ಚಿತ್ರರಂಗಕ್ಕೆ ಹೊಸಾ ಅಮ್ಮ ಸಿಕ್ಕಿದ್ದಾರೆ!
ಮೂಲತಃ ಮೈಸೂರಿನವರಾದರೂ, ಬದುಕು ಕಂಡುಕೊಂಡಿರುವುದು ಬೆಂಗಳೂರಿನಲ್ಲಿ ಡಿಪ್ಲೊಮಾ ಇನ್ ಎಲೆಕ್ಟ್ರಾನಿಕ್ಸ್ ಓದಿ, ಐಟಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿ ಮತ್ತೆ ತಮ್ಮ ಮೂಲ ಕ್ಷೇತ್ರವಾದ ಕಲಾಪ್ರಪಂಚಕ್ಕೆ ಕಾಲಿರಿಸಿದ್ದಾರೆ. ಚಿತ್ರರಂಗದಲ್ಲಿ ಪೋಷಕ ಪಾತ್ರಗಳ ಕೊರತೆ ಯಾವತ್ತಿಗೂ ಇದ್ದೇ ಇದೆ. ಈ ಕೊರತೆಯನ್ನು ಮೀನ ನೀಗಿಸುವುದರಲ್ಲಿ ಯಾವ ಡೌಟೂ ಇಲ್ಲ! ಸರಿ ಸುಮಾರು ಮೂರು ದಶಕಗಳ ಹಿಂದೆ ಪ್ರಸಾರಗೊಂಡು ಇವತ್ತಿಗೂ ಜನರ ಮನಸ್ಸಿನಲ್ಲುಳಿದಿರುವ ಕೆಲವು ಧಾರಾವಾಹಿಗಳಿವೆ. ರೀ ಮರೀಬೇಡಿ ಮತ್ತು ಮೆಕಾನಿಕ್ ಮುದ್ದ ಧಾರಾವಾಹಿಗಳು ಆ ಪಟ್ಟಿಯಲ್ಲಿವೆ. ಮಾಸ್ಟರ್ ಮಂಜುನಾಥ್ ನಟನೆಯ […]
ಐದು ಭಾಷೆಗಳಲ್ಲಿ ಡಿ ಕಂಪನಿ!
ಸದ್ಯ ಎಲ್ಲ ಭಾಷೆಗಳ ಟೀಸರ್ ಬಿಡುಗಡೆ ಆಗಿದ್ದು, ಶೀಘ್ರದಲ್ಲಿ ಚಿತ್ರದ ಬಿಡುಗಡೆ ದಿನಾಂಕವನ್ನೂ ತಂಡ ಘೋಷಿಸಿಕೊಳ್ಳಲಿದೆ. ಬಹುತೇಕ ಹೊಸಬರನ್ನೇ ಹಾಕಿಕೊಂಡು ಸಿನಿಮಾ ಮಾಡಿದ್ದಾರೆ ಆರ್ಜಿವಿ. ಭೂಗತ ಲೋಕದ ಕಥೆಯನ್ನು ತೆರೆಮೇಲೆ ತೋರಿಸುವುದರಲ್ಲಿ ನಿರ್ದೇಶಕ ರಾಮ್ಗೋಪಾಲ್ ವರ್ಮಾ ನಿಸ್ಸೀಮರು. ಈಗಾಗಲೇ ಅವರ ಬತ್ತಳಿಕೆಯಿಂದ ಅಂತ ಸಾಕಷ್ಟು ಪ್ರಯತ್ನಗಳಾಗಿವೆ. ಅವೆಲ್ಲವೂ ಈಗಾಗಲೇ ಒಂದೊಂದು ದಾಖಲೆ ಬರೆದಿವೆ. ಇದೀಗ ಡಿ ಕಂಪನಿ ಮೂಲಕ ಮತ್ತೆ ಭೂಗತ ಲೋಕವನ್ನು ಅನಾವರಣ ಮಾಡುತ್ತಿದ್ದಾರೆ. ಅದರಂತೆ ಶನಿವಾರ ಡಿ ಕಂಪನಿ ಚಿತ್ರದ ಟೀಸರ್ ಬಿಡುಗಡೆ ಆಗಿದೆ. […]
ಶೋ ಶುರು ಮಾಡಲಿದೆ ಶ್ಯಾಡೊ!
