ಕಾಂತಾರಗೆ ಯಾವಾಗ?
ಅನುರಾಗ್ ಗೌಡ ಬಿ. ಆರ್. 69 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಘೋಷಣೆಯಾಗಿದ್ದು ಆರ್ಹ ಚಿತ್ರಗಳಿಗೆ ಪ್ರಶಸ್ತಿ ದೊರೆಯಲಿಲ್ಲವೆಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ಈ ಮೊದಲು ಮಣಿ ರತ್ನಂ ನಿರ್ದೇಶನದ ತಮಿಳು ಚಿತ್ರ ಪೊನ್ನಿಯನ್ ಸೆಲ್ವನ್ ಮತ್ತು ರಾಜಮೌಳಿ ನಿರ್ದೇಶನದ ತೆಲುಗು ಚಿತ್ರವಾದ RRR ಗಳಲ್ಲಿ ಯಾವುದು ಅತ್ಯುತ್ತಮ ಎಂಬ ಪ್ರಶ್ನೆಯನ್ನಿಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ತಮಿಳು ಮತ್ತು ತೆಲುಗು ಸಿನಿ ಪ್ರೇಮಿಗಳು ಪರಸ್ಪರ ಸಮರವನ್ನೇ ಸಾರಿದ್ದರು. ಈಗ ಈ ಫ್ಯಾನ್ಸ್ ವಾರ್ ಎಂಬ ಜ್ವಾಲೆಗೆ ತುಪ್ಪ […]
ಪದ್ಮ ಪ್ರಶಸ್ತಿ ಪುರಸ್ಕೃತರಿಂದ ಗುಟ್ಕಾ ಜಾಹಿರಾತು ಅಲಹಾಬಾದ್ ಹೈಕೋರ್ಟ್ನಿಂದ ನೋಟಿಸ್!
ಮಾಯಾಬಳಗ ಪದ್ಮ ಪ್ರಶಸ್ತಿ ವಿಜೇತ ಹಿಂದಿ ಚಿತ್ರರಂಗದ ದಿಗ್ಗಜ ನಟ ಅಮಿತಾಭ್ ಬಚ್ಚನ್, ಶಾಹರುಖ್ ಖಾನ್, ಅಜಯ್ ದೇವಗನ್ ಹಾಗೂ ಸೈಫ್ಅಲಿ ಖಾನ್ ಮುಂತಾದವರು ಗುಟ್ಕಾ, ಪಾನ್ ಮಸಾಲಾ ಇತ್ಯಾದಿ ಆರೋಗ್ಯಕ್ಕೆ ಹಾನಿಕಾರಕವಾದ ಉತ್ಪನ್ನಗಳ ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳುವುದು ಈಗ ಪುನಃ ಮುನ್ನೆಲೆಗೆ ಬಂದಿದೆ. ಅಲಹಾಬಾದ್ ಹೈಕೋರ್ಟ್ ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಕ್ಯಾಬಿನೆಟ್ ಸೆಕ್ರೆಟರಿ, ಗ್ರಾಹಕ ಸಂರಕ್ಷಣಾ ಪ್ರಾಧಿಕಾರದ ಮುಖ್ಯ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ. ಅಲಹಾಬಾದ್ ಹೈಕೋರ್ಟ್ನ ವಕೀಲರೊಬ್ಬರು 2022ರಲ್ಲಿ […]
ಜೇಸನ್ ಸಂಜಯ್ ವಿಜಯ್ ಚೊಚ್ಚಲ ಸಿನಿಮಾಗೆ ಲೈಕಾ ಬಂಡವಾಳ!
ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಲೈಕಾ ಕನ್ನಡಕ್ಕೂ ಪದಾರ್ಪಣೆ ಮಾಡಿದೆ. ನಿಖಿಲ್ ಕುಮಾರಸ್ವಾಮಿ ಹೊಸ ಸಿನಿಮಾವನ್ನು ನಿರ್ಮಿಸ್ತಿರುವ ಈ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಇದೀಗ ಮತ್ತೊಂದು ಮೆಗಾ ಅನೌನ್ಸ್ ಮೆಂಟ್ ಮಾಡಿದೆ. ತಮಿಳು ಚಿತ್ರರಂಗದ ಖ್ಯಾತ ನಟ ಇಳಯದಳಪತಿ ವಿಜಯ್ ಸುಪುತ್ರ ನಿರ್ದೇಶನದ ಚೊಚ್ಚಲ ಸಿನಿಮಾಗೆ ಲೈಕಾ ಹಣ ಹಾಕುತ್ತಿದೆ. ಸ್ಟಾರ್ ಸಿನಿಮಾ ಮೇಕರ್ಸ್ ಜೊತೆಗೆ ಯುವ ಪ್ರತಿಭೆಗಳಿಗೂ ವೇದಿಕೆ ಕಲ್ಪಿಸುತ್ತಿರುವ ಲೈಕಾ ಸೃರ್ಷಿಕರ್ತ ಸುಭಾಷ್ ಕರಣ್ ಈಗ ವಿಜಯ್ ಪುತ್ರ ಜೇಸನ್ ಸಂಜಯ್ ವಿಜಯ್ […]
ಕನ್ನಡದ ಕೌಸಲ್ಯಾ ಮೇಲೆ ಕಣ್ಣಿಟ್ಟ ತಮಿಳಿನ ಶಿವಕಾರ್ತಿಕೇಯನ್!
ಇತ್ತೀಚೆಗೆ ಸುಮಾರಷ್ಟು ಸಿನಿಮಾಗಳು ಬರುತ್ತಿವೆ; ಹೋಗುತ್ತಿವೆ. ಗೆಲುವು ಮಾತ್ರ ಎಲ್ಲರ ಕೈಗೆಟುಕುತ್ತಿಲ್ಲ. ಹೇಗಾದರೂ ಮಾಡಿ ಪ್ರೇಕ್ಷಕರನ್ನು ಥೇಟರಿಗೆ ಎಳೆದುತರಲು ಸಿನಿಮಾ ತಂಡಗಳು ಹರಸಾಹಸ ಮಾಡುತ್ತಿವೆ. ಇದರ ನಡುವೆ, ಯಾವುದೇ ಪಬ್ಲಿಸಿಟಿ ಗಿಮಿಕ್ ಇಲ್ಲದೆ, ಅಬ್ಬರದ ಪ್ರಚಾರ ಮಾಡಿ, ಪ್ರೇಕ್ಷಕರನ್ನು ದಿಕ್ಕು ತಪ್ಪಿಸದೆ, ನೋಡಿದವರ ಮನಸ್ಸಿಗೆ ಹತ್ತಿರವಾಗಿ, ಗೆದ್ದ ಸಿನಿಮಾ ʻಕೌಸಲ್ಯಾ ಸುಪ್ರಜಾ ರಾಮʼ. ಜೈಲರ್ ಸಿನಿಮಾ ಅಡ್ಡ ಬರದಿದ್ದರೆ ಈ ಹೊತ್ತಿಗೇ ಇನ್ನೂ ಬೇರೆಯದ್ದೇ ಲೆವೆಲ್ಲಿಗೆ ತಲುಪಬೇಕಿದ್ದ ಚಿತ್ರವಿದು. ʻಕೌಸಲ್ಯಾ ಸುಪ್ರಜಾ ರಾಮʼ ನೋಡಿದ ಪ್ರತಿಯೊಬ್ಬರಿಗೂ ಖುಷಿ […]
ಹೆಣ ಕುಯ್ಯುವವನ ಕರಾಳ ಬದುಕಿನ ಚಿತ್ರಣ!
