ಸಿಂಗಂ ಸೂರ್ಯ ಆಫೀಸಲ್ಲಿ ಬಾಂಬ್ ಸಿಕ್ಕಿತಾ?
ಮೊದಲೇ ಜಗತ್ತು ಕೊರೋನಾದ ಕರಾಳತೆಯಲ್ಲಿ ಸಿಲುಕಿ ನಲುಗಿದೆ. ಈಗ ಎದುರಾಗಿರುವ ಅವಾಂತರಗಳಿಂದ ಚಿತ್ರರಂಗ ಹೇಗೆ ಹೊರ ಬರುತ್ತದೋ ಗೊತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ಬಾಂಬು, ಬದನೇಕಾಯಿ ಅಂತೆಲ್ಲಾ ಬೆದರಿಸಿ, ಕಿತಾಪತಿ ಮಾಡುವ ಜನರೂ ಇದ್ದಾರೆ…! ಕೊರೋನಾ ಬಿಟ್ಟರೆ, ಹುಸಿ ಬಾಂಬ್ ಕರೆಗಳು ತಮಿಳು ನಟರಿಗೆ ವಿಪರೀತ ಹಿಂಸೆ ಕೊಡುತ್ತಿವೆ. ಇತ್ತೀಚೆಗೆ ತಮಿಳು ನಟ ಸೂರ್ಯ ಭಾರತದ ಶಿಕ್ಷಣ ನೀತಿಗಳು ಮತ್ತು ನೀಟ್ ಪರೀಕ್ಷೆಯ ವಿರುದ್ಧ ಹೇಳಿಕೆಗಳನ್ನು ನೀಡಿದ್ದರು. ಇದರ ಬೆನ್ನಿಗೇ ಚೆನ್ನೈನ ಆಳ್ವಾರ್ ಪೇಟೆಯಲ್ಲಿರುವ ಸೂರ್ಯನ ಆಫೀಸಿನಲ್ಲಿ ಸ್ಫೋಟಕ […]
ಯಾದ್ ರಖನಾ ಆಂದ್ ತಾರೋಂ ಯೆ ಸುಹಾನಿ ರಾತ್ ಹೈ….
‘ಆಜಾರೆ… ಆಜಾರೆ ಮೇರೆ ದಿಲಭರೋ ಆಜಾ…’ ಎಂದು ಪ್ರೇಮಿಗಳು ಒಬ್ಬರನ್ನೊಬ್ಬರು ಭರಸೆಳೆಯುವ ಅತಿಸುಂದರ ಹಾಡು ಎಂದೆಂದಿಗೂ ಎವರ್ಗ್ರೀನ್ ಆಗಿರುತ್ತದೆ. ಹಾಗೆಯೇ ‘ಸುನ್ ಸಾಹಿಬಾ ಸುನ್….’ ಎಂಬ ಹಾಡು ಕೂಡಾ. ಹೇಳುತ್ತಾ ಹೋದರೆ ಇಂಥ ಸಹಸ್ರ ಸಹಸ್ರ ಹಾಡುಗಳೇ ಉದಾಹರಣೆಗಳಾಗಿಬಿಡುತ್ತವೆ. ಸರಿಸುಮಾರು ಆರೂವರೆ ದಶಕಗಳ ಕಾಲ ಭಾರತೀಯ ಸಂಗೀತಲೋಕದ ಧೃವತಾರೆಯಂತೆ ಕಂಗೊಳಿಸಿದ ಲತಾ ಮಂಗೇಶ್ಕರ್ ಎಂಬ ಹಾಡುಹಕ್ಕಿಗೆ ಈಗ ತೊಂಬತ್ತೊಂದರ ಹರೆಯ…! ಭಾರತದ ಇಪ್ಪತ್ತೆರಡಕ್ಕೂ ಹೆಚ್ಚು ಭಾಷೆಗಳಲ್ಲಿ ಸುಮಾರು ಮೂವತ್ತೈದು ಸಾವಿರದಷ್ಟು ಹಾಡುಗಳನ್ನು ಹಾಡಿರುವ ಲತಾ ಮಂಗೇಶ್ಕರ್ ಎಂಬ […]
ವಿಂಡೋ ಸೀಟ್ ಟೀಸರ್ ಬಂತು!
