ಜನ ಮೆಚ್ಚುವ ಸಿನಿಮಾ ಮಾಡಿ…!
ಲವ್ ಮಾಕ್ಟೇಲ್ ಸಿನಿಮಾ ಬರೋಕೆ ಮುಂಚೆ ಡಾರ್ಲಿಂಗ್ ಕೃಷ್ಣ ಮಾರ್ಕೇಟು ಪ್ರಾಯಶಃ ಪಾತಾಳಕ್ಕೆ ಜಾರಿತ್ತು. ಕೃಷ್ಣ ನಟನೆಯ ಕೆಲವು ಸಿನಿಮಾಗಳು ನಿಜಕ್ಕೂ ವಾಕರಿಕೆ ಹುಟ್ಟಿಸಿದ್ದವು. ಇನ್ನು ಈತನ ಫಿಲ್ಮುಗಳನ್ನು ನೋಡಲು ಸಾಧ್ಯವೇ ಇಲ್ಲ ಎನ್ನುವ ಹಂತ ತಲುಪಿತ್ತು. ದಿಗ್ಗನೆ ಎದ್ದು ಕುಂತ ಕೃಷ್ಣ ಲವ್ ಮಾಕ್ಟೇಲ್ ಎನ್ನುವ ಕ್ಯೂಟ್ ಸಿನಿಮಾವನ್ನು ತೆರೆದಿಟ್ಟರು. ಕೃಷ್ಣ ಬಗೆಗಿದ್ದ ಇಮೇಜನ್ನೇ ಈ ಚಿತ್ರ ಬದಲಿಸಿಬಿಟ್ಟಿತು. ಕನ್ನಡದಲ್ಲಿ ಬಾಕ್ಸಾಫೀಸ್ ಕಲೆಕ್ಷನ್ ಮಾಡುವ ಹೀರೋಗಳ ಸಂಖ್ಯೆ ತೀರಾ ಕಡಿಮೆ. ಲವ್ ಮಾಕ್ಟೇಲ್ ನೋಡಲಿಕ್ಕಾಗಿ ಜನ […]
ಘೋಸ್ಟ್ ಜೊತೆ ಗಣಿ!
ಕನ್ನಡ ಚಿತ್ರರಂಗದಲ್ಲಿ ಮಲ್ಟಿ ಸ್ಟಾರ್ ಸಿನಿಮಾಗಳು ಆಗಾಗ ಅರಳುತ್ತಿರುತ್ತವೆ. ಈ ವಾರ ತೆರೆಗೆ ಬರುತ್ತಿರುವ ಕಬ್ಜ ಸಿನಿಮಾದಲ್ಲೇ ಕನ್ನಡದ ಮೂವರು ಟಾಪ್ ಸ್ಟಾರ್ಗಳಿದ್ದಾರೆ. ಹಾಗೆ ನೋಡಿದರೆ ಕನ್ನಡದಲ್ಲಿ ಅತಿ ಹೆಚ್ಚು ಮಲ್ಟಿ ಸ್ಟಾರ್ ಸಿನಿಮಾ ಮಾಡಿರೋರಲ್ಲಿ ಮುಂಚೂಣಿಯಲ್ಲಿ ನಿಲ್ಲುವುದು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್. ರಮೇಶ್ ಅರವಿಂದ್, ಉಪೇಂದ್ರ, ಜಗ್ಗೇಶ್, ರವಿಚಂದ್ರನ್ ರಿಂದ ಹಿಡಿದು ಸುದೀಪ್, ಶ್ರೀಮುರಳಿ ತನಕ ಕನ್ನಡ ಹಿರಿ, ಕಿರಿಯ ಹೀರೋಗಳೊಂದಿಗೆ ತೆರೆ ಹಂಚಿಕೊಂಡ ಹಿರಿಯ ನಟ ಶಿವಣ್ಣ! ಸದ್ಯ ಗೋಲ್ಡನ್ ಸ್ಟಾರ್ ಗಣೇಶ್ […]
ಹೇಗಿದೆ ಕಬ್ಜ?
