ಇವು ಫೋಟೋಗಳಲ್ಲ… ಪೇಂಟಿಂಗ್ಸ್!
ಒಬ್ಬೊಬ್ಬರದ್ದೂ ಒಂದೊಂದು ಬಗೆಯ ಆಸಕ್ತಿ. ತಾವಿಷ್ಟ ಪಟ್ಟ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳುವುದು ಮಾತ್ರವಲ್ಲ, ಅದನ್ನು ಧ್ಯಾನದಂತೆ ಸ್ವೀಕರಿಸಿ, ಶ್ರದ್ಧೆಯಿಂದ ತೊಡಗಿಸಿಕೊಂಡರೆ ಗೆಲುವು ತಂತಾನೇ ದಕ್ಕುತ್ತದೆ. ಇದಕ್ಕೆ ಸ್ಪಷ್ಟ ಉದಾಹರಣೆಯಂತಿರುವವರು ಕಲಾವಿದೆ ನಿಧಿ ಮಂಜುನಾಥ್! ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ, ಚನ್ನಪಟ್ಟಣಕ್ಕೆ ಎಂಟ್ರಿ ಕೊಡುತ್ತಿದ್ದಂತೇ ಸಿಗುವ ಶಿವಳ್ಳಿ ಹೊಟೇಲಿನ ಪಕ್ಕದಲ್ಲೇ ಮೈಲ್ ಸ್ಟೋನ್ 67 ಹೆಸರಿನ ರೆಸ್ಟಾರೆಂಟ್ ಇದೆ. ಅದನ್ನು ಸ್ವತಃ ನಿಧಿ ನಡೆಸುತ್ತಿದ್ದಾರೆ. ಅದರ ಎದುರಲ್ಲೇ ಇರುವ ಆರ್ಟಿಸ್ಟ್ ಫಾರ್ ವೈಲ್ಡ್ ಲೈಫ್ ಕನ್ಸರ್ವೇಶನ್ ಕರ್ನಾಟಕ ಎನ್ನುವ ಆರ್ಟ್ […]
ನಮ್ಮ ಮುನಿರತ್ನ ನಮ್ಮ ನಾಯಕ ಅನ್ನುತ್ತಿದ್ದಾರೆ ಜನ…!
ಒಬ್ಬ ವ್ಯಕ್ತಿ, ಸಿನಿಮಾ ನಿರ್ಮಾಪಕ, ಉದ್ಯಮಿ, ಜನನಾಯಕ, ರಾಜಕಾರಣಿ, ಸ್ನೇಹಿತ, ಮನೆ ಒಡೆಯನಾಗಿ, ಹಲವು ಸಂಸ್ಥೆಗಳ ಮುಂದಾಳಾಗಿ ನಿಲ್ಲುವುದು ಮತ್ತು ಕಾಲಿಟ್ಟ ಪ್ರತಿಯೊಂದೂ ಕ್ಷೇತ್ರದಲ್ಲಿ ಗೆಲ್ಲುವುದಿದೆಯಲ್ಲಾ? ಅದು ತೀರಾ ಅಪರೂಪಕ್ಕೆ, ಅತಿ ವಿರಳರಿಗೆ ಮಾತ್ರ ಸಾಧ್ಯವಾಗುವಂಥದ್ದು. ಈ ನಿಟ್ಟಿನಲ್ಲಿ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಪರಿಪೂರ್ಣ ಯಶಸ್ಸು ಪಡೆದಿರುವ, ಅಪರೂಪದಲ್ಲಿ ಅಪರೂಪದ ವ್ಯಕ್ತಿ ಮುನಿರತ್ನ ಅನ್ನೋದರಲ್ಲಿ ಯಾವ ಅನುಮಾನವೂ ಇಲ್ಲ. ಚಿತ್ರರಂಗದಲ್ಲಿ ಯಾವುದೇ ಸಮಸ್ಯೆ ಇರಲಿ ಅಲ್ಲಿ ಮುನಿರತ್ನ ಇರುತ್ತಾರೆ. ನಿರ್ಮಾಪಕರ ಸಂಘಕ್ಕಂತೂ ಇವರೇ ಕಟ್ಟಾಳು. ಇತ್ತ ರಾಜಕಾರಣಕ್ಕೆ […]
