ಚಿತ್ರೀಕರಣದಲ್ಲಿ ಚಿ.ಸೌ.ಕನ್ಯಾಕುಮಾರಿ!
ಶ್ರೀ ಗುರು ರಾಘವೇಂದ್ರ ಸಿನಿ ಪ್ರೊಡಕ್ಷನ್ಸ್ ಬ್ಯಾನರ್ ನ ಅಡಿಯಲ್ಲಿ “ಎಸ್.ಆರ್.ಪಾಟೀಲ್” ನಿರ್ಮಾಣ ಮಾಡುತ್ತಿರುವ “ಚಿ.ಸೌ.ಕನ್ಯಾಕುಮಾರಿ”. ಈ ಚಿತ್ರವನ್ನು ಲೆಮನ್ ಪರಶುರಾಮ್ ನಿರ್ದೇಶಿಸುತ್ತಿದ್ದಾರೆ. ಮೊದಲ ಬಾರಿಗೆ ನಾಯಕನಾಗಿ “ರಾಘವೇಂದ್ರ” ಬೆಳ್ಳಿತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಇವರಿಗೆ ನಾಯಕಿಯಾಗಿ ಬೆಳಗಾವಿ ಬೆಡಗಿ “ಶೃತಿ ಪಾಟೀಲ್” ಜೊತೆಯಾಗಿ ಅಭಿನಯಿಸುತ್ತಿದ್ದಾರೆ. ಇವರು ಈಗಾಗಲೇ “ಮಿಸ್ಟರಿ ಆಫ್ ಮಂಜುಳ”, “ಬ್ಲಡ್ ಹ್ಯಾಂಡ್” ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. “ಚಿ.ಸೌ.ಕನ್ಯಾಕುಮಾರಿ” ಚಿತ್ರವನ್ನ ಈಗಾಗಲೇ ಯಾದಗಿರಿ ಜಿಲ್ಲೆಯ ಸುತ್ತ-ಮುತ್ತ, ಸುರಪುರ, ಬೆಂಡೆ ಬೆಂಬಾಳೆ, ಕೆಂಬಾವಿ, ಮಾಚಗುಂಡಾಳ ಗ್ರಾಮದಲ್ಲಿ ಸುಮಾರು […]
ಅಪ್ಪು-ಕಿಚ್ಚ ಮೆಚ್ಚಿದ ಮೋಕ್ಷ!
ವಿಭಿನ್ನ ಟ್ರೇಲರ್’ಗೆ ಕಿಚ್ಚ ಸುದೀಪ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಸೇರಿದಂತೆ ಸ್ಯಾಂಡಲ್ ವುಡ್ ಗಣ್ಯರ ಮೆಚ್ಚುಗೆ. ಕನ್ನಡದಲ್ಲಿ ಸಾಕಷ್ಟು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳು ಬಂದಿವೆ. ಆದರೆ ವಿಭಿನ್ನ ಕಥೆ ಒಳಗೊಂಡಿರುವ “ಮೋಕ್ಷ” ಚಿತ್ರದ ಟ್ರೇಲರ್ ಡಿ ಬೀಟ್ಸ್ ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆಯಾಗಿದೆ. ಕಿಚ್ಚ ಸುದೀಪ ತಮ್ಮ ಟ್ವಿಟರ್ ಖಾತೆಯಲ್ಲಿ “ಮೋಕ್ಷ” ಚಿತ್ರದ ಟ್ರೇಲರ್ ಗೆ ಶುಭಾಶಯ ಕೋರಿ, ಪ್ರೋತ್ಸಾಹ ನೀಡಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್, ನಿರ್ದೇಶಕರಾದ ಯೋಗರಾಜ್ ಭಟ್, ಸಿಂಪಲ್ ಸುನಿ […]
