ತೋತಾಪುರಿ 2 ಒಳ್ಳೇ ಟೇಸ್ಟು!
ತೋತಾಪುರಿ ಭಾಗ ೨ ಬಿಡುಗಡೆಯಾಗಿದೆ. ಈ ಹಿಂದೆ ಮೊದಲ ಭಾಗ ಬಂದಿತ್ತು. ಒಂದು ವರ್ಗ ಸಿನಿಮಾವನ್ನು ನೋಡಿ ಎಂಜಾಯ್ ಮಾಡಿತ್ತು. ಮತ್ತೊಂದು ವರ್ಗ ಇದರಲ್ಲಿ ಡಬಲ್ ಮೀನಿಂಗ್ ಮಾತುಗಳೇ ತುಂಬಿಕೊಂಡಿವೆ ಅಂತಾ ಬೇಸರ ಮಾಡಿಕೊಂಡಿತ್ತು. ಈಗ ಎರಡೂ ವರ್ಗದವರ ಮನಸ್ಸಿಗೆ ಒಪ್ಪುವ, ಕಾಡುವ, ಕಚಗುಳಿ ಇಡುವ ತೋತಾಪುರಿಯ ಎರಡನೇ ಭಾಗ ತೆರೆಗೆ ಬಂದಿದೆ. ತಮಾಷೆಯ ವಿಷಯಗಳನ್ನು ಹೇಳುತ್ತಲೇ ಗಂಭೀರ ವಿಚಾರಗಳನ್ನೂ ಇಲ್ಲಿ ಬಿಚ್ಚಿಡಲಾಗಿದೆ. ಬರಿಯ ಜಾತಿ ಮಾತ್ರವಲ್ಲ, ಧರ್ಮವನ್ನೂ ಮೀರಿದ್ದು ಪ್ರೀತಿ ಅನ್ನೋದು ಇಲ್ಲಿ ನಿರೂಪಿತಗೊಂಡಿದೆ. ಕಟ್ಟಕಡೆಯಲ್ಲಿ […]
ಗಣೇಶ್ ಯಾಕೆ ಇದನ್ನೆಲ್ಲಾ ಗಮನಿಸುತ್ತಿಲ್ಲ?
ಮೊದಲೆಲ್ಲಾ ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾಗಳು ತೆರೆಗೆ ಬರುತ್ತದೆ ಅಂದರೆ ಹಬ್ಬದ ವಾತಾವರಣ ನಿರ್ಮಾಣವಾಗಿರುತ್ತಿತ್ತು. ಬರಬರುತ್ತಾ ಯಾಕೋ ಗಣಿ ಸಿನಿಮಾಗಳು ಸದ್ದಡಗುತ್ತಿವೆಯಾ ಅಂತಾ ಸ್ವತಃ ಅವರ ಅಭಿಮಾನಿಗಳಿಗೇ ಅನ್ನಿಸಲು ಶುರುವಾಗಿದೆ. ಅದಕ್ಕೆ ಮುಖ್ಯ ಕಾರಣ ‘ಬಾನ ದಸರಿಯಲ್ಲಿ’ ಚಿತ್ರ. ಏನೇನೂ ಪ್ರಚಾರವಿಲ್ಲದ ಈ ಸಿನಿಮಾ ಇದೇ ವಾರ ತೆರೆಗೆ ಬರುತ್ತಿದೆ. ಹಾಗೆ ನೋಡಿದರೆ ಬಾನ ದಾರಿಯಲ್ಲಿ ಗಣೇಶ್ ಅವರ ಮಹತ್ವಾಕಾಂಕ್ಷೆಯ ಸಿನಿಮಾ. ಕಳೆದ ಎರಡು ವರ್ಷಗಳಿಂದ ಬಾನ ದಾರಿಯಲ್ಲಿ ಚಿತ್ರದ ಬಗ್ಗೆ ಗೋಲ್ಡನ್ ಸ್ಟಾರ್ ಸಾಕಷ್ಟು ಹೇಳಿಕೊಂಡಿದ್ದರು. […]
ಮತ್ತೆ ಶುರುವಾಯ್ತು ಹರಿ-ಯೋಗಮು!