ಶೇ 50 ಠೇವಣಿ ಶುಲ್ಕ ಕಡಿತ…
ಜನರಿಗೆ ಮನರಂಜನೆಯನ್ನು ಧಾರೆಯೆರೆಯುವ ಚಿತ್ರರಂಗದ ಒಳಗೆ ಹೇಳಿಕೊಳ್ಳಲಾರದ ಸಂಕಟಗಳಿವೆ. ಎಲ್ಲೋ ಕೆಲವರು ಆರಾಮಾಗಿರೋದನ್ನು ಬಿಟ್ಟರೆ, ಇಲ್ಲಿನ ನಿರ್ಮಾಪಕರು, ನಿರ್ದೇಶಕರು, ಕಲಾವಿದ, ತಂತ್ರಜ್ಞರು ಪಡಬಾರದ ಯಾತನೆಯಲ್ಲೇ ಬದುಕು ಸವೆಸುತ್ತಿದ್ದಾರೆ. ಇದ್ಯಾವುದೋ ಕೋವಿಡ್ ಅನಿಷ್ಟ ಚಿತ್ರರಂಗವನ್ನು ನಂಬಿಕೊಂಡವರ ಬಾಯಿಗೆ ಅಕ್ಷರಶಃ ಮಣ್ಣು ಹಾಕಿದೆ. ಇಂಥ ಸಂದರ್ಭದಲ್ಲಿ ಸಿನಿಮಾ ಕ್ಷೇತ್ರದ ಸಂಕಷ್ಟಗಳಿಗೆ ಮಿಡಿಯಬೇಕಾದ್ದು ಇಲ್ಲಿನ ಸಂಘ ಸಂಸ್ಥೆಗಳ ಜವಾಬ್ದಾರಿ. ಕನ್ನಡ ಚಿತ್ರರಂಗದ ಹಿತ ಕಾಪಾಡಲು ಸ್ಥಾಪನೆಯಾಗಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಎನ್ನುವ ಸಂಸ್ಥೆಯಿದೆ. ಇಲ್ಲಿರುವವರಿಗೆ ಅವರದ್ದೇ ಅವರಿಗೆ ಚಿಂತೆ, ಒಳಜಗಳಗಳು. […]
ತೆರೆದು ನಿಂತಳು ಪ್ರಿಯಾ ವಾರಿಯರ್
ಪ್ರಿಯಾಳ ಕಣ್ಣಿನ ನೋಟಕ್ಕೆ ಮರುಳಾಗಿದ್ದವರೆಲ್ಲಾ ಈಗ ಈಕೆಯ ಎದೆ ಮೇಲೆ ಕಣ್ಣಿದ್ದಾರೆ. ಎಲ್ಲೋ ಕೆಲವರು ಮಾತ್ರ ಒಂದು ಕಣ್ಸನ್ನೆಯಿಂದ ಸೆಳೆದವಳು, ಈ ಮಟ್ಟಿಗೆ ಬಿಚ್ಚುವ ಅಗತ್ಯವಿತ್ತಾ ಅಂತಾ ಕೊಂಕು ತೆಗೆದಿದ್ದಾರೆ! ಒರು ಅಡಾರ್ ಲವ್ ಎನ್ನುವ ಮಲಯಾಳಂ ಸಿನಿಮಾದ ಹಾಡಿನ ದೃಶ್ಯಕ್ಕಾಗಿ ಕಣ್ಣು ಮಿಟುಕಿಸಿ, ರಾತ್ರಿ ಕಳೆದು ಬೆಳಕಾಗುವ ಹೊತ್ತಿಗೆ ವಿಶ್ವ ಪ್ರಸಿದ್ಧಿ ಪಡೆದವಳು ನಟಿ ಪ್ರಿಯಾ ಪ್ರಕಾಶ್ ವಾರಿಯರ್. ಕಣ್ಸನ್ನೆಯಿಂದ ಪ್ರಿಯಾ ದೇಶವ್ಯಾಪಿ ಪಬ್ಲಿಸಿಟಿ ಪಡೆದಿದ್ದೇನೋ ಸರಿ. ಸಿನಿಮಾ ಅಡ್ಡಡ್ಡ ಮಲಗಿತು. ಆದರೆ, ಪ್ರಿಯಾಗೆ ಮಾತ್ರ […]
ಯಾವ ಸಿನಿಮಾ ಹಾಡಿಗೇನು ಕಡಿಮೆ?
