ಪುಷ್ಪ 2 ಸಿನಿಮಾದ ಎರಡನೇ ಹಾಡು ರಿಲೀಸ್.
ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷಿತ ಸಿನಿಮಾ ಪುಷ್ಪ 2 ಅಂಗಳದಿಂದ ಎರಡನೇ ಹಾಡು ಬಿಡುಗಡೆಯಾಗಿದೆ. ದಿ ಕಪಲ್ ಸಾಂಗ್ ಗೆ ಪುಷ್ಪರಾಜ್ ಹಾಗೂ ಶ್ರೀವಲ್ಲಿ ಹೆಜ್ಜೆ ಹಾಕಿದ್ದಾರೆ. ಗಣೇಶ್ ಆಚಾರ್ಯ ನೃತ್ಯ ಸಂಯೋಜನೆಯಲ್ಲಿ ಮೂಡಿಬಂದಿರುವ ಹಾಡಿಗೆ ದೇವಿಶ್ರೀ ಪ್ರಸಾದ್ ಟ್ಯೂನ್ ಹಾಕಿದ್ದಾರೆ. ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಹಾಗೂ ಬೆಂಗಾಲಿ ಭಾಷೆಯಲ್ಲಿ ಸೆಕೆಂಡ್ ಸಾಂಗ್ ಬಿಡುಗಡೆಯಾಗಿದೆ. ಕನ್ನಡದ ಹಾಡಿಗೆ ವರದರಾಜು ಚಿಕ್ಕಬಳ್ಳಾಪುರ ಸಾಹಿತ್ಯ ಬರೆದಿದ್ದು, ಮೆಲೋಡಿ ಕ್ವೀನ್ ಶ್ರೇಯಾ ಘೋಷಾಲ್ ಆರು ಭಾಷೆಯ ಹಾಡಿಗೆ ಧ್ವನಿಯಾಗಿದ್ದಾರೆ. […]
ಪ್ರೇಕ್ಷಕರನ್ನು ಆವರಿಸಿದ ‘ಶಾಖಾಹಾರಿ’. ಥಿಯೇಟರ್ ನಲ್ಲಿ ಮಿಸ್ ಮಾಡಿಕೊಂಡವರು ಒಟಿಟಿಯಲ್ಲಿ ಮಿಸ್ ಮಾಡದೇ ಈ ಚಿತ್ರ ನೋಡಿ
ಕನ್ನಡ ಚಿತ್ರರಂಗದಲ್ಲಿ ಭಿನ್ನ-ವಿಭಿನ್ನ ಪ್ರಯತ್ನಗಳು ನಡೆಯುತ್ತಿವೆ. ಹೊಸಬರ ಜೊತೆಗೆ ಅನುಭವಿ ತಾರಾಬಳಗ ಕೈ ಜೋಡಿಸಿದಾಗ ಒಂದೊಳ್ಳೆ ಅದ್ಭುತ ಸಿನಿಮಾ ಹೊರಹೊಮ್ಮಲಿದೆ ಎಂಬುದಕ್ಕೆ ಶಾಖಾಹಾರಿ ಚಿತ್ರ ತಾಜಾ ಉದಾಹರಣೆ..ತನ್ನ ಗಟ್ಟಿ ಕಂಟೆಂಟ್ ನಿಂದಲೇ ಭಾರೀ ಸದ್ದು ಮಾಡಿದ್ದ ಈ ಚಿತ್ರವೀಗ ಅಮೇಜಾನ್ ಪ್ರೈಮ್ ನಲ್ಲಿ ಅಪಾರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಶಾಖಾಹಾರಿ ನೋಡಿದವರೆಲ್ಲಾ ಇಂತಹ ಸಿನಿಮಾವನ್ನು ಥಿಯೇಟರ್ ನಲ್ಲಿ ಮಿಸ್ ಮಾಡಿಕೊಂಡ್ವಲ್ಲಾ ಅಂತಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಫೆಬ್ರವರಿ 16ರಂದು ಬೆಳ್ಳಿಪರದೆಗೆ ಎಂಟ್ರಿ ಕೊಟ್ಟಿದ್ದ ಶಾಖಾಹಾರಿ ಸಿನಿಮಾವೀಗ ಮೂರು ತಿಂಗಳ […]
ಕೋಟಿ ಮನರಂಜನೆ: ಕೋಟಿ ಸಿನಿಮಾದ ಅದ್ದೂರಿ ಕಾರ್ಯಕ್ರಮ.