ಶ್ರೀಕನಕ ದುರ್ಗಾ ಚಲನಚಿತ್ರ ಅರ್ಪಿಸುತ್ತಿರುವ ಚಕ್ರವರ್ತಿ ಅವರು ನಿರ್ಮಾಣ ಮಾಡಿರುವ ಶ್ಯಾಡೊ ಸಿನಿಮಾ ಬಿಡುಗಡೆಗೆ ಸಿದ್ಧವಾಗದೆ. ಫೆ, 5ರಂದು ಈ ಸಿನಿಮಾ ಬಿಡುಗಡೆ ಆಗಲಿದ್ದು, ಇತ್ತೀಚೆಗಷ್ಟೇ ಚಿತ್ರತಂಡ ಸುದ್ದಿಗೋಷ್ಠಿ ಏರ್ಪಡಿಸಿ ಚಿತ್ರದ ಅಧಿಕೃತ ಬಿಡುಗಡೆ ದಿನಾಂಕವನ್ನು ಲಾಕ್ ಮಾಡಿದೆ. ರವಿ ಗೌಡ ನಿರ್ದೇಶನ ಮಾಡಿರುವ ಶ್ಯಾಡೊ ಮಾಸ್ ಜತೆಗೆ ಕ್ಲಾಸ್ ಸಿನಿಮಾವಂತೆ. ಅದನ್ನು ಸ್ವತಃ ಚಿತ್ರದ ನಾಯಕ ಮರಿ ಟೈಗರ್ ವಿನೋದ್ ಪ್ರಭಾಕರ್ ಹೇಳಿಕೊಂಡಿದ್ದಾರೆ. ‘ಕೊನೇ ಕ್ಷಣದಲ್ಲಿ ಬಿಡುಗಡೆ ಮಾಡುವ ನಿರ್ಧಾರವಾಯ್ತು. ಎಲ್ಲೋ ಒಂದು ಕಡೆ ಭಯ […]
ಫ್ಯಾಮಿಲಿ ಪ್ಯಾಕ್ ಗೆ ಪವರ್ ಬಂತು!
ಸದಭಿರುಚಿ ಚಿತ್ರಗಳ ನಿರ್ಮಾಣಕ್ಕೆ ಹೆಸರಾಗಿರುವ ಪಿ ಆರ್ ಕೆ ಪ್ರೊಡಕ್ಷನ್ಸ್ ಸಂಸ್ಥೆ ಮೂಲಕ ನಿರ್ಮಾಣವಾಗುತ್ತಿರುವ ಫ್ಯಾಮಿಲಿ ಪ್ಯಾಕ್ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಒಂದು ಹಾಡು ಹಾಗೂ ಸಾಹಸ ಸನ್ನಿವೇಶದ ಚಿತ್ರೀಕರಣ ಮಾತ್ರ ಬಾಕಿಯಿದೆ. ಜನವರಿ 21 ರಂದು ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಯಿತು. ಅಂದು ಪತ್ನಿ ಅಶ್ವಿನಿ ಅವರೊಂದಿಗೆ ಚಿತ್ರೀಕರಣ ಸ್ಥಳಕ್ಜೆ ಆಗಮಿಸಿದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ಶುಭ ಕೋರಿದರು. ನಿರ್ದೇಶಕ ಅರ್ಜುನ್ ಕುಮಾರ್, ಸಂಗೀತ ನಿರ್ದೇಶಕ ಗುರುಕಿರಣ್, ಸಂಭಾಷಣೆ […]
ಮಂತ್ರಾಲಯ ಪ್ರಭುಗಳ ಸನ್ನಿಧಿಯಲ್ಲಿ ಚಿತ್ರೀಕರಣ….
ಶ್ರೀ ಮಾತಾಂಬುಜಾ ಮೂವೀಸ್ ಲಾಂಛನದಲ್ಲಿ ಮಧುಸೂದನ್ ಹವಾಲ್ದಾರ್ ಅವರ ನಿರ್ಮಾಣ ಹಾಗೂ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಶ್ರೀಜಗನ್ನಾಥದಾಸರು ಎಂಬ ಚಲನಚಿತ್ರ ಹಾಗೂ ಧಾರಾವಾಹಿಯ ಮುಹೂರ್ತ ಕಾರ್ಯಕ್ರಮ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ಕಳೆದ ಸೋಮವಾರ ನೆರವೇರಿತು. ಮಂತ್ರಾಲಯ ಮಠಾಧೀಶರಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀ ಪಾದಂಗಳವರು ಈ ಚಿತ್ರದ ಪ್ರಥಮ ದೃಶ್ಯಕ್ಕೆ ಕ್ಲಾಪ್ ಮಾಡುವುದರ ಮೂಲಕ ಚಿತ್ರ ಹಾಗೂ ಧಾರಾವಾಹಿಯ ಚಿತ್ರೀಕರಣಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು. ಜಗನ್ನಾಥದಾಸರು ಶ್ರೀ ರಾಘವೇಂದ್ರ ಶ್ರೀಗಳ ಅನುಯಾಯಿಗಳು. ಅವರ ಬಾಲ್ಯದ ಜೀವನ, […]
ವಿಶ್ವದ ಮೊದಲ ಹೀರೋ!