ನನ್ನ ಮಗನ ಸಾವಾಸಕ್ಕೆ ಬಂದರೆ ಸಾಯಿಸ್ತೀನಿ ಅಂದಿದ್ದರು ಅವರಪ್ಪ
ಹುಡುಗಿಯನ್ನು ಬಲವಂತದಿಂದ ಎಳೆದೊಯ್ದು ಮದುವೆಯಾದ ಪ್ರಕರಣಗಳು ಸಾಕಷ್ಟು ಸಿಗುತ್ತವೆ. ಆದರೆ, ಹುಡುಗಿಯೇ ಹುಡುಗನನ್ನು ಎತ್ತಾಕೊಂಡು ಹೋಗಿ, ಹಠ ಮಾಡಿ, ಬೆದರಿಸಿ ತಾಳಿ ಕಟ್ಟಿಸಿಕೊಂಡಳು ಎನ್ನುವ ವಿಚಿತ್ರ ಸನ್ನಿವೇಶವೊಂದು ಸೃಷ್ಟಿಯಾಗಿದೆ! ಹೌದು! ನಿನ್ನೆ ನಟಿ, ಬರಹಗಾರ್ತಿ, ಬಿಗ್ ಬಾಸ್ ಸ್ಪರ್ಧಿ ಮುಂತಾದ ಕಾರಣಗಳಿಗೆ ಫೇಮಸ್ ಆಗಿರುವ ʻಚೈತ್ರಾ ಕೊಟೂರು ಸರಳವಾಗಿ, ಕುಟುಂಬದ ಸದಸ್ಯರ ಸಮಕ್ಷಮದಲ್ಲಿ ಮದುವೆಯಾದರುʼ ಎನ್ನುವ ಸುದ್ದಿ ಹರಡಿಕೊಂಡಿತು. ಅರರೇ… ಕೂತರೂ ನಿಂತರೂ ಪ್ರಚಾರಕ್ಕೆ ಹಪಹಪಿಸುವ ಈ ಹುಡುಗಿ ಇಷ್ಟೊಂದು ಸಿಂಪಲ್ಲಾಗಿ ಮದುವೆಯಾದಳೇ ಅನ್ನೋ ಪ್ರಶ್ನೆ ಮೂಡಿತು. […]
ಯಾವಾಗ ಬರತ್ತೆ ರಾಕಿ ಬಾಯ್ ಹೊಸ ಸಿನಿಮಾದ ಅಪ್ಡೇಟ್?
ರಾಕಿಂಗ್ ಸ್ಟಾರ್ ಯಶ್ ಸದ್ಯ ಕೆ.ಜಿ.ಎಫ್ 2 ಸಿನಿಮಾದಲ್ಲಿ ಬ್ಯುಜಿಯಾಗಿದ್ದಾರೆ. ಕೆ.ಜಿ.ಎಫ್ ಸಿನಿಮಾದ ಡಬ್ಬಿಂಗ್, ಪ್ರಮೋಷನ್ ಹಂತದಲ್ಲಿ ಟೀಂ ಜೊತೆ ವರ್ಕ್ ಮಾಡ್ತಿದ್ದಾರೆ. ಕೆ.ಜಿ.ಎಫ್ ಸಿನಿಮಾವೇನೋ ಕಂಪ್ಲೀಟ್ ಆಯ್ತು. ಸಿನಿಮಾದ ರಿಲೀಸ್ ಡೇಟ್ ಕೂಡ ಫಿಕ್ಸ್ ಆಗಿದೆ. ಆದ್ರೂ ಕೂಡ ಯಶ್ ಮುಂದಿನ ಸಿನಿಮಾದ ಒಂದು ಅಪ್ಡೇಟ್ ಕೂಡ ಅಭಿಮಾನಿಗಳಿಗೆ ಗೊತ್ತಾಗ್ತಿಲ್ಲ. ಅದಕ್ಕೆ ಕಾರಣ ರಾಕಿಂಗ್ ಸ್ಟಾರ್ ಯಶ್ರ ನಾಜೂಕಾದ ಹೆಜ್ಜೆ. MAHANTESH MANDAGADDE ಕೆ.ಜಿ.ಎಫ್ನಂತ ಸಿನಿಮಾದ ನಂತರ ಯಶ್ರ ಮುಂದಿನ ಯಾವ ಸಿನಿಮಾವಾದ್ರೂ ಅದರಷ್ಟೇ ತೂಕವಿರಬೇಕು. […]
ಐಪಿಎಲ್ ವಿರುದ್ಧ ಕರಿಯಪ್ಪನ ಕೇಸು!
