ಹಲವು ಭಾಷೆಗಳ ಸಿನಿಮಾ ಏಕಕಾಲದಲ್ಲಿ..
ಏಳು ವರ್ಷದಲ್ಲಿ ಏಳು ಸಿನಿಮಾ ನಿರ್ಮಾಣ; ಅವುಗಳಲ್ಲಿ ಮೂರು ಪ್ಯಾನ್ ಇಂಡಿಯಾ ಚಿತ್ರಗಳು ಸ್ಯಾಂಡಲ್ವುಡ್ನ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆಯಾಗಿರುವ ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲಂಸ್ ಇದೀಗ ಮತ್ತೊಂದು ಸಾಹಸಕ್ಕೆ ಮುಂದಾಗಿದೆ. ಕೇವಲ ಎಂಟೇ ವರ್ಷದಲ್ಲಿ ಅವಧಿಯಲ್ಲಿ ಇಡೀ ವಿಶ್ವವೇ ತಿರುಗಿನೋಡುವಂಥ ಸಿನಿಮಾಗಳನ್ನು ನೀಡಿ, ಇದೀಗ ಏಕಕಾಲದಲ್ಲಿ ಹಲವಾರು ಭಾಷೆಗಳಲ್ಲಿ ಇಂಡಿಯನ್ ಸಿನಿಮಾ ನಿರ್ಮಾಣ ಮಾಡಲು ಸಂಸ್ಥೆ ದಾಪುಗಾಲಿಟ್ಟಿದ್ದು, ಡಿಸೆಂಬರ್ 2ರ ಮಧ್ಯಾಹ್ನ 2.09ಕ್ಕೆ ಚಿತ್ರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹಂಚಿಕೊಳ್ಳಲಿದೆ. 2014ರಲ್ಲಿ ನಿನ್ನಿಂದಲೇ ಸಿನಿಮಾ […]
ಮ್ಯಾಥ್ಯೂಸ್ ಮನು ಸಂಗೀತ ಹಾಯಾಗಿದೆ ಎದೆಯೊಳಗೆ!
ಕೆ ಜಿ ಎಫ್ ಚಿತ್ರಕ್ಕೆ ಸಂಭಾಷಣೆ ರಚಿಸಿ ʻಮಾತಿನ ಮಾಂತ್ರಿಕʼ ಎನಿಸಿಕೊಂಡಿರುವ ರಾಘವ್ ವಿನಯ್ ಶಿವಗಂಗೆ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರಿವಿದು. ಜೀವನದ ಏರಿಳಿತಗಳ ನಡುವೆ ಸಾಗುವ ಮಧ್ಯಮ ವರ್ಗದ ಜನರ ಬದುಕನ್ನ ಜೀವಿಸಿ, ವಿಮರ್ಶಿಸಿ ಅತ್ಯಂತ ಕಾಳಜಿಯಿಂದ ಕಥೆ-ಚಿತ್ರಕಥೆ ರಚಿಸಿ, ಸಿನಿಮಾ ರಸಿಕರಿಗಾಗಿ ಟಾಮ್ ಅಂಡ್ ಜೆರ್ರಿ ಚಿತ್ರವನ್ನು ಕಟ್ಟಿಕೊಡಲಾಗಿದೆ. ಇತ್ತ ನಿರ್ಮಾಪಕರು ತಮ್ಮ ಚೊಚ್ಚಲ ಕೈಗೂಸಾದ ಟಾಮ್ ಅಂಡ್ ಜೆರ್ರಿ ಸಿನಿಮಾದ ತಂತ್ರಜ್ಞರಿಗೆ, ಕಲಾವಿದರಿಗೆ ಸಕಲ ಸೌಲಭ್ಯ, ಸೌಕರ್ಯಗಳನ್ನು ಕಲ್ಪಿಸುವುದರ ಮೂಲಕ ಚಿತ್ರದ ಉತ್ಕೃಷ್ಟತೆಗೆ […]
ಬೆಂಗಳೂರು ಕಮಿಷನರ್ ಕಛೇರಿಯ ಸಿಬ್ಬಂದಿಗೆ ಪ್ರದರ್ಶನ!
