ಬಿಚ್ಚುಗತ್ತಿ ಹಿಡಿದವನ ಕೈಲಿ ಲಾಂಗು!
“ಬಿಚ್ಚುಗತ್ತಿ” ಸಿನಿಮಾ ಕನ್ನಡ ಚಿತ್ರರಂಗದ ವಿಭಿನ್ನ ಪ್ರಯತ್ನಗಳಲ್ಲಿ ಒಂದು ಅಂತಹ ಸಿನಿಮಾದಲ್ಲಿ ನಟಿಸಿದಕ್ಕೆ ನನಗೆ ತುಂಬಾ ಹೆಮ್ಮೆ ಇದೆ. ಅತಿ ಶೀಘ್ರದಲ್ಲಿ ನನ್ನ ಮುಂದಿನ ಚಿತ್ರದ ತಾರಾಗಣ ಆಗು ಫಸ್ಟ್ ಲುಕ್ ಜೊತೆಗೆ ನಿಮ್ಮಮುಂದೆ ಬರಲಿದ್ದೇನೆ! ನಿಮ್ಮ ಪ್ರೀತಿಯ ಆಶೀರ್ವಾದದ ನಿರೀಕ್ಷೆಯಲ್ಲಿ – ನಿಮ್ಮ ರಾಜ್ ವರ್ಧನ್ ಖ್ಯಾತ ಹಾಸ್ಯ ನಟ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ವಿಭಿನ್ನ ಚಿತ್ರದ ಮೂಲಕ ವಿಶಿಷ್ಟವಾದ ಪಾತ್ರವೊಂದರೊಂದಿಗೆ ಪ್ರೇಕ್ಷಕರೆದುರು ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಹೀರೋ ಆಗಲು ಬೇಕಾದ ಅಷ್ಟೂ ಕ್ವಾಲಿಟಿಗಳಿರುವ ರಾಜವರ್ಧನ್ […]
ಕೆ.ಜಿ.ಎಫ್. ಶೂಟಿಂಗ್ ಎಲ್ಲಿ ನಡೀತಿದೆ ಗೊತ್ತಾ?
ಈ ಬಾರಿ ಪ್ರೇಕ್ಷಕರನ್ನು ಸೆಳೆಯುವುದರೊಂದಿಗೆ ಮಾರುಕಟ್ಟೆಯನ್ನೂ ಕಬ್ಜ ಮಾಡಿಕೊಳ್ಳುವ ಎಲ್ಲ ಪ್ಲಾನೂ ಪೂರ್ವನಿಯೋಜಿತವಾಗಿದೆ. ಉತ್ತರ ಭಾರತದಲ್ಲಿ ಮಾರ್ಕೆಟ್ ವ್ಯಾಲ್ಯೂ ಹೆಚ್ಚಿಸಿಕೊಳ್ಳಲು ಸಂಜು ಬಾಬಾ ಮತ್ತು ರವೀನಾರನ್ನು ಸೇರಿಸಿಕೊಂಡಿದ್ದಾರೆ. ಈಗ ಪ್ರಕಾಶ್ ರೈ ಕೂಡಾ ಕೆ ಜಿ ಎಫ್ ಒಳಗೆ ಕಾಲಿಟ್ಟಿರೋದು ಬಹುಶಃ ದಕ್ಷಿಣ ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ವ್ಯಾಪಾರ ಕುದುರಿಸಿಕೊಳ್ಳುವ ಮಾಸ್ಟರ್ ಪ್ಲಾನ್ ಇದ್ದರೂ ಇರಬಹುದು. ಕೆ.ಜಿ.ಎಫ್ ಚಾಪ್ಟರ್-೨ ಚಿತ್ರೀಕರಣ ಆರಂಭಗೊಂಡಿದೆ. ಕೆ.ಜಿ.ಎಫ್. ಮೊದಲ ಭಾಗ ಇಡೀ ಭಾರತೀಯ ಸಿನಿಮಾ ರಸಿಕರನ್ನು ಸೆಳೆದಿತ್ತು. ಒಂದೇ ಒಂದು ಸಿನಿಮಾಗೆ […]
