ಈ ಚಿಕ್ಕ ಸಿನಿಮಾದಲ್ಲಿದೆ ದೊಡ್ಡ ವಿಷಯ!
ಕನ್ನಡದ ಚಿತ್ರರಂಗ ಇನ್ನೂ ಪುರುಷಪ್ರಧಾನ ವ್ಯವಸ್ಥೆಯಲ್ಲಿ ಸಿಕ್ಕಿಕೊಂಡಿದೆ. ಅಪ್ಪನ ಆಸೆ ಈಡೇರಿಸಲು ಮಗ ಮುಂದೆ ನಿಲ್ಲೋ ಕತೆಗಳಿಲ್ಲಿ ಮಾಮೂಲು. ಆದರೆ ಅದಕ್ಕೆ ತದ್ವಿರುದ್ದವಾದ ಕತೆಯ ಸಿನಿಮಾವೊಂದು ತೆರೆಗೆ ಬಂದಿದೆ. ಅದು ಜೂಲಿಯೆಟ್೨. ಯಾವುದೋ ಕಾಲದಲ್ಲಿ ಅಪ್ಪ ಬಿಟ್ಟುಬಂದ ಊರಿನ ದಾರಿಯಲ್ಲಿ ಸಾಗುವ ಹೆಣ್ಣುಮಗಳು. ಅದಕ್ಕೆ ಕಾರಣ ಅಪ್ಪನಿಗೆ ಕೊಟ್ಟ ಮಾತು. ಅನಿರೀಕ್ಷಿತವಾಗಿ ಸಾವನ್ನಪ್ಪುವ ಅಪ್ಪ ಉಸಿರು ನಿಲ್ಲಿಸುವ ಮುನ್ನ ಮಗಳಿಗೆ ಒಂದು ಟಾಸ್ಕ್ ಕೊಟ್ಟಿರುತ್ತಾರೆ. ಅದನ್ನು ಈಡೇರಿಸಲು ಈಕೆ ಅಪ್ಪನ ಊರಿಗೆ ಹೋಗುತ್ತಾಳೆ. ಅಲ್ಲಿನ ಚಿತ್ರಣ ಸಂಪೂರ್ಣ […]
ಮಾರ್ಟಿನ್ ಹಿಂದೆ ಮಹಿಳಾ ಪಡೆ ಬೇಕಿತ್ತಾ?
ಯಾವ ಊರಿನವರಾದರೇನು? ಯಾವ ದೇಶದವರಾದರೇನು? ಹೆಣ್ಣುಮಕ್ಕಳು ಅಂದಮೇಲೆ ಗೌರವಿಸಲೇಬೇಕು. ತೀರಾ ಅವರನ್ನು ಶೋಕೇಸ್ ಗೊಂಬೆಗಳಂತೆ ಬಳಸಿಕೊಳ್ಳೋದು ಅಮಾನವೀಯ. ನೆನ್ನೆ ದಿನ ಮಾರ್ಟಿನ್ ಸಿನಿಮಾದ ಟೀಸರ್ ರಿಲೀಸ್ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಪ್ಯಾನ್ ಇಂಡಿಯಾ ಪತ್ರಿಕಾಗೋಷ್ಟಿ ಕೂಡಾ ಅದಾಗಿತ್ತು. ಧ್ರುವ ಸರ್ಜಾ ಕೂಡಾ ಈಗ ಇಂಡಿಯಾದ ಟಾಪ್ ಹೀರೋಗಳ ಸಾಲಿಗೆ ಬಂದು ನಿಲ್ಲುವ ಪ್ರಯತ್ನದಲ್ಲಿದ್ದಾರೆ. ಅದು ಬಹುತೇಕ ಯಶಸ್ವಿಯಾಗೋದು ನಿಜ. ಸ್ವಂತ ಸೋದರ ಮಾವ ಅರ್ಜುನ್ ಸರ್ಜಾ ಕತೆ ಕೊಟ್ಟು, ʻಮಾರ್ಟಿನ್ʼಗೆ ಬೆಂಬಲವಾಗಿ ನಿಂತಿದ್ದಾರೆ. ಹಾಗೆ ನೋಡಿದರೆ ಮೂರು ದಶಕಗಳ […]
ಬಣ್ಣ ಬಯಲು ಮಾಡಿದ ಹೀರೋ!