ಕಳೆದ ಮೂರು ದಶಕಗಳಲ್ಲಿ ರೌಡಿಸಂ ಕಥಾವಸ್ತುವಿನ ಸಾಕಷ್ಟು ಚಿತ್ರಗಳು ಬಂದಿವೆ. ಆದರೆ ಸ್ವತಂತ್ರ ಬಂದ ನಂತರ ರೌಡಿಸಂ ಹೇಗೆ ಜನ್ಮ ಪಡೆಯಿತು? ಅಂಡರ್ ವರ್ಲ್ಡ್ ಎನ್ನುವ ಕಾನ್ಸೆಪ್ಟು ಹುಟ್ಟಿಕೊಂಡಿದ್ದು ಹೇಗೆ ಅನ್ನೋದನ್ನು ಬಹುಶಃ ಯಾರೂ ಅನಾವರಣಗೊಳಿಸಿರಲಿಲ್ಲ. ಈ ನಿಟ್ಟಿನಲ್ಲಿ ನೋಡಿದರೆ ಈಗ ತೆರೆ ಕಂಡಿರುವ ಕಬ್ಜ ಹೊಸ ಪ್ರಯತ್ನವೊಂದಕ್ಕೆ ಕೈ ಹಾಕಿದೆ; ಅದನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ಗೆದ್ದಿದೆ. ಚಿತ್ರದ ಕಥೆ ಶುರುವಾಗೋದೇ ಸ್ವತಂತ್ರ್ಯಪೂರ್ವದಲ್ಲಿ. ದೇಶಕ್ಕಾಗಿ ಹೋರಾಡಿ ಮಡಿದ ಹುತಾತ್ಮನ ಪತ್ನಿ ತನ್ನಿಬ್ಬರು ಮಕ್ಕಳ ಜೊತೆಗೆ ಬದುಕು ಕಟ್ಟಿಕೊಳ್ಳುತ್ತಾಳೆ. […]
ವಿಜಯನಗರವನ್ನು ಮರುಸೃಷ್ಟಿಸಿದ ಜೂನಿಯರ್
ಗಾಲಿ ಜನಾರ್ಧನರೆಡ್ಡಿ ಮಗ ಕಿರೀಟಿ ನಟಿಸುತ್ತಿರುವ ಜೂನಿಯರ್ ಚಿತ್ರದ ಚಿತ್ರೀಕರಣ ಪ್ಲಾನಿನಂತೇ ಸಾಗುತ್ತಿದೆ. ಈ ಚಿತ್ರಕ್ಕಾಗಿ ಕನ್ನಂಬಾಡಿ ಬಳಿಯ ಚಿಕ್ಕರಾಯಹಳ್ಳಿಯನ್ನು ವಿಜಯನಗರವನ್ನಾಗಿ ಮಾರ್ಪಡಿಸುತ್ತಿದ್ದಾರೆ. ಇಡೀ ಹಳ್ಳಿಯಲ್ಲಿ ಒಮ್ಮೆ ತಿರುಗಿದರೆ, ಯಾವುದು ನಿಜವಾದ ಮನೆ, ಯಾವುದು ಸೆಟ್ ಅಂತಲೇ ಗೊತ್ತಾಗುವುದಿಲ್ಲ. ಆಮಟ್ಟಿಗೆ ಖರ್ಚು ಮಾಡಿ ಹಳೆಯ ಗ್ರಾಮವನ್ನಾಗಿ ಪರಿವರ್ತಿಸಿದ್ದಾರೆ. ಬಾಹುಬಲಿ ಚಿತ್ರಕ್ಕೆ ಕಲಾನಿರ್ದೇಶನ ಮಾಡಿರುವ ಮನು ಜಗಧ್ ಈ ಸಿನಿಮಾಗೂ ಆರ್ಟ್ ಡೈರೆಕ್ಷನ್ ಮಾಡುತ್ತಿದ್ದಾರೆ. ಬರಿಯ ತೊಟ್ಟಿಮನೆ ನಿರ್ಮಾಣಕ್ಕೆ ಏನಿಲ್ಲವೆಂದರೂ ಕೋಟಿ ರುಪಾಯಿ ವ್ಯಯಿಸಿದ್ದಾರೆ. ಈ ಹಳ್ಳಿಯಲ್ಲಿ ಕನ್ನಡ […]
ಕಡೆಗೂ ನ್ಯಾಯಕ್ಕೆ ಜಯ ಸಿಕ್ಕಿತು!