ಮೇಲ್ನೋಟಕ್ಕೆ ನೋಡಿದರೆ ಈ ಫಸ್ಟ್ ಲುಕ್ ಸುಮ್ಮನೇ ಅಂದಗಟ್ಟಿಸುವ ವಿಡಿಯೋದಂತೆ ಕಾಣುವುದಿಲ್ಲ. ಬದಲಿಗೆ ಗಹನವಾದ ಕಥೆಯೊಂದು ಈ ಟೀಸರಿನ ಮೂಲಕವೇ ತೆರೆದುಕೊಂಡಿರುವ ಸೂಚನೆಯಿದೆ. ಹುಡುಗ ಪ್ರತೀ ದಿನ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾನೆ. ಆ ಪ್ರದೇಶ ಹತ್ತಿರಾಗುತ್ತಿದ್ದಂತೇ ಹುಡುಗಿ ಕಾಣುತ್ತಾಳಾ ಅನ್ನೋ ತವಕ ಆತನಿಗೆ. ಬಹುಶಃ ಆ ಬಂಗಲೆಯಲ್ಲಿ ವಾಸ ಮಾಡುವ ಜೀವ ಅದಿರಬಹುದು! ಅಂತೂ ಶೀತಲ್ ಶೆಟ್ಟಿ ವಿಂಡೋ ಸೀಟಿನ ಹುಡುಗನನ್ನು ಇಣುಕಿ ನೋಡಿಸಿದ್ದಾರೆ! ಕೆ.ಎಸ್.ಕೆ. ಶೋ ರೀಲ್ ಅರ್ಪಿಸಿ, ಮಂಜುನಾಥ್ ಗೌಡ (ಜಾಕ್ ಮಂಜು) ನಿರ್ಮಿಸಿರುವ ಚಿತ್ರ […]
SPB LIFE STORY
ಎಸ್.ಪಿ.ಬಾಲಸುಬ್ರಹ್ಮಣ್ಯಂ ಭಾರತೀಯ ಚಲನಚಿತ್ರ ರಂಗದ ಬಹುಮುಖ್ಯ ಹೆಸರು. ಐವತ್ತು ವರ್ಷಗಳಿಂದ ಸುಮಾರು ಹದಿನೇಳು ಭಾಷೆಗಳ ಚಲನಚಿತ್ರಗಳಿಗೆ ಹಾಡುತ್ತ ಬಂದಿದ್ದ ಈ ಗಾನ ಗಂಧರ್ವ ಇಂದು ಸ್ವರ ನಿಲ್ಲಿಸಿ ಬಾರದ ಲೋಕಕ್ಕೆ ಹೊರಟಿದ್ದಾರೆ. ಆಂಧ್ರಪ್ರದೇಶದಲ್ಲಿ ಹುಟ್ಟಿ, ತೆಲುಗು, ತಮಿಳು, ಮಲಯಾಳಂ, ಕನ್ನಡ ಸಿನೆಮಾಗಳಲ್ಲಿ ಹಾಡುವ ಮೂಲಕ ಪ್ರಸಿದ್ಧಿಗೆ ಬಂದ ಎಸ್ಪೀಬಿ, ಭಾಷೆಗಳ ಹಂಗನ್ನೂ ಮೀರಿ ಬೆಳೆದು ನಿಂತಿರುವ ಮೇರು ಪರ್ವತ. ಉತ್ತರ ದಕ್ಷಿಣವೆನ್ನದೆ ಭಾರತದ ಉದ್ದಗಲಕ್ಕೂ ಇವರ ಅಭಿಮಾನಿಗಳಿದ್ದಾರೆ. ಭಾರತದ ಮುಖ್ಯವಾಹಿನಿಯ ಬಹುತೇಕ ಎಲ್ಲ ಭಾಷೆಗಳಲ್ಲೂ ಹಾಡಿರುವ ಎಸ್ಪೀಬಿ, […]
ಶೀತಲ್ ಶೆಟ್ಟಿ ವಿಂಡೋ ಸೀಟಿನಲ್ಲಿ ನಿರೂಪ್ ಭಂಡಾರಿ ಪ್ರಯಾಣ!
