಾರ್ಪಣೆ ಮಾಡುತ್ತಿರುವ ರವಿ ಹಿಂದೆಂದಿಗಿಂತಲೂ ಹೆಚ್ಚು ಜೋಷ್ನಿಂದ ಕಂಗೊಳಿಸುತ್ತಿದ್ದಾರೆ. ಕಸನುಗಾರನ ಹೊಸ ಕನಸುಗಳು ಮತ್ತು ಅವರು ಸಾಗಿ ಬಂದ ಹಾದಿಯ […]
‘ಅಂಬಿ ನನ್ನ ಆಸ್ತಿ ಮತ್ತು ದೌರ್ಬಲ್ಯ-ವಿಷ್ಣು
ಒಮ್ಮೆ ಅಂಬರೀಶ್ ವಿಷ್ಣು ಮನೆಗೆ ಬಂದಾಗ ‘ಸೂಪರ್ ಸ್ಟಾರ್ ಮನೆಯಂತೆ ಇದು.. ಗುಂಡು-ತುಂಡು ಏನೂ ಇಲ್ಲ..’ ಎಂದುಬಿಟ್ಟಿದ್ದರಂತೆ. ಅಂಬಿ ಹೀಗಂದ ಮರುದಿನವೇ ತಮ್ಮ ಮನೆಯಲ್ಲೇ ಬಾರ್ ನಿರ್ಮಿಸಿಬಿಟ್ಟರಂತೆ ವಿಷ್ಣು… ಎಷ್ಟೋ ಸಲ ವಿಷ್ಣುಗೆ ರಾತ್ರೋ ರಾತ್ರಿ ಫೋನು ಮಾಡುತ್ತಿದ್ದ ಅಂಬಿ, ಮಲಗಿದ್ದ ವಿಷ್ಣುವನ್ನು ಎಬ್ಬಿಸಿ ‘ಲೇ ಕುಚುಕೂ, ಟೀವಿ ಆನ್ ಮಾಡೋ ನಿನ್ನ ಹಳೇ ಸಿನಿಮಾದ ಹಾಡು ಬರ್ತಾ ಇದೆ…’ ಎನ್ನುತ್ತಿದ್ದರಂತೆ… ಹಾಗೆ ನೋಡಿದರೆ, ಸಿನಿಮಾಕ್ಕೆ ಬರುವ ಮೊದಲು ಅಂಬರೀಶ್ ಮತ್ತು ವಿಷ್ಣು ಅಂಥಾ ಪರಿಚಿತರೂ ಆಗಿರಲಿಲ್ಲ. […]
ಹೀಗಿದ್ದರು ನಮ್ಮ ಅಂಬರೀಶ್…!
ಯಾರು ಯಾರಿಗೋ ಸಹಾಯ ಮಾಡಿದರು. ಮುಳುಗಿ ಹೋಗುತ್ತಿದ್ದ ಅದೆಷ್ಟೋ ಮಂದಿಯನ್ನು ಮೇಲೆತ್ತಿ ಉದ್ಧರಿಸಿದರು. ಎಂತೆಂಥವರ ಮೇಲಿದ್ದ ಸಾಲದ ನೊಗವನ್ನು ಎತ್ತಿ ಬಿಸಾಕಿದರು. ಕೆಳಗಿದ್ದ ಅದೆಷ್ಟೋ ಮಂದಿಗೆ ಮೇಲೇಣಿಯಾದರು. ಅಕ್ಷರಶಃ ಕರ್ಣನಂತೆಯೇ ಬದುಕಿದರು. ರೆಬೆಲ್ ಸ್ಟಾರ್ ಅಂಬರೀಶ್ ತೆರೆಯ ಮೇಲೆ ಮಾತ್ರವಲ್ಲ, ಜೀವನದಲ್ಲಿಯೂ ಅಚ್ಚುಕಟ್ಟಾಗಿ ಪಾತ್ರ ಮುಗಿಸಿ ಎದ್ದು ಹೋಗಿದ್ದಾರೆ. ಬದುಕನ್ನು ಇಂಚಿಂಚಾಗಿ ಆಸ್ವಾದಿಸುತ್ತಾ, ನಟನಾಗಿ, ರಾಜಕಾರಣಿಯಾಗಿ, ಎಲ್ಲರ ಕಷ್ಟ ಸುಖಗಳಿಗೂ ಸ್ಪಂದಿಸುವ ಸ್ನೇಹಿತನಾಗಿ ಕಡೆಗೆ ಸಾಮಾನ್ಯರಲ್ಲಿ ಸಾಮಾನ್ಯರಂತೆಯೂ ಬದುಕಿದ್ದವರು ಅಂಬರೀಶ್. ರೆಬೆಲ್ ಸ್ಟಾರ್ ಎಂಬ ಬಿರುದಿಗೆ ತಕ್ಕುದಾಗಿಯೇ […]
ಒಂದುಗೂಡಿಸೋ ತಾಕತ್ತಿದ್ದದ್ದು ಅಂಬರೀಶ್ ಅವರಿಗೆ ಮಾತ್ರ!
ಅಂಬರೀಶ್ ಬದುಕಿದ್ದಾಗ ಬಯಸಿದ್ದು ಈಡೇರಲಿಲ್ಲ. ಕೊನೇ ಪಕ್ಷ ಈಗಲಾದರೂ ಈ ಇಬ್ಬರೂ ನಟರು ಒಂದಾಗಿ ನಿಂತು ರೆಬೆಲ್ ಸ್ಟಾರ್ ಕನಸನ್ನು ಈಡೇರಿಸುತ್ತಾರಾ? ಕನ್ನಡ ಚಿತ್ರರಂಗದಲ್ಲಿ ಈ ತಲೆಮಾರಿನ ಹೀರೋಗಳ ನಡುವೆ ಕುಚಿಕ್ಕು ಗೆಳೆಯರೆಂದೇ ಪ್ರಸಿದ್ಧರಾಗಿದ್ದವರು ಕಿಚ್ಚಾ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್. ಆದರೆ ಈ ಸ್ನೇಹ ಕಳೆದ ನಾಲ್ಕು ವರ್ಷಗಳಿಂದ ಗ್ರಹಣ ಕವುಚಿಕೊಂಡಂತೆ ಮಂಕಾಗಿದೆ. ಒಂದು ವೇಳೆ ರೆಬೆಲ್ ಸ್ಟಾರ್ ಜೀವಂತವಾಗಿದ್ದಿದ್ದರೆ ಪರಸ್ಪರ ವಿರುದ್ಧ ದಿಕ್ಕುಗಳಂತಾಗಿದ್ದ ಸುದೀಪ್ ಮತ್ತು ದರ್ಶನ್ ಮತ್ತೆ ಒಂದೇ ಬಿಂದುವಿನಲ್ಲಿ ಸಂಧಿಸೋ […]
ರೆಬೆಲ್ತನವೇ ಅವರ ನಿಜವಾದ ಗುಣವಾಗಿತ್ತು!