ಇಡೀ ಜಗತ್ತು ಮೊನ್ನೆಮೊನ್ನೆಯಷ್ಟೇ ಮಹಿಳಾ ದಿನಾಚರಣೆಯನ್ನು ಹೆಮ್ಮೆಯಿಂದ ಆಚರಿಸಿದೆ. ಇದೇ ಹೊತ್ತಿನಲ್ಲಿ ಇಲ್ಲೊಬ್ಬ ಹೆಂಗಸು ಮಹಿಳೆಯರ ಕುಲಕ್ಕೇ ಅಪಮಾನ ಎಸಗುವ ಕೆಲಸ ಮಾಡಿ ಛೀಮಾರಿ ಹಾಕಿಸಿಕೊಂಡಿದ್ದಾಳೆ. ಆಕೆಯ ಹೆಸರು ಪ್ರಿಯದರ್ಶಿನಿ ವಿ.ಡಿ. ಈಕೆಯ ಸಹವಾಸ ಮಾಡಿ ಪಡಬಾರದ ಪಾಡು ಪಟ್ಟವರು ರೂಪೇಶ್ ಬಿ.ಎನ್. ಬೆಂಗಳೂರು ಮೂಲದವರು ರೂಪೇಶ್. ಸರಿಸುಮಾರು 2005ರಿಂದ ಆಸ್ಟ್ರೇಲಿಯಾದಲ್ಲಿ ವಾಸ್ತವ್ಯ ಹೂಡಿದ್ದಾರೆ. ಅಲ್ಲಿ ತಮ್ಮದೇ ಆದ ವ್ಯವಹಾರ ಹೊಂದಿರುವ ರೂಪೇಶ್ ಅವರಿಗೆ ಮೊದಲಿನಿಂದಲೂ ಕನ್ನಡ ಚಿತ್ರಗಳೆಂದರೆ ಅಪಾರ ಒಲವು. ಕರ್ನಾಟಕದಲ್ಲಿ ಹೆಸರು ಮಾಡಿದ ಸಿನಿಮಾಗಳನ್ನು […]
ಕುರಿ ಪ್ರತಾಪಿಯ ದೌಲತ್ತು – ಸಿನಿಮಾಗಳಿಗೆ ಆಪತ್ತು!
ಕುರಿ ಪ್ರತಾಪ ಅನ್ನೋ ಹೆಸರಿನ ಕಾಮಿಡಿ ನಟ ಒಬ್ಬ ಇದ್ದಾನಲ್ಲಾ? ಒಂದು ಕಾಲದಲ್ಲಿ ʻಕುರಿಗಳು ಸಾರ್ ಕುರಿಗಳುʼ ಎನ್ನುವ ಪ್ರಾಂಕ್ ಶೋದಿಂದ ಸಿಕ್ಕಾಪಟ್ಟೆ ಫೇಮಸ್ಸಾಗಿದ್ದವನು ಈತ. ಆ ಕಾರ್ಯಕ್ರಮದ ಮೂಲಕವೇ ಒಂದಿಷ್ಟು ಮಂದಿ ಸಿನಿಮಾದವರನ್ನು ಪರಿಚಯ ಮಾಡಿಕೊಂಡು, ಛಾನ್ಸು ಗಿಟ್ಟಿಸಿಕೊಂಡ. ಅದೇ ಹೊತ್ತಿಗೆ ಸಾಧು ಕೋಕಿಲನ ಹಾವಳಿ ಮಿತಿ ಮೀರಿ ಹೋಗಿತ್ತು. ಸಿನಿಮಾವೊಂದರಲ್ಲಿ ನಟಿಸಲು ಈತ ಲಕ್ಷಾಂತರ ರುಪಾಯಿ ಪ್ಯಾಕೇಜ್ ಡೀಲ್ ಮಾಡುತ್ತಿದ್ದರು. ಕಾಸು ಕೊಟ್ಟರೂ ಕೈಗೆ ಸಿಗದೆ ಆಟವಾಡಿಸುತ್ತಿದ್ದರು. ಪೇಮೆಂಟು ಈಸಿಕೊಂಡು ಸೀದಾ ಗೋವಾ, ಮಲೇಶಿಯಾ […]
ದೊಡ್ಮನೆ ಹುಡುಗ ಎದ್ದು ನಿಲ್ಲೋದು ದಿಟ!