ಗೆಲುವಿಗೆ ನೂರು ಜನ ಅಪ್ಪಂದಿರು, ಸೋಲಿಗೆ ಮಾತ್ರ ಒಬ್ಬನೇ… ಅನ್ನೋ ಮಾತಿದೆಯಲ್ಲಾ ಹಾಗೇ ಚಿತ್ರರಂಗದಲ್ಲಿ ಕೂಡಾ. ಎಲ್ಲವೂ ನಾನೇ, ನನ್ನಿಂದಲೇ ಎನ್ನುವ ಈಗೇ ಬೆಳೆದಿರುತ್ತದೆ. ಎಲ್ಲೆಲ್ಲಿಂದಲೋ ಬಂದವರು ಒಂದು ಕಡೆ ಸೇರಿ ಏನೋ ಸಾಧಿಸುತ್ತಾರೆ. ಅಲ್ಲೀತನಕ ಇದ್ದ ಒಗ್ಗಟ್ಟು ಒಂದೇ ಏಟಿಗೆ ದಿಕ್ಕಾಪಾಲಾಗಿರುತ್ತದೆ. ಅದಾಗಲೇ ಎರಡು ಬಾರಿ ಸೋಲು ಕಂಡ ನಿರ್ದೇಶಕ. ಅವನನ್ನು ಅವಮಾನಿಸುವ ಬೆಳೆದು ನಿಂತ ಹೀರೋಗಳು. ಸೆಟೆದು ನಿಂತವನು ಮಾಡೋದು ಏನೇನೂ ಅಲ್ಲದ, ಯಾವುದೋ ಶಾಲೆಯಲ್ಲಿ ಪಾಠ ಮಾಡುವ ಮೇಷ್ಟ್ರನ್ನು ಕರೆತಂದು ಹೀರೋ ಮಾಡುತ್ತಾನೆ. […]
ಈ ವ್ಯವಸ್ಥೆ ಯಾಕೆ ಬಡವರನ್ನು ಬದುಕೋಕೆ ಬಿಡಲ್ಲ?
ಬುಡಕಟ್ಟು ಜನರ ಬದುಕೇ ಹೀಗಾ? ಒಂದಲ್ಲಾ ಒಂದು ಭಯದಲ್ಲೇ ಇವರು ಬದುಕಬೇಕಾ? ಕಾಡು, ಮೃಗಗಳ ನಡುವೆ ಜೀವಿಸುವ ಈ ಜನ ಅಲ್ಲಿನ ಪಶು, ಪ್ರಾಣಿಗಳಿಗಿಂತಾ ಹೆಚ್ಚು ಭಯಪಡೋದು ಸರ್ಕಾರ ಮತ್ತು ಪೊಲೀಸ್ ಅಧಿಕಾರಿಗಳಿಗೆ. ಯಾವ ಹೊತ್ತಿನಲ್ಲಿ ಬೇಕಾದರೂ ಇವರು ಆದಿವಾಸಿಗಳ ಮಾನ, ಪ್ರಾಣ, ಬದುಕುವ ಹಕ್ಕುಗಳಿಗೆ ಸಂಚಕಾರ ತರಬಹುದು. ʻಗೌಳಿʼ ಎನ್ನುವ ಚಿತ್ರವೊಂದು ಬಿಡುಗಡೆಯಾಗಿದೆ. ಬಹುಕಾಲದ ನಂತರ ಶ್ರೀನಗರ ಕಿಟ್ಟಿ ನಾಯಕನಾಗಿ ಮರುಪ್ರವೇಶಿಸಿರುವ ಸಿನಿಮಾ ಇದು. ತಾನೇ ಕಟ್ಟಿದ ಹಸು, ಮೇಕೆಗಳನ್ನೂ ಕೊಯ್ಯಲು ಕೊಡದ, ಅವುಗಳು ನೀಡುವ […]
ಹೊಂದಿಸಿ ಬರೆಯಿರಿ ನೋಡಿದರೆ ಗೊತ್ತಾಗತ್ತೆ.