ಭಾರತದ ಮಟ್ಟಿಗೆ ಕ್ರಿಕೆಟ್ ಅನ್ನೋದು ಎಂಟರ್ ಟೈನ್ಮೆಂಟ್ ಆಗಿ ಉಳಿದಿಲ್ಲ.. ಅದು ಪಕ್ಕಾ ಬ್ಯುಸಿನೆಸ್ ಆಗಿಬಿಟ್ಟಿದೆ… ಯಾವ ಕ್ರೀಡೆ ಮನರಂಜನೆಗೆ ಸೀಮಿತವಾಗಬೇಕಿತ್ತೋ ಅದು ಇಂದು ಅದೆಷ್ಟೋ ಮನೆಗಳನ್ನು ಹಾಳುಮಾಡಿ, ಲೆಕ್ಕವಿಲ್ಲದವರನ್ನು ಬೀದಿಗೆ ತಂದು ನಿಲ್ಲಿಸಿದೆ. ಐಪಿಎಲ್ ಕ್ರಿಕೆಟ್ ಸಮಯದಲ್ಲಿ ಬೆಟ್ಟಿಂಗ್ ಕಟ್ಟಿ, ಅದರಿಂದ ಸೋತು ಜೀವ ಕಳೆದುಕೊಂಡವರ ಲೆಕ್ಕ ಸಿಗೋದಿಲ್ಲ. ಆಟೋ ಚಾಲಕರು, ವ್ಯಾಪಾರಿಗಳು, ಟೆಕ್ಕಿಗಳು, ಗೃಹಿಣಿಯರಿಂದ ಹಿಡಿದು ಸ್ಕೂಲ್ ಮಕ್ಕಳ ತನಕ ಐಪಿಎಲ್ ಬೆಟ್ಟಿಂಗ್ ಗೆ ಎಲ್ಲ ವರ್ಗದವರೂ ಅಡಿಕ್ಟ್ ಆಗಿದ್ದಾರೆ. ಇಡೀ ದೇಶವನ್ನು ಸಂಕಟದ […]
ಶ್ರೀಮುರಳಿ ಏನಂದರು ಗೊತ್ತಾ?
ಕ್ರೇಜಿಬಾಯ್ ಅನ್ನೋ ಹೊಸಬರ ಸಿನಿಮಾದಿಂದ ಆರಂಭಿಸಿ, ನಂತರ ಮಾಸ್ ಲೀಡರ್, ಮುಗುಳು ನಗೆ, ರಾಜು ಕನ್ನಡ ಮೀಡಿಯಂ, ರಾಂಬೋ-2, ಗರುಡ, ತಾಯಿಗೆ ತಕ್ಕ ಮಗ ಹೀಗೆ ಸ್ಟಾರ್ ನಟರು ಮತ್ತು ದೊಡ್ಡ ಬಜೆಟ್ ಸಿನಿಮಾಗಳಲ್ಲಿ ಅವಕಾಶ ಪಡೆಯುತ್ತಲೇ, ನಂತರ ಪೂರ್ಣ ಪ್ರಮಾಣದ ನಾಯಕಿಯಾದ ಹುಡುಗಿ ಆಶಿಕಾ ರಂಗನಾಥ್. ಚೂರು ಚಿಗುರುತ್ತಿದ್ದಂತೇ ಈಕೆ ಸಂಭಾವನೆಯನ್ನು ಕೂಡಾ ಗಣನೀಯವಾಗಿ ಏರಿಸಿಕೊಂಡಳು. ಮಾರ್ಕೆಟ್ಟಿದ್ದಾಗ ಕಾಸು ಮಾಡಿಕೊಳ್ಳೋದು ಸಿನಿಮಾ ಸ್ಟಾರುಗಳ ನಿಯಮ. ಅದು ಅಪರಾಧವೂ ಅಲ್ಲ! ಇವೆಲ್ಲದರ ನಡುವೆ ಆಶಿಕಾ ಶ್ಯಾನೆ ಕಿರಕ್ಕು […]
ಹೊಸ ಟ್ರೇಲರ್ ಜೊತೆ ಬಂದ ಕೊಡೆ ಮುರುಗ!
