ಹುಡುಕಿಕೊಡಿ ಪ್ಲೀಸ್…!
ಉಗ್ರಂ ಸಿನಿಮಾದ ಮೂಲಕ ಹೆಸರು ಮಾಡಿದ ಕಲಾವಿದ ರವಿ. ಉಗ್ರಂ ರವಿ ಅಂತಲೇ ಫೇಮಸ್ಸಾಗಿರುವ ರವಿ ಕೆ.ಜಿ.ಎಫ್ ಅವನೇ ಶ್ರೀಮನ್ನಾರಾಯಣ, ಬಿಚ್ಚುಗತ್ತಿ, ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಬೆಂಗಳೂರಿನ ಸಿ.ವಿ. ರಾಮನ್ ನಗರದಲ್ಲಿ ವಾಸವಿರುವ ಉಗ್ರಂ ರವಿ ಅವರ ಕಿರಿಯ ಸಹೋದರ ರಂಜೀತ್ ಕುಮಾರ್ ನೆನ್ನೆಯಿಂದ ನಾಪತ್ತೆಯಾಗಿದ್ದಾರೆ. ಉಗ್ರಂ ರವಿ ಅವರ ತಂದೆ ಗುಣಾಲನ್ ಆರ್ಮಿಯಲ್ಲಿ ಸೇವೆಸಲ್ಲಿಸಿರುವ ಮಾಜಿ ಯೋಧ. ಈ ಹಿಂದೆ ಪಾಕಿಸ್ತಾನ, ಬಾಂಗ್ಲಾದೇಶ ವಿರುದ್ಧದ ಯುದ್ಧದಲ್ಲಿ ಭಾಗವಹಿಸಿದ್ದವರು. ಸದ್ಯ ನಿವೃತ್ತ ಜೀವನ ನಡೆಸುತ್ತಿರುವ ಗುಣಾಲನ್ […]
ಪರೋಟಾ ಕತೆ ಪಲ್ಟಿ ಹೊಡೀತು!
ಧನುಷ್ ಭಾರತೀಯ ಚಿತ್ರರಂಗದ ಅದ್ಭುತ ನಟ. ಕಮರ್ಷಿಯಲ್ ಹೀರೋ ಆಗಿ ಗುರುತಿಸಿಕೊಂಡಿರುವ ಧನುಷ್ ಬೇರೆ ನಟರು ಮುಟ್ಟದ ಪಾತ್ರಗಳನ್ನೂ ಸಲೀಸಾಗಿ ಒಪ್ಪಿಕೊಂಡು ನಟಿಸುತ್ತಾ ಬಂದಿದ್ದಾರೆ. ಜನಸಾಮಾನ್ಯರ ಪ್ರತಿನಿಧಿಯಂತಾ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಧನುಷ್ ಲೋಕಲ್ ಕ್ಯಾರೆಕ್ಟರುಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ವಡ ಚೆನ್ನೈ, ಅಸುರನ್, ಕರ್ಣನ್ ಸಿನಿಮಾಗಳ ಪಾತ್ರಗಳು ಧನುಷ್ಗೆ ಎಲ್ಲ ವರ್ಗದ ಪ್ರೇಕ್ಷಕರನ್ನು ಸಂಪಾದಿಸಿಕೊಟ್ಟಿವೆ. ಧನುಷ್ ಆಯ್ಕೆ ಮಾಡಿಕೊಳ್ಳುವ ಸಿನಿಮಾಗಳ ಕಥೆ, ರೋಲುಗಳು ನಿಜಕ್ಕೂ ಡಿಫರೆಂಟಾಗಿರುತ್ತವೆ. ಸ್ವತಃ ನಿರ್ಮಾಪಕರೂ ಆಗಿರುವ ಧನುಷ್ ಅಪರೂಪದ ಕಥೆಗಳನ್ನು […]
