ಮೇಕಿಂಗ್ ಆಫ್ ಬಂಗಾರದ ಮನುಷ್ಯ….
ಯಾವುದನ್ನೂ, ಯಾರನ್ನೂ ಸುಲಭಕ್ಕೆ ಸ್ವೀಕರಿಸದೆ, ಹತ್ತಿರಕ್ಕೆ ಬಿಟ್ಟುಕೊಳ್ಳದೆ ಬದುಕಿದವರು ರವಿ ಬೆಳಗೆರೆ. ಏನೇನೂ ಬರೆಯಲು ಬಾರದ ಕೆಲವರು ಇವರ ಬಳಿ ವರ್ಷಾನುಗಟ್ಟಲೆ ಬಾಳಿದ ಉದಾಹರಣೆಗಳಿವೆ. ಸುದ್ದಿ ಹುಡುಕುವ ನೈಪುಣ್ಯತೆ, ಮಾಹಿತಿ ಸಂಗ್ರಹಿಸುವ ಕಲೆಯಿಂದಷ್ಟೇ ಅಲ್ಲಿ ಬದುಕು ಕಟ್ಟಿಕೊಂಡವರಿದ್ದಾರೆ. ಬೆಳಗೆರೆ ಅವರಿಗೆ ಸರಿಗಟ್ಟುವಂತಾ ಬರವಣಿಗೆ ಇದ್ದು, ಅವರ ವ್ಯಕ್ತಿತ್ವವನ್ನು ಸಹಿಸಿಕೊಳ್ಳೋದು ಕಷ್ಟವಾಗಿ ಹೆಚ್ಚು ಕಾಲ ಅಲ್ಲಿರಲಾರದೆ ಹೊರಬಂದವರೂ ಸಾಕಷ್ಟಿದ್ದಾರೆ. ಎರಡನೇ ವರ್ಗದಕ್ಕೆ ಸೇರಿದವರಲ್ಲಿ ಬಹುಶಃ ಮಹೇಶ್ ದೇವಶೆಟ್ಟಿ ಕೂಡಾ ಒಬ್ಬರು. ರವಿ ಬೆಳಗೆರೆ ತೊಂಭತ್ತರ ದಶಕದಲ್ಲಿ ಅಪಾರವಾಗಿ ಓದುಗರನ್ನು […]
ಲಗಾಮ್ ಕನ್ನಡದ ಲಗಾನ್ ಆಗಲಿ ಅಂದರು ಅಪ್ಪು!
ಗಜ, ದಂಡಂ ದಶಗುಣಂ, ಬೃಂದಾವನ, ಪವರ್ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಕೆ. ಮಾದೇಶ್. ಅವರೀಗ ಮೊದಲ ಬಾರಿಗೆ ನಾಲ್ಕು ಭಾಷೆಗಳಲ್ಲಿ ಹೊಚ್ಚ ಹೊಸ ಚಿತ್ರಕ್ಕೆ ಕೈ ಹಾಕಿದ್ದಾರೆ. ಅದರ ಹೆಸರೇ ‘ಲಗಾಮ್’. ಇದೇ ಶುಭ ಸೋಮವಾರ ಲಗಾಮ್ ಚಿತ್ರದ ಮುಹೂರ್ತ ಕಂಠೀರವ ಸ್ಟುಡಿಯೋದಲ್ಲಿ ಅದ್ಧೂರಿಯಾಗಿ ನೆರವೇರಿತು. ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರು ಬಂದು ಚಿತ್ರಕ್ಕೆ ಮೊದಲ ಕ್ಲಾಪ್ ಮಾಡುವ ಮೂಲಕ ಲಗಾಮ್ ತಂಡಕ್ಕೆ ಶುಭ ಹಾರೈಸಿದರು. ಲಗಾಮ್ ಒಂದೊಳ್ಳೆ ಸಂದೇಶ ಇರುವ ಅದ್ಧೂರಿ […]
ಐವತ್ತೆಂಟಕ್ಕೇ ಎದ್ದು ನಡೆದರು ನಟ ವಿವೇಕ್…