ಸ್ಟಾರ್ಗಳನ್ನು ಹಾಕಿಕೊಂಡು ಸಿನಿಮಾ ಮಾಡುವುದು, ಪ್ರ್ರೊಫೆಷನಲ್ ನಟರುಗಳಿಗೆ ತಕ್ಕ ಕತೆ ಬರೆದು ಸಿನಿಮಾ ಮಾಡೋದು ಮಾಮೂಲಿ. ಆದರೆ ಕಪ್ಪಗಿರುವ, ತಲೆಯಲ್ಲಿ ಕೂದಲಿಲ್ಲದ, ಜೋತು ಬೀಳುವಂತೆ ಮೀಸೆ ಬಿಟ್ಟ ವ್ಯಕ್ತಿಯನ್ನೇ ಕೇಂದ್ರವನ್ನಾಗಿಟ್ಟುಕೊಂಡು, ಅವರಿಗೆ ತಕ್ಕಂತಾ ಕತೆ ಸೃಷ್ಟಿಸಿ, ಅದನ್ನು ಅಷ್ಟೇ ಗುಣಮಟ್ಟದಲ್ಲಿ ಚಿತ್ರೀಕರಿಸೋದಿದೆಯಲ್ಲಾ? ನಿಜಕ್ಕೂ ಸವಾಲಿನ ಕೆಲಸವದು. ಈ ನಿಟ್ಟಿನಲ್ಲಿ ನಿರ್ದೇಶಕ ಸುಬ್ರಹ್ಮಣ್ಯ ಪ್ರಸಾದ್ ಹಂತ ಹಂತದಲ್ಲೂ ಗೆಲ್ಲುತ್ತಾ ಬರುತ್ತಿದ್ದಾರೆ. ಈ ಚಿತ್ರದ ಟ್ರೇಲರು ಬಿಟ್ಟಾಗಲೇ ಮೊದಲ ಹಂತದ ಯಶಸ್ಸು ದೊರೆತಿತ್ತು. ನಂತರ ಬಂದ ಪೋಸ್ಟರುಗಳು, ಹಾಡುಗಳು ಕೂಡಾ […]
RRR ಸಿನಿಮಾದ ಶೂಟಿಂಗ್ಗೆ ಬಿತ್ತು ಬ್ರೇಕ್ !
RRR ಸೌತ್ ಇಂಡಿಯಾ ಅಷ್ಟೇ ಅಲ್ಲಾ ಇಡೀ ಪ್ಯಾನ್ ಇಂಡಿಯಾದಲ್ಲೇ ಮೋಸ್ಟ್ ಎಕ್ಸ್ಪೆಕ್ಟೇಷನ್ ಹುಟ್ಟು ಹಾಕಿರೋ ದಕ್ಷಿಣ ಭಾರತದ ಹೈ ವೋಲ್ಟೇಜ್ ಸಿನಿಮಾ. ಹೇಳಿ ಕೇಳಿ ನಿರ್ದೇಶಕ ರಾಜಮೌಳಿ ಸಿನಿಮಾ. ಬಾಬಹುಬಲಿ ಅನ್ನೋ ಸಿನಿಮಾದ ಮೂಲಕ ಇಡೀ ವರ್ಲ್ಡ್ವೈಡ್ ದಾಖಲೆ ಬರೆದ ನಿರ್ದೇಶಕ ರಾಜಮೌಳಿ ಈಗ RRR ಅನ್ನೋ ಸಿನಿಮಾದ ಮೂಲಕ ಟಿಟೌನ್ ಸ್ಟಾರ್ಗಳಾದ ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ರನ್ನ ಒಂದೇ ಫ್ರೇಮ್ನಲ್ಲಿ ಕಣಕ್ಕಿಳಿಸ್ತಿದ್ದಾರೆ. ಈಗಾಗಲೇ ರಿಲೀಸ್ ಡೇಟ್ ಕೂಡ ಫಿಕ್ಸ್ ಆಗಿರೋ ಈ ಸಿನಿಮಾಗೆ […]
ಮುಂದುವರೆಯಲಿರುವ ಹೋರಾಟದ ಅಧ್ಯಾಯ!