ಕೋಟಿ ಸಿನಿಮಾದ ಪ್ರೀರಿಲೀಸ್ ವಿಶೇಷ ಟೀವಿ ಕಾರ್ಯಕ್ರಮ ಇತ್ತೀಚೆಗೆ ಅದ್ದೂರಿಯಾಗಿ ನಡೆಯಿತು. ಈ ಕಾರ್ಯಕ್ರಮವನ್ನು ‘ಕೋಟಿ ಮನರಂಜನೆ’ ಎಂದು ಕರೆಯಲಾಗಿದ್ದು, ಕಾರ್ಯಕ್ರಮದಲ್ಲಿ ಸಿನಿಮಾದ ತಾರಾಬಳಗವೇ ತುಂಬಿತ್ತು. ಕೋಟಿಯ ನಾಯಕ ಡಾಲಿ ಧನಂಜಯ ಸೇರಿದಂತೆ ನಾಯಕಿ ಮೋಕ್ಷಾ ಕುಶಾಲ್ ಮತ್ತು ಹಿರಿಯ ತಾರೆಗಳಾದ ತಾರಾ ಅನುರಾಧ, ರಂಗಾಯಣ ರಘು, ರಮೇಶ್ ಇಂದಿರಾ, ಸರ್ದಾರ್ ಸತ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದದ್ದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್. ಅದ್ಭುತ ಲೈಟಿಂಗ್ ಮತ್ತು ಕೋರಿಯಾಗ್ರಫಿಯ ಮೂಲಕ ಆದ […]
ಟ್ರೆಂಡಿಂಗ್ನಲ್ಲಿ ಕೋಟಿಯ ‘ಮಾತು ಸೋತು’ ಹಾಡು .
ಕೋಟಿ ಸಿನಿಮಾದ ‘ಮಾತು ಸೋತು’ ಹಾಡು ರೀಲ್ಸ್ಗಳಲ್ಲಿ ಟ್ರೆಂಡಿಂಗ್ ಆಗ್ತಾ ಇದೆ. ಈಗಾಗಲೇ ಸಾವಿರಾರು ರೀಲ್ಸ್ ಆಗಿದ್ದು, ಈ ರೀಲ್ಸ್ಗಳು ಮಿಲಿಯನ್ಗಟ್ಟಲೆ ವೀಕ್ಷಣೆ ಪಡೆದಿವೆ. ಇನ್ಸ್ಟಾಗ್ರಾಮ್ನಲ್ಲಿ ಕಳೆದ ಒಂದು ವಾರದಿಂದ ‘ಟ್ರೆಂಡಿಂಗ್’ನಲ್ಲಿರುವ ಈ ಹಾಡನ್ನು ವಾಸುಕಿ ವೈಭವ್ ಸಂಯೋಜಿಸಿ, ಯೋಗರಾಜ್ ಭಟ್ ಬರೆದು, ಅರ್ಮಾನ್ ಮಲಿಕ್ ಹಾಡಿದ್ದಾರೆ. ಈಗಾಗಲೇ ಈ ಹಾಡಿನ ಲಿರಿಕಲ್ ವಿಡಿಯೋ ಯೂಟ್ಯೂಬಿನಲ್ಲಿ ಹದಿನಾಲ್ಕು ಲಕ್ಷದಷ್ಟು ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಯೂಟ್ಯೂಬ್ ಶಾರ್ಟ್ಸಲ್ಲೂ ಟ್ರೆಂಡಿಂಗ್ ಆಗ್ತಾ ಇದೆ. ಈ ಹಾಡಿನ ಸಂಯೋಜಕರಾದ ವಾಸುಕಿ ವೈಭವ್ “ಮಾತು […]
ಡೈನಾಮಿಕ್ ಪ್ರಿನ್ಸ್ ಎದುರು ತೊಡೆತಟ್ಟಲು ಬಂದ ಮಿಸ್ಟರ್ ದುಬೈ.
