ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ಆರಂಭವಾಯಿತು ಆರ್ ಸಿ ಸ್ಟುಡಿಯೋಸ್ ನ ಮೊದಲ ಚಿತ್ರ “ಫಾದರ್”
ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಕೆಲವು ದಿನಗಳ ಹಿಂದೆ ಆರ್ ಸಿ ಸ್ಟುಡಿಯೋಸ್ ಎಂಬ ನಿರ್ಮಾಣ ಸಂಸ್ಥೆ ಆರಂಭಿಸುವುದರ ಮೂಲಕ ಐದು ಸಿನಿಮಾಗಳನ್ನು ನಿರ್ಮಾಣ ಮಾಡುವುದಾಗಿ ಹೇಳಿದ್ದರು. ಆ ಪೈಕಿ ಮೊದಲ ಚಿತ್ರವಾಗಿ ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸುತ್ತಿರುವ “ಫಾದರ್” ಚಿತ್ರ ನಿರ್ಮಾಣವಾಗುತ್ತಿದೆ. ಇತ್ತೀಚಿಗೆ ಈ ಚಿತ್ರದ ಮುಹೂರ್ತ ಸಮಾರಂಭ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನೆರವೇರಿತು. ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಹಾಗೂ ಗೀತಾ ಶಿವರಾಜಕುಮಾರ್ ಅವರು ಆರಂಭ ಫಲಕ ತೋರುವುದರ ಮೂಲಕ “ಫಾದರ್ ಚಿತ್ರದ ಮೊದಲ […]
ಐನೂರು ಕೋಟಿ ಪಿಚ್ಚರ್ ಏನಾಯ್ತು ಪ್ರೇಮು?
ನೆನಪಿರಲಿ ಪ್ರೇಮ್ ಚಿತ್ರರಂಗಕ್ಕೆ ಕಾಲಿಟ್ಟು ಕರೆಕ್ಟಾಗಿ 24 ವರ್ಷ ಆಗಿದೆ. ಬೇರೆ ನಟರಿಗೆ ಹೋಲಿಸಿದರೆ ಪ್ರೇಮ್ ನಟಿಸಿದ ಚಿತ್ರಗಳ ಸಂಖ್ಯೆ ತೀರಾ ಕಡಿಮೆ. ಹಾಗೆ ನೋಡಿದರೆ ಪ್ರೇಮ್ ಇಂಡಸ್ಟ್ರಿಗೆ ಬಂದಾಗ ಹೀರೋಗಳ ಕೊರತೆ ಸಿಕ್ಕಾಪಟ್ಟೆ ಇತ್ತು. ಆಗಿನ್ನೂ ಗಣೇಶ್, ದುನಿಯಾ ವಿಜಿ, ಶ್ರೀನಗರ ಕಿಟ್ಟಿ, ಅಜಯ್ ರಾವ್ ಮೊದಲಾದವರೆಲ್ಲ ಹೀರೋಗಳಾಗಿರಲಿಲ್ಲ. ಪೋಷಕ ಪಾತ್ರಗಳಲ್ಲಷ್ಟೇ ಅಭಿನಯಿಸಿಕೊಂಡಿದ್ದರು. ಶರಣ್ ಕೋಮಲ್ ತರದ ಕಲಾವಿದರು ಕಾಮಿಡಿ ಪಾತ್ರಗಳನ್ನು ಮಾಡಿಕೊಂಡಿದ್ದರು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಕಿಚ್ಚ ಸುದೀಪ್ ಮತ್ತು ದರ್ಶನ್ […]
ಇನ್ನೂರು ಕೋಟಿ ಬಜೆಟ್ಟು ಇನ್ನೂ ಎರಡು ಪಾರ್ಟು! ಇದು ಕಾಂತಾರ ಗುಟ್ಟು!!
ಏಳೆಂಟು ಕೋಟಿ ಖರ್ಚು ಮಾಡಿ, ಬರೋಬ್ಬರಿ ನಾನ್ನೂರು ಕೋಟಿ ಲಾಭ ಮಾಡಿದ ಚಿತ್ರ ಕಾಂತಾರ. ಈ ಸಿನಿಮಾ ಇಂಥದ್ದೊಂದು ಮ್ಯಾಜಿಕ್ ಕ್ರಿಯೇಟ್ ಮಾಡತ್ತೆ ಅಂತಾ ಯಾರೆಂದರೆ ಯಾರೂ ನಿರೀಕ್ಷೆ ಮಾಡಿರಲಿಲ್ಲ. ಆ ಹೊತ್ತಿಗೆ ಹೊಂಬಾಳೆ ಫಿಲ್ಮ್ಸ್ ಎಂಭತ್ತು ಕೋಟಿ ಬಜೆಟ್ಟಿನ ಕೆ ಜಿ ಎಫ್ ಮಾಡಿ ಲಾಭ ಮಾಡಿತ್ತಲ್ಲಾ? ಶುರು ಮಾಡಿದಾಗ ಅವರ ಪಾಲಿಗದು ಸಣ್ಣದೊಂದು ಪ್ರಯತ್ನ ಎನ್ನುವಂತಿತ್ತು. ಬಿಡುಗಡೆಯ ನಂತರ ಆ ಚಿತ್ರ ಎಬ್ಬಿಸಿದ ಹವಾ ಹೊಂಬಾಳೆಯ ಕಾನ್ಫಿಡೆನ್ಸ್ ಅನ್ನು ಇಮ್ಮಡಿಗೊಳಿಸಿತು. ಸದ್ಯ ಕಾಂತಾರ-2 ತಯಾರಿ […]
ಬೇಗ ಬಂದು ಗಾಬರಿಪಡಿಸಿದ ತಲಾ ಅಜಿತ್….