ತೀರಾ ಸಣ್ಣ ವಯಸ್ಸಿಗೇ ಅಪರಾಧ ಜಗತ್ತಿಗೆ ಕಾಲಿಟ್ಟುಬಿಟ್ಟವನ ಮುಂದಿನ ದಿನಗಳು ಹೇಗೆಲ್ಲಾ ತಿರುವು ಪಡೆದುಕೊಳ್ಳುತ್ತದೆ? ಮುಂಗೋಪ ಅನ್ನೋದು ಯಾರದ್ದೇ ಒಬ್ಬ ವ್ಯಕ್ತಿಯ ಬದುಕಿಗೆ ಹೇಗೆ ಮಾರಕವಾಗಬಹುದು? ʻಅಪರಾಧಿʼ ಎನ್ನುವ ಸ್ಥಾನದಿಂದ ಮುಕ್ತವಾಗಿ, ಹೆಣ ಕುಯ್ಯುವ ಕೆಲಸ ಮಾಡಿಕೊಂಡಿದ್ದವನ ಜೀವನದಲ್ಲಿ ನಡೆದ ಘಟನೆಗಳೇನು? – ಹೀಗೆ ಸಾಕಷ್ಟು ವಿಚಾರಗಳನ್ನು ಬಿಚ್ಚಿಟ್ಟಿರುವ ಚಿತ್ರ ಟೋಬಿ… ರಾಜ್ ಬಿ ಶೆಟ್ಟಿ ನಟನೆಯ ಟೋಬಿ ಸಿನಿಮಾ ತೆರೆಗೆ ಬಂದಿದೆ. ಗರುಡಗಮನ ವೃಷಭ ವಾಹನ ಸಿನಿಮಾದ ನಂತರ ರಾಜ್ ಶೆಟ್ಟಿ ಬಗ್ಗೆ ವಿಪರೀತ ಕುತೂಹಲ […]
ಮೆಗಾಸ್ಟಾರ್ ಹುಟ್ಟುಹಬ್ಬಕ್ಕೆ ಅನೌನ್ಸ್ ಆಯ್ತು 157ನೇ ಸಿನಿಮಾ!
ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿಗಿಂದು ಹುಟ್ಟುಹಬ್ಬದ ಸಂಭ್ರಮ..ಮೆಗಾಸ್ಟಾರ್ ಜನ್ಮದಿನದ ಅಂಗವಾಗಿ 157ನೇ ಸಿನಿಮಾ ಅನೌನ್ಸ್ ಆಗಿದೆ. ತೆಲುಗು ಚಿತ್ರರಂಗದ ಎವರ್ಗ್ರೀನ್ ಕ್ಲಾಸಿಕ್ಗಳಲ್ಲಿ ಒಂದಾಗಿರುವ ಜಗದೇಕ ವೀರುಡು ಅತಿಲೋಕ ಸುಂದರಿಯಂತಹ ಮತ್ತೊಂದು ಫ್ಯಾಂಟಸಿ ಎಂಟರ್ಟೈನರ್ನಲ್ಲಿ ಚಿರು ನಟಿಸುತ್ತಿದ್ದಾರೆ. ಬಿಂಬಿಸಾರ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದ ವಸಿಷ್ಠ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಯುವಿ ಕ್ರಿಯೇಷನ್ಸ್ನ ಯಶಸ್ವಿ ಬ್ಯಾನರ್ ಅಡಿಯಲ್ಲಿ ವಿ ವಂಶಿ ಕೃಷ್ಣಾ ರೆಡ್ಡಿ, ಪ್ರಮೋದ್ ಉಪ್ಪಲಪಟ್ಟಿ ಮತ್ತು ವಿಕ್ರಮ್ ರೆಡ್ಡಿ ನಿರ್ಮಿಸಲಿರುವ #Mega157 ಚಿತ್ರ ಚಿರಂಜೀವಿ ಅವರ […]
ಚೋಳ ಟೀಸರ್ ಹೇಗಿದೆ ಗೊತ್ತಾ?