ಇದು ಗರ್ಭ ಧರಿಸಿದ ಪುರುಷನ ಸುತ್ತಲಿನ ಕತೆ…
ಪಾಪಿ ಕಲಿಗಾಲ ಕೆಟ್ಟೋಯ್ತಯ್ಯ.. ಹೆಣ್ಣು ಹೆಣ್ಣ ಮದುವೆಯಾಗೋ ಮೋಹ ಬಂತಯ್ಯ.. ಗಂಡಸರಿಗೆ ಮಕ್ಕಳಾಗೊ ಕಾಲ ಬಂತಯ್ಯ – ಹೀಗೊಂದು ಹಾಡಿನ ಸಾಲನ್ನು ಕೇಳಿರುತ್ತೀರಿ. ಈ ಹಾಡಿನ ಸಾಲುಗಳನ್ನು ನಿಜವಾಗಿಸುವಂತೆ ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು LG BT Q ಕಥೆಯನ್ನಾಧರಿಸಿದ ಸಿನಿಮಾಗಳು ರೂಪುಗೊಂಡಿವೆ. ಈಗ ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ಗರ್ಭ ಧರಿಸಿದ ಗಂಡಸಿನ ಕಥೆ ವೆಬ್ ಸಿರೀಸ್ ರೂಪದಲ್ಲಿ ಅನಾವರಣಗೊಳ್ಳಲು ತಯಾರಿ ನಡೆದಿದೆ! ಹೆಣ್ಣು ಗರ್ಭಧರಿಸಿದಾಗ, ಪರೀಕ್ಷಿಸಿದ ವೈದ್ಯರು ʻಎ ಸ್ವೀಟ್ ನ್ಯೂಸ್ ಫಾರ್ ಯೂʼ ಅನ್ನೋದು […]
ಉಪ್ಪಿ ಮನೆ ಹುಡುಗ ಹೀರೋ ಆದ…!
ಉಪೇಂದ್ರ ನಿರ್ದೇಶಕರಾಗಿ, ನಟರಾಗಿ ಹೆಸರಾದವರು. ತಮ್ಮ ಅದ್ಭುತ ಪ್ರತಿಭೆ ಮೂಲಕ ಕನ್ನಡದಲ್ಲಷ್ಟೇ ಅಲ್ಲದೇ ಇತರ ಭಾಷೆಗಳಲ್ಲಿಯೂ ಹೆಸರು ಮಾಡಿ ಸೂಪರ್ ಸ್ಟಾರ್ ಆದವರು ಉಪೇಂದ್ರ. ಈಗ ಅವರ ಕುಟುಂಬದಿಂದ ಚಿತ್ರರಂಗಕ್ಕೆ ಮತ್ತೊಬ್ಬ ನಾಯಕ ನಟನ ಆಗಮನವಾಗುತ್ತಿದೆ. ಹೌದು. ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ಪೂರ್ಣಪ್ರಮಾಣದ ನಾಯಕನಾಗಿ ಬರುತ್ತಿದ್ದಾರೆ ‘ಸೂಪರ್ ಸ್ಟಾರ್’ ಚಿತ್ರದ ಮೂಲಕ. ಇತ್ತೀಚಿಗೆ ಚಿತ್ರದ ಕ್ಯಾರೆಕ್ಟರ್ ಟೀಸರ್ ಅನ್ನು ರೋರಿಂಗ್ ಸ್ಟಾರ್ ಶ್ರೀಮುರಳಿ ಬಿಡುಗಡೆ ಮಾಡಿದರು. ಟೀಸರ್ ಬಿಡುಗಡೆ ನಂತರ ಮಾತನಾಡಿದ ಶ್ರೀಮುರಳಿ […]
ವಿಭಿನ್ನ ಕಥಾಹಂದರದ ಚಿತ್ರಕ್ಕೆ ಮನು ನಾಗ್ ಆಕ್ಷನ್ ಕಟ್.
ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಂ ರವಿಚಂದ್ರನ್ ನಾಯಕನಾಗಿ ನಟಿಸುತ್ತಿರುವ ನೂತನ ಚಿತ್ರ ಸದ್ಯದಲ್ಲೇ ಆರಂಭವಾಗಲಿದೆ. ರಾ ಹಾಗೂ ರಗಡ್ ಪಾತ್ರದಲ್ಲಿ ವಿಕ್ರಂ ಅಭಿನಯಿಸುತ್ತಿದ್ದಾರೆ. ಮಾಸ್ಕ ಥಾಹಂದರದೊಂದಿಗೆ, ಸೆಂಟಿಮೆಂಟ್ ಸನ್ನಿವೇಶಗಳು ಚಿತ್ರದಲ್ಲಿದ್ದು, ತಾಯಿ ಹಾಗೂ ಮಗನ ನಡುವಿನ ಭಾಂದವ್ಯದ ದೃಶ್ಯಗಳು ಜನರ ಮನಸ್ಸಿಗೆ ಹತ್ತಿರವಾಗಲಿದೆಯಂತೆ. ಮನು ನಾಗ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕನ್ನಡ ಹಾಗೂ ಮಲೆಯಾಳಂನ ಪ್ರಸಿದ್ದ ನಿರ್ದೇಶಕರ ಬಳಿ ಕಾರ್ಯ ನಿರ್ವಹಿಸಿರುವ ಮನು ನಾಗ್, ಬಹುಭಾಷ ನಟಿ ಪ್ರಿಯಾಮಣಿ ಅವರ ಅಭಿನಯದಲ್ಲಿ ವೈಟ್ ಎಂಬ […]
ಹೆಂಡ್ತಿ ವಿಚಾರದಲ್ಲಿ ಸಿಕ್ಕಿಕೊಂಡ ಪ್ರಥಮ!
ಬಿಗ್ ಬಾಸ್ ಕಾರ್ಯಕ್ರಮದಿಂದಲೇ ಜಗದ್ವಿಖ್ಯಾತಿ ಪಡೆದು, ಎಂ.ಎಲ್.ಎ, ದೇವ್ರಂಥ ಮನುಷ್ಯ ಸಿನಿಮಾಗಳ ಮೂಲಕ ಹೀರೋ ಕೂಡಾ ಆದ ಪ್ರಥಮ್ ನಟನೆಯ ನಟಭಯಂಕರ ಸಿನಿಮಾ ಬಹುತೇಕ ಬಿಡುಗಡೆಗೆ ರೆಡಿಯಾಗಿದೆ. ಈ ಚಿತ್ರ ರಿಲೀಸಿಗೂ ಮುಂಚೆಯೇ ಪ್ರಥಮ್ ಮತ್ತೊಂದು ಸಿನಿಮಾದಲ್ಲಿ ನಟಿಸಲು ತಯಾರಿ ನಡೆಸಿಕೊಳ್ಳುತ್ತಿದ್ದಾರೆ. ಪ್ರಥಮ್ ನಟನೆಯ ಈ ಹಿಂದಿನ ಸಿನಿಮಾಗಳಿಗೆ ಶ್ರೀ ಮುರಳಿ ಬಂದು ಹರಸಿದ್ದಾರೆ. ಈಗ ಆರಂಭಗೊಳ್ಳಬೇಕಿರುವ ಚಿತ್ರಕ್ಕೂ ಶ್ರೀಮುರಳಿ ಬರೋದು ಬಹುತೇಕ ಖಚಿತ. ಆದರೆ ಈ ಸಿನಿಮಾದ ಹೆಸರನ್ನು ಬದಲಿಸಿಕೊಳ್ಳಲು ಮುರಳಿ ಸೂಚಿಸಿದ್ದಾರೆ! ಹಾಗಿದ್ದರೆ ಪ್ರಥಮ್ […]
ಮಲೆನಾಡಿನ ಮಳೆಯಲ್ಲಿ ಸಲಗ!
