ಲೀಕ್ ಮಾಡಿದ್ದು ಯಾರು ವಕೀಲ್ ಸಾಬ್?
(CINIBUZZ.INನ ಫೇಸ್ ಬುಕ್ ಪೇಜ್ Cinibuzz Kannada ಹೆಸರಿನಲ್ಲಿದೆ. ಮನರಂಜನಾ ಕ್ಷೇತ್ರಕ್ಕೆ ಸಂಬಂಧಿಸಿದ ಅಪರೂಪದ ವಿಚಾರಗಳು ನಿಮಗಿಲ್ಲಿ ಸಿಗಲಿವೆ. ಹೊಸ ಓದುಗರು ಪೇಜ್ ಲೈಕ್ & ಫಾಲೋ ಮಾಡಿ…) ಕೊರೋನಾ ಎಂಟ್ರಿ ಕೊಡದೇ ಹೋಗಿದ್ದರೆ ಕಳೆದ ಮೇ ತಿಂಗಳಲ್ಲಿ ಪವನ್ ಕಲ್ಯಾಣ್ ನಟನೆಯ ತೆಲುಗು ಸಿನಿಮಾ ವಕೀಲ್ ಸಾಬ್ ರಿಲೀಸಾಗಬೇಕಿತ್ತು. ತೆರೆಗೆ ಬರಲು ರೆಡಿಯಿದ್ದೂ ಥೇಟರು ಓಪನ್ ಆಗಲಿ ಅಂತಾ ಕಾದಿರುವ ಬೇರೆಲ್ಲ ಭಾಷೆಯ ಸಿನಿಮಾಗಳಂತೆ, ವಕೀಲ್ ಸಾಬ್ ಕೂಡಾ ಕಾದು ಕೂತಿದ್ದಾರೆ. ಈಗ ವಕೀಲ್ ಸಾಬ್ […]
ಮೈಸೂರಿನ ಮಾಸ್ಟರ್ ಪೀಸು ಈಗ ಜಗತ್ತಿಗೇ ಫೇಮಸ್ಸು!
ಇದ್ಯಾವುದೋ ಪೀಡೆ ಕೊರೋನಾ ವೈರಸ್ಸು ಅಮರಿಕೊಂಡು ಜಗತ್ತನ್ನೇ ಅಲ್ಲಾಡಿಸಿಬಿಟ್ಟಿದೆ. ಈ ಕೊವಿಡ್ ರೋಗಕ್ಕೆ ಇರುವವರು ಇಲ್ಲದವರು ಅನ್ನೋ ಬೇಧವೂ ಇಲ್ಲ. ಎಂಥಾ ದೊಡ್ಮನ್ಷರೂ ಹೊರಗೆ ಹೋಗದೆ ಮನೆಯೊಳಗಿದ್ದು ಜೀವ ಉಳಿಸಿಕೊಳ್ಳುವ ಸಂದರ್ಭ ಎದುರಾಗಿದೆ. ಕೊರೋನಾ ಶುರುವಾದಾಗ ಏಕಾಏಕಿ ಲಾಕ್ ಡೌನ್ ಅನೌನ್ಸ್ ಮಾಡಿದರಲ್ಲಾ ಆಗಂತೂ ಜನರಿಗೆ ಅಕ್ಷರಶಃ ರೆಕ್ಕೆಪುಕ್ಕ ಕಿತ್ತು ಕೂರಿಸಿದಂತಾ ಅನುಭವವಾಗಿತ್ತು. ಬೆಳಗಿನಿಂದ ರಾತ್ರಿತನಕ ಹೊರಗೆ ದುಡಿಮೆ, ಓಡಾಟ ಅಂತಿದ್ದವರು, ದಿನ, ವಾರ, ತಿಂಗಳುಗಳನ್ನು ಮೀರಿ ಮನೆಯೊಳಗೇ ಬಂಧಿಯಾಗಬೇಕು ಅಂದರೆ ಸಲೀಸಲ್ಲ. ಈ ಸಂದರ್ಭದಲ್ಲಿ ಎಷ್ಟು […]
“ಆಟಕ್ಕೂ- ಊಟಕ್ಕೂ ಬಂದವನು ಸೂಳೆ ಅಂದ…”
