ಅಜಿತ್ ವಿರುದ್ಧ ಗುಡುಗಿದ ತಮಿಳು ಪತ್ರಕರ್ತ ಯಾರು?
ತಮಿಳು ಚಿತ್ರರಂಗದ ಅತಿ ದೊಡ್ಡ ಹೆಸರು ತಲಾ ಅಜಿತ್. ಸಾಮಾನ್ಯಕ್ಕೆ ಹೀರೋಗಳು ತಮ್ಮ ಸಿನಿಮಾ ಪಬ್ಲಿಸಿಟಿ, ಇತರೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ. ತಮ್ಮನ್ನು ಆರಾಧಿಸುವ ಅಭಿಮಾನಿಗಳಿಗೆ ದರ್ಶನ ನೀಡುತ್ತಾರೆ. ಆದರೆ ಅಜಿತ್ ವಿಕ್ಷಿಪ್ತ ಮನಸ್ಥಿತಿಯ ನಟ ಅನ್ನೋದು ತುಂಬಾ ಹಿಂದೆಯೇ ಪ್ರೂವ್ ಆಗಿದೆ. ಸಿನಿಮಾವೊಂದಕ್ಕೆ ಸಹಿ ಹಾಕುವ ಸಂದರ್ಭದಲ್ಲೇ ನಾನು ಯಾವುದೇ ಕಾರಣಕ್ಕೂ ಪ್ರೆಸ್ಮೀಟು, ಪಬ್ಲಿಸಿಟಿ ಕಾರ್ಯಕ್ರಮಗಳಿಗೆ ಬರೋದಿಲ್ಲ ಅಂತಾ ಅಗ್ರಿಮೆಂಟ್ ಮಾಡಿಸಿಕೊಂಡಿರುತ್ತಾರೆ. ಅಷ್ಟೇ ಅಲ್ಲ. ನಾನು ಸಿನಿಮಾದ ಪಾತ್ರಗಳಿಗೆ ಬೇಕಾದಂತೆ ಬದಲಾಗಲು ಸಾಧ್ಯ ಇಲ್ಲʼ ನಾನು ಯಾವ […]
ನಶಾ ಜಗತ್ತಿನ ಝಲಕ್ಕುಗಳೊಂದಿಗೆ ಝಗಮಗಿಸಿತು `ಕೈಲಾಸ’ ಟ್ರೈಲರ್!
ಈ ಹಿಂದೆ ಬಿಡುಗಡೆಯಾಗಿದ್ದ ಟ್ರಾನ್ಸ್ ಸಾಂಗ್ ಮೂಲಕ ವ್ಯಾಪಕ ಕ್ರೇಜ್ ಸೃಷ್ಟಿಸಿದ್ದ ಚಿತ್ರ `ಕೈಲಾಸ ಕಾಸಿದ್ರೆ’. ನಾಗ್ ವೆಂಕಟ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಚಿತ್ರ ಈ ದಿನಮಾನದ ಯುವ ಜನಾಂಗದ ಕಥೆಯನ್ನೊಳಗೊಂಡಿರುವ, ಎಲ್ಲ ಅಭಿರುಚಿಯ ಯುವ ಪ್ರೇಕ್ಷಕರನ್ನೂ ಕೂಡಾ ಆವರಿಸಿಕೊಳ್ಳುವ ಕಥೆ ಹೊಂದಿರುವ ಚಿತ್ರವೆಂಬ ವಿಚಾರವನ್ನ ಚಿತ್ರತಂಡವೇ ಜಾಹೀರು ಮಾಡಿತ್ತು. ಹಾಡುಗಳ ಮೂಲಕ ಹಂತ ಹಂತವಾಗಿ ಸೆಳೆಯುತ್ತಾ ಸಾಗಿ ಬಂದಿರುವ ಈ ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆಗೊಂಡಿದೆ. ಯುವ ಆವೇಗದ ಕಥೆಯೊಂದರ ಸ್ಪಷ್ಟ ಸುಳಿವಿನೊಂದಿಗೆ ಈ […]
ಶಭ್ಬಾಷ್ ಎರಡನೇ ಹಂತದ ಚಿತ್ರೀಕರಣ ಮುಕ್ತಾಯ!