ಕರೋನ ಮಹಾಮಳೆಯಲ್ಲಿ ಸಲಗ ಚಿತ್ರತಂಡ ಮಲೆನಾಡ ರಮಣೀಯ ತಾಣಗಳಲ್ಲಿ ಮಧುರ ಸುಮಧುರ ಡ್ಯುಯೆಟ್ ಹಾಡನ್ನ ನಯನ ಮನೋಹರವಾಗಿ ಚಿತ್ರಿಸಿ, ಮತ್ತೊಮ್ಮೆ ಜೋರಾಗಿ ಸದ್ದು ಸುದ್ದಿಯಾಗ್ತಿದೆ. ದುನಿಯಾ ವಿಜಯ್ ನಿರ್ದೇಶಿಸಿ ನಟಿಸ್ತಿರೋ ಈ ಚಿತ್ರದಲ್ಲಿ ಡಾಲಿ ಧನಂಜಯ ಪ್ರಮುಖ ಪಾತ್ರದಲ್ಲಿಕಾಣಿಸಿಕೊಂಡಿದ್ದು, ಸಂಜನಾ ಆನಂದ್ ನಾಯಕಿಯಾಗಿಕಾಣಿಸಿಕೊಂಡಿದ್ದಾರೆ. ಟಗರು ಕೆ.ಪಿ ಶ್ರೀಕಾಂತ್ ನಿರ್ಮಾಣದಲ್ಲಿ ತಯಾರಾಗ್ತಿರೋ ಈ ಚಿತ್ರ ಈಗಾಗ್ಲೇ ಹತ್ತು ಹಲವು ವಿಶೇಷಗಳಿಂದುದ್ಯಮದಲ್ಲಿ ಹಾಗೂ ಅಭಿಮಾನಿಗಳಲ್ಲಿ ದೊಡ್ಡ ನಿರೀಕ್ಷೆ ಹುಟ್ಟಿಸಿದೆ. ಈ ನಡುವೆ ಕೋವಿಡ್ ಹಾವಳಿಯಿಂದ ಎಲ್ಲಾ ಲಾಕ್ ಆಗಿದ್ರೂ ಸಲಗ […]
ರಾಘಣ್ಣನ 25 ನೇ ಸಿನಿಮಾ ಆಡಿಸಿದಾತ!
ರಾಘವೇಂದ್ರ ರಾಜಕುಮಾರ್ ಅಭಿನಯದ ‘ಆಡಿಸಿದಾತ’ ಚಿತ್ರದ ಟೀಸರ್ ಗೌರಿ – ಗಣೇಶ ಹಬ್ಬದ ಸಮಯದಲ್ಲಿ ಬಿಡುಗಡೆಯಾಗಲಿದೆ. ಇದು ರಾಘವೇಂದ್ರ ರಾಜಕುಮಾರ್ ಅವರ ಅಭಿನಯದ 25ನೇ ಚಿತ್ರ. ಶ್ರೀಮತಿ ಲಕ್ಷ್ಮೀ ಎಸ್ ಎ ಗೋವಿಂದರಾಜು ಹಾಗೂ ನಾಗರಾಜ್ ವಿ ಅವರ ಸಹಕಾರದೊಂದಿಗೆ ದುರ್ಗದ ಹುಲಿ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಹೆಚ್.ಹಾಲೇಶ್ ಅವರು ನಿರ್ಮಿಸುತ್ತಿರುವ ಈ ಚಿತ್ರವನ್ನು ಫಣೀಶ್ ಭಾರದ್ವಾಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಎರಡು ಹಾಡುಗಳು ಸೇರಿದಂತೆ ಕೆಲವು ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿರುವ ಈ […]
