ವಿಕ್ರಾಂತ್ ರೋಣ ಚಿತ್ರದಲ್ಲಿ ಗಡಂಗ್ ರಕ್ಕಮ್ಮ
3Dಯಲ್ಲಿ ಚಿತ್ರ ತೆರೆ ಕಾಣಲಿದೆಯೆಂಬ ಘೋಫಣೆಯ ನಂತರ, ಚಿತ್ರತಂಡ ಜ್ಯಾಕ್ಲಿನ್ ಈ ಚಿತ್ರದಲ್ಲಿ ಒಂದು ಕುತೂಹಲತಾರಿಯಾದ ಪಾತ್ರ ನಿರ್ವಹಿಸಿದ್ದಾರೆಂದು ಹೇಳಿದ್ದಾರೆ. ಮುಂಬೈ ನಗರದಾದ್ಯಂತ ಹಾಗು ದೇಶದ ಇತರೆ ನಗರಗಳಲ್ಲಿ ಬಿಲ್ಬೋರ್ಡುಗಳಲ್ಲಿ ಪ್ರದರ್ಶನವಾಗಲಿದೆ. ಬಾಲಿವುಡ್ ಬೆಡಗಿ ಚಿತ್ರದಲ್ಲಿ ರಕೇಲ್ ಡಿ’ಕೋಸ್ಟ AKA ‘ಗಡಂಗ್ ರಕ್ಕಮ್ಮ’ ಇದು ಪ್ಯಾನ್ ಇಂಡಿಯಾ 3D ಲುಕ್ ಕೂಡ ಆಗಿರುತ್ತದೆ. ‘ಫಸ್ಟ್ ಲುಕ್’ ವಿವಿಧ ಪ್ರಾಂತ್ಯ ಹಾಗು ಜನಾಂಗಗಳಂದ ಪ್ರೇರೇಪಿತವಾಗಿದೆ. ಚಿತ್ರದಲ್ಲಿ ಗಡಂಗ್ ರಕ್ಕಮ್ಮನ ಪಾತ್ರ ಕಾಲ್ಪನಿಕ ಜಾಗದಲ್ಲಿ ‘ಗಡಂಗ್’ ನಡೆಸುತ್ತಿರುತ್ತಾಳೆ. ಜ್ಯಾಕ್ಲಿನ್ ವಿಕ್ರಾಂತ್ […]
ಶೆರ್ಲಿನ್ ಆರೋಪ – ಶಿಲ್ಪಾ ಶೆಟ್ಟಿಗೆ ಆಘಾತ
ಅಶ್ಲೀಲ ಚಿತ್ರಗಳ ನಿರ್ಮಾಣ ಹಾಗೂ ಮೊಬೈಲ್ ಅಪ್ಲಿಕೇಷನ್ ಮೂಲಕ ಪ್ರಸಾರ ಆರೋಪದಡಿ ಬಂಧನಕ್ಕೊಳಗಾಗಿರುವ ಉದ್ಯಮಿ ಹಾಗೂ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ರಾಸಲೀಲೆಗಳು ಒಂದೊಂದಾಗಿ ಬಯಲಾಗುತ್ತಿವೆ. ನ್ಯಾಯಾಂಗ ಬಂಧನದಲ್ಲಿರುವ ಕುಂದ್ರಾ ಬಗ್ಗೆ ದಿನಕ್ಕೊಂದರಂತೆ ಸ್ಫೋಟಕ ಸತ್ಯಗಳು ಹೊರಬೀಳುತ್ತಿವೆ. ಆರೋಪಿ ರಾಜ್ ಕುಂದ್ರಾ ವಿರುದ್ಧ ನಟಿ ಶೆರ್ಲಿನ್ ಚೋಪ್ರಾ ಗಂಭೀರ ಆರೋಪಗಳನ್ನು ಮಾಡುತ್ತಿದ್ದಾರೆ. ಕಳೆದ ಏಪ್ರಿಲ್ ನಲ್ಲೇ ಕುಂದ್ರಾ ವಿರುದ್ಧ ಶೆರ್ಲಿನ್ ಚೋಪ್ರಾ ದೂರು ನೀಡಿದ್ದರು. ಆ ದೂರಿನಲ್ಲಿ ರಾಜ್ ಕುಂದ್ರಾ ಅಸಭ್ಯವಾಗಿ ವರ್ತಿಸಿದ್ದ ಬಗ್ಗೆ ಉಲ್ಲೇಖಿಸಿದ್ದರು. […]
ಒಳಗೊಂದು ಹೊರಗೊಂದು!