ಮುಂದುವರೆದ ಅಧ್ಯಾಯ ಸಿನಿಮಾ ನಿರ್ದೇಶಕ ಬಾಲು ಚಂದ್ರಶೇಖರ್, ನಿರ್ಮಾಪಕರು ಹಾಗೂ ಚಿತ್ರತಂಡದ ಜತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಆಗಮಿಸಿದ ನಾಯಕ ಆದಿತ್ಯ, ಆರು ಮಂದಿ ಯೂಟ್ಯೂಬರ್ಗಳ ಮೇಲೆ ದೂರು ಸಲ್ಲಿಸಿದರು. ಸ್ಯಾಂಡಲ್ವುಡ್ ನಟ ಡೆಡ್ಲಿ ಸರಣಿ ಖ್ಯಾತಿಯ ಆದಿತ್ಯ ಯೂಟ್ಯೂಬ್ ವಿಮರ್ಶಕರ ಮೇಲೆ ಗರಂ ಆಗಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಯೂಟ್ಯೂಬ್ ಸಿನಿಮಾ ವಿಮರ್ಶಕರ ವಿರುದ್ಧ ದೂರು ನೀಡಿರುವ ಅವರು, ಕಾನೂನು ಹೋರಾಟಕ್ಕೂ ಸಿದ್ಧತೆ ನಡೆಸಿದ್ದಾರೆ. ಹೌದು, ಇತ್ತೀಚೆಗಷ್ಟೆ ಯೂಟ್ಯೂಬ್ ಸಿನಿಮಾ ವಿಮರ್ಶಕರ ವಿರುದ್ಧ […]
cinemanodi.in ವೆಬ್ ಸೈಟ್ ಮುಖಾಂತರ ಚಿತ್ರ ವೀಕ್ಷಿಸಬಹುದು!
ವಿಶ್ವದಾದ್ಯಂತ ಎಲ್ಲಾ ಉದ್ಯಮಗಳೂ covid-19 ನ ಹೊಡೆತದಿಂದ ನೆಲ ಕಚ್ಚಿವೆ. ಅದರಲ್ಲೂ ಸಿನಿಮೋದ್ಯಮಕ್ಕೆ ಅತ್ಯಂತ ಸಂಕಷ್ಟ ಕಾಲ. ಇದಕ್ಕೆ ಕನ್ನಡ ಚಿತ್ರರಂಗವೂ ಹೊರತಾಗಿಲ್ಲ. ಕಳೆದ ಎಂಟು ತಿಂಗಳಲ್ಲಿ ಚಿತ್ರರಂಗ ಅನುಭವಿಸುತ್ತಿರುವ ನಷ್ಟ ಹೇಳತೀರದು. ನಿರ್ಮಾಪಕ ನಿರ್ದೇಶಕರೂ ಸೇರಿದಂತೆ ಇಡೀ ಚಿತ್ರೋದ್ಯಮದ ಕಾರ್ಮಿಕರು ಕಂಗಾಲಾಗಿದ್ದಾರೆ. ಸರ್ಕಾರ ಚಿತ್ರ ಬಿಡುಗಡೆಗೆ ಅನುಮತಿ ನೀಡಿದ್ದರೂ ಜನ ಚಿತ್ರ ಮಂದಿರದತ್ತ ಬರಲು ಹಿಂದೇಟು ಹೊಡೆಯುತ್ತಿದ್ದಾರೆ. ಒಂದೆರಡು ಸಿನಿಮಾಗಳು ಥಿಯೇಟರುಗಳಿಗೆ ಬಿಡುಗಡೆಯಾಗಿದ್ದರೂ ಮತ್ತೆ ಕೋವಿಡ್ ಎರಡನೇ ಅಲೆ ಜನರು ಥಿಯೇಟರಿನತ್ತ ಮುಖಮಾಡಲು ಹಿಂಜರಿಯುವಂತೆ ಮಾಡುತ್ತಿದೆ. […]