ರುದ್ರಶಿವ ನಿರ್ದೇಶನದ `ಶಭ್ಬಾಷ್’ ಚಿತ್ರ ಮೊದಲ ಹಂತದ ಚಿತ್ರೀಕರಣ ಮುಗಿಸಿಕೊಂಡ ಸುದ್ದಿ ಇತ್ತೀಚೆಗಷ್ಟೇ ಹೊರಬಿದ್ದಿತ್ತು. ಅದಾಗಲೇ ಚಿತ್ರತಂಡ ಎರಡನೇ ಹಂತದ ಚಿತ್ರೀಕರಣ ಸಹ ಸಾಂಘವಾಗಿ ಮುಕ್ತಾಯಗೊಂಡ ಖುಷಿಯ ಸಂಗತಿಯನ್ನು ಹಂಚಿಕೊಂಡಿದೆ. ಚನ್ನಗಿರಿಯಲ್ಲಿ ಮೊದಲನೇ ಹಂತದ ಚಿತ್ರೀಕರಣ ಮುಗಿಸಿಕೊಂಡಿದ್ದ ಚಿತ್ರತಂಡ ಮಡಿಕೇರಿ ಸುತ್ತಮುತ್ತಲ ಚೆಂದದ ಪರಿಸರದಲ್ಲಿ ಎರಡನೇ ಹಂತದ ಚಿತ್ರೀಕರಣವನ್ನು ಸಮಾಪ್ತಿಗೊಳಿಸಿಕೊಂಡಿದೆ. ಈ ಹಂತದಲ್ಲಾದ ಅಮೋಘ ಅನುಭವಗಳನ್ನೂ ಹಂಚಿಕೊಂಡಿದೆ! ನಿರ್ದೇಶಕ ರುದ್ರಶಿವ ಅತ್ಯಂತ ಅಚ್ಚುಕಟ್ಟಾಗಿ ಪ್ಲಾನು ಮಾಡಿಕೊಂಡು, ಅದಕ್ಕೆ ತಕ್ಕುದಾಗಿಯೇ ಮುಂದಡಿ ಇಡುತ್ತಿದ್ದಾರೆ. ಅದರ ಭಾಗವಾಗಿಯೇ ಮಡಿಕೇರಿಯ ಗೋಣಿಕೊಪ್ಪ, […]
ತಯ್ಯಾತಕ್ಕ ಕುಣಿದರು ಸಮರ್ಜಿತ್-ತಾನ್ಯಾ!
ಪತ್ರಕರ್ತ, ನಟ, ನಿರ್ಮಾಪಕ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಪುತ್ರ ಸಮರ್ಜಿತ್ ಲಂಕೇಶ್ “ಗೌರಿ” ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇಂದ್ರಜಿತ್ ಅವರೆ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಮಾರ್ಚ್ 17, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬ. ಪುನೀತ್ ಅವರ ಹುಟ್ಟುಹಬ್ಬಕ್ಕೆ “ಗೌರಿ” ತಂಡದಿಂದ ವಿಶೇಷ ಗೀತೆಯೊಂದು ಬರಲಿದೆ. ಈ ವಿಶೇಷ ಗೀತೆಗೆ ಸಮರ್ಜಿತ್ ಲಂಕೇಶ್ ಜೊತೆ ದಕ್ಷಿಣ ಭಾರತದ ಖ್ಯಾತ ನಟಿ ತಾನ್ಯ ಹೋಪ್ ಹೆಜ್ಜೆ ಹಾಕಲಿದ್ದಾರೆ. ಮೋಹನ್ ಈ ಹಾಡಿಗೆ […]
4 ಎನ್ 6 ಫಸ್ಟ್ ಗ್ಲಿಂಪ್ಸ್ ಟೀಸರ್ ಬಿಡುಗಡೆ