ಮೇಲ್ನೋಟಕ್ಕೆ ಯಾರನ್ನೂ ಜಡ್ಜ್ ಮಾಡಲು ಸಾಧ್ಯವಿಲ್ಲ. ನೋಡಲು ಸಾಚಾಗಳಂತೆ ಕಾಣುವವರು ಒಳಗೆ ಖರ್ನಾಕ್ ಕಳಾಗಿರುತ್ತಾರೆ. ಆಂತರ್ಯದಲ್ಲಿ ಸಭ್ಯರೂ, ಮುಗ್ದರೂ ಆಗಿರುವವರು ಹೊರಜಗತ್ತಿಗೆ ಬೇರೆಯದ್ದೇ ರೀತಿಯಲ್ಲಿ ಪ್ರೊಜೆಕ್ಟ್ ಆಗಿರುತ್ತಾರೆ ಅನ್ನೋದು ಈಗ ಬಿಗ್ ಬಾಸ್ ಮೂಲಕವೂ ಜಾಹೀರಾಗುತ್ತಿದೆ. ಈ ಸಲದ ಬಿಗ್ ಬಾಸ್ ಕುರಿತು ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಾಗತೊಡಗಿದೆ. ಕೊರೋನಾ ಲಾಕ್ ಡೌನ್ ಕಾರಣಕ್ಕೆ ಹಠಾತ್ ಬ್ರೇಕ್ ನೀಡಿದಾಗ ʻಬಿಗ್ ಬಾಸ್ ಕತೆ ಮುಗೀತುʼ ಅಂತಲೇ ಎಲ್ಲರೂ ಭಾವಿಸಿದ್ದರು. ಆದರೆ ಸುದೀರ್ಘ ಬ್ರೇಕ್ ನಂತರ ಮತ್ತೆ ಬಿಗ್ […]
ವಸಿಷ್ಠ ವರ್ಚಸ್ಸು ಹೆಚ್ಚಿಸಿದ ನಾರಪ್ಪ
ಹ್ಯಾಟ್ರಿಕ್ ಹೀರೋ ಶಿವಣ್ಣ ಕೂಡಾ ವಸಿಷ್ಠರಿಗೆ ಕರೆ ಮಾಡಿ ʻಸಿನಿಮಾ ನೋಡಿದೆ. ಅದ್ಭುತವಾಗಿ ನಟಿಸಿದ್ದೀರಿʼ ಎಂದು ಹೊಗಳಿದ್ದಾರೆ. ಶಿವರಾಜ್ ಕುಮಾರ್ ಮೊದಲಿನಿಂದಲೂ ಹೀಗೆ. ತಮಗೆ ಇಷ್ಟವಾದ್ದನ್ನು ನೇರವಾಗಿ ಹೊಗಳುವ ಗುಣ ಅವರದ್ದು ವಸಿಷ್ಠ ಎನ್ನುವ ಅಜಾನುಬಾಹುವಿನ ಮೈಕಟ್ಟು, ಬೇಸ್ ವಾಯ್ಸು ಕಂಡಾಗಲೇ ಈ ಯುವಕ ಭಾರತೀಯ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರುತ್ತಾರೆ ಅನ್ನೋದು ಗೊತ್ತಾಗಿತ್ತು. ರಾಜಾ ಹುಲಿ, ದುದ್ರತಾಂಡವ ಮುಂತಾದ ಸಿನಿಮಾಗಳಲ್ಲಿ ವಸಿಷ್ಠ ನಟಿಸಿದ್ದು ಕ್ಯಾರೆಕ್ಟರ್ ರೋಲುಗಳಲ್ಲಿ. ಆ ನಂತರ ಅಲೋನ್ ಸಿನಿಮಾದಲ್ಲಿ ವಸಿಷ್ಠ ಹೀರೋ ಕೂಡಾ ಆದರು. […]
ಹದಿನೆಂಟು ಸಿನಿಮಾ ಕೊಟ್ಟ ನಿರ್ದೇಶಕನ ನೋವು!