ಈ ಗುಳ್ಟು ಹುಡುಗ ನವೀನ್ ಶಂಕರ್ ತಲೆಗೆ ಯಾರಾದರೂ ನಾಲ್ಕು ಮೊಟಕೋರು ಬೇಕಲ್ಲಾ? ವರ್ಷಕ್ಕೆ ನಾಲ್ಕು ಸಿನಿಮಾ ಮಾಡೋಕೆ ಈತನಿಗೇನು ಧಾಡಿ? ಹಾಳಾದೋನು ಒಂದು ಸಿನಿಮಾದಲ್ಲಿ ಕಾಣಿಸಿಕೊಳ್ಳೋಕೆ ಮೂರು ವರ್ಷ ಸತಾಯಿಸುತ್ತಾನೆ…. -ʻಹೊಂದಿಸಿ ಬರೆಯಿರಿʼ ಎನ್ನುವ ಫ್ರೆಷ್ ಸಿನಿಮಾ ನೋಡಿದ ಮೇಲೆ ಯಾರಿಗಾದರೂ ಹೀಗನ್ನಿಸದೇ ಇರೋದಿಲ್ಲ. ಅದರಲ್ಲೂ ನವೀನ್ ಶಂಕರ್ ಬರೋದು ತೀರಾ ಕಡಿಮೆ ಅನ್ನಿಸುವಷ್ಟು ಕಡಿಮೆ ದೃಶ್ಯಗಳಲ್ಲಿ. ಆದರೆ ಇಡೀ ಸಿನಿಮಾವನ್ನು ನುಂಗಿಕೊಳ್ಳುತ್ತಾರೆ. ಬೆಳ್ಳಗೂ ಇಲ್ಲ, ಬಾಡಿ ಬಿಲ್ಡ್ ಮಾಡಿಲ್ಲ, ಬಿಲ್ಡಪ್ಪಂತೂ ಇಲ್ಲವೇ ಇಲ್ಲ ಅನ್ನೋದು […]
ಹಾವಳಿ ಶುರು ಮಾಡಿದ ಗೌಳಿ!
ರಘು ಸಿಂಗಂ ಅವರ ನಿರ್ಮಾಣ ಹಾಗೂ ಸೂರ ಅವರ ನಿರ್ದೇಶನದಲ್ಲಿ ಶ್ರೀನಗರ ಕಿಟ್ಟಿ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ಬಹು ನೀರಿಕ್ಷಿತ ‘ಗೌಳಿ’ ಚಿತ್ರ ಫೆಬ್ರವರಿ ೨೪ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿರುವ ಈ ಚಿತ್ರದ ಟೀಸರ್ ಹಾಗೂ ಪೋಸ್ಟರ್ ಸಿನಿ ಪ್ರೇಮಿಗಳ ಹೃದಯ ಗೆದ್ದಿದೆ. ‘ಗೌಳಿ’ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿ ಜಾಲತಾಣದಲ್ಲಿ ಪ್ರಶಂಸೆ ಗಳಿಸಿದೆ. ಗೌಳಿಗರ ಜನಾಂಗಕ್ಕೆ ಸಂಬಂದಿಸಿದ ಕಥೆ ಒಳಗೊಂಡ ಈ ಸಿನಿಮಾದಲ್ಲಿ ಶಿರಸಿ ಸುತ್ತಮುತ್ತಲಿನ […]
ರಾಣಿಯನ್ನು ರೆಡಿಮಾಡಿಕೊಂಡ ರಾಜ್!