ಕಿಚ್ಚ ಸುದೀಪ್ ನಟನೆಯ ಫ್ಯಾಂಟಮ್ ಈಗ ವಿಕ್ರಾಂತ್ ರೋಣ ಆಗಿ ಬದಲಾಗಿದೆ. ಫ್ಯಾಂಟಮ್ ಹೆಸರು ಕನ್ನಡಿಗರ ಬಾಯಿಗೆ ಬಂದು ಮನಸ್ಸಿನಲ್ಲುಳಿಯುವುದು ಕಷ್ಟ ಎನ್ನುವ ಕಾರಣವಿರಬಹುದು. ಅಥವಾ ಈ ಚಿತ್ರದಲ್ಲಿ ಸುದೀಪ್ ಪಾತ್ರ ವಿಕ್ರಾಂತ್ ರೋಣ ಅಂತಾ ಗೊತ್ತಾಗಿ, ಆ ಹೆಸರೇ ಹೆಚ್ಚು ಫೇಮಸ್ ಆಗಿರುವುದರಿಂದ ಈಗ ಅದನ್ನೇ ಟೈಟಲನ್ನಾಗಿಸಿದ್ದಾರೆ. ಪ್ರಪಂಚದ ಅತಿ ಎತ್ತರದ ಕಟ್ಟದ ಅನ್ನಿಸಿಕೊಂಡಿರುವ ಬುರ್ಜ್ ಖಲೀಫಾದ ಮೇಲೆ ಈ ಚಿತ್ರದ ಶೀರ್ಷಿಕೆ ಹಾಗೂ ಲಾಂಛನವನ್ನು ಸಹಾ ಪ್ರದರ್ಶನ ಮಾಡಲಾಗುತ್ತಿದೆ. 180 ಸೆಖೆಂಡುಗಳ ಅವಧಿಯ ದೃಶ್ಯ […]
4ನೇ ವರ್ಷದ ಸಂಭ್ರಮದಲ್ಲಿ ಆಯುಷ್ ಟಿವಿ
ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದಲ್ಲಿ ಸಾಕಷ್ಟು ವಾಹಿನಿಗಳು ಜನ್ಮತಳೆದಿವೆ. ಕೆಲವೊಮ್ಮೆ ಚಾನೆಲ್ ಗಳನ್ನು ಶುರು ಮಾಡುವುದರ ಉದ್ದೇಶ ಬೇರೆಯದ್ದೇ ಆಗಿರುತ್ತದೆಯಾದ್ದರಿಂದ, ಎಷ್ಟೋ ವಾಹಿನಿಗಳು ಹೆಚ್ಚು ಸಮಯ ಉಸಿರಾಡುವುದಿಲ್ಲ. ಹೀಗಿರುವಾಗ, ಉತ್ತಮ ಮನಸ್ಥಿತಿಯಿಂದಲೇ ಆರಂಭವಾಗಿ, ಕಡಿಮೆ ಅವಧಿಯಲ್ಲಿ ಹೆಚ್ಚು ಜನರನ್ನು ಸೆಳೆದ, ಅತ್ಯುತ್ತಮ ಕಾರ್ಯಕ್ರಮಗಳ ಮೂಲಕ ಮಾದರಿಯಾಗಿರುವ ವಾಹಿನಿ ಆಯುಷ್ ಟಿವಿ. ಈ ವಾಹಿನಿ ಈಗ ನಾಲ್ಕು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. ಆಯುಷ್ ಟಿವಿ… ಹೆಸರೇ ಹೇಳುವಂತೆ ಆರೋಗ್ಯ ಮತ್ತು ಜೀವನಶೈಲಿಯ ವಿಚಾರಧಾರೆಗಳನ್ನು ಹಂಚಿಕೊಳ್ಳುತ್ತಾ ಬಂದಿರುವ ಟಿವಿ ವಾಹಿನಿ. 2017ರಲ್ಲಿ […]
Saala Crossbreed..!