ಸೆಟ್ಟೇರಿದಾಗಿಂದಲೂ ಸಖತ್ ಸೌಂಡ್ ಮಾಡುತ್ತಿರುವ ಸಿನಿಮಾ ಕರಾವಳಿ. ಗುರುದತ್ ಗಾಣಿಗ ನಿರ್ಮಾಣದ ಜೊತೆಗೆ ನಿರ್ದೇಶನ ಮಾಡುತ್ತಿರೋ ಕರಾವಳಿ ಸಿನಿಮಾಗೆ ಖಡಕ್ ವಿಲನ್ ಎಂಟ್ರಿ ಕೊಟ್ಟಾಗಿದೆ.. ಪ್ರತಿ ಪಾತ್ರವರ್ಗವನ್ನ ವಿಭಿನ್ನ ರೀತಿಯಲ್ಲಿ ಇಂಟ್ರಡ್ಯೂಸ್ ಮಾಡುತ್ತಿರೋ ನಿರ್ದೇಶಕ ಗುರುದತ್ ಗಾಣಿಗ ಚಿತ್ರದ ಮತ್ತೊಂದು ಮುಖ್ಯಪಾತ್ರಧಾರಿಯನ್ನ ವಿಶೇಷ ರೀತಿಯಲ್ಲಿ ಪರಿಚಯಿಸಿದ್ದಾರೆ…ಕರಾವಳಿ ಸಿನಿಮಾದಲ್ಲಿ ಡೈನಾಮಿಕ್ ಪ್ರಿನ್ಸ್ ಎದುರು ಅಬ್ಬರಿಸಲು ಮಿಸ್ಟರ್ ದುಬೈ ಶಿಥಿಲ್ ಪೂಜಾರಿಯನ್ನ ಆಯ್ಕೆ ಮಾಡಿಕೊಂಡಿದ್ದಾರೆ… ಮಂಗಳೂರು ಮೂಲದ ಶಿಥಿಲ್ ಪೂಜಾರಿ ದುಬೈನಲ್ಲಿ ನೆಲಸಿದ್ದು ಕರಾವಳಿ ಚಿತ್ರಕ್ಕೆ ಆಡಿಷನ್ ಮೂಲಕ ಆಯ್ಕೆ […]
ದೀಕ್ಷಿತ್ ಶೆಟ್ಟಿ ಅಭಿನಯದ “ಬ್ಯಾಂಕ್ of ಭಾಗ್ಯಲಕ್ಷ್ಮಿ” ಚಿತ್ರದ ಅನಿಮೇಷನ್ ಟೀಸರ್ ಗೆ ಮೆಚ್ಚುಗೆಯ ಮಹಾಪೂರ .
ರಂಗಿ ತರಂಗ’, ‘ಅವನೇ ಶ್ರೀಮನ್ನಾರಾಯಣ’ ದಂತಹ ಯಶಸ್ವಿ ಚಿತ್ರಗಳ ನಿರ್ಮಾಪಕ ಹೆಚ್.ಕೆ ಪ್ರಕಾಶ್ ನಿರ್ಮಾಣದ, “ದಿಯಾ” ಸೇರಿದಂತೆ ಅನೇಕ ಯಶಸ್ವಿ ಸಿನಿಮಾಗಳ ಮೂಲಕ ಜನಪ್ರಿಯರಾಗಿರುವ ದೀಕ್ಷಿತ್ ಶೆಟ್ಟಿ ನಾಯಕರಾಗಿ ನಟಿಸಿರುವ ಹಾಗೂ ಅಭಿಷೇಕ್ ಎಂ ನಿರ್ದೇಶನದ “ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ” ಚಿತ್ರದ ಅನಿಮೇಷನ್ ಟೀಸರ್ ಇತ್ತೀಚಿಗೆ ಬಿಡುಗಡೆಯಾಗಿದೆ. ಕನ್ನಡ ಚಿತ್ರರಂಗದಲ್ಲೇ ಹೊಸ ಪ್ರಯೋಗ ಎನ್ನಬಹುದಾದ ಈ ಟೀಸರ್ ಮೂಲಕ ಚಿತ್ರದ ಕಥೆ ಹೇಳುವ ಪ್ರಯತ್ನ ಮಾಡಲಾಗಿದೆ. ಈ ಅನಿಮೇಷನ್ ಟೀಸರ್ ಗಾಗಿ ಏಳೆಂಟು ಜನ ನುರಿತ ತಂತ್ರಜ್ಞರು […]
ಮೊದಲ ಹಾಡಿನಲ್ಲೇ ಮೋಡಿ ಮಾಡಿದ “ಕೃಷ್ಣಂ ಪ್ರಣಯ ಸಖಿ” .