ಅತ್ಯದ್ಭುತ ಹಾಸ್ಯ ಕಲಾವಿದ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರೂ ಆಗಿದ್ದ ವಿವೇಕ್ (ವಿವೇಕಾನಂದರ್) ಚೆನ್ನೈನಲ್ಲಿ ವಿವೇಕ್ ವಿಧಿವಶರಾಗಿದ್ದಾರೆ. ನೆನ್ನೆ ಕೊರೋನಾ ಲಸಿಕೆ ಹಾಕಿಸಿಕೊಂಡು ಬಂದು, ಲಸಿಕೆಯ ಬಗ್ಗೆ ಸಂದೇಶವನ್ನೂ ನೀಡಿದ್ದ ವಿವೇಕ್ ಗೆ ಇದ್ದಕ್ಕಿದ್ದಹಾಗೆ ಹೃದಯಾಘಾತವಾಗಿತ್ತು. ತಕ್ಷಣ ಟ್ರೀಟ್ ಮೆಂಟ್ ಕೊಡಿಸಲಾಗಿತ್ತಾದರೂ ಹೃದಯ ಶ್ರೀಮಂತಿಕೆಯ ಮಹಾನ್ ವ್ಯಕ್ತಿಯ ಹೃದಯ ಯಾವ ಚಿಕಿತ್ಸೆಗೂ ಸ್ಪಂದಿಸದೆ ಸ್ತಬ್ದವಾಗಿದೆ. ಸಿನಿಮಾರಂಗ ಇರುವುದೇ ಹೀಗೆ. ಇಲ್ಲಿ ನಂಬಿಕೆಗಳಿಗಿಂತಾ ಮೂಢ ನಂಬಿಕೆಗಳಿಗೇ ಹೆಚ್ಚು ಬೆಲೆ. ಇಂಥಾ ಜಾಗದಲ್ಲಿ ಯಾವನಾದರೂ ಮಾಢ್ಯದ ವಿರುದ್ಧ ಮಾತಾಡುತ್ತಾನೆ, ವೈಜ್ಞಾನಿಕ ಸಂದೇಶ […]
ಕೃಷ್ಣ ಟಾಕೀಸ್ ಒಳಗೇನಿದೆ…
ಕನ್ನಡ ಸಿನಿಮಾರಂಗದ ಎವರ್ ಗ್ರೀನ್ ಲವರ್ ಬಾಯ್ ಅಂತಾ ಅನ್ನಿಸಿಕೊಂಡಿರುವ ನಟ ಅಜಯ್ ರಾವ್. ಇವರೀಗ ಹಾರರ್ ಎಲಿಮೆಂಟು ಇರುವ ಸಿನಿಮಾದಲ್ಲಿ ನಟಿಸಿ ಥ್ರಿಲ್ ನೀಡಿದ್ದಾರೆ. ಸಿಟಿಯಲ್ಲಿ ಆರಂಭವಾಗುವ ಕಥೆ ಪ್ರಯಾಣ ಬೆಳೆಸಿ ದೂರದ ನದಿಗೆ ಹೋಗಿ ಇಳಿಯುತ್ತದೆ. ಅಲ್ಲೊಂದು ಕೈಮರವಿರುತ್ತದೆ. ಅದರಡಿ ಕಲ್ಮಡಿ ಜಂಕ್ಷನ್ ಎನ್ನುವ ಬೋರ್ಡು. ಆ ಬೋರ್ಡು ತೆರೆಮೇಲೆ ಬಂದಾಗ ಅದಕ್ಕೆ ತಗುಲಿಕೊಂಡ ಟ್ಯೂಬ್ ಲೈಟು ಮಿಣಕಮಿಣಕ ಅನ್ನುತ್ತದೆ. ಆ ಜಂಕ್ಷನ್ನಿನಲ್ಲಿ ತಿಂಗಳಿಗೊಂದರಂತೆ ಹೆಣ ಉರುಳುತ್ತಿರುತ್ತವೆ. ಸತ್ತವರೆಲ್ಲಾ ಅದೇ ದಾರಿಯಲ್ಲಿದ್ದ ಕೃಷ್ಣ ಟಾಕೀಸಿನಲ್ಲಿ […]
ನಿರ್ಮಾಪಕರ ಸಂಕಟಕ್ಕೆ ಯಾರು ಮಿಡಿಯುತ್ತಾರೆ?