ಟಾಲಿವುಡ್ ನಟ ವಿಜಯ್ ದೇವರಕೊಂಡ ಹುಲಿ ಸಿಂಹದ ಎರಡೂ ಅವತಾರವನ್ನು ಎತ್ತಿದ್ದಾರೆ. ಅಂದರೆ, ಪುರಿ ಜಗನ್ನಾಥ್, ಕರಣ್ ಜೋಹರ್, ಚಾರ್ಮಿ ಕೌರ್, ಅಪೂರ್ವ ಮೆಹ್ತಾ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಚಿತ್ರಕ್ಕೆ ಲೈಗರ್ ಎಂದು ಶೀರ್ಷಿಕೆ ಇಡಲಾಗಿದ್ದು, ಅದರ ಫಸ್ಟ್ ಲುಕ್ ಬಿಡುಗಡೆ ಆಗಿದೆ. ಪ್ಯಾನ್ ಇಂಡಿಯಾ ಪರಿಕಲ್ಪನೆಯ ಈ ಸಿನಿಮಾ ಹಲವು ಭಾಷೆಗಳಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ಯೋಜನೆ ಸಿದ್ಧಪಡಿಸಿದ್ದಾರೆ. ಈಗಾಗಲೇ ನಟ ವಿಜಯ್ ದೇವರಕೊಂಡ ಟಾಲಿವುಡ್ ಸೇರಿ ಬೇರೆ ಬೇರೆ ಇಂಡಸ್ಟ್ರಿಗಳಲ್ಲಿ ತಮ್ಮ ನೆಲೆ ಕಂಡುಕೊಂಡಿದ್ದಾರೆ. […]
ನಿಜದ ಸಾಧಕ ವಿಜಯ್ ಸೇತುಪತಿ ಬದುಕಿನ ಹಾದಿ…
ಈಗಷ್ಟೇ ರಿಲೀಸಾಗಿರುವ ಮಾಸ್ಟರ್ ಸೇರಿದಂತೆ, ಅತೀ ಕಡಿಮೆ ಅವಧಿಯಲ್ಲಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಹೀರೋ ವಿಜಯ್ ಸೇತುಪತಿ. ಇಂದು ಅವರ ಜನ್ಮದಿನ. ಈ ಹೊತ್ತಿನಲ್ಲಿ ಅವರು ಬೆಳೆದುಬಂದ ಬಗೆ, ಅವರ ಲೈಫ್ ಜರ್ನಿಯನ್ನು ಪರಿಚಯಿಸುವ ಪ್ರಯತ್ನ ಇದು… ವಿಜಯ ಗುರುನಾಥ ಸೇತುಪತಿ. ಇದು ತಮಿಳು ನಾಡಿನ ಇತಿಹಾಸದಲ್ಲಿ ವೈಭವದಿಂದ ಮೆರೆದ ರಾಜನೊಬ್ಬನ ಹೆಸರು. ತಮ್ಮ ಮಗ ಕೂಡಾ ಈ ರಾಜನಂತೆಯೇ ಬದುಕಿಬಾಳಬೇಕು ಅಂತಾ ಬಯಸಿ ಅವರಪ್ಪ ಇಟ್ಟ ಹೆಸರದು. ಆದರೆ ವಿಜಯ್ ಸೇತುಪತಿಗೆ ವೈಭೋಗ ಅಷ್ಟು ಸುಲಭಕ್ಕಾಗಲಿ, […]
ಇದ್ದುದರಲ್ಲಿ ಪರಸಂಗವೇ ಪರವಾಗಿಲ್ಲ…!
ಈ ಚಿತ್ರರಂಗದಲ್ಲಿ ಎಂತೆಂಥವರೋ ಹೇಗೇಗೋ ಬದುಕುತ್ತಿರುತ್ತಾರೆ. ಸಿನಿಮಾವನ್ನೇ ಉಸಿರಾಗಿಸಿಕೊಂಡವರಿಗೇ ಕೆಲವೊಮ್ಮೆ ಸಂಕಟಗಳು ಒದ್ದುಕೊಂಡುಬರುತ್ತವೆ. ಯಾರದ್ದೋ ಹೆಡ್ ವೇಯ್ಟಿಗೆ ಇನ್ಯಾರೋ ನರಳಾಡುವಂತಾಗಿಬಿಡುತ್ತದೆ. ನಟ ಶಿನು ಮಿತ್ರ ಅದ್ಭುತ ನಟ. ಎಲ್ಲೋ ದುಡಿದು ತಂದು ಸಿನಿಮಾಗೆ ಧಾರೆಯೆರೆಯುವ ಧಾರಾಳಿಗ. ಆದರೆ ಅವರ ಕನಸು ಮಾತ್ರ ಫಲಿಸುತ್ತಲೇ ಇಲ್ಲ…! ನಟ ಮಿತ್ರನ ನಸೀಬೇ ಸರಿ ಇದ್ದಂತಿಲ್ಲ! ಕೇರಳದಲ್ಲಿ ಹುಟ್ಟಿ, ಕರಾವಳಿ ಪ್ರದೇಶಗಳಲ್ಲೆಲ್ಲಾ ಓಡಾಡಿಕೊಂಡು, ಹೊಟೇಲ್ ಕೆಲಸಗಳನ್ನು ಮಾಡಿಕೊಂಡಿದ್ದವರು. ಅದರ ಜೊತೆಜೊತೆಗೆ ಕಲಾವಿದನಾಗಿ ಹೆಸರು ಮಾಡಿದವರು ಮಿತ್ರ. ಸರಿಸುಮಾರು ಹದಿನೈದಕ್ಕೂ ಹೆಚ್ಚು ವರ್ಷಗಳಿಂದ […]