ಶ್ರೀನಿವಾಸರಾಜು ಅವರ ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ “ಕೃಷ್ಣಂ ಪ್ರಣಯ ಸಖಿ” ಚಿತ್ರಕ್ಕಾಗಿ ನಿಶಾನ್ ರಾಯ್ ಅವರು ಬರೆದು ಚಂದನ್ ಶೆಟ್ಟಿ ಹಾಡಿರುವ “ಮೈ ಮ್ಯಾರೇಜ್ ಇಸ್ ಫಿಕ್ಸ್ಡ್” ಎಂಬ ಸುಂದರ ಗೀತೆ ಇತ್ತೀಚೆಗೆ ಸಾಂಸ್ಕೃತಿಕ ನಗರಿ ಮೈಸೂರಿನ ಮಾಲ್ ಆಫ್ ಮೈಸೂರಿನಲ್ಲಿ ಅದ್ದೂರಿಯಾಗಿ ಬಿಡುಗಡೆಯಾಯಿತು. ಸಾವಿರಾರು ಅಭಿಮಾನಿಗಳು ಈ ಸುಂದರ ಸಮಾರಂಭಕ್ಕೆ ಸಾಕ್ಷಿಯಾದರು. ಇದು ಚಿತ್ರದ ಮೊದಲ ಹಾಡು ಕೂಡ. ಅರ್ಜುನ್ ಜನ್ಯ ಈ ಚಿತ್ರದ ಸಂಗೀತ ನಿರ್ದೇಶಕರು. ಹಾಡು ಬಿಡುಗಡೆ ನಂತರ […]
ಬಹು ನಿರೀಕ್ಷಿತ “ಬಿಂಗೊ” ಚಿತ್ರಕ್ಕೆ ಮಾತಿನ ಜೋಡಣೆ(ಡಬ್ಬಿಂಗ್) ಮುಕ್ತಾಯ.