ನಿರೂಪ್ ಭಂಡಾರಿ ನಾಯಕನಟನಾಗಿ ನಟಿಸಿರುವ ʻವಿಂಡೋ ಸೀಟ್ʼ ಸಿನಿಮಾದ ಫಸ್ಟ್ ಲುಕ್ಕಿಗಾಗಿ ಜನ ಕಾತರಿಸುವಂತಾಗಿತ್ತಲ್ಲಾ? ಈಗ ಅದನ್ನು ಕಣ್ತುಂಬಿಕೊಳ್ಳುವ ಘಳಿಗೆ ಸಮೀಪಿಸುತ್ತಿದೆ. ಇದೇ ಸೆಪ್ಟೆಂಬರ್ 24ರ ಬೆಳಿಗ್ಗೆ 11ಕ್ಕೆ ವಿಂಡೋಸೀಟ್ʼನ ಫಸ್ಟ್ ಲುಕ್ ಅನಾವರಣಗೊಳ್ಳುತ್ತಿದೆ. ನಿರೂಪ್ ಭಂಡಾರಿ ನಾಯಕನಟನಾಗಿ ನಟಿಸಿರುವ ʻವಿಂಡೋ ಸೀಟ್ʼ ಎನ್ನುವ ಭಿನ್ನ ಶೀರ್ಷಿಕೆಯ ಸಿನಿಮಾ ಮೂಲಕ ನಿರೂಪಕಿ, ನಟಿ ಶೀತಲ್ ಶೆಟ್ಟಿ ನಿರ್ದೇಶಕಿಯಾಗಿ ಹೊರಹೊಮ್ಮುತ್ತಿರುವುದು ಈಗಾಗಲೇ ಜಾಹೀರಾಗಿರುವ ವಿಚಾರ. ಅದಾಗಲೇ ಚಿತ್ರೀಕರಣಗಳೆಲ್ಲಾ ಮುಗಿದು, ಪೂರ್ಣಗೊಂಡಿರುವ ಚಿತ್ರದ ಮೊದಲ ಪೋಸ್ಟರ್ ತಿಂಗಳುಗಳ ಹಿಂದಷ್ಟೇ ರಿಲೀಸಾಗಿತ್ತು. […]
ಎಲ್ಲರಿಗೂ ಆಪ್ತವಾಗುವ ʻಗಮನಂʼ ಐದು ಭಾಷೆಗಳಲ್ಲಿ ರೆಡಿ!
ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಭಾರತದ ಐದು ಭಾಷೆಗಳಲ್ಲಿ ಏಕಕಾಲಕ್ಕೆ ತಯಾರಾಗಿರುವ ಸಿನಿಮಾ ಗಮನಂ. ನಾಲ್ಕು ಭಾಷೆಗಳಲ್ಲಿ ರೂಪುಗೊಂಡಿರುವ ಈ ಚಿತ್ರ ಜಗತ್ತಿನ ಯಾವುದೇ ಭಾಗದ ಜನ ನೋಡುವಂತಾ ಕಥಾಹಂದರವನ್ನು ಹೊಂದಿದೆ. ಅದರಲ್ಲೂ ಭಾರತದ ಪ್ರತಿಯೊಬ್ಬ ಪ್ರೇಕ್ಷಕ ಕೂಡಾ ಒಂದಲ್ಲಾ ಒಂದು ರೀತಿಯಲ್ಲಿ ಈ ಚಿತ್ರದ ಕಥೆ, ಪಾತ್ರಗಳೊಂದಿಗೆ ಕನೆಕ್ಟ್ ಆಗುವಂತಾ ಕಂಟೆಂಟ್ ಇದರಲ್ಲಿದೆ. ಬದುಕಲ್ಲಿ ಒಬ್ಬೊಬ್ಬರದ್ದೂ ಒಂದೊಂದು ಹಂಬಲಿಕೆ, ಹುಡುಕಾಟ, ಪರದಾಟಗಳಿರುತ್ತವೆ. ಅದರ ನಡುವೆ ವಿಷಾಧ, ನೋವು, ನಲಿವು ಎಲ್ಲವೂ ಸೇರಿಕೊಂಡಿರುತ್ತದೆ. […]
ಪ್ಯಾನ್ ಇಂಡಿಯಾ ಸಿನಿಮಾಗೆ ಮಂಜು ಮಾಂಡವ್ಯ ನಿರ್ದೇಶನ.