ವಿಜಯ್ ಬಗ್ಗೆ ಸುಳ್ಳು ಸುದ್ದಿಗಳನ್ನು ಹುಟ್ಟುಹಾಕುತ್ತಿರುವವರು ಇದನ್ನೊಮ್ಮೆ ಓದಿ…
ಸಂಚಾರಿ ವಿಜಯ್ ಅವರಿಗೆ ಇತ್ತೀಚೆಗೆ ಪರಿಚಯವಾದವರು, ಅವರ ಬಗ್ಗೆ ಹೆಚ್ಚೇನೂ ತಿಳಿಯದವರು, ಕೆಲ ತಿಂಗಳುಗಳಿಂದ ಅವರ ಜೊತೆ ಸಮಯ ಕಳೆದವರು, ವಿಜಯ್ ಅವರ ಬಗ್ಗೆ ಇನ್ನಿಲ್ಲಿದಂತೆ ಸುಳ್ಳು ಸುದ್ದಿಗಳು ಹಾಗೂ ಬಣ್ಣ-ಬಣ್ಣದ ತಪ್ಪು ಕಲ್ಪನೆಗಳನ್ನು ಹುಟ್ಟುಹಾಕುತ್ತಿರುವ ಹಿನ್ನೆಲೆಯಲ್ಲಿ ಸಂಚಾರಿ ವಿಜಯ್ ಅವರ ಕುರಿತಾಗಿ ಹೇಳಲೇಬೇಕಾದ ಕೆಲ ಮಾತುಗಳು ಈ ಲೇಖನದಲ್ಲಿದೆ. ವೀರೇಂದ್ರ ಮಲ್ಲಣ್ಣ 2015ನೇ ಇಸವಿಯ ಆರಂಭದಲ್ಲಿ.. ಫೇಸ್ಬುಕ್-ವಾಟ್ಸಾಪ್ ದಾಟಿ, ವೈಯಕ್ತಿಕವಾಗಿ ಮಂಸೋರೆ ಮತ್ತು ಮಂಸೋರೆಯ ಮೂಲಕ ಸಂಚಾರಿ ವಿಜಯ್ ಅವರು ನನಗೆ ಗೆಳೆಯರಾದ ಹೊತ್ತು. ನಾನು […]
ಪ್ಯಾನ್ ಇಂಡಿಯಾ ಸಿನಿಮಾದ ಲಿರಿಕಲ್ ಹಾಡು ಬಿಡುಗಡೆ!
ಕಾಲಿವುಡ್ ಸ್ಟಾರ್ ನಟ ಸಿಲಂಬರಸನ್.ಟಿ.ಆರ್ ನಟನೆಯ ’ಮಾನಾಡು’ ತಮಿಳು ಚಿತ್ರವು ಐದು ಭಾಷೆಗಳಲ್ಲಿ ಸಿದ್ದಗೊಳ್ಳುತ್ತಿದೆ. ಕನ್ನಡದಲ್ಲಿ ಸುದೀಪ್, ತಮಿಳಿನಲ್ಲಿ ಎ.ಆರ್.ರೆಹಮಾನ್, ಹಿಂದಿಯಲ್ಲಿ ಅನುರಾಗ್ಕಶ್ಯಪ್, ತೆಲುಗುದಲ್ಲಿ ರವಿತೇಜ ಮತ್ತು ಮಲೆಯಾಳಂದಲ್ಲಿ ಪೃಥ್ವಿರಾಜ್ ಟೈಟಲ್ನ್ನು ಲೋಕಾರ್ಪಣೆ ಮಾಡಿದ್ದರು. ಸದ್ಯ ಕನ್ನಡದ ಶೀರ್ಷಿಕೆಯನ್ನು ತಂಡವು ರಿವೀಲ್ ಮಾಡಿರುವುದಿಲ್ಲ. ಪ್ರಚಾರದ ಸಲುವಾಗಿ ಸೋಮವಾರ ಲಿರಿಕಲ್ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ಮದುವೆ ಸಂಭ್ರಮದಲ್ಲಿ ನವ ಜೋಡಿಗಳ ಎದುರು ’ಮಹರೆಜೈಲಾ ಅಲ್ಲಾ ಅಲ್ಲಾ ಎಲ್ಲಾ ಎಲ್ಲಾ’ ಹಾಡಿನಲ್ಲಿ ನಾಯಕ ಮತ್ತು ನಾಯಕಿ ತಂಡದೊಂದಿಗೆ ಹೆಜ್ಜೆ ಹಾಕುವ […]