(CINIBUZZ.INನ ಫೇಸ್ ಬುಕ್ ಪೇಜ್ Cinibuzz Kannada ಹೆಸರಿನಲ್ಲಿದೆ. ಮನರಂಜನಾ ಕ್ಷೇತ್ರಕ್ಕೆ ಸಂಬಂಧಿಸಿದ ಅಪರೂಪದ ವಿಚಾರಗಳು ನಿಮಗಿಲ್ಲಿ ಸಿಗಲಿವೆ. ಹೊಸ ಓದುಗರು ಪೇಜ್ ಲೈಕ್ & ಫಾಲೋ ಮಾಡಿ…) ನಾಗಮಂಡಲ, ಜೋಡಿಹಕ್ಕಿ, ಸೂರ್ಯವಂಶ, ರಂಗಣ್ಣ, ಭೂಮಿ ತಾಯಿಯ ಚೊಚ್ಚಲ ಮಗ, ಸ್ವಸ್ತಿಕ್, ಹಬ್ಬ – ಅಬ್ಬಬ್ಬ… ಕನ್ನಡದ ಎಷ್ಟೊಂದು ಸಿನಿಮಾಗಳಲ್ಲಿ ನಟಿಸಿ ಸ್ಟಾರ್ ವರ್ಚಸ್ಸು ಪಡೆದ ನಟಿ ವಿಜಯಲಕ್ಷ್ಮಿ. ಕರ್ನಾಟಕದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಿದ್ದಾಗಲೇ ತಮಿಳು ಚಿತ್ರರಂಗಕ್ಕೂ ಕಾಲಿಟ್ಟವಳು. ವಿಜಯ್ ಮತ್ತು ಸೂರ್ಯ ನಟನೆಯ ಫ್ರೆಂಡ್ಸ್ ಚಿತ್ರದಲ್ಲಿ ಈಕೆ […]
ಶೀತಲ್ ಶೆಟ್ಟಿ ವಿಂಡೋ ಸೀಟ್ನಲ್ಲಿ ಕುಳಿತರು ನಿರೂಪ್ ಭಂಡಾರಿ
ಯಾವೊಬ್ಬ ಪಾತ್ರಧಾರಿಯ ಫೋಟೋಗಳನ್ನು ಬಳಸದೆ, ರೈಲಿನ ಕಿಟಕಿ, ಅದರ ಸುತ್ತ ರೇಲ್ವೇ ಟ್ರ್ಯಾಕು, ಅದರ ಮೊನೆಯಲ್ಲಿ ತೊಟ್ಟಿಕ್ಕುತ್ತಿರುವ ರಕ್ತ, ಬೆರಳಚ್ಚು ಇತ್ಯಾದಿ ವಿವರಗಳನ್ನು ನೀಡಿದ್ದಾರೆ. ಪೋಸ್ಟರು ನೋಡಿದರೆ ಇದೊಂದು ಸಸ್ಪೆನ್ಸ್, ಕ್ರೈಮ್ ಥ್ರಿಲ್ಲರ್ ಜಾನರಿನ ಕಥೆ ಹೊಂದಿರುವ ಕುರುಹಿದೆ. ವಿನ್ಯಾಸ ಕಲಾವಿದ ಅಶ್ವಿನ್ ರಮೇಶ್ ಕಲಾತ್ಮಕ ಪೋಸ್ಟರನ್ನು ರೂಪಿಸಿದ್ದಾರೆ. ಮೊದಮೊದಲು ಟೀವಿ ನಿರೂಪಕಿಯಾಗಿ ಪುಟ್ಟ ಪರದೆಮೇಲೆ ಕಾಣಿಸಿಕೊಂಡ ಶೀತಲ್ ಶೆಟ್ಟಿ ನಂತರ ಸ್ವೀಕರಿಸಿದ ಸವಾಲುಗಳು, ಏರಿದ ಏತ್ತರ ದೊಡ್ಡದು. ಈಗ ಶೀತಲ್ ಶೆಟ್ಟಿ ಮತ್ತೊಂದು ಕನಸಿನ ಬೆನ್ನತ್ತಿದ್ದಾರೆ. […]
ಶೀಘ್ರದಲ್ಲೇ ಶಾರ್ದೂಲ ಶೋ!