ಥೇಟರಲ್ಲಿ ಐವತ್ತು ಪರ್ಸೆಂಟ್ ಜನರನ್ನು ಮಾತ್ರ ತುಂಬಿಸಿಕೊಳ್ಳಬೇಕು ಅಂತಾ ಸರ್ಕಾರ ಆಜ್ಞೆ ಹೊರಡಿಸಿದೆ. ವರ್ಷಾನುಗಟ್ಟಲೆ ಶ್ರಮ ಪಟ್ಟು, ಸಾಲ-ಸೂಲ ತಂದು ಸಿನಿಮಾ ಮಾಡಿ ಐವತ್ತು ಪರ್ಸೆಂಟ್ ಸೀಟುಗಳಿಗೆ ಸ್ಟಿಕ್ಕರು ಮೆತ್ತಿಸುವ ಸಾಹಸ ಮಾಡಿದರೆ, ನಿರ್ಮಾಪಕನ ಪಾಲಿಗೆ ಲಾಭ ಕೈ ಸೇರುವ ಬದಲು ಕಂಟಕ ಸುತ್ತಿಕೊಳ್ಳುತ್ತದೆ. ಬಿಸಿಲು, ಬಸ್ ಸ್ಟ್ರೈಕುಗಳ ಜೊತೆಗೆ ಕೊರೋನಾದ ಎರಡನೇ ಅಲೆಯ ಬಗೆಗಿನ ಮಾಹಿತಿ ಕೇಳಿ ಜನ ಕಂಗಾಲಾಗಿದ್ದಾರೆ. ಇದರ ನಡುವೆ, ಸರ್ಕಾರದ ಒಳಲೆಕ್ಕಾಚಾರಗಳು ಏನೇನಿವೆಯೋ? ದಿನಕ್ಕೊಂದು ರೂಲ್ಸು, ಘಳಿಗೆಗೊಂದು ಸ್ಕೆಚ್ಚು ಹಾಕುವ ಗೌರ್ಮೆಂಟು […]
ಅಭಿಮಾನಿಗಳಿಗೆ ಮನವಿ ಮಾಡಿದ ನೆನಪಿರಲಿ ಪ್ರೇಮ್!
ಐಪಿಎಲ್ ಅಂದ್ರೆ ಅದೇನೋ ಸಂಭ್ರಮ ಸಡಗರ. 6 ವರ್ಷದ ಹುಡುಗರಿಂದ ಹಿಡಿದು 60 ವರ್ಷದ ವೃದ್ಧರವರಿಗೂ ಐಪಿಎಲ್ ಕಿಕ್ ಕೊಡುತ್ತೆ. ನಮ್ ಟೀಮ್ ನಿಮ್ ಟೀಮ್ ಅಂತಾ ಅಭಿಮಾನಿಗಳು ಸೋಷಿಯಲ್ ಮೀಡಿಯಾಗಳ ಮೂಲಕ ತಮ್ಮ ಅಭಿಮಾನ ತೋರಿಸುತ್ತಾರೆ. ಈ ಮಧ್ಯೆ ಐಪಿಎಲ್ ಬಂದ್ರೆ ಸಾಕು ಬೆಟ್ಟಿಂಗ್ ದಂಧೆಗಳೂ ಶುರುವಾಗುತ್ತವೆ. ಐಪಿಎಲ್ ಶುರುವಾಗೋದಕ್ಕೇ ಅಂತಾ ಕೆಲ ಟೀಂಗಳು ಕಾಯ್ತಿರುತ್ತವೆ. ಒಂದಿಡೀ ಸಮೂಹವೇ ಬೆಟ್ಟಿಂಗ್ ದಂಧೆಗೆ ಬಲಿಯಾಗುತ್ತಿದೆ. ಹೀಗೆ ಬೆಟ್ಟಿಂಗ್ ಆಡೋರಿಗೆ ನಟ ಲವ್ಲಿ ಸ್ಟಾರ್ ಪ್ರೇಮ್ ಕಿವಿ ಮಾತು […]
ವಿಕ್ರಾಂತ್ ರೋಣ ಕೊಡುತ್ತಿರುವ ಸರ್ಪ್ರೈಸ್ ಏನು?