ಪರ್ಪಲ್ ಪ್ಯಾಚ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸಾಯಿಪ್ರೀತಿ ಎನ್. ಅವರು ನಿರ್ಮಿಸಿರುವ, ಮರ್ಡರ್ ಮಿಸ್ಟ್ರಿ ಜೊತೆಗೆ ಇನ್ ವೆಸ್ಟಿಗೇಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ 4 ಎನ್ 6. ಬಿಡುಗಡೆಗೆ ಸಿದ್ದವಾಗಿರುವ ಈ ಚಿತ್ರದ ಫಸ್ಟ್ ಗ್ಲಿಂಪ್ಸ್ ಟೀಸರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಲವ್ ಮಾಕ್ಟೇಲ್ ಹಾಗೂ ಲವ್ 360 ಖ್ಯಾತಿಯ ರಚನಾ ಇಂದರ್ ಭವಾನಿಪ್ರಕಾಶ್ ಹಾಗೂ ನವೀನ್ ಕುಮಾರ್, ಆದ್ಯಶೇಖರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ “4 ಎನ್ 6” ಚಿತ್ರಕ್ಕೆ ದರ್ಶನ್ ಶ್ರೀನಿವಾಸ್ ಕಥೆ, […]
’ಫೋಟೋ’ಗೆ ಬೆಂಬಲವಾಗಿ ನಿಂತ ಡಾಲಿ-ಪವನ್!
ಕನ್ನಡದಲ್ಲೀಗ ಕಂಟೆಂಟ್ ಆಧಾರಿತ ಸಿನಿಮಾಗಳ ಪ್ರಭೆ ಜೋರಾಗಿದೆ. ಅದರ ಮುಂದುವರೆದ ಭಾಗವಾಗಿ ತಯಾರಾಗಿರುವ ಚಿತ್ರ ಫೋಟೋ. ಕಳೆದ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿದಲ್ಲಿ ಪ್ರೇಕ್ಷಕರಿಂದ ಲೈಕ್ ಪಡೆದ ಈ ಸಿನಿಮಾದ ಮೊದಲ ನೋಟ ಅನಾವರಣಗೊಂಡಿದೆ. ನಟರಾಕ್ಷಸ ಡಾಲಿ ಧನಂಜಯ್ ಹಾಗೂ ಲೂಸಿಯಾ ಖ್ಯಾತಿಯ ಪವನ್ ಕುಮಾರ್ ಟ್ರೇಲರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಸಾಥ್ ಕೊಟ್ಟಿದ್ದಾರೆ. ಶ್ರೀರಂಗಪಟ್ಟದಲ್ಲಿರುವ ಪ್ರಕಾಶ್ ರಾಜ್ ಒಡೆತನದ ನಿರ್ದಿಗಂತ ಫಾರಂ ಹೌಸ್ ನಲ್ಲಿ ಫೋಟೋ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಬಹರಗಾರರು ಹಾಗೂ ಪತ್ರಕರ್ತರಾಗಿರುವ ಜೋಗಿ, […]
ಸೆಲೆಬ್ರಿಡಿ ಕ್ರಿಕೆಟ್ ಲೀಗ್ : ಕ್ರಿಕೆಟ್ ಅಭ್ಯಾಸಕ್ಕಿಳಿದ ಕರ್ನಾಟಕ ಬುಲ್ಡೋಜರ್ಸ್ ತಂಡ..
ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಗೆ ದಿನಗಣನೆಯಷ್ಟೇ ಬಾಕಿ ಉಳಿದಿದೆ. ಇದೇ ತಿಂಗಳ 23ರಿಂದ ತಾರೆಯರು ಕೈಯಲ್ಲಿ ಬ್ಯಾಟ್ ಹಿಡಿದು ಕ್ರಿಕೆಟ್ ಅಖಾಡಕ್ಕಿಳಿಯುತ್ತಿದ್ದಾರೆ. ಸ್ಯಾಂಡಲ್ ವುಡ್ ಟು ಬಾಲಿವುಡ್ ತನಕ ಎಲ್ಲಾ ಇಂಡಸ್ಟ್ರೀಯ ಸ್ಟಾರ್ ಗಳು ಸೆಲೆಬ್ರಿಟಿ ಕ್ರಿಕೆಟ್ ಲೀಗ್ 10 ಸೀಸನ್ ನಲ್ಲಿ ಪಾಲ್ಗೊಳ್ಳಲಿದ್ದಾರೆ. ಇತ್ತೀಚೆಗೆಷ್ಟೇ ದುಬೈನಲ್ಲಿ ಅದ್ಧೂರಿಯಾಗಿ ಸಿಸಿಎಲ್ ಗೆ ಚಾಲನೆ ಕೊಡಲಾಗಿತ್ತು. ಇದೀಗ ತಂಡಗಳು ಕ್ರಿಕೆಟ್ ಅಭ್ಯಾಸಕ್ಕಿಳಿದಿದ್ದಾರೆ. ಅದರಂತೆ ಕರ್ನಾಟಕ ಬುಲ್ಡೋಜರ್ಸ್ ತಂಡ ಅಭ್ಯಾಸಕ್ಕೂ ಮುನ್ನ ಮಾಧ್ಯಮದರೊಟ್ಟಿಗೆ ಒಂದಿಷ್ಟು ಮಾಹಿತಿ ಹಂಚಿಕೊಂಡಿದೆ. ಇತ್ತೀಚೆಗಷ್ಟೇ ಖಾಸಗಿ […]
ಮಹಂತೇಶ್-ಮಿಲಿ ಒಂದಾದರು!
ಇವತ್ತಿನ ದಿನಗಳಲ್ಲಿ ನಿಜಕ್ಕೂ ನಗಿಸುವ ಕಾಮಿಡಿ ಕಲಾವಿದರ ಸಂಖ್ಯೆ ತೀರಾ ಕಡಿಮೆ. ಒಬ್ಬ ನಟ ತೆರೆ ಮೇಲೆ ಬರ್ತಿದ್ದಂಗೇ ಜನ ನಗಲು ಶುರು ಮಾಡ್ತಾರೆ ಅಂದರೆ ನಿಜಕ್ಕೂ ಅದು ಒಬ್ಬ ಹಾಸ್ಯ ಕಲಾವಿದನ ಗೆಲುವು ಅಂದುಕೊಳ್ಳಬಹುದು. ಸಧ್ಯಕ್ಕೆ ಸಾಧು ಕೋಕಿಲಾ ನಂತರ ಜನ ತೆರೆ ಮೇಲೆ ಅತಿ ಹೆಚ್ಚು ಎಂಜಾಯ್ ಮಾಡ್ತಿರೋದು ಮಹಂತೇಶ್ ಅವರ ನಟನೆಯನ್ನು ನೋಡಿ! ಫ್ರೆಂಚ್ ಬಿರಿಯಾನಿ ಸಿನಿಮಾದ ಮಸಲ್ ಮಣಿ ಪಾತ್ರ ಮಹಂತೇಶ್ ಅವರಿಗೆ ಸ್ಟಾರ್ ವರ್ಚಸ್ಸು ತಂದುಕೊಟ್ಟಿದೆ. ಸಾಕಷ್ಟು ಸಿನಿಮಾಗಳಲ್ಲಿ ಹಾಸ್ಯ […]
ಇದು ಬ್ಲೌಸ್ ಕೇಸ್!