ಈವಾಗೆಲ್ಲಾ ಒಂದು ಸಿನಿಮಾ ಮುಗಿಸಿ ಇನ್ನೊಂದು ಸಿನಿಮಾ ಶುರುವಾಗುವ ಹೊತ್ತಿಗೆ ಡೈರೆಕ್ಟರ್ಗಳು ವಿಶ್ವವಿಖ್ಯಾತಿ ಪಡೆಯುವ ಬಯಕೆ ಹೊಂದಿರುತ್ತಾರೆ. ಆದರೆ ಇವರು ಹಾಗಲ್ಲ. ಇವರೇ ಬೇರೆ; ಇವರು ಸಿನಿಮಾ ಮಾಡೋ ಸ್ಟೈಲೇ ಬೇರೆ!! ಬಿ.ಆರ್. ಕೇಶವ ಹೆಸರಿನ ನಿರ್ದೇಶಕರೊಬ್ಬರು ಕನ್ನಡ ಚಿತ್ರರಂಗದಲ್ಲಿದ್ದಾರೆ. ತರಾತುರಿಯಲ್ಲಿ ಎಣಿಸಿದರೂ ಇವರ ನಿರ್ದೇಶನದ ಹದಿನೆಂಟು ಸಿನಿಮಾಗಳು ಸಿಗುತ್ತವೆ. ಲವ್ ಇನ್ ನೇಪಾಳ್, ನರಹಂತಕ, ಪುಟ್ಟಿ, Crime Story, ನನ್ ಹೆಂಡ್ತಿ ಕೊಲೆ, ಭೂಗತ, ಅಪಹರಣ, ಸಿಂಗಾಪುರದಲ್ಲಿ ಶಂಭುಲಿಂಗ, ಶೋಧ, ನರಕ, ಅನುಬಂಧ… ಹೀಗೆ ತಾವು […]
EXCLUSIVE ವಿವರ ಇಲ್ಲಿದೆ….!
ಸಿನಿಮಾ ವಿಚಾರವಾಗಿ ಪರಿಚಯಗೊಂಡಳು, ನಂತರ ರಿಯಲ್ ಎಸ್ಟೇಟು ಮಾಡ್ತೀನಿ ಅಂತೆಲ್ಲಾ ಹೇಳಿ ವಂಚಿಸಿದಳು ಅನ್ನೋದು ನಾಗವರ್ಧನ್ ಆರೋಪ. ಅಸಲಿಗೆ ಈ ಇಬ್ಬರ ಹಿನ್ನೆಲೆ ಏನು? ಯಾವ ಕಾರಣಕ್ಕೆ ಒಟ್ಟಿಗೆ ಸೇರಿದ್ದರು? ಈಗ ಉಮಾಪತಿಯನ್ನು ಈ ಹೆಣ್ಣು ಕ್ಯಾಚು ಹಾಕಿದ್ದು ಹೇಗೆ? ಎಂಬಿತ್ಯಾದಿ ವಿವರಗಳು ಎಲ್ಲರನ್ನೂ ಕಾಡುತ್ತಿವ ಪ್ರಶ್ನೆ… ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ. ಚಾಲೆಂಜಿಂಗ್ ದರ್ಶನ್ರಂಥಾ ಟಾಪ್ ಹೀರೋ, ಹಣವಂತ ನಿರ್ಮಾಪಕ ಉಮಾಪತಿ, ದರ್ಶನ್ ಸುತ್ತಲಿನ ಸ್ನೇಹಿತರು – ಹೀಗೆ ಎಲ್ಲರ ನಡುವೆ ಸೃಷ್ಟಿಯಾದ ಗೊಂದಲ […]
ವಿಷ್ಣು-ದರ್ಶನ್ ಚಿತ್ರ ಬರೆಯೋದೆಂದರೆ ಬಲು ಪ್ರೀತಿ…