ವಿಕ್ರಾಂತ್ ರೋಣ. ಸ್ಯಾಂಡಲ್ವುಡ್ನಲ್ಲಿ ಹೈ ವೋಲ್ಟೇಜ್ ಎಕ್ಸ್ಪೆಕ್ಟೇಷನ್ ಹುಟ್ಟು ಹಾಕಿರೋ ಕಿಚ್ಚ ಸುದೀಪ್ರ ಪವರ್ಫುಲ್ ಸಿನಿಮಾ. ಸಿನಿಮಾ ಲಾಂಚ್ ಆದ ಕ್ಷಣದಿಂದಲೂ ಅಭಿಮಾನಿ ಬಳಗದಲ್ಲಿ ಕ್ಯೂರಿಯಾಸಿಟಿ ಹೆಚ್ಚಿದೆ. ಆಗಾಗ ಅಪ್ಡೇಟ್ ಕೊಡೋ ಮೂಲಕ ಸ್ಯಾಂಡಲ್ವುಡ್ ಸುದ್ದಿ ಸಾಗರದಲ್ಲಿ ಸದ್ದು ಮಾಡೋ ವಿಕ್ರಾಂತ್ ರೋಣ ಮತ್ತೆ ಸುದ್ದಿಯಲ್ಲಿದ್ದಾನೆ. ಇಂದು (ಏಪ್ರಿಲ್ 15ಕ್ಕೆ) ಸರ್ಪ್ರೈಸ್ ನೀಡೋದಾಗಿ ಚಿತ್ರತಂಡ ಘೋಷಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಹೀರೋ ಕಿಚ್ಚ ಸುದೀಪ್ ಅಥವಾ ನಿರ್ದೇಶಕ ಅನೂಪ್ ಬಂಡಾರಿ ವಿಕ್ರಾಂತ್ ರೋಣ ಸಿನಿಮಾದ ಬಗ್ಗೆ ಅಪ್ಡೇಟ್ಸ್ ನೀಡೋ […]
ಕೊರೋನಾವನ್ನೇ ಕೊಂದು ಬರ್ತಾನಂತೆ ಕೊಡೆಮುರುಗ!
ಈ ಯುಗಾದಿ ಕನ್ನಡ ಚಿತ್ರರಂಗದ ಪಾಲಿಗೆ ಹೊಸ ವಸಂತವಾಗಲಿದೆ ಅಂತಾ ಜನ ಬಯಸಿದ್ದರು. ಈ ವರ್ಷ ಬಿಡುಗಡೆಯಾದ ಉತ್ತಮ ಚಿತ್ರಗಳನ್ನು ಜನ ಪ್ರೀತಿಯಿಂದಲೇ ಸ್ವೀಕರಿಸುತ್ತಿದ್ದರು. ಆಕ್ಟ್ 1978 ಸಿನಿಮಾದಿಂದ ಆರಂಭಗೊಂಡು, ಪೊಗರು, ರಾಬರ್ಟ್, ಮುಂತಾದ ಸಿನಿಮಾಗಳು ಅತ್ಯುತ್ತಮ ಕಲೆಕ್ಷನ್ ಮಾಡಿದವು. ಕಳೆದ ಹತ್ತು ದಿನಗಳಿಂದ ಮತ್ತೆ ಕೊರೋನಾ ಯಥೇಚ್ಚವಾಗಿ ಹಬ್ಬುತ್ತಿರುವುದು ಮತ್ತು ಸರ್ಕಾರದ ಅವೈಜ್ಞಾನಿಕ ರೂಲ್ಸುಗಳು ಚಿತ್ರರಂಗವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ. ವಾರದಿಂದೀಚೆಗೆ ಬಸ್ ಚಾಲಕರ ಪ್ರತಿಭಟನೆಯಿಂದ ಪ್ರಯಾಣಿಕರು ಪರದಾಡುತ್ತಿದ್ದಾರೆ. ಸರ್ಕಾರ ಎಲ್ಲೆಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೋ […]
ಯಾರಾಗ್ತಾರೆ ದುಬಾರಿ ಸಾರಥಿ?
