ಒಂದು ಎಳೆ ಕೂದಲು ಕೂಡಾ ಹಾವಾಗಿ ಸುತ್ತಿಕೊಳ್ಳಬಹುದು!
ಈ ಇಬ್ಬರು ಕೇಡಿ ಹೆಂಗಸರು ಕನ್ನಡ ಚಿತ್ರರಂಗದ ಹೆಸರು ಕೆಡಿಸಲು ಅದೆಲ್ಲಿಂದ ಬಂದು ವಕ್ಕರಿಸಿಕೊಂಡರೋ? ಕಂಡಕಂಡವರಿಗೆಲ್ಲಾ ಖೆಡ್ಡಾ ತೋಡಿ ತಮ್ಮ ಬಲೆಗೆ ಕೆಡವಿಕೊಂಡಿದ್ದೇ ಈ ಇಬ್ಬರ ಟ್ಯಾಲೆಂಟು-ಸಾಧನೆ. ಅದು ಬಿಟ್ಟರೆ ಸಿನಿಮಾ, ಕ್ಯಾಮೆರಾ ಮುಂದೆ ಈ ಚೆಂಗಲುಗಳು ನಟಿಸಿದ್ದು ಅಷ್ಟಕ್ಕಷ್ಟೇ. ಅದೆಷ್ಟು ಮನೆ ಹಾಳು ಮಾಡಿದ್ದರೋ? ಯಾರ ಕಣ್ಣೀರು ಶಾಪವಾಗಿ ಕಾಡುತ್ತಿದೆಯೋ? ಗೊತ್ತಿಲ್ಲ. ಒಟ್ಟಾರೆ, ಈ ರಾಗಿಣಿ ಮತ್ತು ಸಂಜನಾ ಎಂಬಿಬ್ಬರು 420 ಲೇಡೀಸ್ ಗೆ ನಸೀಬು ಅನ್ನೋದು ಬಿಟ್ಟೂ ಬಿಡದೆ ಅಟ್ಟಾಡಿಸಿ ಕಾಡಿಸುತ್ತಿದೆ! ಹೋಲಿ ಎನ್ನುವ […]
ಪಾವಗಡ ಮಂಜು ಕೈಕೊಟ್ಟಿದ್ದು ಯಾರಿಗೆ?
ಬಿಗ್ ಬಾಸ್ ಗೆದ್ದು ಬಂದವರು ಯಾಕೆ ದೇಶ ಗೆದ್ದು ಬಂದವರಂತೆ ಬೀಗುತ್ತಾರೋ ಗೊತ್ತಿಲ್ಲ. ಅದ್ಯಾವುದೋ ತಲೆಕೆಟ್ಟ ರಿಯಾಲಿಟಿ ಶೋಗೆ ಹೋಗಿಬಂದಾಕ್ಷಣ ತಲೆ ನಿಲ್ಲದವರಂತೆ ವರ್ತಿಸಿಬಿಡುತ್ತಾರೆ. ಒಂದಷ್ಟು ಜನಪ್ರಿಯತೆ, ಕೈ ತುಂಬಾ ಕಾಸು ಸಿಕ್ಕಿಬಿಟ್ಟರೆ ಹಳೆಯದನ್ನೆಲ್ಲಾ ಮರೆತುಬಿಡೋದಾ? ಮಂಜು ಪಾವಗಡ ಎನ್ನುವ ಹುಡುಗನ ವರಸೆ ಕಂಡು ಕೆಲವರು ಹೀಗೆ ಪ್ರಶ್ನಿಸುತ್ತಿದ್ದಾರೆ. ಮಂಜ ಮೊದಲಿಂದಲೂ ಧಿಮಾಕು ಮಾಡಿಕೊಂಡು ಬಂದಿದ್ದರೆ ಬಹುಶಃ ಯಾರೂ ಹೀಗೆ ಕೇಳುತ್ತಿರಲಿಲ್ಲವೇನೋ? ತೀರಾ ಕಷ್ಟದ ಬದುಕನ್ನು ಕಂಡು, ಪಾವಗಡದಂತಾ ಪ್ರದೇಶದಿಂದ ಬಂದು, ರಂಗಭೂಮಿ, ಕಿರುತೆರೆ, ರಿಯಾಲಿಟಿ ಶೋಗಳಲ್ಲಿ […]
ಹ್ಯಾಟ್ರಿಕ್ ಹೀರೋ ಇಂಥ ಪಾತ್ರದಲ್ಲಿ ಇದುವರೆಗೂ ಕಾಣಿಸಿಲ್ಲ…!