ಆಕ್ಟ್-1978 ಚಿತ್ರಕ್ಕೆ ಸಿಕ್ಕ ಜನಬೆಂಬಲ ಕಂಡು ಸ್ಯಾಂಡಲ್ವುಡ್ ಗರಿಗೆದರಿದೆ, ಈ ಶುಕ್ರವಾರ ಮೂರು ಹೊಸ ಕನ್ನಡ ಸಿನಿಮಾಗಳು ಬಿಡುಗಡೆ ಆಗುತ್ತಿದ್ದು, ಮುಂದಿನ ವಾರದ ಹೊತ್ತಿಗೆ ಸುಮಾರು ಹದಿನೈದು ಚಿತ್ರಗಳು ತೆರೆಗೆ ಬರಲು ಸಿದ್ಧವಾಗಿವೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಡಿದೆ. ಬೆಂಗಳೂರು ಡಿ.ಸಿ.ಪಿ ನಿಶಾ ಜೇಮ್ಸ್ ಅವರು “ಆಕ್ಟ್-1978” ಕನ್ನಡ ಸಿನಿಮಾ ವೀಕ್ಷಿಸಿ ಬಹಳ ಇಷ್ಟಪಟ್ಟು, ಸಿನಿಮಾದಲ್ಲಿರುವ ಸಂದೇಶ ಎಲ್ಲರಿಗೂ ತಲುಪಬೇಕು ಎಂಬ ಆಶಯದಿಂದ ಚಿತ್ರತಂಡದ ಬೆಂಬಲಕ್ಕೆ ನಿಂತಿದ್ದಾರೆ. ಅವರು ಸ್ವಯಂಪ್ರೇರಿತರಾಗಿ ಬೆಂಗಳೂರು ಕಮಿಷನರ್ ಕಛೇರಿಯ ಎಲ್ಲ ಸಿಬ್ಬಂದಿಗೆ […]
ಕೋಮಲ್ ಗೆ ಕ್ರಿಸ್ಟಲ್ ಸಾಥ್!
ಅದೃಷ್ಟ, ದುರಾದೃಷ್ಟಗಳೆಲ್ಲಾ ಅವರವರ ನಂಬಿಕೆಗೆ ಬಿಟ್ಟಿದ್ದು. ಅವನ್ನೆಲ್ಲಾ ಮೀರುವುದು ಮನುಷ್ಯರ ಗುಣ ಮತ್ತು ಅವರ ಸುತ್ತಲಿನ ವಾತಾವರಣ. ಕೆಲವರ ಮುಖ ನೋಡುತ್ತಲೇ ಒಂಥರಾ ಪಾಸಿಟೀವ್ ಫೀಲ್ ಹುಟ್ಟುತ್ತದೆ. ಸದ್ಯ ಕನ್ನಡ ಚಿತ್ರರಂಗದಲ್ಲಿ ಮುಟ್ಟಿದ್ದೆಲ್ಲಾ ಚಿನ್ನವನ್ನಾಗಿಸುತ್ತಿರುವ ನಿರ್ಮಾಣ ಸಂಸ್ಥೆ ಕ್ರಿಸ್ಟಲ್ ಪಾರ್ಕ್ ಮತ್ತು ಅದರ ಮುಂದಾಳು ಟಿ.ಆರ್. ಚಂದ್ರಶೇಖರ್. ಒಂದೂವರೆ ದಶಕಗಳ ಕಾಲ ಚಿತ್ರರಂಗದ ನಾನಾ ವಿಭಾಗಗಳಲ್ಲಿ ಕೆಲಸ ಮಾಡುತ್ತಾ, ಸಿಕ್ಕ ಅವಕಾಶಗಳನ್ನೇ ಮೆಟ್ಟಿಲಾಗಿಸಿಕೊಂಡವರು ಬರಹಗಾರ ಕೆ.ಎಲ್. ರಾಜಶೇಖರ್ ಸಣ್ಣ ಪುಟ್ಟ ಸಿನಿಮಾಗಳಲ್ಲಿ ಕೆಲಸ ಶುರು ಮಾಡಿ, ಮಜಾ […]
ಹರಸಲು ರಾಜಮೌಳಿಯ ಅಪ್ಪ ಬಂದಿದ್ದರು