ಎಲ್ಲಿ ಕಂಡ ಕನಸು ನನಸಾಗೋದಿಲ್ಲವೋ? ತಾನೊಪ್ಪುವ, ತನ್ನನ್ನೊಪ್ಪುವ ಹುಡುಗ ಸಿಗೋದಿಲ್ಲವೋ ಅನ್ನೋದು ಆ ಹೆಣ್ಣುಮಗಳ ತಳಮಳ. ಸ್ಥೂಲಕಾಯದ ಹುಡುಗಿಯರಿಗೆ ಅಂಥದ್ದೊಂದು ಟೆನ್ಷನ್ ಯಾವತ್ತಿಗೂ ಇರುತ್ತದೆ. ಬರುವವರೆಲ್ಲಾ ಸಣ್ಣಗಿರುವ ತಂಗಿಯ ಕಡೆ ನೋಡಿದರೆ ಯಾರಿಗೆ ತಾನೆ ಸಂಕಟವಾಗೋದಿಲ್ಲ. ಒಂದೊಳ್ಳೆ ಸೀರೆಗೆ ಒಪ್ಪುವ ಡಿಸೈನರ್ ರವಿಕೆ ಒಲಿಸಲು ತನ್ನ ಊರಿನ ಚಂದ್ರಣ್ಣನ ಬಳಿ ಹೋಗುತ್ತಾಳೆ. ಅಲ್ಲಿಂದ ಶುರುವಾಗುತ್ತದೆ ರವಿಕೆಯ ತಮಾಷೆ ಪ್ರಸಂಗ. ಕ್ರಮೇಣ ಅದು ವಿಕೋಪಕ್ಕೆ ಹೋಗಿ ಸೀರಿಯಸ್ ಪ್ರಸಂಗವಾಗಿಯೂ ಮಾರ್ಪಡುತ್ತದೆ. ಇಲ್ಲಿ ರವಿಕೆ ಅನ್ನೋದು ಒಂದು ರೂಪಕವಷ್ಟೇ. ಹೊಂದಾಣಿಕೆ […]
ಇದು ಬದುಕಿನ ಸಾರಾಂಶ
ಹೌದಲ್ವಾ? ನಮ್ಮ ಆಸಕ್ತಿಯೇ ಬೇರೆ, ನಾವು ಬದುಕುತ್ತಿರುವ ರೀತಿಯೇ ಬೇರೆ. ನಮ್ಮ ಜೀವನ ಶೈಲಿಯಿಂದ ಜಗತ್ತು ನಮ್ಮನ್ನು ನೋಡುತ್ತಿರುವ ರೀತಿಯಂತೂ ಇನ್ನೂ ಬೇರೇನೇ ಆಗಿದೆ. ಯಾರದ್ದೋ ಮರ್ಜಿಗೆ, ಮತ್ತಿನ್ಯಾರದ್ದೋ ಸಮಾಧಾನಕ್ಕೆ ಎಷ್ಟು ಶುಷ್ಕವಾಗಿ ಜೀವಿಸುತ್ತಿದ್ದೇವೆ… ಸಮಾಜದ ಸಿದ್ದ ಸೂತ್ರಗಳಲ್ಲಿ ಸಿಕ್ಕಿಕೊಂಡು, ನಾವಲ್ಲದ ನಾವಾಗಿಯೇ ಬದುಕಿ ಕಟ್ಟಕಡೆಯದಾಗಿ ಒಂದು ದಿನ ಮಣ್ಣಲ್ಲಿ ಮಣ್ಣಾಗಿಬಿಡಬೇಕಾ? ಯಾವುದೋ ಮರದ ಸೌದೆಯಮೇಲೆ ಮಲಗಿ ಬೂದಿಯಾಗಬೇಕಾ? ನಮ್ಮದು, ನಮ್ಮತನ ಅನ್ನೋದಕ್ಕಿಲ್ಲಿ ಬೆಲೆಯೇ ಇಲ್ಲವಾ? ಅದ್ಭುತ ಪಾತ್ರಗಳನ್ನು ಸೃಷ್ಟಿಸಿ, ಕ್ರಿಯಾಶೀಲವಾಗಿ ಬರೆದುಕೊಂಡಿರಬೇಕು ಅಂತಾ ಬಯಸಿದವನೊಬ್ಬ ತನಗೆ […]