ವನಜಾ ಬಿ.ಸಿ ಪಾಟೀಲ್ ನಿರ್ಮಾಣದ ಹಾಗೂ ಯೋಗರಾಜ್ ಭಟ್ ನಿರ್ದೇಶನದ ‘ಗರಡಿ’ ಚಿತ್ರದ ಟೈಟಲ್ ಟ್ರ್ಯಾಕ್ ಇತ್ತೀಚೆಗೆ ‘ಸರೆಗಮ ಕನ್ನಡ’ ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆಯಾಗಿದೆ. ಯೋಗರಾಜ್ ಭಟ್ ಅವರು ಬರೆದಿರುವ ‘ಲೋಕಾನೆ ಗರಡಿ.. ಬಾಳೇ ಅಖಾಡ” ಎಂಬ ಅದ್ಭುತ ಹಾಗೂ ಅರ್ಥಗರ್ಭಿತ ಗೀತೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಚಿತ್ರಕ್ಕೆ ಸಂಗೀತ ಸಂಯೋಜಿಸಿರುವ ವಿ.ಹರಿಕೃಷ್ಣ ಅವರೇ ಮುಖ್ಯ ಗಾಯಕರಾಗಿ ಹಾಡನ್ನು ಹಾಡಿದ್ದಾರೆ. ಹರಿಕೃಷ್ಣ ಅವರ ಜೊತೆಗೆ ಸಾಕಷ್ಟು ಪ್ರತಿಭಾವಂತ ಗಾಯಕರು ಸಹ ಈ ಹಾಡಿಗೆ ಧ್ವನಿಯಾಗಿದ್ದಾರೆ. ಇತ್ತೀಚೆಗೆ […]
ಶಿವಮೊಗ್ಗ ಜೈಲಿನ ಸುತ್ತ…
ಸಾಕಷ್ಟು ಸಿನಿಮಾಗಳಲ್ಲಿ ಜೈಲಿನ ಚಿತ್ರಣಗಳು ಇದ್ದೇ ಇರುತ್ತವೆ. ಮೊದಲೆಲ್ಲಾ ವರ್ಕಿಂಗ್ ಜೈಲುಗಳಲ್ಲೇ ಚಿತ್ರೀಕರಣಕ್ಕೆ ಅನುಮತಿ ನೀಡುತ್ತಿದ್ದರು. ʼಕೆಂಪʼ ಎನ್ನುವ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ಕೈದಿಯೊಬ್ಬ ಪರಪ್ಪನ ಅಗ್ರಹಾರದಿಂದ ಎಸ್ಕೇಪ್ ಆಗಿಬಿಟ್ಟಿದ್ದ. ಭಾರತದ ಇತರೇ ಜೈಲುಗಳಲ್ಲೂ ಇಂಥಾ ಪ್ರಕರಣಗಳಾಗಿದ್ದವು. ಸಿನಿಮಾದವರ ಸಾವಾಸವೇ ಬೇಡ ಅಂತಾ ಬಂದೀಖಾನೆ ಇಲಾಖೆ ತೀರ್ಮಾನ ಮಾಡಿಬಿಟ್ಟಿತ್ತು. ಬೆಂಗಳೂರಿನ ಹಳೇ ಸೆಂಟ್ರಲ್ ಜೈಲು ಕೂಡಾ ಈಗ ಸ್ವಾತಂತ್ರ್ಯ ಉದ್ಯಾನವನವಾಗಿ ಮಾರ್ಪಟ್ಟಿರೋದರಿಂದ ಚಿತ್ರೀಕರಣಕ್ಕೆ ಅನುಮತಿ ಸಿಗುತ್ತಿಲ್ಲ. ಜೈಲರ್ನಂತಾ ದೊಡ್ಡ ಬಜೆಟ್ಟಿನ ಚಿತ್ರಕ್ಕೆ ಇಡೀ ಜೈಲಿನ ಸೆಟ್ ರೂಪಿಸಿಕೊಳ್ಳುತ್ತಾರೆ. […]