ಸಿನಿಮಾ ಅನ್ನೋದು ಮಗುವಿದ್ದಂತೆ. ಅದರ ಹುಟ್ಟು, ಬೆಳವಣಿಗೆ, ಬಿಡುಗಡೆ ಎಲ್ಲವೂ ಹೆಚ್ಚುಕಮ್ಮಿ ಅದೇ ಪ್ರೋಸೆಸ್ಸು. ಕಥೆಯ ರೂಪದಲ್ಲಿ ಗರ್ಭಕಟ್ಟಿ, ಹಂತ ಹಂತವಾಗಿ ವಿಕಸನಗೊಂಡು, ಹೊರಬಂದಿರುತ್ತದೆ. ಈ ಹಂತದಲ್ಲಿ ಹಲವು ಪ್ರತಿಭಾವಂತರು ತಮ್ಮತಮ್ಮ ಕೆಲಸ ಮಾಡಿರುತ್ತಾರೆ. ಚಿತ್ರೀಕರಣಗೊಂಡ ಸಿನಿಮಾದ ಸರಕೆಲ್ಲವೂ ಅಂತಿಮವಾಗಿ ಬಂದು ತಲುಪುವುದು ಎಡಿಟರ್ ಟೇಬಲ್ಲಿಗೆ. ನಿರ್ದೇಶಕರ ಕಲ್ಪನೆ, ಛಾಯಾಗ್ರಾಹಕರ ಕ್ರಿಯಾಶೀಲತೆಯೆಲ್ಲಾ ಸೇರಿ ರೂಪುಗೊಂಡ ರಾಶಿರಾಶಿ ಫೋಟೇಜು ಕಲಸಿಕೊಂಡು ಬಿದ್ದಿರುತ್ತದೆ. ಅದನ್ನೆಲ್ಲಾ ಒಪ್ಪವಾಗಿ ಜೋಡಿಸಿ, ಬೇಕಾದ್ದಷ್ಟನ್ನು ಮಾತ್ರ ಉಳಿಸಿಕೊಂಡು, ನಿರ್ದಿಷ್ಟ ಅವಧಿಗೆ ಕೂರಿಸುವುದಿದೆಯಲ್ಲಾ? ನಿಜಕ್ಕೂ ತ್ರಾಸದ ಕೆಲಸವದು. […]
ಕನ್ನಡಿಗ ದಯಾನಂದ್ ತೆಲುಗಿಗೆ…
ಕನ್ನಡ ಚಿತ್ರರಂಗದಲ್ಲಿ ಉದಯಿಸಿರುವ ಅಪರೂಪದ ಕಥೆಗಾರ ಟಿ.ಕೆ. ದಯಾನಂದ. ಪತ್ರಕರ್ತ, ಬರಹಗಾರ ಮತ್ತು ಸಾಮಾಜಿಕ ಕಾರ್ಯಕರ್ತರಾಗಿಯೂ ಗುರುತಿಸಿಕೊಂಡಿದ್ದ ದಯಾನಂದ್ ಗೆ ಮೊದಲಿನಿಂದಲೂ ವಿಪರೀತ ಸಿನಿಮಾ ವ್ಯಾಮೋಹವಿತ್ತು. ಕ್ರಮೇಣ ಅದು ಚಿತ್ರರಂಗದಲ್ಲಿ ದುಡಿಯುವಂತೆ ಮಾಡಿತ್ತು. ಸಾಕಷ್ಟು ಸಿನಿಮಾಗಳ ಡಿಸ್ಕಷನ್ನುಗಳಲ್ಲಿ ಭಾಗಿಯಾಗುತ್ತಿದ್ದ ದಯಾನಂದ್ ʻಬೆಂಕಿ ಪಟ್ಣ ʼದ ಮೂಲಕ ನಿರ್ದೇಶಕರಾದರು. ಬೆಲ್ ಬಾಟಮ್ ಚಿತ್ರ ದಯಾನಂದ್ಗೆ ಕಥೆಗಾರನಾಗಿ ದೊಡ್ಡ ಹೆಸರು ಮತ್ತು ಗೆಲುವು ತಂದುಕೊಟ್ಟಿತು. ಇದೇ ಚಿತ್ರ ಈಗ ದಯಾನಂದ್ ಪರಭಾಷೆಗೆ ಎಂಟ್ರಿ ಕೊಡಲು ಕಾರಣವಾಗಿದೆ. ದಯಾನಂದ್ ಈಗ ತೆಲುಗು […]
ಅಮ್ಮನ ಬಗ್ಗೆ ಮಾತಾಡೋದು ತಪ್ಪಲ್ವಾ ಶೆಟ್ರೇ?