ಅಭಿಶೇಕ್ ಅಂಬರೀಶ್ ಥರದ ಎಳೇ ಹುಡುಗರು, ಹರಿಪ್ರಿಯಾ-ವಸಿಷ್ಠ ಥರದ ಹಿರಿಯರು ಸೇರಿದಂತೆ ಅನೇಕರು ಗೃಹಸ್ಥಾಶ್ರಮಕ್ಕೆ ಕಾಲಿಡುತ್ತಿದ್ದಾರೆ. ನಡುವಯಸ್ಸಿನ ರಾಜ್ ಶೆಟ್ಟಿಯಂಥವರು ಯಾವಾಗ ಮದುವೆಯಾಗುತ್ತಾರೆ? ದಿಢೀರ್ ಅಂತಾ ಚಿತ್ರರಂಗದಲ್ಲಿ ಪ್ರತ್ಯಕ್ಷವಾಗಿ ಅಚ್ಛರಿ ಮೂಡಿಸಿದವರು ರಾಜ್. ಬೋಳು ತಲೆಯ ಚಿತ್ರವಿದ್ದ ಒಂದು ಮೊಟ್ಟೆಯ ಕತೆ ಅನ್ನೋ ಸಿನಿಮಾದ ಪೋಸ್ಟರು ಗೋಡೆಗಳ ಮೇಲೆ ಕಾಣಿಸಿಕೊಂಡಾಗಲೇ ʻಇದ್ಯಾರಪ್ಪಾʼ ಅಂತಾ ಜನ ಆಶ್ಚರ್ಯಗೊಂಡಿದ್ದರು. ಅದೇ ಜನ ಇಷ್ಟ ಪಟ್ಟು ನೋಡಿ ಚಿತ್ರವನ್ನು ಗೆಲ್ಲಿಸಿದರು. ಆ ನಂತರ ರಾಜ್ ತಮ್ಮದೇ ಶೈಲಿಯ ಕೆಲವಾರು ಸಿನಿಮಾಗಳನ್ನು […]
ಈ ಸಲ ಏನು ಮಾಡಿದ್ದಾರೆ ಫಸ್ಟ್ RANK ನರೇಶ್?
ಈ ಹಿಂದೆ ಫಸ್ಟ್ ರ್ಯಾಂಕ್ ರಾಜು ಮತ್ತು ರಾಜು ಕನ್ನಡ ಮೀಡಿಯಂ ಎಂಬೆರಡು ಸಿನಿಮಾಳನ್ನು ನಿರ್ದೇಶಿಸಿದ್ದವರು ನರೇಶ್. ತೀರಾ ಹೊಸಬರನ್ನು ಬಳಸಿಕೊಂಡು ಅತ್ಯುತ್ತಮ ಕಂಟೆಂಟ್ ಕೊಡುವ ತಾಕತ್ತಿರುವ ನಿರ್ದೇಶಕ. ಈ ಸಲ ಸೌತ್ ಇಂಡಿಯನ್ ಹೀರೋ ಎನ್ನುವ ಕಾನ್ಸೆಪ್ಟು ರೆಡಿ ಮಾಡಿಕೊಂಡು ಬಂದಿದ್ದಾರೆ. ಸಿನಿಮಾರಂಗದ ಒಳಸುಳಿಗಳನ್ನು ಬಿಚ್ಚಿಡುವ ಸಾಕಷ್ಟು ಪ್ರಯತ್ನಗಳು ನಡೆದಿವೆ. ಆದರೆ ನರೇಶ್ ಅವರ ʻಸೌತ್ ಇಂಡಿಯನ್ ಹೀರೋʼ ಸಿನಿಮಾದ ಟ್ರೇಲರು ನೋಡಿದರೆ ಹಿಂದನ ಎಲ್ಲದಕ್ಕಿಂತಾ ಭಿನ್ನವಾಗಿರುವ ಸೂಚನೆಗಳಿವೆ. ಏನೇನೂ ಹಿನ್ನೆಲೆ ಇಲ್ಲದೆ ಬಂದು ಸಿನಿಮಾ […]
ಮರೆಯಾದ ಹಾಸ್ಯನಟ ಮೈಲ್ಸಾಮಿ..