ಕಲ್ಯಾಣ ಕರ್ನಾಟಕದ ಮೊದಲ ವೆಬ್ ಸೀರಿಸ್ ‘ಒಗ್ಗರಣೆ’
ವಿಜಯಭಾಸ್ಕರರೆಡ್ಡಿ, ಸೇಡಂ ಕಲಬುರಗಿಯ ಖಾರದ ಭಾಷೆಯೊಂದಿಗೆ ಅಗ್ದಿ ದೇಸಿ ಸೊಗಡಿನ ನಟನೆಯ ಜೊತೆಗೆ ಇದೀಗ `ವೆಬ್ ಸೀರಿಸ್’ ಯುಟ್ಯೂಬ್ನಲ್ಲಿ ಅತಿ ಹೆಚ್ಚು ಸುದ್ದಿ ಎಬ್ಬಿಸಿದೆ. ಕಲಬುರಗಿ ಜಿಲ್ಲೆಯ `ಮನೋಮಯ್’ ಎಂಬ ತಂಡವೊಂದು ಸಮಾನ ಮನಸ್ಕರ ಮತ್ತು ವಯಸ್ಕರ ಯುವಕರೊಂದಿಗೆ ಸೇರಿ `ಇಂಜಿನಿಯರಿಂಗ್’ ವ್ಯಾಸಂಗದ ತರಲೆ-ತುಂಟಾಟಗಳನ್ನು ನಡೆಸಿದ, ಮಷ್ಕೇರಿ ಮಾಡಿದ ನೆನಪಿನ ಖಾರ ಕಹಾನಿಯನ್ನು ಸರಾಗವಾದ ಆಡು ಭಾಷೆಯಲ್ಲಿ ಹೇಳುವ ಕಥೆಯ ಸ್ವರೂಪ. ಮೇಲ್ನೋಟಕ್ಕೆ ಟೊಂಕದ ಕೆಳಗಿನ ಮಾತಾಗಿದ್ದರು, ಕನ್ನಡ “ಡಿಯಂ ಬಗ್ಗೆ, ರ್ಯಾಗಿಂಗ್ ಎಂಬ ಬಿರುಗಾಳಿ ಭೂತವನ್ನು, […]
ಮಿಂಚಿ ಮರೆಯಾದ ಸಿನಿ ಸಂಚಾರಿ!!
ಅಪ್ಪಟ ಕನ್ನಡದ ಅಸಾಧಾರಣ ಪ್ರತಿಭೆ ಸಂಚಾರಿ ವಿಜಯ್, ತನ್ನ ಪಾಲಿನ ಬದುಕು ಮುಗಿಸಿಕೊಂಡರು.! ಇವರು ಸಂಚಾರಿ ಎಂಬ ನಾಟಕ ತಂಡದಲ್ಲಿ ತೊಡಗಿಸಿಕೊಂಡ ಕಾರಣಕ್ಕೆ, ಇವರ ಹೆಸರ ಹಿಂದೆ ‘ಸಂಚಾರಿ’ ಸೇರಿಕೊಂಡಿತ್ತು. ವಿಪರ್ಯಾಸವೆಂದರೆ, ಕೊನೆಯಲ್ಲಿ ಇವರ ಮೈಮರೆತದ ಸಂಚಾರವೇ ಇವರಿಗೆ ಮುಳುವಾಗಿದೆ! ಹೌದು, ಅವತ್ತು ಶನಿವಾರ ರಾತ್ರಿ ಸ್ನೇಹಿತನ ಜೊತೆ ಬೈಕ್ನಲ್ಲಿ ಸಂಚರಿಸುವ ವೇಳೆಯಲ್ಲಿ, ವಿಜಯ್ ಹೆಲ್ಮೆಟ್ ಧರಿಸಿರಲಿಲ್ಲ. ಅಪಘಾತದ ತೀವೃತೆ ಎಷ್ಟಿತ್ತೆಂದರೆ, ಅವರ ಬಲ ಭಾಗದ ತೊಡೆ ಮುರಿದು, ದೇಹ ರಕ್ತ ಸಿಕ್ತವಾಗಿತ್ತು. ಎಡ ತಲೆಗೆ ಎಲೆಕ್ಟ್ರಿಕ್ […]
ʻಒಂದಲ್ಲಾ ಒಂದಿನಾ ಗುಂಡಿಯೊಳಗೆ ಮಲಗಲೇಬೇಕಲ್ಲಾ?!