ತಮಿಳುನಾಡಲ್ಲಿ ಕೂಡಾ ಮೊನ್ನೆ ದಿನ ಚುನಾವಣೆ ನಡೆದಿದೆ. ಸ್ಟಾರ್ ನಟರು ಮತದಾನ ಮಾಡುವ ಬೂತ್ ಗಳನ್ನು ಮೇಟೇಂನ್ ಮಾಡೋದು ಪೊಲೀಸರಿಗೆ ತುಂಬಾನೇ ಕಷ್ಟದ ಕೆಲಸ. ನಟ ತಲಾ ಅಜಿತ್ ಗೊತ್ತಲ್ಲಾ? ಸದಾ ಜನರಿಂದ ದೂರವೇ ಉಳಿಯಲು ಬಯಸಿ, ತಮ್ಮ ಪಾಡಿಗೆ ತಾವು ಕಾಡು ಮೇಡು ಅಲೆದುಕೊಂಡಿರುವ ವಿಕ್ಷಿಪ್ತ ಮನಸ್ಥಿತಿಯ ನಟ. ತಾವು ಹೋದಲ್ಲಿ ಬಂದಲ್ಲೆಲ್ಲಾ ಜನಜಂಗುಳಿ ಸೇರಬೇಕು, ಜೈಕಾರಗಳು ಮೊಳಗಬೇಕು ಅಂತಾ ಬಯಸೋದು ಸೆಲೆಬ್ರೆಟಿಗಳ ಸಾಮಾನ್ಯ ಮನಸ್ಥಿತಿ. ಆದರೆ ಅಜಿತ್ ಅದಕ್ಕೆ ಅಪವಾದ. ನನ್ನ ಅಭಿಮಾನಿಗಳು ಅನ್ನಿಸಿಕೊಂಡವರು […]
ಡಾ|| ರಾಜಕುಮಾರ್ ಹುಟ್ಟುಹಬ್ಬದಂದು ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ “ದ ಜಡ್ಜ್ ಮೆಂಟ್” ಚಿತ್ರದ ಚಿತ್ರೀಕರಣ ಮುಕ್ತಾಯ.
G9 Communication Media and Entertainment ಲಾಂಛನದಲ್ಲಿ ನಿರ್ಮಾಣವಾಗಿರುವ ಹಾಗೂ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಪ್ರಮುಖಪಾತ್ರದಲ್ಲಿ ನಟಿಸಿರುವ “ದ ಜಡ್ಜ್ ಮೆಂಟ್” ಚಿತ್ರದ ಚಿತ್ರೀಕರಣ ಡಾ|| ರಾಜಕುಮಾರ್ ಅವರ ಹುಟ್ಟುಹಬ್ಬದಂದು ಮುಕ್ತಾಯವಾಗಿದೆ. ಈ ಸಂದರ್ಭದಲ್ಲಿ ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಮೊದಲಿಗೆ ಮಾತನಾಡಿದ ನಿರ್ದೇಶಕ ಗುರುರಾಜ ಕುಲಕರ್ಣಿ (ನಾಡಗೌಡ), ನಮ್ಮ ಚಿತ್ರದ ಚಿತ್ರೀಕರಣ ಇಂದಿಗೆ ಪೂರ್ಣವಾಗಿದೆ. ಕಾಕತಾಳೀಯ ಎಂದರೆ ನಮ್ಮ ಚಿತ್ರದ ಚಿತ್ರೀಕರಣ ಕಳೆದವರ್ಷ ಡಾ|| ರಾಜಕುಮಾರ್ ಅವರ ಹುಟ್ಟುಹಬ್ಬದಂದು ಆರಂಭವಾಗಿತ್ತು. ಈ ವರ್ಷ ಅವರ ಹುಟ್ಟುಹಬ್ಬದ […]
ಅನಿಲ್ ಕುಂಬ್ಳೆ ಹಾಗೂ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಂದ ಅನಾವರಣವಾಯಿತು “ಗೌರಿ” ಚಿತ್ರದ ಪ್ರೀ ಟೀಸರ್ .