ಜಯಸೂರ್ಯ, ಪಿ.ಆರ್.ಓ. ರೂರಲ್ ಸ್ಟಾರ್ ಅಂಜನ್ ನಾಯಕನಾಗಿ ನಟಿಸಿರುವ `ಚೋಳ’ ಚಿತ್ರ ಇತ್ತೀಚಿನ ದಿನಗಳಲ್ಲಿ ಪ್ರೇಕ್ಷಕರ ಗಮನ ಸೆಳೆದುಕೊಂಡಿತ್ತು. ಸುರೇಶ್ ಡಿ.ಎಂ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಭಿನ್ನವಾದ ಕಥಾನಕವನ್ನು ಒಳಗೊಂಡಿದೆ. ಈಗ ಚೋಳ ಚಿತ್ರದ ಟೀಸರ್ ಬಿಡುಗಡೆಗೊಂಡಿದೆ. ರೂರಲ್ ಸ್ಟಾರ್ ಅಂಜನ್ ಔಟ್ ಅಂಡ್ ಔಟ್ ಮಾಸ್ ಲುಕ್ಕಿನಲ್ಲಿ ಅಬ್ಬರಿಸಿದ್ದಾರೆ. ಇದರೊಂದಿಗೆ ಈ ಚಿತ್ರದ ಮೇಕಿಂಗ್, ಕಥೆ, ಪಾತ್ರವರ್ಗ ಸೇರಿದಂತೆ ಎಲ್ಲ ವಿಚಾರಗಳಲ್ಲೂ ಗಮನ ಸೆಳೆದಿದೆ. ಇದರೊಂದಿಗೆ ನಿರ್ದೇಶಕರಾಗಿ ರೂಪಾಂತರಗೊಂಡಿರುವ ಸುರೇಶ್ ಡಿ.ಎಂ ಮೊದಲ […]
ದಿ ವೆಕೆಂಟ್ ಹೌಸ್ನಲ್ಲಿ ಎಸ್ತರ್ ಏನೇನು ಮಾಡಿದ್ದಾರೆ ಗೊತ್ತಾ?
ನಟಿ ಎಸ್ತರ್ ನರೋನಾ ಇವತ್ತಿಗೆ ಇಡೀ ಇಂಡಿಯಾ ಪೂರ್ತಿ ಹೆಸರು ಮಾಡಿದ್ದಾರೆ. ಕನ್ನಡದವರೇ ಆದ ಎಸ್ತರ್ ಹಿಂದಿ ಮತ್ತು ತೆಲುಗು ಚಿತ್ರರಂಗದಲ್ಲಿ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದವರು. ಹಾಗೆ ನೋಡಿದರೆ ಎಸ್ತರ್ ಪಾಲಿಗೆ ದೇಶ, ಭಾಷೆಗಳ ಗಡಿಯೇ ಇಲ್ಲ. ಯಾಕೆಂದರೆ, ಈಕೆ ಹುಟ್ಟಿದ್ದು ಗಲ್ಫ್ ದೇಶದಲ್ಲಿ. ನಂತರ ಮೂರನೇ ತರಗತಿ ಹೊತ್ತಿಗೆ ಮಂಗಳೂರಿಗೆ ಬಂದು ತಲುಪಿದ್ದರು. ಕಾಲೇಜು ಓದಿದ್ದು ಮುಂಬೈನಲ್ಲಿ. ತೀರಾ ಸಣ್ಣ ವಯಸ್ಸಿಗೇ ಹಾಡುಗಾರಿಕೆಯಲ್ಲಿ ಹೆಸರು ಮಾಡಿದ್ದ ಹುಡುಗಿ ಈಕೆ. ಬಾಲಿವುಡ್ನ ಪ್ರಖ್ಯಾತ ಡ್ಯಾನ್ಸ್ ಕೊರಿಯೋಗ್ರಾಫರ್ ಸರೋಜ್ […]
ರಾಕ್ ಸ್ಟಾರ್ ರೂಪೇಶ್ ಶೆಟ್ಟಿ `ಅಧಿಪತ್ರ’!