ಭೈರವ ಸಿನಿಮಾಸ್ ಲಾಂಛನದಲ್ಲಿ ಕಲ್ಯಾಣ್ ಸಿ ಹಾಗೂ ರೋಹಿತ್ .ಎಸ್ ಅವರು ನಿರ್ಮಿಸಿರುವ ಶಾರ್ದೂಲ ಚಿತ್ರವನ್ನು ವೀಕ್ಷಿಸಿರುವ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಅರ್ಹತಾಪತ್ರವನ್ನು ನೀಡಿದೆ. ಕೊರೋನ ಹಾವಳಿಯಿಂದ ಸಿನಿಮಾ ಬಿಡುಗಡೆ ವಿಳಂಬವಾಗಿದ್ದು, ಅನುಮತಿ ದೊರಕಿದ ಕೂಡಲೆ ಚಿತ್ರವನ್ನು ತೆರೆಗ ತರುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.. ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಟ್ರೇಲರ್ ಕೂಡ ವಿಭಿನ್ನವಾಗಿದ್ದು, ಸದ್ಯದಲ್ಲೇ ಬಿಡುಗಡೆಯಾಗಲಿದೆ… ನಮ್ ಏರಿಯಾಲ್ ಒಂದಿನ, ತುಘ್ಲಕ್, ಹುಲಿರಾಯ ಮೂಲಕ ಹೊಸಾ ಬಗೆಯ ಚಿತ್ರವನ್ನು ನೀಡಿದ್ದ ಅರವಿಂದ್ ಕೌಶಿಕ್ ಮತ್ತೆ […]
ಇಂಥಾ ಸ್ಥಿತಿ ಬರಬಾರದಿತ್ತು….
ʻಸಲ್ಮಾನ್ ಬಿಟ್ಟರೆ ಬೇರೆ ಯಾರೂ ಸಹಾಯ ಮಾಡೋದಿಲ್ಲ. ನನಗೆ ಗೊತ್ತು ಮತ್ತೆ ಮತ್ತೆ ನಾನು ಹಣ ಕೇಳುತ್ತಿದ್ದೇನೆ. ಕೇಳದೇ ಬೇರೆ ವಿಧಿಯಿಲ್ಲ. ಬೇಸರ ಮಾಡಿಕೊಳ್ಳದೆ ಮತ್ತೊಂದು ಬಾರಿ ಸಹಕರಿಸಿʼ ಅಂತಾ ಮಾಧ್ಯಮಗಳ ಮೂಲಕ ಪೂಜಾ ಸಲ್ಲುಗೆ ಅಹವಾಲು ಕಳಿಸಿದ್ದಾಳೆ. ಸಲ್ಲು ಈ ಸಲವೂ ಸಹಾಯ ನೀಡಲು ಮುಂದಾಗುತ್ತಾರಾ?! ಸಿನಿಮಾರಂಗ ಮಾತ್ರವಲ್ಲ, ಯಾವುದೇ ಕ್ಷೇತ್ರವಿರಲಿ ಹಣ, ವರ್ಚಸ್ಸು ಇದ್ದವರಿಗಷ್ಟೇ ಬೆಲೆ. ನಾಳೆಗಳ ಚಿಂತೆ ಇಲ್ಲದೆ ದುಡಿದದ್ದನ್ನೆಲ್ಲಾ ಖಾಲಿ ಮಾಡಿಕೊಂಡರೆ ಕಷ್ಟದ ದಿನಗಳಲ್ಲಿ ಯಾರೂ ಕೈ ಹಿಡಿಯೋದಿಲ್ಲ. ಕೆಲವೇ ವರ್ಷಗಳ […]
ಭಾರತದ ಟಾಪ್ 10 ಸಿನಿಮಾಗಳಲ್ಲಿ ಕಬ್ಜ!