ಲಾಸ್ಟ್ ಸೀನ್ ಹೆಸರಿನ ವಿಡಿಯೋ ಸಾಂಗ್ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. ಯಾವ ಸಿನಿಮಾ ಹಾಡಿಗೂ ಕಡಿಮೆಯಿಲ್ಲದಂತೆ ರೂಪಿಸಲಾಗಿರುವ ಈ ಸಾಂಗನ್ನು ನೋಡಿದವರೆಲ್ಲಾ ಇದರ ನಿರ್ದೇಶಕನ ಬಗ್ಗೆ ಮೆಚ್ಚುಗೆಯ ಮಾತಾಡುತ್ತಿದ್ದಾರೆ. ನಿರ್ದೇಶಕ ನಾಗಚಂದ್ರ ಬಳಿ ಸಹಾಯಕರಾಗಿದ್ದ ವಿನಾಯಕ್ ಅಚ್ಚುಕಟ್ಟಾಗಿ ರೂಪಿಸಿರುವ ಹಾಡಿದು. ಭವಿಷ್ಯದಲ್ಲಿ ಕನ್ನಡ ಚಿತ್ರರಂಗದಲ್ಲಿ ವಿನಾಯಕ್ ಪರಿಪೂರ್ಣ ನಿರ್ದೇಶಕನಾಗಿ ನಿಲ್ಲಬಲ್ಲರು ಅನ್ನೋದನ್ನು ಈ ಹಾಡು ತೋರಿಸಿಕೊಟ್ಟಿದೆ. ಬಹುತೇಕ ಹೊಸಬರೇ ಸೇರಿಕೊಂಡು 4.30 ನಿಮಿಷದ ʻಲಾಸ್ಟ್ ಸೀನ್’ ವಿಡಿಯೋ ಹಾಡನ್ನು ಸಿದ್ದಪಡಿಸಿದ್ದಾರೆ. ಪರಿಕಲ್ಪನೆ ಮತ್ತು ನಿರ್ದೇಶನ ಮಾಡಿರುವ […]
ತೆರೆ ಮೇಲೆ ಮತ್ತೆ ಎದ್ದುಬರುತ್ತಿರುವ ಚಿರಂಜೀವಿ ಸರ್ಜಾ
ಸಾಕಷ್ಟು ಸಿನಿಮಾಗಳ ಗೆಲುವಿನ ಹಿಂದೆ ಶಿವಾರ್ಜುನ್ ಅವರ ನೆರಳಿದೆ. ಈ ವಾರ ಚಿತ್ರ ಮರು ಬಿಡುಗಡೆಯಾಗುತ್ತಿದೆ. ಶಿವಾರ್ಜುನ ಸಿನಿಮಾವನ್ನು ನೋಡುವ ಮೂಲಕ ಶಿವಾರ್ಜುನ್ ಅವರ ಕೈ ಹಿಡಿಯಬೇಕಿರುವ ಜರೂರತ್ತಿದೆ. ಶಿವಾರ್ಜುನ ಸಿನಿಮಾಗೆ ಎದುರಾದ ಕಷ್ಟಗಳು ಬಹುಶಃ ಬೇರೆ ಯಾವ ಸಿನಿಮಾಗಳಿಗೂ ಬಂದೊದಗಿಲ್ಲವೇನೋ. ಆಗಷ್ಟೇ ಕೋವಿಡ್ ಹೆಸರು ಕೇಳಲು ಶುರುವಾಗಿತ್ತು. ಕೊರೋನಾ ಕಾಟಕ್ಕೆ ಹೆದರಿ ಸಾಕಷ್ಟು ಸಿನಿಮಾಗಳು ಬಿಡುಗಡೆಗೆ ಹಿಂದೇಟು ಹಾಕಿದ್ದರೂ, ಶಿವಾರ್ಜುನ ತಂಡ ಮಾತ್ರ ಯಾವುದಕ್ಕೂ ಹೆದರದೆ ನಮ್ಮ ಜನ ಬಂದು ಸಿನಿಮಾ ನೋಡುತ್ತಾರೆ ಎನ್ನುವ ಅದಮ್ಯ […]
ಶ್ರೀವತ್ಸ ಶಿಷ್ಯ ಶ್ರೀರಾಜ್ ಡೈರೆಕ್ಟರ್