ಪುಟ್ಟಣ್ಣ ಕಣಗಾಲರ `ನಾಗರಹಾವು’ ಚಿತ್ರದ ಜಲೀಲ್ ಪಾತ್ರದ ಆ ರೆಬೆಲ್ತನವೇ ಅವರ ನಿಜವಾದ ಗುಣವಾಗಿತ್ತು. ಇಲ್ಲಿಯವರೆಗೆ ನೂರಾರು ಸಿನೆಮಾಗಳಲ್ಲಿ ನಟಿಸಿರುವ, ಕಡೆಯವರೆಗೂ ನಟನೆಯ ಸಂಗದಲ್ಲಿಯೇ ಇದ್ದ ಅಂಬರೀಷ್, ಯಾವುದನ್ನೂ ಮನಸ್ಸಿಟ್ಟು ಮಾಡಿದವರಲ್ಲ. ಸಿನೆಮಾ ಜಗತ್ತಿನಲ್ಲೊಂದು ಅಲಿಖಿತ ನಿಯಮವಿದೆ. ನಾಯಕನಟ ತನ್ನ ವರ್ಚಸ್ಸು ಕಳೆದುಕೊಂಡರೆ, ಜನಪ್ರಿಯತೆ ಕುಗ್ಗಿದರೆ, ವಯಸ್ಸಾದರೆ ಹೊಸಬರಿಗೆ ದಾರಿ ಮಾಡಿಕೊಟ್ಟು, ತಾನು ಹಿಂದಕ್ಕೆ ಸರಿಯುತ್ತಾನೆ. ಅಥವಾ ಆ ಕಾಲವೇ ಆತನನ್ನು ನೇಪಥ್ಯಕ್ಕೆ ನೂಕುತ್ತದೆ. ಅಂಬರೀಷ್, ತಾವು ಸಿನೆಮಾ ರಂಗಕ್ಕೆ ಬರುವಾಗ, ವಯಸ್ಸಾದವರನ್ನು ಹಿಂದಕ್ಕೆ ಸರಿಸಿ, ತಮಗೆ […]
ಪೋಸ್ಟರ್ ರಿಲೀಸ್ ಮಾಡಿದರು ಸಲ್ಲು!
ಹಿಂದಿ ಸಿನಿಮಾಗಳ ವಿತರಣೆಯಲ್ಲಿ ದೊಡ್ಡ ಹೆಸರು ಮಾಡಿರುವ ಸಾಜಿದ್ ಈಗ ತಮ್ಮ ಮಗಳನ್ನು ನಾಯಕಿಯಾಗಿ ಪರಿಚಯಿಸುವ ಮಹತ್ವದ ಯೋಜನೆ ರೂಪಿಸಿದ್ದಾರೆ. ಮಿಥುನ್ ಚಕ್ರವರ್ತಿ ಕೂಡಾ ಒಂದು ಕಾಲದಲ್ಲಿ ಬಾಲಿವುಡ್ನ್ ದೊಡ್ಡ ಹೀರೋ ಅನ್ನಿಸಿಕೊಂಡಿದ್ದವರು. ತಮ್ಮ ಮಗಳ ಜೊತೆಗೆ ಮಿಥುನ್ ಪುತ್ರನನ್ನೂ ಇಂಟ್ರಡ್ಯೂಸ್ ಮಾಡುವ ಜವಾಬ್ದಾರಿಯನ್ನು ಸಾಜಿದ್ ವಹಿಸಿಕೊಂಡಿದ್ದಾರೆ. ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಮಗ ಕೂಡಾ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾನೆ. ರಾಜ್ ಕುಮಾರ್ ಸಂತೋಷಿ ನಿರ್ದೇಶನದ ʼಬ್ಯಾಡ್ ಬಾಯ್ʼ ಮೂಲಕ ನಮಶಿ ಚಕ್ರವರ್ತಿಯ ಪಾದಾರ್ಪಣೆಯಾಗುತ್ತಿದೆ. ಈ ಸಿನಿಮಾವನ್ನು […]
ದಿವಾಕರ್ ರೆಮಿಡೀಸ್!