ಕೊರೋನ ವಾರಿಯರ್ಸ್ ಕುರಿತ ವಿಡಿಯೋ ಸಾಂಗ್ ಬಿಡುಗಡೆ
ಬೆಂಗಳೂರು ನಗರದ ಮಟ್ಟಿಗೆ ಸಾಮಾಜಿಕ ಮತ್ತುಸಿನಿಮಾ ರಂಗ ಎರಡರಲ್ಲೂ ಜನಪ್ರಿಯವಾದ ಹಸರು ಮಹೇಂದ್ರ ಮನೂತ್. ಹಾಗೆ ನೋಡಿದರೆ ಅವರು ಮಾರುತಿ ಮೆಡಿಕಲ್ಸ್ ಮನೂತ್ ಅಂತಲೇ ಹೆಚ್ಚು ಚಿರಪರಿಚಿತ. ಅವರೀಗ ಕೊರೋನಾ ಕುರಿತ ವಿಡಿಯೋ ಸಾಂಗ್ ಮೂಲಕ ಸುದ್ದಿಯಲ್ಲಿದ್ದಾರೆ. ಕೊರೋನಾ ಎಲ್ಲರೂ ಜೀವ ಭಯದಲ್ಲಿ ಶೂಟಿಂಗ್- ಗಿಟಿಂಗ್ ಅಂತ ಸಿನಿಮಾ ಸಂಬಂಧಿತ ಚಟುವಟಿಕೆಗಳಿಂದಲೇ ದೂರವಾಗಿರುವ ಸಂದರ್ಭದಲ್ಲಿ ಜನರಲ್ಲಿ ಕೊರೋನಾ ಭಯ ದೂರ ಮಾಡಲು ನಮಗಾಗಿ ಜೀವ ಕೊಟ್ಟವರು ಹೆಸರಲ್ಲೊಂದು ವಿಡಿಯೋ ಸಾಂಗ್ ನಿರ್ಮಿಸಿ, ಸೋಷಿಯಲ್ ಮೀಡಿಯಾದಲ್ಲಿ ಬಿಡುಗಡೆಗೊಳಿಸಿದ್ದಾರೆ. ಹಾಗಂತ […]
ಶರಯೂ ರಾಕಿಂಗ್!
ಧೀರ ರಾಕ್ ಲೈನ್ ವೆಂಕಟೇಶ್ ಸಿನಿಮಾ ನಿರ್ಮಾಪಕರಾಗಿ, ನಟನಾಗಿ ಭಾರತದಾದ್ಯಂತ ಹೆಸರು ಮಾಡಿದ್ದಾರೆ. ಅವರ ಪುತ್ರ ಯತೀಶ್ ಕೂಡಾ ಸಿನಿಮಾ ನಿರ್ಮಾಣದಲ್ಲಿ ಭಾಗಿಯಾಗಿದ್ದಾರೆ. ಯತೀಶ್ ಅವರು ನಿರ್ಮಾಪಕ ಹಾಗೂ ಶಾಸಕ ಮುನಿರತ್ನ ಅವರ ಅಳಿಯ ಕೂಡ. ಈಗ ಯತೀಶ್ ಅವರ ಪುತ್ರಿ ಶರಯೂ(ರಾಕ್ ಲೈನ್ ವೆಂಕಟೇಶ್ – ಮುನಿರತ್ನ ಅವರ ಮೊಮ್ಮಗಳು) ಗಾಯಕಿಯಾಗಿ ಸಾಂಸ್ಕೃತಿಕ ಜಗತ್ತಿಗೆ ಪಾದಾರ್ಪಣೆ ಮಾಡುತ್ತಿದ್ದಾಳೆ. ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ರೂಪಿಸಿರುವ ʻಕೃಷ್ಣ ಜನಾರ್ದನʼ ಹಾಡಿನ ರೀಮಿಕ್ಸ್ ಹಾಡಿಗೆ ಶರಯೂ ದನಿ ನೀಡಿದ್ದಾಳೆ. ಶ್ರೀ […]