ಹಿರಿಯ ನಿರ್ಮಾಪಕ ಎಂ.ಬಿ. ಬಾಬು ಗೆಲ್ಲಲಿ ಬಿಡಿ…
ಇದ್ದದ್ದನ್ನು ಇದ್ದಂತೇ ಹೇಳಿಬಿಡುವುದು, ಎಲ್ಲವನ್ನೂ ಬ್ಯಾಲೆನ್ಸ್ ಮಾಡಲು ಹೋಗಿ ಇನ್ನೆಲ್ಲೋ ಬ್ಯಾಲೆನ್ಸ್ ಕಳೆದುಕೊಳ್ಳುವುದು, ಅಗತ್ಯವೇ ಇಲ್ಲದ ಕಾಂಟ್ರವರ್ಸಿಗಳಲ್ಲಿ ಸಿಕ್ಕಿಕೊಳ್ಳೋದು… ಕಡೆಗೆ, ಎಲ್ಲವನ್ನೂ ಮರೆತು ಯಥಾ ಪ್ರಕಾರ ತಮ್ಮಷ್ಟಕ್ಕೆ ತಾವು ಸಿನಿಮಾ ಮಾಡುತ್ತಾ ಹೋಗೋದು ನಿರ್ಮಾಪಕ ಸೂರಪ್ಪ ಬಾಬು ಅವರ ಗುಣ. ಸೂರಪ್ಪ ಬಾಬು ಚಿತ್ರರಂಗದಲ್ಲಿ ತೀರಾ ಗ್ರೌಂಡ್ ಲೆವೆಲ್ಲಿನಿಂದ ಹಂತ ಹಂತವಾಗಿ ಮೇಲೆ ಬಂದವರು. ಬಾಬಣ್ಣ ಸಿನಿಮಾ ನಿರ್ಮಾಣ ಮಾಡದೇ ಹೋಗಿದ್ದಿದ್ದರೆ ಇವತ್ತಿಗೆ ಜಗ್ಗೇಶ್, ಉಪೇಂದ್ರ ಚಿತ್ರರಂಗದಲ್ಲಿ ನಿಲ್ಲುತ್ತಿದ್ದರೋ ಇಲ್ಲವೋ ಗೊತ್ತಿಲ್ಲ. ತರ್ಲೆ ನನ್ ಮಗ ಚಿತ್ರದಿಂದ […]
ಶಿಲ್ಪಾ-ಗಣೇಶ್ ಮಾಡುತ್ತಿರೋದು ಸರಿನಾ?
ಅರುಣ್ ಕುಮಾರ್.ಜಿ ಫೋಟೋಗಳು : ಕೆ.ಎನ್. ನಾಗೇಶ್ ಕುಮಾರ್, ಹಿರಿಯ ಪತ್ರಿಕಾ ಛಾಯಾಗ್ರಾಹಕ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆ ಇದೇ 2023ರ ಸೆಪ್ಟೆಂಬರ್ 23ರಂದು ನಡೆಯಲಿದೆ. ಈ ಸಲ ಛೇಂಬರ್ ಅಧ್ಯಕ್ಷ ಸ್ಥಾನಕ್ಕೆ ಯಾರು ಬಂದು ಕೂರಬಹುದು ಎನ್ನುವ ಕುತೂಹಲ ಒಂದು ಕಡೆಯಾದರೆ, ಅಭ್ಯರ್ಥಿಗಳ ನಡುವೆ ಪೈಪೋಟಿ ಮತ್ತೊಂದು ಕಡೆ. ಈ ಬಾರಿ ವಾಣಿಜ್ಯ ಮಂಡಳಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಥೇಟು ರಾಜಕೀಯ ಪಕ್ಷಗಳ ಪುಢಾರಿಗಳಂತೆ ತಂತ್ರಗಾರಿಕೆ ಆರಂಭಿಸಿದ್ದಾರೆ. ಹಾಗೆ ನೋಡಿದರೆ, ಪ್ರಸಕ್ತ ವರ್ಷ ಅಧ್ಯಕ್ಷಸ್ಥಾನ […]