“ಶಂಭೋ ಶಿವ ಶಂಕರ” ಚಿತ್ರ ನಿರ್ದೇಶಿಸಿದ್ದ ಶಂಕರ್ ಕೋನಮಾನಹಳ್ಳಿ ನಿರ್ದೇಶನದಲ್ಲಿ, ಆರ್ ಕೆ ಚಂದನ್ ಹಾಗೂ ರಾಗಿಣಿ ದ್ವಿವೇದಿ ನಾಯಕ – ನಾಯಕಿಯಾಗಿ ನಟಿಸಿರುವ “ಬಿಂಗೊ” ಚಿತ್ರದ ಡಬ್ಬಿಂಗ್ ಸಾಧುಕೋಕಿಲ ಅವರ ಲೂಪ್ ಸ್ಟುಡಿಯೋದಲ್ಲಿ ಮುಕ್ತಾಯವಾಗಿದೆ. ಪೋಸ್ಟ್ ಪ್ರೊಡಕ್ಷನ್ ವರ್ಕ್ ಬಿರುಸಿನಿಂದ ಸಾಗಿದೆ. ಸಸ್ಪೆನ್ಸ್ ಥ್ರಿಲ್ಲರ್ ಜಾನರ್ ನ ಈ ಚಿತ್ರಕ್ಕೆ ಬೆಂಗಳೂರಿನಲ್ಲೇ ಚಿತ್ರೀಕರಣ ನಡೆದಿದೆ. ಮೇ 24 ರಂದು ನಟಿ ರಾಗಿಣಿ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ “ಬಿಂಗೊ” ಚಿತ್ರತಂಡ ರಾಗಿಣಿ ಅವರಿಗೆ ಶುಭಾಶಯ ತಿಳಿಸಿದೆ. […]
ಚಿರಂಜೀವಿ ವಿಶ್ವಂಭರ ಸಿನಿಮಾಗೆ ಎಂಟ್ರಿ ಕೊಟ್ಟ ಆಶಿಕಾ ರಂಗನಾಥ್
ಚುಟು ಚುಟು ಚೆಲುವೆ ಆಶಿಕಾ ರಂಗನಾಥ್ ಕನ್ನಡದ ಜೊತೆಗೆ ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜೂನಿಯರ್ ಎನ್ ಟಿಆರ್ ಸಹೋದರ ಕಲ್ಯಾಣ್ ರಾಮ್ ಅಭಿನಯದ ಅಮಿಗೋಸ್ ಸಿನಿಮಾ ಮೂಲಕ ತೆಲುಗಿಗೆ ಎಂಟ್ರಿ ಕೊಟ್ಟಿದ್ದ ಆಶಿಕಾ ಆ ಬಳಿಕ ನಾ ಸಾಮಿ ರಂಗ ಚಿತ್ರದಲ್ಲಿ ಅಕ್ಕಿನೇನಿ ನಾಗಾರ್ಜುನ್ ಜೋಡಿಯಾಗಿ ನಟಿಸಿದ್ದರು. ಈಗ ಮೆಗಾ ಸ್ಟಾರ್ ಚಿರಂಜೀವಿ ಜೊತೆ ನಟಿಸುವ ಅವಕಾಶ ತಮ್ಮದಾಗಿಸಿಕೊಂಡಿದ್ದಾರೆ. ಚಿರು ಅಭಿನಯಿಸುತ್ತಿರುವ ‘ವಿಶ್ವಂಭರ’ ಚಿತ್ರದಲ್ಲಿ ಚುಟುಚುಟು ಚೆಲುವೆ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ಅವರ ಪಾತ್ರದ ಬಗ್ಗೆ […]
ಸಹಾರಾ ಸಿನಿಮಾದ ಮೊದಲ ನೋಟ ರಿಲೀಸ್.
ಕನ್ನಡದಲ್ಲಿ ಮಹಿಳಾ ಕ್ರಿಕೆಟ್ ಆಧರಿತ ಸಿನಿಮಾ ಸಹಾರಾ ಟ್ರೇಲರ್ ಬಿಡುಗಡೆಯಾಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಆಸಿಬಿ ತಂಡದ ಮಾಜಿ ಆಟಗಾರ ಗೌತಮ್ ಕೆ ಚಿತ್ರದ ಮೊದಲ ನೋಟ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಟ್ರೇಲರ್ ಬಿಡುಗಡೆ ಬಳಿಕ ಕ್ರಿಕೆಟರ್ ಕೃಷ್ಣಪ್ಪ ಗೌತಮ್ ಮಾತನಾಡಿ, ಕ್ರಿಕೆಟ್ ಕಥೆಯನ್ನು ಒಳಗೊಂಡಿರುವ ಚಿತ್ರ ಇದು. ಟ್ರೇಲರ್ ರಿಯಲಿಸ್ಟಿಕ್ ಆಗಿದೆ. ಇಡೀ ತಂಡಕ್ಕೆ ಒಳ್ಳೆದಾಗಲಿ ಎಂದರು. ನಟಿ ಸಾರಿಕಾ ರಾವ್ ಮಾತನಾಡಿ, ಇದು ಸ್ಫೂರ್ತಿದಾಯಕ […]