ಕಾಲೇಜು ದಿನಗಳಲ್ಲೇ ಉಪೇಂದ್ರ ಅವರ ಅಪ್ಪಟ ಅಭಿಮಾನಿಯಾಗಿದ್ದವರು ಮಂಜು ಮಾಂಡವ್ಯ. ಉಪ್ಪಿ ಮೇಲಿನ ಅಭಿಮಾನವೇ ಅವರನ್ನು ಚಿತ್ರರಂಗಕ್ಕೆ ಬರುವಂತೆ ಪ್ರೇರೇಪಿಸಿತ್ತು. ಇವತ್ತು ಅದೇ ಉಪ್ಪಿಯ ಅತಿಹೆಚ್ಚು ಬಜೆಟ್ಟಿನ ಸಿನಿಮಾವನ್ನು ಮಂಜು ನಿರ್ದೇಶನ ಮಾಡಲಿದ್ದಾರೆ… ಸೂಪರ್ ಸ್ಟಾರ್ ಉಪೇಂದ್ರ ನಾಯಕರಾಗಿ ನಟಿಸಲಿರುವ ನೂತನ ಚಿತ್ರ 2021ರ ಜನವರಿಯಲ್ಲಿ ಆರಂಭವಾಗಲಿದೆ. 100 cr ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾವಿದು. ಮಾಸ್ಟರ್ ಪೀಸ್ ಖ್ಯಾತಿಯ ಮಂಜು ಮಾಂಡವ್ಯ ಈ ಅದ್ದೂರಿ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಉಪೇಂದ್ರ – ಮಂಜು ಮಾಂಡವ್ಯ ಕಾಂಬಿನೇಶನಲ್ಲಿ […]
ಬೋಳು ತಲೆಯ ಚಿರು!
ಇದ್ದಕ್ಕಿದ್ದಂತೆ ಮೆಗಾಸ್ಟಾರ್ ಕೇಶಮುಂಡನ ಮಾಡಿಸಿಕೊಂಡ ಫೋಟೋ ನೋಡಿ ಅಭಿಮಾನಿಗಳು ಆಘಾತಗೊಂಡಿದ್ದರು. ಸ್ವತಃ ಚಿರು ಟ್ವೀಟ್ ಮಾಡಿದ ಮೇಲಷ್ಟೇ ಗೊತ್ತಾಗಿದ್ದು ಇದು ಬೇರೊಂದು ಸಿನಿಮಾದ ಲುಕ್ ಟೆಸ್ಟ್ ಗಾಗಿ ಮಾಡಿದ ಪ್ರಾಸ್ತೆಟಿಕ್ ಮೇಕಪ್ ಎಂದು. ಎಷ್ಟೋ ಜನ ನಿಜಕ್ಕೂ ಚಿರು ತಲೆ ಬೋಳಿಸಿಕೊಂಡಿದ್ದಾರೆ ಎಂದೇ ನಂಬಿದ್ದಾರೆ. ಎಲ್ಲಾ ಪ್ಲಾನಿನ ಪ್ರಕಾರವೇ ಆದರೆ ತೆಲುಗಿನ ಮೆಗಾ ಸ್ಟಾರ್ ಚಿರಂಜೀವಿ ಕೊರಟಾಲ ಶಿವ ನಿರ್ದೇಶನದ ಆಚಾರ್ಯ ಚಿತ್ರದಲ್ಲಿ ನಟಿಸಬೇಕು. ಮಿರ್ಚಿ, ಶ್ರೀಂಮಂತುಡು, ಭರತ್ ಅನ್ನೇ ನೇನು ಥರದ ಸೂಪರ್ ಹಿಟ್ ಚಿತ್ರಗಳನ್ನು […]
ಉಪ್ಪಿ ಹುಟ್ಟುಹಬ್ಬಕ್ಕೆ ಕಬ್ಜ ಥೀಮ್ ಪೋಸ್ಟರ್ ಬಿಡುಗಡೆ