22ಕ್ಕೆ ನಚ್ಚಿನವಾಡು ತೆಲುಗು ಚಿತ್ರ ತೆರೆಗೆ
ಕನ್ನಡದ ಬಹುತೇಕ ಕಲಾವಿದರು ನಟಿಸಿರುವುದು ಹಾಗೂ ಬೆಂಗಳೂರಿ ನಲ್ಲೆ 90% ಭಾಗದಷ್ಟು ಶೂಟಿಂಗ್ ನಡೆದಿದೆ ಇನ್ನು ವಿಶೇಷ ವೆಂದರೆ ಕನ್ನಡದ ಸಂಭಾಷಣೆ ಕೂಡ ಈ ಚಿತ್ರದಲ್ಲಿ ಬಳಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡ ಸಾಕಷ್ಟು ವಿವರಗಳನ್ನು ಹಂಚಿಕೊಂಡಿತು. ಚಿತ್ರದ ನಿರ್ದೇಶಕ ಲಕ್ಷ್ಮಣ್ ಚಿನ್ನ ಮಾತನಾಡಿ, ಚಿತ್ರ ತೆರೆಗೆ ಬರಲು ಎಲ್ಲ ರೀತಿಯ ಸಿದ್ಧತೆ ಮಾಡಲಾಗಿದೆ. ಈ ಚಿತ್ರ ಬಹುತೇಕ ಚಿತ್ರಿಕರಣ ಬೆಂಗಳೂರಿನಲ್ಲೆ ಆಗಿದೆ. ನಾವು ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿರುವುದಾಗಿ ಅವರು ಹೇಳಿದರು. ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಕನ್ನಡತಿ […]
ಡಾಲಿಯ ಹೊಯ್ಸಳ ಟಿ.ಆರ್.ಪಿ. ಎಷ್ಟು ಗೊತ್ತಾ?
ಇಷ್ಟು ದಿನ ಬಹುತೇಕ ವಾಹಿನಿಗಳು ಟಿ.ಆರ್.ಪಿ. ಟ್ಯಾಂಪರಿಂಗ್ ಮಾಡಿ ಬೋಗಸ್ ರೇಟಿಂಗ್ ತೋರಿಸುತ್ತಿದ್ದವು. ಸದ್ಯದ ಪರಿಸ್ಥಿತಿಯಲ್ಲಿ ಅದಕ್ಕೆ ಬ್ರೇಕ್ ಬಿದ್ದಿದೆ. ದರ್ಶನ್ ಒಬ್ಬರ ಸಿನಿಮಾ ಬಿಟ್ಟರೆ ಉಳಿದಂತೆ ದೊಡ್ಡ ಹೀರೋಗಳ ಸಿನಿಮಾಗಳು ಕೂಡಾ ಒಂದೂವರೆ ಎರಡು ದಾಟುತ್ತಿಲ್ಲ. ಸದ್ಯ ಡಾಲಿ ಇಂಡಿಯಾ ಲೆವೆಲ್ಲಿನಲ್ಲಿ ಹೆಸರು ಮಾಡಿರುವ ನಟ. ಟಗರು ನಂತರ ಬೇರೆ ಇಮೇಜು ಪಡೆದಿರುವ ಧನಂಜಯ ನಿರ್ಮಾಪಕರಾಗಿ ಗೆದ್ದಿದ್ದು ಬಡವ ರಾಸ್ಕಲ್ ಸಿನಿಮಾದಲ್ಲಿ. ಆ ನಂತರ ಡಾಲಿ ಧನಂಜಯ ನಟನೆಯ ನಾಲ್ಕಾರು ಸಿನಿಮಾಗಳು ಬಂದಿವೆ. ಆದರೆ ಯಾವುದೂ […]