ರಕ್ಷಿತ್ ಶೆಟ್ಟಿ ಜಾಗತಿಕ ಮಟ್ಟದಲ್ಲಿ ಬೆಳೆದು, ಬಾಳಬೇಕಿರುವ ಕಲಾವಿದ. ಪರೋಪಕಾರ, ಸ್ನೇಹಶೀಲ ಗುಣಗಳಿಗೆ ಹೆಸರಾಗಿರುವ ಸಿಂಪಲ್ ಸ್ಟಾರ್ ರಕ್ಷಿತ್ ಈಗ ಸೇಡು ತೀರಿಸಿಕೊಳ್ಳುವ ಮಟ್ಟಕ್ಕೆ ತಲುಪಿದ್ದಾರೆ. ಮಾಧ್ಯಮವೊಂದು ತಮ್ಮನ್ನು ಟೀಕೆ ಮಾಡಿತು ಅನ್ನೋದನ್ನೇ ನೆಪವಾಗಿಟ್ಟುಕೊಂಡು ಸಮರಕ್ಕೆ ಸಜ್ಜಾಗಿದ್ದಾರೆ. ರಕ್ಷಿತ್ ಯಾಕೆ ಹೀಗೆಲ್ಲಾ ಬದಲಾಗಿದ್ದಾರೆ? ಅಸಲಿಗೆ ಇಲ್ಲಿ ತಪ್ಪು ಯಾರದ್ದು ಎನ್ನುವ ವಿಚಾರದ ಕುರಿತ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ…. ರಕ್ಷಿತ್ ಶೆಟ್ಟಿ ಪಬ್ಲಿಕ್ ಟಿವಿ ಮೇಲೆ ಕೆಂಡ ಕಾರುತ್ತಿದ್ದಾರೆ. ʻʻನಿಮ್ಮ ಬಳಿ ಇರುವ ಅಸ್ತ್ರ TRPಗೋಸ್ಕರ ನಡೆಸುತ್ತಿರುವ ಒಂದು […]
ಗೋಲ್ಡನ್ ಸ್ಟಾರ್ ಗಣೇಶ್ ಹೇಳಿದ್ದೇನು?
ಕೊರೋನ ಎರಡನೇ ಅಲೆ ಪೂರ್ತಿ ಮುಗಿದಿಲ್ಲ..ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಗೆ ಇನ್ನೂ ಅವಕಾಶ ಸಿಕ್ಕಿಲ್ಲ. ಆದರೆ ಕೆಲವು ಚಟುವಟಿಕೆಗಳಿಗೆ ಸರ್ಕಾರ ಅನುಮತಿ ನೀಡಿದೆ. ಈಗ ಕನ್ನಡ ಚಿತ್ರರಂಗದ ಕಾರ್ಯಚಟುವಟಿಕೆ ನಿಧಾನವಾಗಿ ಆರಂಭವಾಗಿದೆ. ತಾರಾಜೋಡಿ ದಿಗಂತ್ – ಐಂದ್ರಿತಾ ರೇ ಬಹಳವರ್ಷಗಳ ನಂತರ ನಾಯಕ – ನಾಯಕಿಯಾಗಿ ನಟಿಸಿರುವ “ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ” ಚಿತ್ರದ ಲಿರಿಕಲ್ ಸಾಂಗ್ ಬಿಡುಗಡೆಯಾಗಿದೆ. ಗೋಲ್ಡನ್ ಸ್ಟಾರ್ ಗಣೇಶ್ ಈ ಲಿರಿಕಲ್ ಸಾಂಗ್ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಕಳೆದ ಒಂದೂವರೆ ವರ್ಷಗಳಿಂದ ಕೊರೋನ ಕಾರಣದಿಂದ […]