ತೀರಾ ಸಣ್ಣ ವಯಸ್ಸಿಗೇ ನಿರ್ದೇಶಕ ಅನ್ನಿಸಿಕೊಂಡವರು ಲೋಹಿತ್. ಮಮ್ಮಿ ಮತ್ತು ದೇವಕಿ ಎನ್ನುವ ಎರಡು ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಚುರುಕು ಸ್ವಭಾವ, ಲವಲವಿಕೆ, ಕ್ರಿಯಾಶೀಲತೆ, ಸ್ನೇಹಶೀಲ ಗುಣದಿಂದ ಸಿನಿಮಾರಂಗದ ಎಲ್ಲರಿಗೂ ಪರಿಚಯವಿರುವ ಲೋಹಿತ್ ಈಗ ದೊಡ್ಡ ಆಟಕ್ಕೆ ರೆಡಿಯಾಗಿದ್ದಾರೆ! ಕನ್ನಡದಲ್ಲಿ ನಿರ್ದೇಶಕರಾಗಿ ಬರುವ ಯಾರಿಗೇ ಆದರೂ ಒಂದು ಕನಸಿರುತ್ತದೆ. ನೀವು ಯಾರ ಜೊತೆ ಸಿನಿಮಾ ಮಾಡಬೇಕು ಅನ್ನುತ್ತಿದ್ದಂತೇ ʻಶಿವಣ್ಣನ ಜೊತೆಗೆ ಕೆಲಸ ಮಾಡುವ ಅವಕಾಶ ಸಿಕ್ಕರೆ ಸಾಕುʼ ಅನ್ನುತ್ತಾರೆ. ಆದರೆ ಸ್ವತಃ […]
ಸತ್ತವರ ಸೆಲ್ಫಿ!
ನೂರೆಂಟು ಸಮಸ್ಯೆಗಳು, ಕೆಲಸದ ಒತ್ತಡಗಳಿಂದ ಹೊರಬರಲು ಪ್ರವಾಸ, ಟ್ರಕ್ಕಿಂಗುಗಳು ಮನರಂಜನೆ ನೀಡುತ್ತವೆ. ಆದರೆ, ಮೋಜು-ಮಸ್ತಿಯ ಗುಂಗಿನಲ್ಲಿ ಎಷ್ಟೋ ಜನ ಮಿತಿಮೀರಿ ವರ್ತಿಸಿ ಪ್ರಾಣಕ್ಕೇ ಆಪತ್ತು ತಂದುಕೊಳ್ಳುತ್ತಾರೆ. ಇತ್ತೀಚೆಗಂತೂ ಕೈಗೆ ಮೊಬೈಲು ಬಂದಮೇಲೆ ಸಿಕ್ಕಸಿಕ್ಕಲ್ಲೆಲ್ಲಾ ಸೆಲ್ಫಿ ತೆಗೆದುಕೊಳ್ಳುವ ಹುಚ್ಚಾಟ ಬೇರೆ ಈ ಜನಕ್ಕೆ. ಹರಿಯೋ ನೀರು ಕಂಡರೆ ಕೆಲವರಂತೂ ಹುಚ್ಚರಂತಾಡಿಬಿಡುತ್ತಾರೆ. ಧುಮ್ಮಿಕ್ಕುವ ಜಲಪಾತಗಳ ಬಳಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪ್ರಪಾತಕ್ಕೆ ಬಿದ್ದು ಪ್ರಾಣ ಕಳೆದುಕೊಂಡವರೂ ಇದ್ದಾರೆ. ಒಬ್ಬರು ಕಾಲುಜಾರಿ ಬಿದ್ದು, ಉಳಿದವರನ್ನೂ ಅಪೋಷನ ತೆಗೆದುಕೊಂಡ ಸಾಕಷ್ಟು ನಿದರ್ಶನಗಳಿವೆ. -ಇಂಥದ್ದೇ […]