ನಟ, ರಿಯಾಲಿಟಿ ಶೋ ಮೂಲಕ ಹೆಸರು ಮಾಡಿರುವ ರೂಪೇಶ್ ಶೆಟ್ಟಿ ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಹೋದ ಸಲದ ಸೀಜನ್ನಿನ ಬಿಗ್ಬಾಸ್ ಶೋ ವಿನ್ನರ್ ರೂಪೇಶ್ ಶೆಟ್ಟಿ ನೆನ್ನೆಯಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಹೊತ್ತಿನಲ್ಲಿ ಅವರ ಸುತ್ತಲಿನವರೆಲ್ಲಾ ಸಂಭ್ರಮಿಸುವ ಸುದ್ದಿಯೊಂದು ಹೊರಬಿದ್ದಿದೆ. ಬಿಗ್ ಬಾಸ್ ಶೋ ಗೆದ್ದ ನಂತರದಲ್ಲಿ ರೂಪೇಶ್ ಶೆಟ್ಟಿಯ ಸಿನಿಮಾ ಕೆರಿಯರ್ ಏನಾಗಬಹುದು ಎನ್ನುವ ಕುತೂಹಲವಿತ್ತು. ಇತ್ತೀಚೆಗಷ್ಟೇ ʻಸರ್ಕಸ್ʼ ಎನ್ನುವ ತುಳು ಚಿತ್ರವೊಂದನ್ನು ನಿರ್ದೇಶನ ಮಾಡಿದ್ದ ರೂಪೇಶ್ ಈಗ ಕನ್ನಡದ ಸಿನಿಮಾವೊಂದರ ಟೈಟಲ್ ಅನಾವರಣಗೊಳಿಸಿದ್ದಾರೆ. […]
ಎಡಗೈ ಅಪಘಾತ ಕಾರಣ ಸಿನಿಮಾಗೆ ವೇಗ ಹೆಲ್ಮೆಟ್ ಕಂಪನಿ ಸಾಥ್
ಬಲಗೈಯವರ ಪ್ರಾಬಲ್ಯವಿರುವ ಜಗತ್ತಿನಲ್ಲಿ ಪ್ರತಿ ಆಗಸ್ಟ್ 13ರಂದು ಅಂತಾರಾಷ್ಟ್ರೀಯ ಎಡಗೈಯವರ ದಿನವನ್ನು ಆಚರಿಸಲಾಗುತ್ತದೆ. ಇದೇ ಎಡಗೈ ಬಳಸುವವರ ಸುತ್ತ ಕನ್ನಡದಲ್ಲಿ ಸಿನಿಮಾವೊಂದು ತಯಾರಾಗುತ್ತಿರುವುದು ಗೊತ್ತೇ ಇದೆ. ಅದೇ ಎಡಗೈ ಅಪಘಾತಕ್ಕೆ ಕಾರಣ. ದೂದ್ ಪೇಡಾ ದಿಗಂತ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ಕಾನ್ಸೆಪ್ಸ್ ವೇಗ ಹೆಲ್ಮೆಟ್ ಕಂಪನಿಯವರಿಗೆ ಬಹಳ ಇಷ್ಟವಾಗಿದೆ. ಹೀಗಾಗಿ ಸಿನಿಮಾಗೆ ‘ವೇಗ’ ಹೆಲ್ಮೆಟ್ ಕಂಪನಿ ಸಾಥ್ ಕೊಟ್ಟಿದೆ. ಅದೇಗೇ ಅಂತೀರಾ? ಇದೇ ಆಗಸ್ಟ್ 13ರಂದು ಅಂತಾರಾಷ್ಟ್ರೀಯ ಎಡಗೈ ದಿನದಂದು ವೇಗ ಹೆಲ್ಮೆಟ್ ಕಂಪನಿ ಎಗಡೈ […]