ಲಾಫಿಂಗ್ ಬುದ್ದ ಫಿಲಂಸ್ ಲಾಂಛನದಲ್ಲಿ ಇಂದ್ರಜಿತ್ ಲಂಕೇಶ್ ನಿರ್ಮಿಸಿ, ನಿರ್ದೇಶಿಸಿರುವ ಹಾಗೂ ಸಮರ್ಜಿತ್ ಲಂಕೇಶ್ ನಾಯಕನಾಗಿ ನಟಿಸಿರುವ ಮೊದಲ ಚಿತ್ರ “ಗೌರಿ”. ಇತ್ತೀಚಿಗೆ ಈ ಚಿತ್ರದ ಪ್ರೀ ಟೀಸರ್ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಸ್ಪಿನ್ ಮಾಂತ್ರಿಕ ಎಂದೆ ಖ್ಯಾತರಾಗಿರುವ ಅನಿಲ್ ಕುಂಬ್ಳೆ ಹಾಗೂ ಹೆಸರಾಂತ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ “ಗೌರಿ” ಚಿತ್ರದ ಪ್ರೀ ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದರು. ನಿರ್ಮಾಪಕ ರಮೇಶ್ ರೆಡ್ಡಿ, ಪತ್ರಕರ್ತ ಸದಾಶಿವ ಶೆಣೈ, ಕವಿತಾ ಲಂಕೇಶ್ ಸೇರಿದಂತೆ ಸಾಕಷ್ಟು […]
ಟಿಪಿಎಲ್ ಆಯ್ತು ಈಗ IPT12ಗೆ ಚಾಲನೆ ಕೊಟ್ಟ ಎನ್ 1 ಕ್ರಿಕೆಟ್ ಅಕಾಡೆಮಿ.. IPT12 ವಿಶೇಷತೆಗಳು ಗೊತ್ತಾ?
ಕಿರುತೆರೆ ಕಲಾವಿದರಿಗಾಗಿ ಟಿಪಿಎಲ್-ಟೆಲಿವಿಷನ್ ಪ್ರೀಮಿಯರ್ ಲೀಗ್ ಎಂಬ ಕ್ರಿಕೆಟ್ ಟೂರ್ನಮೆಂಟ್ ನಡೆಸಿಕೊಂಡು ಬರ್ತಿರುವ ಎನ್ 1 ಕ್ರಿಕೆಟ್ ಅಕಾಡೆಮಿ ಇದೀಗ ಮತ್ತೊಂದು ಪ್ರಯತ್ನಕ್ಕೆ ಕೈ ಹಾಕಿದೆ. ಈಗಾಗಲೇ ಯಶಸ್ವಿಯಾಗಿ ಮೂರು ಟಿಪಿಎಲ್ ಸೀಸನ್ ಮುಗಿಸಿರುವ ಎನ್ 1 ಅಕಾಡೆಮಿ ಸೂತ್ರಧಾರ ಸುನಿಲ್ ಕುಮಾರ್ ಬಿ.ಆರ್ ಈಗ IPT12 ಎಂಬ ಹೊಸ ಕ್ರಿಕೆಟ್ ಟೂರ್ನಮೆಂಟ್ ಗೆ ಚಾಲನೆ ಕೊಟ್ಟಿದ್ದಾರೆ. ಡಾಕ್ಟರ್ಸ್, ಲಾಯರ್ಸ, ಸಿನಿಮಾ ನಟರು, ಕಿರುತೆರೆ ಕಲಾವಿದರು, ಮಾಧ್ಯಮದವರು ಹೀಗೆ ಎಲ್ಲಾ ಕ್ಷೇತ್ರದವರು ಸೇರಿ ಆಡಲಿರುವ ಕ್ರಿಕೆಟ್ ಟೂರ್ನಮೆಂಟ್ […]
‘Vote ನಮ್ಮ Power’ Rap Song ಮೂಲಕ ಯುವಜನತೆಗೆ ಮತದಾನದ ಮಹತ್ವ ಸಾರಿದ ಚಂದನವನದ ತಾರೆಯರು.