ಶಿಖರದ ಮೇಲೆ ಡಿ ಬಾಸ್ ಪತಾಕೆ!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕೈ ಹಿಡಿದು ಸಾಗುವ ಅಭಿಮಾನಿಗಳು ಸಾಗರದೋಪಾದಿಯಲ್ಲಿ ನಡೆದು ಹೋಗಿ ಶಿಖರದ ಮೇಲೆ ʻಡಿ ಬಾಸ್ʼ ಪತಾಕೆ ಏರಿಸುವ ಆ ಚಿತ್ರ ದರ್ಶನ್ ಅವರ ಸಕಲ ಅಭಿಮಾನಿಗಳ ಮನಮುಟ್ಟಿತ್ತು. ಆ ಚಿತ್ರ ಎಲ್ಲೆಡೆ ವೈರಲ್ ಆಯಿತು. ಕನ್ನಡದ ಸಾಕಷ್ಟು ಪತ್ರಿಕೆಗಳನ್ನು ತಮ್ಮ ಅಕ್ಷರ ವಿನ್ಯಾಸದಿಂದಲೇ ಚೆಂದಗೊಳಿಸಿದವರು ಕಲಾಪ್ರಿಯ ಮಂಜು. ಹಾಯ್ ಬೆಂಗಳೂರ್ ಎನ್ನುವ ‘ಕಪ್ಪುಸುಂದರಿ’ ಎಲ್ಲರನ್ನೂ ಆಕರ್ಷಿಸುತ್ತಿದ್ದರ ಹಿಂದೆ ಮಂಜು ಕೈಚಳಕವಿತ್ತು ಅನ್ನೋದನ್ನು ಗಮನಿಸಬೇಕು. ಮೈಸೂರಿನಲ್ಲೇ ನೆಲೆಸಿರುವ ಮಂಜು ದಸರಾ ಟ್ಯಾಬ್ಲೋಗಳು, ಭಿತ್ತಿ […]
ಭ್ರಮೆ-ಭಯದ ಜೊತೆಗೆ ದೆವ್ವ!
ಇಬ್ಬರು ಹುಡುಗರು, ಇಬ್ಬರು ಹುಡುಗಿಯರು. ತುಂಬಾನೇ ಒಳ್ಳೇ ಫ್ರೆಂಡ್ಸು. ಒಬ್ಬರನ್ನು ಬಿಟ್ಟು ಒಬ್ಬರು ಇರೋದಿಲ್ಲ. ಒಬ್ಬೊಬ್ಬರದ್ದೂ ಒಂದೊಂದು ಗುಣ-ಸ್ವಭಾವ. ಒಬ್ಬ ಯಾವ ಹಿನ್ನೆಲೆಯೂ ಇಲ್ಲದ ಅನಾಥ. ಮತ್ತೊಬ್ಬ ಶ್ರೀಮಂತ, ಕೋಪಿಷ್ಟ. ಹುಡುಗಿಯರಲ್ಲೊಬ್ಬಳು ಮಹಾನ್ ಹೆದರುಪುಕ್ಲಿ. ಭಯ ಅನ್ನೋದು ಈಕೆಯನ್ನು ಭ್ರಮೆಯ ರೂಪದಲ್ಲಿ ಕಾಡುತ್ತಿರುತ್ತೆ. ಯಾರಿಗೂ ಕಾಣದ ದೆವ್ವಗಳು ಈಕೆಯ ಕಣ್ಣ ಮುಂದೆ ಬಂದು ನಿಲ್ಲಬಲ್ಲವು. ಈ ನಾಲ್ಕೂ ಜನ ಅದೊಮ್ಮೆ ಪ್ರವಾಸಕ್ಕೆಂದು ಹೊರಟಿರುತ್ತಾರೆ. ಕಾರು ದಡಕ್ಕಂತಾ ನಿಲ್ಲುತ್ತದೆ. ಅದು ದಟ್ಟ ಕಾಡಿನ ನಟ್ಟನಡುವಿನ ರಸ್ತೆ. ಅಲ್ಲೊಂದು ಮೈಲಿಗಲ್ಲು. […]
ಅಬ್ಬರಿಸುತ್ತಿದೆ ಅಂಜನ್ ಟ್ರೈಲರ್!