ಪಾಸಿಟಿವ್ ಚಿಂತನೆಗಳಿದ್ದರೆ ಎಲ್ಲವೂ ಒಳ್ಳೆಯದ್ದೇ ಆಗುತ್ತದೆ ಅನ್ನೋದು ಲೋಕಾರೂಢಿ ಮಾತು. ಈ ಮಾತಿಗೆ ಅನ್ವರ್ಥದಂತೆ ಇಲ್ಲೊಂದು ಚಿತ್ರತಂಡ ಕೊರೋನಾದಂತಾ ನೆಗೆಟಿವ್ ಕಾಲದಲ್ಲೂ ಶುದ್ಧ ಪ್ರೀತಿಯಿಟ್ಟು, ಅಚ್ಚುಕಟ್ಟಾದ ಸಿನಿಮಾವೊಂದನ್ನು ರೂಪಿಸಿದೆ. ಗುಡ್ ವ್ಹೀಲ್ ಪ್ರೊಡಕ್ಷನ್ ಸಂಸ್ಥೆಯ ಮಂಜುನಾಥ ಗೌಡ ನಿರ್ಮಿಸಿ, ಶ್ರೀ ರಾಜ್ ನಿರ್ದೇಶಿಸಿರುವ ಈ ಚಿತ್ರದ ಹೆಸರು ಲಾಂಗ್ ಡ್ರೈವ್! ಕೋವಿಡ್-೧೯ ಕಾರಣಕ್ಕೆ ಇಡೀ ಜಗತ್ತು ಬೆಚ್ಚಿಬಿದ್ದಿತ್ತು. ಲಾಕ್ ಡೌನ್ ಘೋಷಣೆಯಾಗಿದ್ದ ಕಾರಣ ಪ್ರತಿಯೊಬ್ಬರೂ ಮನೆಯಲ್ಲೇ ಅಡಗಿ ಕೂರಬೇಕಾದ ಸಂದಿಗ್ಧದ ದಿನಗಳವು. ಈ ಹೊತ್ತಿನಲ್ಲಿ ನಿರ್ದೇಶಕ ಶ್ರೀರಾಜ್ […]
ನಾವಾಡುವ ನುಡಿಯೇ ಕನ್ನಡ ನುಡಿ ಅಂದವರು…
ಹಿರಿಯ ಸಂಗೀತ ನಿರ್ದೇಶಕ, ಮೆಲೋಡಿ ಕಿಂಗ್ ಎಂದೇ ಹೆಸರಾಗಿದ್ದ ರಾಜನ್ ತುಂಬು ಜೀವನವನ್ನು ಮುಗಿಸಿ ಹೊರಟಿದ್ದಾರೆ. ರಾಜನ್-ನಾಗೇಂದ್ರ ಜೋಡಿ ನಿರ್ದೇಶಿಸಿದ ನೂರಾರು ಸಿನಿಮಾಗಳ ಸಾವಿರಾರು ಹಾಡುಗಳು ಭಾರತೀಯ ಚಿತ್ರರಂಗವನ್ನು ಆವರಿಸಿವೆ. ನೆನ್ನೆ ರಾತ್ರಿ ಎಂದಿನಂತೆ ಊಟ ಮಾಡಿ ಮಲಗಲು ಅಣಿಯಾಗುತ್ತಿದ್ದ ರಾಜನ್ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ತತ್ತರಿಸಿದ್ದಾರೆ. ಸುಧಾರಿಸಿಕೊಳ್ಳಬಹುದು ಅಂತಾ ಅಂದುಕೊಳ್ಳುವಷ್ಟರಲ್ಲಿ ಹಿರಿಯ ಜೀವ ಉಸಿರು ನಿಲ್ಲಿಸಿದೆ. ಗಂಧದ ಗುಡಿಯ ನಿರ್ದೇಶಕ ವಿಜಯ್ ತೀರಿಕೊಂಡು ಎರಡು ದಿನ ಕಳೆಯುವುದರ ಒಳಗೆ ಅದರ ಸಂಗೀತ ನಿರ್ದೇಶಕರಲ್ಲೊಬ್ಬರಾದ ರಾಜನ್ ಕೂಡಾ ಬದುಕಿನ […]
ವಸಿಷ್ಠಸಿಂಹ ‘ಕಾಲಚಕ್ರ’ ವಿಭಿನ್ನ ಟೀಸರ್!