ಕನ್ನಡ ಚಿತ್ರರಂಗದಲ್ಲಿ ಕೆಜಿಎಫ್ ಚಿತ್ರದ ನಂತರ ಭಾರಿ ಸದ್ದು ಮಾಡುತ್ತಿರುವ ಸಿನಿಮಾ ಸೂಪರ್ ಸ್ಟಾರ್ ಉಪೇಂದ್ರ ಅಭಿನಯದ ಕಬ್ಜ. ಭಾರತದ ಹೆಸರಾಂತ ಪತ್ರಿಕೆ ಹಾಗೂ ಪೋರ್ಟಲ್ಗಳು ನಡೆಸಿರುವ ಟಾಪ್ 10 ಭಾರತದ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾಗಳು ಎಂಬ ಸಮೀಕ್ಷೆಯಲ್ಲಿ ಕೆಜಿಎಫ್ ಎರಡನೇ ಸ್ಥಾನದಲ್ಲಿದ್ದರೆ, ಕಬ್ಜ ಚಿತ್ರ ಮೂರನೇ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಹಿಂದಿ, ತೆಲುಗು, ತಮಿಳು, ಮಲಯಾಳಂ ಚಿತ್ರರಂಗದ ಘಟಾನುಘಟಿಗಳ ಸಿನಿಮಾಗಳು ಸ್ಥಾನಗಳನ್ನು ಪಡೆದಿದೆ, ಇಂಡಿಯಾದ ಮೋಸ್ಟ್ ಎಕ್ಸ್ಪೆಕ್ಟೆಡ್ ಟಾಪ್ ಟೆನ್ ಸಿನಿಮಾಗಳ ಪಟ್ಟಿಯಲ್ಲಿ ಕನ್ನಡದ ಎರಡು […]
ನಿಡಸಾಲೆಯವರ ಸಿನಿಮಾಗಳನ್ನು ನೋಡಿ…
ಈ ನೆಲದ ಸಮಸ್ಯೆಗಳಿಗೆ, ಜನಸಾಮಾನ್ಯರ ದುಮ್ಮಾನಗಳಿಗೆ ಕಣ್ಣಾಗುವ ಚಿತ್ರಗಳ ಕೊರತೆ ಕನ್ನಡದಲ್ಲಿದೆ. ಅದನ್ನು ನೀಗುವಂತೆ ತಯಾರಾಗಿರುವ ಸಿನಿಮಾಗಳಲ್ಲಿ ‘ನೀರು ತಂದವರು’ ಮತ್ತು ಅನುತ್ತರ ಮುಖ್ಯವಾದವು. ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮಾ ಉತ್ಸವಗಳಲ್ಲಿ ಪ್ರದರ್ಶನಗೊಂಡಿದ್ದ ಈ ಸಿನಿಮಾಗಳೀಗ ಎಂಎಕ್ಸ್ ಪ್ಲೇಯರ್, ಹಂಗಾಮಾ ಪ್ಲೇ, ಏರ್ಟೆಲ್ ಎಕ್ಸ್ ಸ್ಟ್ರೀಮ್, ವೋಡಾಫೋನ್ ಪ್ಲೇಗಳಲ್ಲಿ ಉಚಿತವಾಗಿ ಲಭ್ಯವಿದೆ. ಕನ್ನಡದ ಖ್ಯಾತ ಕಥೆಗಾರರಾದ ಅಮರೇಶ್ ನುಗಡೋಣಿ ಅವರ ಕಥೆಯೊಂದನ್ನು ಆಧರಿಸಿರುವ ನೀರು ತಂದವರು ಚಿತ್ರ ಉತ್ತರ ಕರ್ನಾಟಕದ ಜನ ಜೀವನವನ್ನು ಪರಿಣಾಮಕಾರಿಯಾಗಿ, ಸೃಜನಾತ್ಮಕವಾಗಿ ತೆರೆದಿಟ್ಟಿದೆ. ಕಲಾತ್ಮಕ […]
ಅವರ ಸಂಕಟ ಅವರಿಗೆ….