ಕೊರೋನಾ ಸೃಷ್ಟಿಸಿರುವ ಭಯಾನಕ ವಾತಾವರಣದ ನಡುವೆಯೂ ಹೊಸಬರು ಸಿನಿಮಾ ರಂಗಕ್ಕೆ ಬರುತ್ತಿರೋದು ಸಮಾಧಾನದ ವಿಚಾರ. ಬಹುತೇಕ ಹೊಸಬರು ಪ್ರತಿಭೆಗಳ ’ಅಂಜನ್’ ಚಿತ್ರದ ಎರಡು ಟ್ರೈಲರ್ಗಳ ಅನಾವರಣ ಕಾರ್ಯಕ್ರಮವು ಡಾ.ಸಿ.ಅಶ್ವಥ್ ಕಲಾಮಂದಿರದಲ್ಲಿ ಅದ್ದೂರಿಯಾಗಿ ನಡೆಯಿತು. ವಿಧಾನ ಪರಿಷತ್ ಸದಸ್ಯ ಅಶ್ವಥ್ನಾರಾಯಣ್ ಮೊದಲನೇ ಟ್ರೈಲರ್ಗೆ ಚಾಲನೆ ನೀಡಿದರು. ನಂತರ ಮಾತನಾಡುತ್ತಾ ತುಣುಕುಗಳನ್ನು ನೋಡಿದರೆ ಚಿತ್ರ ನೋಡಬೇಕು ಅನಿಸುತ್ತದೆ. ಚಿತ್ರವು ಎಲ್ಲರ ಮನಸ್ಸನ್ನು ಗೆಲ್ಲಲಿ ಎಂದು ಶುಭಹಾರೈಸಿದರು. ಪ್ರಾರಂಭದಲ್ಲಿ ಹಳ್ಳಿ, ನಂತರ ಸಿಟಿಗೆ ಕತೆಯು ತೆಗೆದುಕೊಂಡು ಹೋಗುತ್ತದೆ. ಅಂಗವಿಕಲ, ಅಣ್ಣ ತಂಗಿ […]
ಅಭಿಮಾನಿಗಳಿಗಷ್ಟೇ ಸೀಮಿತವಾಯಿತಾ ಸಂಭ್ರಮ?
ದರ್ಶನ್ ಮೊದಲಿನಿಂದಲೂ ಮಾಧ್ಯಮದವರ ಜೊತೆಗೆ ಲವ್ ಅಂಡ್ ಹೇಟ್ ಸಂಬಧವನ್ನೇ ಚಾಲ್ತಿಯಲ್ಲಿಟ್ಟುಕೊಂಡಿದ್ದಾರೆ. ಇಲ್ಲಿ ಯಾರೋ ಒಬ್ಬರದ್ದು ಸರಿ, ಇನ್ನೊಬ್ಬರದ್ದು ತಪ್ಪು ಅಂತಾ ಖಡಾಖಂಡಿತವಾಗಿ ಹೇಳಿಬಿಡಲು ಸಾಧ್ಯವಿಲ್ಲ. ನಿನ್ನೆ ಮೊನ್ನೆಯ ತನಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕುಂತರೂ, ನಿಂತರೂ ಮೀಡಿಯಾಗಳಲ್ಲಿ ಸುದ್ದಿಯಾಗುತ್ತಿತ್ತು. ಇಂಡಿಯಾ ಲೆವೆಲ್ಲಿನಲ್ಲಿ ರಜನಿಕಾಂತ್ ರನ್ನು ಸುಮ್ಮನೇ ಪರದೆ ಮೇಲೆ ತೋರಿಸಿದರೂ ಟಿಆರ್ಪಿ ರೈಸ್ ಆಗತ್ತೆ ಅನ್ನೋದು ಸುದ್ದಿ ಸಂಸ್ಥೆಗಳ ನಂಬಿಕೆ. ಅದೇ ರೀತಿ ಕರ್ನಾಟಕದಲ್ಲಿ ದರ್ಶನ್ ಅತ್ಯುತ್ತಮ ಟಿಆರ್ಪಿ ಮೆಟೀರಿಯಲ್ಲು. ಅದು ಸ್ವತಃ ದರ್ಶನ್ʼಗೂ ಗೊತ್ತಿರುವ […]
ದೂದ್ ಪೇಡ ಜನಕ್ಕೆ ಇಷ್ಟವಾಗಿರೋದೇ ಈ ಕಾರಣಕ್ಕೆ!