ಸಂಸ್ಕ್ರತ ಭಾಷೆಯ ಶೀರ್ಷಿಕೆ ಎಲ್ಲ ಭಾಷೆಯಲ್ಲೂ ಸಲ್ಲುತ್ತದೆ ಎಂಬುದು ಸಿನಿಮಾ ಜನರ ನಂಬಿಕೆ. ಇದೀಗ ಅಂಥದ್ದೇ ಸಂಸ್ಕ್ರತದ ಶೀರ್ಷಿಕೆಯನ್ನಿಟ್ಟುಕೊಂಡು ಅಗ್ನಿಪ್ರವ ಸಿನಿಮಾ ಇತ್ತಿಚೆಗಷ್ಟೇ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಮುಹೂರ್ತ ನೆರವೇರಿಸಿಕೊಂಡಿದೆ. ಸುರೇಶ್ ಆರ್ಯ ಅಗ್ನಿಪ್ರವ ಚಿತ್ರದ ಮೂಲಕ ಚಂದನವನಕ್ಕೆ ಆಗಮಿಸುತ್ತಿದ್ದಾರೆ. ಈಗಾಗಲೇ ತೆಲುಗಿನಲ್ಲಿ ಹಲವು ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ಇವರಿಗಿದು ಕನ್ನಡದ ಮೊದಲ ಸಿನಿಮಾ. ಈ ಮೊದಲ ಚಿತ್ರಕ್ಕೆ ಖ್ಯಾತ ಕಥೆಗಾರ, ಬಾಹುಬಲಿ ಖ್ಯಾತಿಯ ವಿಜಯೇಂದ್ರ ಪ್ರಸಾದ್ ಆಗಮಿಸಿ, ಕ್ಯಾಮರಾಕ್ಕೆ ಚಾಲನೆ ನೀಡಿ ಶುಭ ಕೋರಿದ್ದಾರೆ. […]
ಟಗರು ಅಂಕಲ್ ಮತ್ತೆ ಬಂದರು…
ಸೂರಿ ನಿರ್ದೇಶನದಲ್ಲಿ ಶಿವಣ್ಣ ನಟಿಸಿದ್ದ ಟಗರು ಸಿನಿಮಾದಲ್ಲಿ ಡಾನ್ ಅಂಕಲ್ ಪಾತ್ರದಲ್ಲಿ ಗಮನ ಸೆಳೆದಿದ್ದ ಮೈಸೂರಿನ ಕಲಾವಿದ ಸಚ್ಚು ಈಗ ಧರಣಿ ಮಂಡಲಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಚಿತ್ರದಲ್ಲಿ ಸಚ್ಚು ಅಂಡರ್ ವರ್ಲ್ಡ್ ಡಾನ್ ಆಗಿ ಅಬ್ಬರಿಸಲಿದ್ದಾರೆ. ಒಂದು ಸಿನಿಮಾ ಹಿಟ್ ಆಗುತ್ತಿದ್ದಂತೇ, ಆ ಚಿತ್ರದ ಪ್ರಮುಖ ಕಲಾವಿದರು ಒಂದರ ಹಿಂದೊಂದು ಚಿತ್ರಗಳನ್ನು ಒಪ್ಪಿಕೊಂಡು ಮುಗ್ಗರಿಸೋದು ಚಿತ್ರರಂಗದಲ್ಲಿ ಹಿಂದಿನಿಂದಲೂ ನಡೆದುಕೊಂಡುಬಂದಿರುವ ಅಘೋಷಿತ ಸಂಪ್ರದಾಯ. ಮಾರ್ಕೆಟ್ ಕ್ರಿಯೇಟ್ ಆಯ್ತು ಅನ್ನುತ್ತಿದ್ದಂತೇ ಬಂದ ಬಂದ ಅಡ್ವಾನ್ಸುಗಳನ್ನು ದಬದಬ ತುಂಬಿಕೊಂಡು, ಕಥೆಗಳ […]
ಹಾಫ್ ಸ್ಟೋರಿಗೆ ಕೈಯಿಟ್ಟರು ಲೋಕೇಂದ್ರ ಸೂರ್ಯ….!