ಯಾರದ್ದೇ ಬದುಕಿನ ದುಃಖ, ಕಣ್ಣೀರು ಮಾರಾಟದ ಸರಕಾಗಬಾರದು. ಹೆಸರು ಮಾಡಿದವರು ಸತ್ತರೆ ಟೀವಿ ಮೀಡಿಯಾಗಳು ಅತಿ ಎನಿಸುವ ಮಟ್ಟಕ್ಕೆ ಅದನ್ನು ಪ್ರಸಾರ ಮಾಡುತ್ತವೆ. ಕಳೆದ ವಾರ ಚಿರಂಜೀವಿ ಸರ್ಜಾ ತೀರಿಕೊಂಡಾಗಲೂ ಕೆಲವು ಟಿವಿ ಮಾಧ್ಯಮ ಅದನ್ನೇ ಮಾಡಿತು. ಚಿರು ಕುಟುಂಬದವರು ಗೇಟು ಹಾಕಿ ಸಾಕು ಹೋಗಿ ಎನ್ನುವ ತನಕವೂ ಸಾವು, ನೋವಿನ ವಿಚಾರಗಳನ್ನು ಬಿತ್ತರಿಸಿತು. ಅಂತ್ಯಸಂಸ್ಕಾರದ ಮಾರನೇ ದಿನ ಹಾಲುತುಪ್ಪದ ಕಾರ್ಯವನ್ನೂ ಲೈವ್ ಟೆಲಿಕಾಸ್ಟ್ ಮಾಡಲು ಕ್ಯಾಮೆರಾಗಳು ಸಾಲುಗಟ್ಟಿ ನಿಂತಿದ್ದವು. ಇದನ್ನೆಲ್ಲಾ ನ್ಯೂಸ್ ಮಾಡೋದು ಬೇಡ ಹೋಗಿ […]
ಹೇಗಿದ್ದವಳು ಹೀಗಾದಳು…
ಎಲ್ಲರೂ ಅಚ್ಚರಿಗೊಳ್ಳುವ ರೇಂಜಿಗೆ ಸಣ್ಣಗಾಗಿರುವ ಖುಷ್ಬೂ ತಮ್ಮ ಮೈಮಾಟದಿಂದ ಮತ್ತೆ ಎಲ್ಲರ ಗಮನ ಸೆಳೆದಿದ್ದಾರೆ. ರಮ್ಯಕೃಷ್ಣ ಥರ ಖುಷ್ಬೂ ಕೂಡಾ ಸಿನಿಮಾರಂಗದಲ್ಲಿ ಮತ್ತೊಂದು ಇನ್ನಿಂಗ್ಸ್ ಆರಂಭಿಸುವ ಎಲ್ಲ ಸೂಚನೆಗಳೂ ಕಾಣುತ್ತಿವೆ. 1980ರ ಸುಮಾರಿಗೆ ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದು, ನಂತರ ನಾಯಕಿಯಾಗಿ ಭಾರತದ ಬಹುತೇಕ ಎಲ್ಲ ಭಾಷೆಗಳ ಚಿತ್ರಗಳಲ್ಲಿ ನಟಿಸಿದವಳು ಖುಷ್ಬೂ. ಕನ್ನಡದಲ್ಲಿ ರಣಧೀರ, ಅಂಜದ ಗಂಡು, ಯುಗ ಪುರುಷ ಸಿನಿಮಾಗಳಲ್ಲಿ ಕ್ರೇಜ಼ಿಸ್ಟಾರ್ ಜೊತೆ ನಟಿಸಿ ಮೋಡಿ ಮಾಡಿದ್ದವಳು. ಈವರೆಗೆ ಖುಷ್ಬೂ ನಟಿಸಿದ ಕನ್ನಡ ಸಿನಿಮಾಗಳ ಸಂಖ್ಯೆಯೇ ಇಪ್ಪತ್ತಿರಬಹುದು. […]