ಎರಡು ಕೆಜಿ ಅಕ್ಕಿ, ಬೆಲ್ಲ ಕೊಟ್ಟಿದ್ದನ್ನೂ ಫೋಟೋ ಸಮೇತ ಹಾಕಿಸಿಕೊಂಡು ಕ್ವಿಂಟಾಲುಗಟ್ಟಲೆ ಪಬ್ಲಿಸಿಟಿ ತೆಗೆದುಕೊಂಡವರು ಸಾಕಷ್ಟು ಜನ ಇದ್ದಾರೆ. ಆದರೆ, ದಿವಾಕರ್ ಅನುಸರಿಸುತ್ತಿರುವ ಶ್ರಮದ ಮಾರ್ಗ ಎಲ್ಲರಿಗೂ ಮಾದರಿಯಾಗುವಂಥದ್ದು. ಸ್ವಾಭಿಮಾನದಿಂದ ದುಡಿಯುವವರಿಗೆ ಕೆಲಸ ಯಾವುದಾದರೇನು? ಮಾರ್ಗ ಒಳ್ಳೇದಾಗಿದ್ರೆ ಅಷ್ಟು ಸಾಕು. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕಾಮನ್ ಮ್ಯಾನ್ ಆಗಿ ಸ್ಪರ್ಧಿಸಿ ಎಲ್ಲರ ಪ್ರೀತಿ ಪಡೆದ ಹುಡುಗ ದಿವಾಕರ್. ಬಿಗ್ ಬಾಸ್ ಶೋ ಮುಗಿಸಿಕೊಂಡು ಬಂದ ಮೇಲೆ ಗುಲಾಲ್ ಡಾಟ್ ಕಾಮ್ ಎನ್ನುವ ಸಿನಿಮಾದ ಮೂಲಕ ದಿವಾಕರ್ ಹೀರೋ […]
ಗ್ರೀನ್ ಸಿಗ್ನಲ್ ಕೊಟ್ಟಿದ್ದರು ರವಿಚಂದ್ರನ್-ಶಿವಣ್ಣ
ಏನೇ ಕೆಲಸ ಆರಂಭಿಸುವ ಮುನ್ನ ರವಿಚಂದ್ರನ್ ಮತ್ತು ಶಿವಣ್ಣನ ಒಪ್ಪಿಗೆ, ಮಾರ್ಗದರ್ಶನ ಪಡೆಯುವುದು ರಘುರಾಮ್ ರೂಢಿ. ‘ಇಂಥದ್ದೊಂದು ಐಡಿಯಾ ಬಂದಿದೆ’ ಎಂದು ಹೇಳುತ್ತಿದ್ದಂತೇ ರವಿಮಾಮ ಮತ್ತು ಶಿವಣ್ಣ ‘ಒಳ್ಳೇ ಪ್ಲಾನು, ಮುಂದುವರೆಸು’ ಅಂತಾ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಹಾಗೆ ಶುರುವಾದ ಪ್ರಾಜೆಕ್ಟು ಈಗ ‘ಗಂಧದ ಗುಡಿಯ ಗಂಧರ್ವರು’ ಹೆಸರಿನಂತೆ ಚೆಂದದ ಕಾರ್ಯಕ್ರಮವಾಗಿ ಹೊರಬಂದಿದೆ. ಸಿನಿಮಾ-ಸಾಂಸ್ಕೃತಿಕ ವಾತಾವರಣದಲ್ಲಿ ಬೆಳೆದ ವಿಜಯರಾಘವೇಂದ್ರ, ಸುನಿಲ್ ರಾವ್, ನವೀನ್ ಕೃಷ್ಣ, ಸೃಜನ್ ಲೋಕೇಶ್, ಅನಿರುದ್ಧ್, ಮಂಡ್ಯದ ಟಾಕೀಸೊಂದರ ಪ್ರೊಜೆಕ್ಷನ್ ರೂಮಿನಲ್ಲಿ ಬದುಕು ಸವೆಸಿದವರ […]
ದೇವರೇ ನೀನೆಲ್ಲಿ ಹೋಗಿರುವೆ?