ಆರ್.ಚಂದ್ರು ಅವರ ನಿರ್ಮಾಣ ಅಂದರೆ ಕೇಳುವುದೇ ಬೇಡ. ಚಿತ್ರ ಎಲ್ಲಾ ರೀತಿಯಲ್ಲೂ ಶ್ರೀಮಂತಿಕೆಯಿಂದ ಕೂಡಿರುತ್ತದೆ. ಕಬ್ಜ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಅದ್ದೂರಿತನಕ್ಕೆ ಯಾವುದೇ ಕೊರತೆ ಇಲ್ಲ.ಅಭಿಮಾನಿಗಳ ನಿರೀಕ್ಷೆಗೆ ತಕ್ಕ ಹಾಗೆ ಕಬ್ಜ ಮೂಡಿಬರುತ್ತಿದೆ ಎನ್ನುತ್ತಾರೆ ಆರ್ ಚಂದ್ರು. ಸೂಪರ್ ಸ್ಟಾರ್ ಉಪೇಂದ್ರ ನಾಯಕರಾಗಿ ನಟಿಸುತ್ತಿರುವ, ಆರ್ ಚಂದ್ರು ನಿರ್ದೇಶನದ, ಪ್ಯಾನ್ ಇಂಡಿಯಾ ಸಿನಿಮಾ ‘ಕಬ್ಜ’. ಭಾರತದ ಬಹು ನಿರೀಕ್ಷಿತ ಈ ಸಿನಿಮಾ ಬಿಡುಗಡೆಗೂ ಪೂರ್ವದಲ್ಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕುತ್ತಿದೆ. ಸೆಪ್ಟೆಂಬರ್ 18ರಂದು ಉಪೇಂದ್ರ […]
ದರ್ಶನ್ ಮದಕರಿ ಶುರುವಾಗತ್ತಾ?
ದರ್ಶನ್ ರಂಥ ನಂ.1 ಹೀರೋ ಸುಮ್ಮನೇ ಕೂತರೆ ಅವರಿಗೆ ಮಾತ್ರವಲ್ಲ, ಇಡೀ ಚಿತ್ರರಂಗಕ್ಕೇ ನಷ್ಟ ಗ್ಯಾರೆಂಟಿ. ಈ ಹಿನ್ನೆಲೆಯಲ್ಲಾದರೂ ಬಾಸ್ ಇಮೀಡಿಯೆಟ್ಟಾಗಿ ಬಣ್ಣ ಹಚ್ಚಲೇಬೇಕಿರುವ ಅನಿವಾರ್ಯತೆ ಇದೆ. ಅದು ಯಾವ ಸಿನಿಮಾ ಅನ್ನೋದಷ್ಟೇ ಸದ್ಯದ ಪ್ರಶ್ನೆ! ಕೊರೋನಾ ವೈರಸ್ಸು ಸಿನಿಮಾರಂಗವನ್ನು ಇನ್ನಿಲ್ಲದಂತೆ ಜರ್ಜರಿತಗೊಳಿಸಿದೆ. ಹೊಸಬರು, ಎರಡನೇ ಸಾಲಿನ ಹೀರೋಗಳ ಸಿನಿಮಾಗಳಿರಲಿ, ಸೂಪರ್ ಸ್ಟಾರ್ ಗಳಿಗೂ ಮುಂದೇನು ಮಾಡೋದು ಎನ್ನುವ ಚಿಂತೆ ಕಾಡುತ್ತಿರೋದು ಸುಳ್ಳಲ್ಲ. ಒಂದು ಸಿನಿಮಾ ಮುಗಿಸಿ, ಅದು ಪೋಸ್ಟ್ ಪ್ರೊಡಕ್ಷನ್ ಹಂತ ತಲುಪುತ್ತಿದ್ದಂತೇ ಮತ್ತೊಂದು ಸಿನಿಮಾ […]