ಅದೇನು ದುರಂತವೋ ಗೊತ್ತಿಲ್ಲ. ತಮಿಳಿನ ಹಾಸ್ಯನಟರೆಲ್ಲಾ ಒಬ್ಬರ ಹಿಂದೆ ಒಬ್ಬರು ಕಾಲವಾಗುತ್ತಿದ್ದಾರೆ. ನೆನ್ನೆ ಫೆಬ್ರವರಿ 19ರಂದು ಸುಪ್ರಸಿದ್ದ ಕಾಮಿಡಿ ಕಲಾವಿದ ಮೈಲ್ಸಾಮಿ ಇಹಲೋಕ ತ್ಯಜಿಸಿದ್ದಾರೆ. (57 ವರ್ಷ ವಯಸ್ಸು) ಸತ್ಯಮಂಗಲ ಮೂಲದ ಮೈಲ್ಸಾಮಿ ಬೆಳೆದಿದ್ದೆಲ್ಲಾ ಕೊಯಮತ್ತೂರಿನಲ್ಲಿ. 1984ರಲ್ಲಿ ಬಂದ ದಾವಣಿ ಕನವುಗಳ್ ಸಿನಿಮಾದಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿ ಗುಂಪಿನಲ್ಲಿ ಕಾಣಿಸಿಕೊಂಡಿದ್ದವರು ಮೈಲ್ಸಾಮಿ. ನಂತರ ಪಾಂಡ್ಯರಾಜ ನಿರ್ದೇಶನದ ಕನ್ನಿ ರಾಸಿ ಸಿನಿಮಾದ ದಿನಸಿ ಅಂಗಡಿ ಹುಡುಗನ ಪಾತ್ರ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿತು. ಅದಾಗುತ್ತಿದ್ದಂತೇ ಪ್ರಭು ನಟನೆಯ ಎನ್ ತಂಗಚ್ಚಿ […]
ನಿರ್ದೇಶಕ ಕೆ.ಎಂ.ರಘು ಬೇಸರ….
ಎಲ್ಲ ಸಿನಿಮಾಗಳೂ ಕೆಜಿಎಫ್ಫು, ಕಾಂತಾರಾನೇ ಆಗಲು ಸಾಧ್ಯವಿಲ್ಲ. ಒಂದೊಂದು ಸಿನಿಮಾದಲ್ಲೂ ಒಂದೊಂದು ಬಗೆಯ ಕಂಟೆಂಟ್ ಇರುತ್ತದೆ. ಉತ್ತಮ ಸಿನಿಮಾ ಅನ್ನಿಸಿದಾಗ ಅದನ್ನು ಜನ ಮೆಚ್ಚಿ ನೋಡಿದಾಗಲೇ ಅವು ಹಿಟ್ ಅನ್ನಿಸಿಕೊಳ್ಳೋದು. ಬರುವ ಎಲ್ಲ ಸಿನಿಮಾಗಳೂ ಗುಣಮಟ್ಟ ಹೊಂದಿರೋದಿಲ್ಲ ಅನ್ನೋದೂ ನಿಜ. ಆದರೆ ಅಲ್ಲೊಂದು ಇಲ್ಲೊಂದು ಕ್ವಾಲಿಟಿ ಚಿತ್ರಗಳು ಬಂದಾಗ ಅದನ್ನು ಪ್ರೋತ್ಸಾಹಿಸಬೇಕಿರುವುದು ಬರಿಯ ಪ್ರೇಕ್ಷಕರ ಜವಾಬ್ದಾರಿ ಮಾತ್ರವಲ್ಲ, ಇಂಡಸ್ಟ್ರಿ ಕೂಡಾ ಸಾಥ್ ನೀಡಬೇಕು. ಎಲ್ಲೋ ಕೆಲವು ಸಿನಿಮಾಗಳಿಗೆ ಕಿಚ್ಚ, ರಕ್ಷಿತ್ ಶೆಟ್ಟರ ಥರದವರು ಬಂದು ಕೈ ಹಿಡಿದ […]