ಸಿದ್ದಾರ್ಥ ಸಿನಿಮಾದ ಮೂಲಕ ವಿನಯ್ ರಾಜ್ ಕುಮಾರ್ ಲಾಂಚ್ ಆದಾಗ ಪ್ರೇಕ್ಷಕರು ಮಾತ್ರವಲ್ಲದೆ, ಚಿತ್ರರಂಗದ ವಲಯದಲ್ಲೂ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ಮೊದಲ ಸಿನಿಮಾನೇ ಅಂದುಕೊಂಡಂತೆ ಆಗಲಿಲ್ಲ. ಎರಡನೇದಾದರೂ ಕೈ ಹಿಡಿಯಬಹುದು ಅಂದುಕೊಂಡಿದ್ದರು. ರನ್ ಆಂಟನಿ ಎನ್ನುವ ಸಿನಿಮಾ ವಿನಯ್ ರಾಜ್ ಕುಮಾರ್ ವೃತ್ತಿ ಬದುಕಿಗೆ ಭಯಾನಕ ಏಟು ಕೊಟ್ಟುಬಿಟ್ಟಿತು. ದೊಡ್ಮನೆಯ ಬ್ಯಾನರಿನಲ್ಲಿ ಪಾರ್ವತಮ್ಮ ರಾಜ್ ಕುಮಾರ್ ನಿರ್ಮಾಣದ ಕಡೆಯ ಸಿನಿಮಾವೊಂದು ಈ ಮಟ್ಟದಲ್ಲಿರುತ್ತದೆ ಅಂತಾ ಯಾರೂ ಅಂದಾಜಿಸಿರಲಿಲ್ಲ. ಆ ಚಿತ್ರದ ನಿರ್ದೇಶಕ ರಘುಶಾಸ್ತ್ರಿಯ ಮಾತಿನಲ್ಲಿದ್ದ ನಿಯತ್ತು ಕೃತಿಯಲ್ಲಿರಲಿಲ್ಲ. […]
ಮಾಯಾ ಜಿಂಕೆಯನ್ನು ಹುಡುಕಿಕೊಂಡು ಹೊರಟವರು…
ಬಾಲ್ಯ ಅನ್ನೋದು ಒಟ್ಟಾರೆ ಬದುಕಿನ ತಳಹದಿ. ಆ ಅಡಿಪಾಯ ಒಂಚೂರು ಆಚೀಚೆ ಆದರೂ ಭವಿಷ್ಯವೆನ್ನು ಬಿಲ್ಡಿಂಗು ವಕ್ರವೆದ್ದು ಹೋಗುತ್ತದೆ. ಯಾವುದೇ ವ್ಯಕ್ತಿಯ ಬಾಲ್ಯದ ದಿನಗಳು ಆತನ ಬದುಕನ್ನು ರೂಪಿಸುತ್ತವೆ ಅನ್ನೋದನ್ನು ಬಹುಶಃ ʻಕಡಲ ತೀರದ ಭಾರ್ಗವʼ ಚಿತ್ರ ನಿರೂಪಿಸುತ್ತದೆ. ದೇಹ ಎರಡು ಜೀವ ಒಂದೇ ಎನ್ನುವಂತೆ ಬೆಳೆಯುವ ಇಬ್ಬರು ಸ್ನೇಹಿತರು. ಅವರ ನಡುವೆ ಬರುವ ಮತ್ತೊಂದು ಪಾತ್ರ. ಆ ನಂತರದ ಬೆಳವಣಿಗೆಗಳು, ಬದಲಾಗುವ ಮನಸ್ಥಿತಿ, ಪರಿಸ್ಥಿತಿಗಳು ಮುಂದೆ ನಡೆಯುವ ಏನೆಲ್ಲಾ ಘಟನೆಗಳಿಗೆ ಕಾರಣವಾಗುತ್ತದೆ ಅನ್ನೋದು ಕಡಲ ತೀರದ […]