2024ರ ಲೋಕಸಭೆ ಚುನಾವಣೆ ಹೊತ್ತಿನಲ್ಲಿ ‘ಮಾಧ್ಯಮ ಅನೇಕ’ ಸಂಸ್ಥೆ ‘Vote ನಮ್ಮ Power’ Rap ಸಾಂಗ್ ಪ್ರಸ್ತುತಪಡಿಸುತ್ತಿದೆ. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ. ಸಾರ್ವತ್ರಿಕ ಚುನಾವಣೆಯ ಈ ಸಂದರ್ಭದಲ್ಲಿ ಮತದಾನದ ಹಕ್ಕುಗಳನ್ನು ಪ್ರತಿಪಾದಿಸುವುದು ನಮ್ಮ ಆದ್ಯ ಕರ್ತವ್ಯ. ಮತದಾನದೊಂದಿಗೆ ಭವ್ಯ ಭಾರತದ ಭವಿಷ್ಯ ನಿರ್ಧರಿಸುವುದು ನಮ್ಮೆಲ್ಲರ ಕೈಲಿದೆ. ಈ ಪ್ರಜಾಪ್ರಭುತ್ವದ ಹಬ್ಬವನ್ನು ಒಂದು ಸಂದೇಶಭರಿತ ಚೆಂದದ Rap song ಮೂಲಕ ಸೆಲೆಬ್ರೇಟ್ ಮಾಡುವ ಆಶಯ ಹಾಗೂ ಆ ಮೂಲಕ ಪ್ರಜಾಪ್ರಭುತ್ವದ ಬಗ್ಗೆ ಯುವ ಪೀಳಿಗೆಯಲ್ಲಿ […]
ಅಧಿಕಾರ ದುರುಪಯೋಗ ಮಾಡಿಕೊಂಡ್ರಾ ಅಧ್ಯಕ್ಷರು?
ಈ ಸಲ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಗೀತಾ ಶಿವರಾಜ್ ಕುಮಾರ್ ಅವರು ಸ್ಪರ್ಧಿಸುತ್ತಿದ್ದಾರೆ. ಕರ್ನಾಟಕ ಕಂಡ ಅಪ್ರತಿಮ ರಾಜಕಾರಣಿ ಬಂಗಾರಪ್ಪನವರ ಪುತ್ರಿ ಮತ್ತೊಮ್ಮೆ ರಾಜಕಾರಣದ ಅಖಾಡದಲ್ಲಿ ಪರೀಕ್ಷೆಗಳಿದಿದ್ದಾರೆ. ಗೀತಾ ಶಿವರಾಜ್ ಕುಮಾರ್ ನಿಜಕ್ಕೂ ಗಟ್ಟಿಗಿತ್ತಿ ಹೆಣ್ಣುಮಗಳು. ಹೇಗೆ ಪಾರ್ವತಮ್ಮನವರು ಡಾ. ರಾಜಕುಮಾರ್ ಅವರ ಪ್ರೇರಕ ಶಕ್ತಿಯಾಗಿದ್ದರೋ, ಹಾಗೆಯೇ ಕಳೆದ ಮೂರೂವರೆ ದಶಕಗಳಿಂದ ಶಿವರಾಜ್ ಕುಮಾರ್ ಅವರ ಬೆನ್ನಿಗೆ ನಿಂತವರು. ಆದರೆ ಈಗ ವಿಚಾರ ಅದಲ್ಲ. ಚಿತ್ರರಂಗದಲ್ಲಿ ಅತ್ಯುನ್ನತ ಸ್ಥಾನ ಹೊಂದಿರುವ ಶಿವಣ್ಣನ ಪತ್ನಿ […]
ಜನ್ಮದಿನವೇ ಮಾಸ್ ಅವತಾರ ತಾಳಿದ ಲವ್ಲಿ ಸ್ಟಾರ್..’ನೆನಪಿರಲಿ’ ಇದು 2.O..
ಅಪ್ಪ ಐ ಲವ್ ಯೂ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬಂದಿದ್ದ ಲವ್ಲಿ ಸ್ಟಾರ್ ಪ್ರೇಮ್ ಈಗ ಮತ್ತೊಂದು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಬಾರಿ ಅವರು ಲವರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿಲ್ಲ. ಬದಲಾಗಿ ರಗಡ್ ಅವತಾರ ತಾಳಿದ್ದಾರೆ. ನಿನ್ನೆ ಪ್ರೇಮ್ ಜನ್ಮದಿನ.. ಅವರ ಹುಟ್ಟುಹಬ್ಬದ ಸ್ಪೆಷಲ್ ಆಗಿ ಹೊಸ ಸಿನಿಮಾದ ಮುಹೂರ್ತ ನೆರವೇರಿದೆ. ಬೆಂಗಳೂರಿನ ಬಂಡಿ ಮಹಾಕಾಳಿ ದೇಗುಲದಲ್ಲಿ ಮುಹೂರ್ತ ನೆರವೇರಿದ್ದು, ಇಡೀ ಚಿತ್ರತಂಡ ಭಾಗಿಯಾಗಿ ತಾಯಿಯ ಆಶೀರ್ವಾದ ಪಡೆದುಕೊಂಡರು. ಬಳಿಕ ನೆನಪಿರಲಿ ಪ್ರೇಮ್ ಮಾತನಾಡಿ, […]