ವಸಿಷ್ಠ ಎನ್ ಸಿಂಹ ನಾಯಕರಾಗಿ ನಾಲ್ಕು ಪಾತ್ರಗಳಲ್ಲಿ ನಟಿಸಿರುವ ‘ಕಾಲಚಕ್ರ’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಪ್ರಶಂಸೆ ವ್ಯಕ್ತವಾಗಿದೆ. ರಶ್ಮಿ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ‘ಕಾಲಚಕ್ರ’ ಚಿತ್ರದ ವಿಭಿನ್ನ ಟೀಸರ್ ಅಪಾರ ಮೆಚ್ಚುಗೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ವಸಿಷ್ಠ ಸಿಂಹ ಅಭಿಮಾನಿಗಳು ಚಿತ್ರ ಬಿಡುಗಡೆಗೆ ಕಾತರದಿಂದ ಕಾಯುತ್ತಿದ್ದಾರೆ. ಈ ಹಿಂದೆ ಕಿಚ್ಚ ಸುದೀಪ ಅವರು ಚಿತ್ರದ ಟೀಸರ್ ಬಿಡುಗಡೆ ಮಾಡಿ ಪ್ರಶಂಸೆ ಮಾತುಗಳಾಡಿದ್ದರು. ಸುಮಂತ್ ಕ್ರಾಂತಿ ನಿರ್ಮಾಣ ರಚನೆ ಹಾಗೂ ನಿರ್ದೇಶನದ ಈ ಚಿತ್ರ ಸದ್ಯದಲ್ಲೇ […]
ಕಳಚಿತು ಮತ್ತೊಂದು ಹಿರಿಯ ಕೊಂಡಿ!
ಹಿರಿಯ ಚಿತ್ರನಿರ್ದೇಶಕ ನಾಗೇಶ್ ಬಾಬ (82) ಅಗಲಿದ್ದಾರೆ. ಮಂಡ್ಯ ಜಿಲ್ಲೆ ಬೆಳಕವಾಡಿ ಅವರ ಹುಟ್ಟೂರು. ಬೆಂಗಳೂರಿನಲ್ಲಿ ಬಿಎಸ್ಸಿ ಪದವಿ ಮುಗಿಸಿದ ಅವರು ಚಿತ್ರರಂಗದಲ್ಲಿ ಕೆಲಸ ಮಾಡುವ ಇರಾದೆಯಿಂದ 1956ರಲ್ಲಿ ಮದರಾಸಿಗೆ ತೆರಳುತ್ತಾರೆ. ಆರ್.ನಾಗೇಂದ್ರರಾವ್ ನಿರ್ದೇಶನದ ‘ಪ್ರೇಮದ ಪುತ್ರಿ’ (1957) ಚಿತ್ರದ ಸಹಾಯಕ ನಿರ್ದೇಶಕರಾಗಿ ಅವರ ಚಿತ್ರರಂಗದ ನಂಟು ಆರಂಭವಾಯ್ತು. ‘ಬೆಟ್ಟದ ಕಳ್ಳ’, ‘ಪ್ರತಿಮಾ’ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ನಾಗೇಶ್ ಬಾಬ ಅವರು ‘ಕೋಟಿ ಚೆನ್ನಯ’ ತುಳು ಚಿತ್ರಕ್ಕೆ ತಾಂತ್ರಿಕ ನಿರ್ದೇಶಕರಾಗಿ ದುಡಿದಿದ್ದಾರೆ. ‘ತೂಗುದೀಪ’, ‘ನನ್ನ ಕರ್ತವ್ಯ’ […]