ವಿಜಿ ಸರ್… ʻಮೇಲೊಬ್ಬ ಮಾಯಾವಿʼ ನನ್ನ ನಿಮ್ಮ ಜೊತೆಯಾಗಿಸಿತು. ಒಂದೇ ಸಿನಿಮಾದ ಒಡನಾಟದಲ್ಲಿ ಒಡಹುಟ್ಟಿದವರಿಗಿಂತ ಹತ್ತಿರವಾದಿರಿ. ಯಾರಲ್ಲೂ ಹಂಚಿಕೊಳ್ಳಲಾಗದ, ಹಂಚಿಕೊಳ್ಳಬಾರದ ಸಂಕಟಗಳನ್ನು ಮಗುವಿನಂತೆ ಹಂಚಿಕೊಂಡ್ರಿ. ನಾನೊಬ್ಬ ಡೈರೆಕ್ಟರ್, ನೀವೊಬ್ಬ ಆಕ್ಟರ್ ಅನ್ನುವ ಕೊಂಡಿಯನ್ನು ಬಹುಬೇಕ ಕಳಚಿದ್ರಿ. ಸದಾ ಹೊಸತನ್ನು ಯೋಚಿಸುವ, ಸದಾ ಸಂತೋಷವನ್ನು ಹಂಚುವ, ಎಲ್ಲರಿಗೂ ಒಳ್ಳೆಯದನ್ನು ಬಯಸುವ ನಿಮ್ಮ ಜೀವನ ಸೂತ್ರವನ್ನು ಇಡೀ ತಂಡಕ್ಕೆ ಉಚಿತವಾಗಿ ಹಂಚಿದಿರಿ. ಊಟವನ್ನು ಇಷ್ಟ ಪಡುವ ನೀವು, ಸಾಕಷ್ಟು ಬಾರಿ ಕೈತುತ್ತು ಕೊಟ್ರಿ. ನಿಮ್ಮ ನಟನೆಯ ಫೋಟೋ ಸ್ಕಿಲ್ ಅನ್ನು […]
ಚಂದ್ರಚೂಡ್ ಬರೆದಿದ್ದ ಹಾಡಲ್ಲಿ ಎಲ್ಲವೂ ಅಡಗಿದೆ….
ನಾಲ್ಕು ವರ್ಷಗಳ ಹಿಂದೆ ರಿಕ್ತ ಹೆಸರಿನ ಸಿನಿಮಾವೊಂದು ತೆರೆಗೆ ಬಂದಿತ್ತು. ಕಥೆ ಆರಂಭಗೊಂಡು ಸ್ವಲ್ಪವೇ ಹೊತ್ತಾಗಿರುತ್ತದೆ. ಅಚಾನಕ್ಕಾಗಿ ಹೀರೋ ಕಾಲುಜಾರುತ್ತದೆ. ಸ್ಲೋ ಮೋಷನ್ನಲ್ಲಿ ಹಂಗಂಗೇ ಹಿಂದಕ್ಕೆ ಬೀಳುತ್ತಾನೆ. ಮತ್ತೆ ಮೇಲೆ ಏಳೋದೇ ಇಲ್ಲ. ತಲೆಗೆ ಬಿದ್ದ ಬಲವಾದ ಪೆಟ್ಟು ಅವನ ಜೀವ ತೆಗೆದಿರುತ್ತದೆ. ನಂತರ ಮತ್ತೆ ಕಥೆ ಮುಂದುವರೆಯುವುದು ಆ ಹೀರೋ ಆತ್ಮ, ಪ್ರೇತ-ಗೀತ ಇತ್ಯಾದಿಗಳ ಮೂಲಕ… ಆ ಚಿತ್ರದ ಹೀರೋ ಆಗಿ ನಟಿಸಿದ್ದು ಇದೇ ಸಂಚಾರಿ ವಿಜಯ್…! ಅದೇನು ದುರಂತವೋ ಗೊತ್ತಿಲ್ಲ. ಕೆಲವೊಮ್ಮೆ ತಾವು ಅನುಭವಿಸಿ […]
ಯಶ್ ಬಗೆಗಿನ ಪ್ರೀತಿ-ಗೌರವ ಹೆಚ್ಚಾಗುತ್ತದೆ…