ಗೌರಿ ಗಣೇಶ ಹಬ್ಬಕ್ಕೆ ಭೀಮನ ಬ್ಯಾಡ್ ಬಾಯ್ಸ್ ಸಾಂಗ್ ರಿಲೀಸ್
ಭೀಮ ಸೆಟ್ಟೇರಿದಾನಿಂದ್ಲೂ ದೊಡ್ಡ ಮಟ್ಟದ ಹೈಪ್, ಕ್ರೇಜ್ ಹುಟ್ಟಿಸಿರೋ ಸಿನಿಮಾ. ಈ ವರ್ಷದ ಬಹು ನಿರೀಕ್ಷಿತ ಸಿನಿಮಾ. ಸ್ಯಾಂಡಲ್ವುಡ್ ಸಲಗ ದುನಿಯಾ ವಿಜಯ್ ನಿರ್ದೇಶನದಲ್ಲಿ ಮೂಡಿ ಬರ್ತಿರೋ ಮತ್ತೊಂದು ಮಾಸ್ ಕಮರ್ಷಿಯಲ್ ಎಂಟ್ರಟೈನರ್. ಸಲಗದಂತಹ ಬ್ಲಾಕ್ ಬಸ್ಟರ್ ಕೊಟ್ಮೇಲೆ ದುನಿಯಾ ವಿಜಯ್ ಮತ್ತೆ ಆಕ್ಷನ್ ಕಟ್ ಹೇಳೋದ್ರೊಂದಿಗೆ ಲೀಡ್ ರೋಲ್ ಪ್ಲೇ ಮಾಡಿರೋ ಸಿನಿಮಾ. ಪ್ರಚಂಡ ಪ್ರತಿಭಾವಂತರ ದಂಡುಕಟ್ಟಿಕೊಂಡು ವಿಜಯ್ ಈ ಸಲ ಮತ್ತೊಂದು ಔಟ್ ಅಂಡ್ ಔಟ್ ಎಂಟ್ರಟೈನ್ಮೆಂಟ್ ಪ್ಯಾಕೇಜ್ ಮಾಡಿದ್ದಾರೆ.ಕೃಷ್ಣ ಸಾರ್ಥಕ್, ಜಗದೀಶ್ ಗೌಡ […]
ಕಾನೂನು ಅಸ್ತ್ರ ಆಡಿಯೋ, ಮೋಷನ್ ಪೋಸ್ಟರ್ ಬಿಡುಗಡೆ…
ಸಮಾಜದಲ್ಲಿ ಕಾನೂನಿನ ಬಗ್ಗೆ ಅರಿವಿಲ್ಲದವರು ಹೇಗೆಲ್ಲ ತೊಂದರೆ ಅನುಭವಿಸುತ್ತಿದ್ದಾರೆ. ಕಾನೂನು ಎಂಬ ಅಸ್ತ್ರವನ್ನುಪಯೋಗಿಸಿಕೊಂಡು ಅದರಿಂದ ಹೇಗೆ ಪಾರಾಗಬಹುದು ಎಂಬುದನ್ನು ನಾಗರಾಜ್ ಎಂ.ಜಿ.ಗೌಡ ಅವರು ಕಾನೂನು ಅಸ್ತ್ರ ಚಿತ್ರದ ಮೂಲಕ ಹೇಳಹೊರಟಿದ್ದಾರೆ. ಪುಟ್ಟೇಗೌಡ. ಎನ್. ಪ್ರೊಡಕ್ಷನ್ ಅಡಿಯಲ್ಲಿ ಪುಟ್ಟೇಗೌಡ ಎನ್. ಅವರೇ ಕಥೆ, ಸಂಭಾಷಣೆ ಬರೆದು ಚಿತ್ರನಿರ್ಮಾಣ ಮಾಡುವ ಜೊತೆಗೆ ಚಿತ್ರದ ಮುಖ್ಯ ಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಆಡಿಯೋ ಹಾಗೂ ಮೋಷನ್ ಪೋಸ್ಟರ್ ಬಿಡುಗಡೆ ಸಮಾರಂಭ ಕಾಮಾಕ್ಷಿ ಪಾಳ್ಯದ ಕೆರೆ ಮೈದಾನದಲ್ಲಿ ಅದ್ದೂರಿಯಾಗಿ ನಡೆಯಿತು.ಕುಣಿಗಲ್ ಬಿಜೆಪಿ ಮುಖಂಡ […]