ಈ ವರೆಗೆ ಭಾರತೀಯ ಚಿತ್ರರಂಗದಲ್ಲೇ ಯಾರೂ ಮುಟ್ಟಿರದ ಕಥಾವಸ್ತು ನಮ್ಮ ʻಹಾಫ್ʼ ಚಿತ್ರದ್ದು. ಶೀರ್ಷಿಕೆಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. 2018ರ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿದ್ದ ಚಿತ್ರ ಅಟ್ಟಯ್ಯ v/s ಹಂದಿ ಕಾಯೋಳು. ಈ ಚಿತ್ರವನ್ನು ನಿರ್ದೇಶಿಸಿ, ನಟಿಸಿದ್ದವರು ಲೋಕೇಂದ್ರ ಸೂರ್ಯ. ಈ ಚಿತ್ರ ವಿಮರ್ಶಕರ ಮನಸ್ಸು ಗೆದ್ದು, ಫಿಲಂ ಫೆಸ್ಟಿವಲ್ ನಲ್ಲಿ ಆಯ್ಕೆಯಾಗಿದ್ದರ ಜೊತೆಗೆ 2019ರ ಮಾಧ್ಯಮಗಳ ಭರವಸೆಯ ನಿರ್ದೇಶಕರ ಪಟ್ಟಿಯಲ್ಲಿ ಲೋಕೇಂದ್ರ ಸ್ಥಾನ ಪಡೆದಿದ್ದರು. ಅಟ್ಟಯ್ಯ ನಂತರ ಚೆಡ್ಡಿ ದೋಸ್ತ್ ಚಿತ್ರದಲ್ಲೂ ಪಾತ್ರ […]
ಥ್ರಿಲ್ ಅಂದ್ರೆ ಇದು!
ಮನುಷ್ಯ ಸಹಜ ಸ್ವಭಾವಗಳಾದ ಪ್ರೀತಿ, ಕಾಮ, ಕೋಪ, ದುರಾಸೆ, ಅಸೂಯೆ, ತಪ್ಪುಗ್ರಹಿಕೆ ಮತ್ತು ವೈಯಕ್ತಿಕ ನ್ಯೂನತೆಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ನಿರ್ಮಾಣವಾಗಿರುವ ಸಸ್ಪೆನ್ಸ್, ಥ್ರಿಲ್ಲರ್ಚಿತ್ರ ಅರಿಷಡ್ವರ್ಗ. ರಂಗಕರ್ಮಿ ಅರವಿಂದ್ ಕಾಮತ್ರ ಪ್ರಥಮ ನಿರ್ದೇಶನದ ಈ ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿತ್ತು. ಟ್ರೇಲರ್ ನೋಡಿದ ಯಾರಿಗೇ ಆದರೂ ʻಈ ಚಿತ್ರದಲ್ಲಿ ಏನೋ ಇದೆʼ ಎಂದು ಅನ್ನಿಸದೇ ಇರಲಾರದು. ಪಕ್ಕಾ ಥ್ರಿಲ್ಲರ್ ಜಾನರಿನ ಈ ಸಿನಿಮಾ ಟ್ರೇಲರಿನ ಮೂಲಕವೇ ಮೊದಲ ಹಂತದ ಗೆಲುವು ದಾಖಲಿಸಿದೆ! ಅರಿಷಡ್ವರ್ಗ ಒಂದು ಮಿಸ್ಟರಿ, ಥ್ರಿಲ್ಲರ್ ಚಿತ್ರವಾಗಿದ್ದು, ಕೊಲೆಯೊಂದರ […]
ವ್ಯವಸ್ಥೆ ನನ್ನನ್ನು ಟೆರರಿಸ್ಟ್ ಮಾಡಿದೆ…!