ಜನಸಾಮಾನ್ಯರ ದೃಷ್ಟಿಯಲ್ಲಿ ಸಿನಿಮಾರಂಗ ಅಂದ ತಕ್ಷಣ ಕಣ್ತುಂಬ ಬಣ್ಣಗಳೇ ತುಂಬಿಕೊಳ್ಳುತ್ತವೆ. ಹಾಗೆ ನೋಡಿದರೆ ಬೇರೆಲ್ಲ ಉದ್ಯಮಕ್ಕಿಂತಾ ಅನಿಶ್ಚಿತತೆ, ಅಭದ್ರತೆ ಇಲ್ಲಿ ಸ್ವಲ್ಪ ಹೆಚ್ಚೇ ಇದೆ. ಈ ಕ್ಷೇತ್ರದಲ್ಲಿ ಇವತ್ತಲ್ಲಾ ನಾಳೆ ಗೆಲ್ಲುತ್ತೇವೆ, ಆ ಮೂಲಕ ಬದುಕಲ್ಲಿ ಬೆಳಕು ಮೂಡುತ್ತದೆ ಎಂಬ ಭರವಸೆಯಿಂದ ಕಾದಿರುವ ಅದೆಷ್ಟೋ ಜನ ಕಾರ್ಮಿಕರು, ಕಲಾವಿದರು, ತಂತ್ರಜ್ಞರು ಇಲ್ಲಿದ್ದಾರೆ. ಕೊರೋನಾ ಎನ್ನುವ ದುಷ್ಟ ವೈರಸ್ಸು ಅಂಥ ಎಲ್ಲರ ಬದುಕನ್ನೂ ಅಕ್ಷರಶಃ ನರಕವನ್ನಾಗಿಸಿದೆ. ಸಿನಿಮಾ ರಂಗಕ್ಕೆ ಸಂಬಂಧಿಸಿದ ಸಾಕಷ್ಟು ಜನ ಬಡ ಕಲಾವಿದರ ಮನೆಯ ಗೋಡೆಯನ್ನು […]
ಎಲ್ಲಿ ಹೋದರು ಅಣಜಿ ನಾಗರಾಜ್?
ಅದೇನು ದುರಂತವೋ? ಬೇರೆ ಕ್ಷೇತ್ರಗಳಿಗೆ ಹೋಲಿಸಿದರೆ, ಸಿನಿಮಾರಂಗದಲ್ಲಿ ನಿಯತ್ತು ಅನ್ನೋದು ತೀರಾ ಅಪರೂಪ. ಕೈಹಿಡಿದು ನಡೆಸಿ, ದಾರಿ ತೋರಿದವರನ್ನು ನೆನೆಯುವುದು, ಕಷ್ಟದಲ್ಲಿದ್ದವರಿಗೆ ಆಸರೆ ನೀಡುವ ಮನಸ್ಸು ಇಲ್ಲಿ ಯಾರಿಗೂ ಇರೋದಿಲ್ಲ! ಡಾ. ರಾಜ್ ಕುಮಾರ್ ನಟನೆಯ ಸಿನಿಮಾಗಳು ಸೇರಿದಂತೆ ನೂರಾರು ಚಿತ್ರಗಳಿಗೆ ಬೆಳಕು ನೀಡಿದವರು ಷಣ್ಮುಖಪ್ಪ. ದಾವಣಗೆರೆ ಕಡೆಯಿಂದ ಬಂದು ಬೆಂಗಳೂರು ಸೇರಿದ ಇವರು ಲೈಟ್ ಮನ್ ಆಗಿ ಸಾಕಷ್ಟು ಚಿತ್ರಗಳಿಗೆ ಕೆಲಸ ಮಾಡಿದ್ದರು. ಜೊತೆಗೆ ನೂರೈವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನೂ ನಿರ್ವಹಿಸಿದ್ದರು. ನಿರ್ಮಾಪಕ […]