ಮಾಡಬಾರದ್ದು ಮಾಡಿದರೆ ಆಗಬಾರದ್ದೇ ಆಗುವುದು ಎನ್ನುವ ಮಾತಿದೆಯಲ್ಲಾ? ಅದನ್ನು ಕೊರೋನಾ ವೈರಸ್ಸು ನಿಜ ಅಂತಾ ಇಡೀ ಜಗತ್ತಿಗೇ ಸಾರಿ ಹೇಳಿದೆ. ನಾವೇ ಮಾಡಿಕೊಂಡ ಅನಾಚಾರಗಳು ಇವತ್ತು ನಮ್ಮನ್ನು ಬಲಿ ತೆಗೆದುಕೊಳ್ಳುತ್ತಿದೆ. ಯಾವ ಭೇದವಿಲ್ಲದೆ ಎಲ್ಲರೂ ಒಕ್ಕೊರಲಿನಿಂದ ಕೊರೋನಾ ವೈರಸ್ಸಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಊರೆಲ್ಲಾ ಹೋದಮೇಲೆ ಊರ ಬಾಗಿಲು ಮುಚ್ಚಿದರು ಅನ್ನುವಂತೆ ಅಗಣಿತ ನಷ್ಟದ ನಂತರ ಎಚ್ಚರಗೊಳ್ಳುತ್ತಿದ್ದಾರೆ. ಯಾಕೆ ಹೀಗೆಲ್ಲಾ ನಡೆದುಹೋಯ್ತು? ಏನೆಲ್ಲಾ ಆಗಬಾರದಿತ್ತು? ನಂಬಿದ ದೇವರು ಎಲ್ಲಿದ್ದಾನೆ? ಅನ್ನೋದಕ್ಕೆ ಉತ್ತರ ನೀಡುವಂತಾ ಹಾಡೊಂದು ರಿಲೀಸಾಗಿದೆ… ಕೊರೋನಾ ಯಾಕೆ […]
ಇದು ವಿಜಯ ಪ್ರಸಾದ್ ಪ್ರಯೋಗ!
ಇದು ಸ್ಕಿಟ್ಟಾ? ಸಂದರ್ಶನವಾ? ಕಿರುಚಿತ್ರಾನಾ? ಅನ್ನೋದು ಕರಾರುವಕ್ಕಾಗಿ ತಿಳಿದುಬಂದಿಲ್ಲ. ಒಟ್ಟಿನಲ್ಲಿ ವಿಜಯಪ್ರಸಾದ್ ವಿಶೇಷವಾದ ಅಟೆಂಪ್ಟ್ ಮೂಲಕ ಎದುರಾಗಲಿದ್ದಾರೆ ಅನ್ನೋದಷ್ಟೇ ನಿಜ! ಬದುಕಿನುದ್ದಕ್ಕೂ ದುಡಿಯೋದು ಇದ್ದೇ ಇರುತ್ತದೆ ಅಂತಾ ಒಂದಷ್ಟು ಜನ ಕೊರೋನಾ ರಜೆಯನ್ನು ವಿಶ್ರಾಂತಿಗಾಗಿ ಮೀಸಲಿಟ್ಟಿದ್ದಾರೆ. ಆದರೆ ಕ್ರಿಯಾಶೀಲ ಜೀವಗಳು ಕೊರೋನಾ, ಲಾಕ್ ಡೌನು ಅಂತಾ ಕೈಕಾಲು ಕಟ್ಟಿ ಕೂರಿಸಿದರೂ ಹೊಸದೇನನ್ನೋ ಸೃಷ್ಟಿಸುವ ತವಕದಲ್ಲಿರುತ್ತಾರೆ. ಸಿದ್ಲಿಂಗು, ನೀರ್ ದೋಸೆ, ತೋತಾಪುರಿ, ಈಗ ಪರಿಮಳ ಲಾಡ್ಜ್ ನಂಥಾ ಘಮ್ಮೆನ್ನುವ ಸಿನಿಮಾಗಳ ಮೂಲಕವೇ ಖ್ಯಾತಿ ಪಡೆದಿರುವ ನಿರ್ದೇಶಕ ವಿಜಯ ಪ್ರಸಾದ್. […]