“ಇಲ್ಲಿ ಎರಡು ರೀತಿಯ ವ್ಯವಸ್ಥೆಗಳು ಇವೆ. ವ್ಯವಸ್ಥೆಯನ್ನೇ ರನ್ ಮಾಡುವ ವ್ಯವಸ್ಥೆ ಒಂದಾದರೆ, ವ್ಯವಸ್ಥೆಯೊಳಗೆ ಬದುಕುವ ವ್ಯವಸ್ಥೆ ಇನ್ನೊಂದು. ನಾವಿಬ್ಬರೂ ಒಟ್ಟಿಗೆ ಒಂದೇ ರೀತಿ ಬೆಳೆದವರು. ಒಂದು ವ್ಯವಸ್ಥೆ ನಿನ್ನನ್ನು ಪೊಲೀಸ್ ಆಫೀಸರ್ ಮಾಡಿದೆ, ಇನ್ನೊಂದು ವ್ಯವಸ್ಥೆ ನನ್ನನ್ನು ಟೆರರಿಸ್ಟ್ ಮಾಡಿದೆ.” – ದಿನೇಶ್ ಕುಮಾರ್ ಎಸ್.ಸಿ. #ACT1978 ಚಿತ್ರದ ತುಂಬು ಗರ್ಭಣಿ ನಾಯಕಿ ಹೊಟ್ಟೆ ನೀವಿಕೊಳ್ಳುತ್ತ, ಏದುಸಿರು ಬಿಡುತ್ತ ಈ ಮಾತನ್ನು ಹೇಳುವಾಗ ಪ್ರೇಕ್ಷಕ ಸುಲಭವಾಗಿ ತನ್ನನ್ನು ತಾನು ಆ ಪಾತ್ರದೊಂದಿಗೆ ರಿಲೇಟ್ ಮಾಡಿಕೊಳ್ಳುತ್ತ ಹೋಗುತ್ತಾನೆ. […]
ಕಿಚ್ಚ ಮೆಚ್ಚಿದ ACT 1978
ನಾನು ಸಿನಿಮಾ ನೋಡಿದೆ. ಫಂಟಾಸ್ಟಿಕ್ ಎಫರ್ಟ್… ಎಲ್ಲರೂ ಅದ್ಭುತವಾಗಿ ನಟಿಸಿದ್ದಾರೆ. ಚಿತ್ರತಂಡಕ್ಕೆ ನನ್ನ ಕಡೆಯಿಂದ ಶುಭ ಹಾರೈಕೆಗಳು – ACT 1978 ಸಿನಿಮಾವನ್ನು ನೋಡಿ ಹೀಗೊಂದು ಟ್ವೀಟ್ ಮಾಡಿದ್ದಾರೆ ಕಿಚ್ಚ ಸುದೀಪ! ನಾಳೆ (20.11.2020) ರಂದು ಬಿಡುಗಡೆಯಾಗುತ್ತಿರುವ ಚಿತ್ರ ACT 1978. ಕೊರೋನಾ ವೈರಸ್ಸಿನಿಂದ ಇಡೀ ಜಗತ್ತು ಕೊಳೆತಿದೆ. ಕನ್ನಡ ಸಿನಿಮಾ ಇಂಡಸ್ಟ್ರಿಯಂತೂ ಇನ್ನಿಲ್ಲದಂತಾ ಏಟು ತಿಂದಿದೆ. ಚಿತ್ರಮಂದಿರಗಳ ಲಾಕ್ ಡೌನ್ ಪ್ರಕ್ರಿಯೆ ತೆರೆವುಗೊಂಡರೂ ಹೊಸ ಸಿನಿಮಾಗಳನ್ನು ತೆರೆಗೆ ತರಲು ಯಾರೂ ಧೈರ್ಯ ಮಾಡಿರಲಿಲ್ಲ. ಬಹುತೇಕ ಮರುಬಿಡುಗಡೆಗೊಂಡ […]