ದೂದ್ ಪೇಡ ದಿಗಂತ್ ಜನಕ್ಕೆ ಇಷ್ಟವಾಗಿರೋದೇ ಈ ಕಾರಣಕ್ಕೆ! ಟೈಮಿಗೆ ಸರಿಯಾಗಿ ಕೈಗೆ ಸಿಗೋದಿಕಲ್ಲ ಎಂಬಿತ್ಯಾದಿ ಹಳೆಯ ಆರೋಪಗಳನ್ನು ಹೊರತುಪಡಿಸಿದರೆ, ದಿಗಂತ್ ಅಪ್ಪಟ ಕಲಾವಿದ. ಯಾವ ಪಾತ್ರ ಕೊಟ್ಟರೂ ಅದರಲ್ಲಿ ಇನ್ವಾಲ್ವ್ ಆಗಿಬಿಡುತ್ತಾರೆ. ಮೊನ್ನೆ ದಿನ ವಿಶ್ವ ಎಡಚರ ದಿನವಿತ್ತಲ್ಲಾ? ಅವತ್ತು ʻ ಎಡಗೈಯೇ ಅಪಘಾತಕ್ಕೆ ಕಾರಣʼ ಎನ್ನುವ ಟೈಟಲ್ಲು ಅನಾವರಣಗೊಂಡು, ಫಸ್ಟ್ ಲುಕ್ ಪ್ರೋಮೋ ಕೂಡಾ ಹೊರಬಂದಿತ್ತು. ಈಗದು ಸಿಕ್ಕಾಪಟ್ಟೆ ವೈರಲ್ ಆಗಿದೆ. ʻಜನ ನನ್ನ ಜನ ಲೊಡ್ಯ, ಲೆಫ್ಟಿ, ಲೊಡ್ಡೇಶ್, ಸೌತ್ʼಪ ಸಮ್ ಟೈಮ್ಸ್ […]
ದೇವರ ಹೆಸರಿನಲ್ಲಿ ಪ್ರಮಾಣ…
ಸದ್ಯಕ್ಕೆ ಎಲ್ಲರ ಲೆಕ್ಕಾಚಾರಗಳು ಹಳಿ ತಪ್ಪಿ ಹೋಗಿದೆ! ಕೊರೋನ ಸಂದಿಗ್ಧತೆಗೆ ಕಂಗೆಟ್ಟಂತಿರುವ ಚಿತ್ರರಂಗದ ಭವಿಷ್ಯದ ಬಗೆಗಿನ ಅತಂತ್ರ ಯೋಚನೆಯಲ್ಲಿ ದಿನಗಳು ಕಳೆದುಹೋಗುತ್ತಿದೆ. ಅಲೆಗಳ ಮೇಲೆ ಅಲೆ ಅಪ್ಪಳಿಸುವ ಭೀತಿಯಲ್ಲೇ ಈ ವರ್ಷವೂ ಮುಗಿದು ಹೋಗುವ ಚಿಂತೆ ಕಾಡುತ್ತಿದೆ. ಅಸಲಿಗೆ ಯಾರೆಂದರೆ ಯಾರೂ ಧೈರ್ಯದಿಂದಿಲ್ಲ. ಸಾಲು-ಸಾಲು ಸಿನಿಮಾಗಳು ಬಿಡುಗಡೆಯಾಗದೆ ಡಬ್ಬಾದಲ್ಲೇ ಜಖಂ ಆಗಿದೆ. ಅದೆಷ್ಟೋ ನಿಂತು ಹೋದ ಚಿತ್ರಗಳು ಪುನರ್ ಪ್ರಾರಂಭವಾಗುವ ಸೂಚನೆಯೇ ಕಾಣುತ್ತಿಲ್ಲ. ಅಂತದ್ದರಲ್ಲಿ ಇಲ್ಲೊಂದು ಹೊಸ ಹುಡುಗರ ತಂಡ ದೇವರ ಹೆಸರಲ್ಲಿ ಪ್ರಮಾಣ ಮಾಡಲು ಹೊರಟು […]