ಮಹಂತೇಶ್ ಮಂಡಗದ್ದೆ ಪೊಗರು ಸಿನಿಮಾದ ಮೂಲಕ ಸ್ಯಾಂಡಲ್ವುಡ್ನಲ್ಲಿ ಪೊಗದಸ್ತಾಗಿ ಅಬ್ಬರಿಸಿದ್ದವರು ದ್ರುವ ಸರ್ಜಾ. ಪೊಗರು ಥೇಟರಿಗೆ ಬರುವ ಮುಂಚೆಯೇ ಆ್ಯಕ್ಷನ್ ಪ್ರಿನ್ಸ್ ತಮ್ಮ ಮುಂದಿನ ಸಿನಿಮಾವನ್ನ ಅನೌನ್ಸ್ ಮಾಡಿದ್ರು. ದುಬಾರಿ ಅನ್ನೋ ಪವರ್ ಫುಲ್ ಟೈಟಲ್ ರಿಲೀಸ್ ಮಾಡೋದರ ಜೊತೆಗೆ ಮುಹೂರ್ತವನ್ನೂ ಚಿತ್ರತಂಡ ಮುಗಿಸಿತ್ತು. ಪೊಗರು ಸಿನಿಮಾದ ಡೈರೆಕ್ಟರ್ ನಂದ ಕಿಶೋರ್ ಈ ಸಿನಿಮಾದ ಸಾರಥ್ಯ ವಹಿಸಿಕೊಳ್ತಾರೆ ಅನ್ನೋದು ಪಕ್ಕಾ ಆಗಿತ್ತು. ಆದರೆ, ಸದ್ಯ ಕಾರಣಾಂತರಗಳಿಂದ ದುಬಾರಿ ಸಿನಿಮಾದಿಂದ ನಂದ ಕಿಶೋರ್ ಹೊರಬಂದಿದ್ದಾರೆ ಅಂತಾ ಹೇಳಲಾಗ್ತಿದೆ. ಹೀಗಾಗಿ […]
ಗೋಲ್ಡನ್ ಸ್ಟಾರ್ ಬ್ಯುಸಿ!
ನೊಬೆಲ್ ನಂದಗೋಪಾಲ್ ಮತ್ತೆ ಕಮ್ ಬ್ಯಾಕ್ ಆಗೋಕೆ ರೆಡಿಯಾದ ರೇನ್ ಬಾಯ್! ಗೋಲ್ಡನ್ ಸ್ಟಾರ್ ಗಣೇಶ್. ತಮ್ಮ ಆ್ಯಕ್ಟಿಂಗ್, ಸ್ಟೋರಿ ಸೆಲೆಕ್ಷನ್, ಸಾಂಗ್ಸ್ ಮೂಲಕ ಸ್ಯಾಂಡಲ್ವುಡ್ನಲ್ಲಿ ಸಪರೇಟ್ ಫ್ಯಾನ್ ಬೇಸ್ ಕ್ರಿಯೇಟ್ ಮಾಡಿಕೊಂಡಿರೋ ನಟ. ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ನಂತರ ಗಣಿ ಮುಟ್ಟಿದ್ದೆಲ್ಲವೂ ಚಿನ್ನವಾಗಿತ್ತು. ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳ ಮೂಲಕ ಹಿಟ್ ಲಿಸ್ಟ್ನಲ್ಲಿಯೇ ಗೋಲ್ಡನ್ ಸ್ಟಾರ್ ಇರ್ತಿದ್ರು. ಆದ್ರೆ ಯಾಕೋ ಇತ್ತೀಚೆಗೆ ಗಣೇಶ್ ಸಿನಿಮಾಗಳು ಫ್ಲಾಪ್ ಆಗ್ತಿವೆ. ಎಕ್ಸ್ಪೆಕ್ಟೇಷನ್ಸ್ ಹುಟ್ಟಿಸುತ್ವೆ, ರಿಲೀಸ್ […]