ರೆಟ್ರೋ ಸ್ಟೈಲ್’ನಲ್ಲಿ ಮೂಡಿ ಬಂದ “ಹೇಳು ಗೆಳತಿ”
ವಿಹಾನ್, ಅಂಕಿತಾ ಅಮರ್ ಪ್ರಮುಖ ಭೂಮಿಕೆಯಲ್ಲಿರುವ ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾದ ಮತ್ತೊಂದು ಹಾಡು ಬಿಡುಗಡೆಯಾಗಿದೆ. ಚಂದ್ರಜಿತ್ ಬೆಳಿಯಪ್ಪ ನಿರ್ದೇಶನವಿರುವ ಈ ಸಿನಿಮಾದ ‘ಹೇಳು ಗೆಳತಿ’ ಎಂಬ ಮೆಲೋಡಿ ಹಾಡನ್ನು ಇತ್ತೀಚೆಗಷ್ಟೇ ಬಿಡುಗಡೆ ಮಾಡಿದೆ ಚಿತ್ರತಂಡ. ಈ ಹಿಂದೆ ಹರಿಬಿಟ್ಟಿದ್ದ ಹಾಡುಗಳಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ‘ಹೇಳು ಗೆಳತಿ’ ಹಾಡಿಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂಬುದು ತಂಡದ ಅನಿಸಿಕೆ. ರೆಟ್ರೋ ಹಿನ್ನೆಲೆಯಲ್ಲಿ ಮೂಡಿ ಬಂದಿರುವ ಈ ಮಾಧುರ್ಯಭರಿತ ಗೀತೆಯನ್ನು ಪರವಃ ಮ್ಯೂಸಿಕ್ ಯೂಟ್ಯೂಬ್ ಚಾನಲ್ನಲ್ಲಿ ಬಿಡುಗಡೆ […]
ಓ ಮನಸೇ ನಿರ್ದೇಶಕರ ಹೊಸ ಚಿತ್ರ ಪ್ರೊಡಕ್ಷನ್ ನಂ.1
ಈ ಹಿಂದೆ ನವರಂಗಿ, ಹಳ್ಳಿ ಪಂಚಾಯ್ತಿ, ವಿಜಯ ರಾಘವೇಂದ್ರ, ಧರ್ಮ ಕೀರ್ತಿರಾಜ್ ಅಭಿನಯದ ಓ ಮನಸೇ ಸೇರಿದಂತೆ ವಿಭಿನ್ನ ಜಾನರ್ ಚಿತ್ರಗಳನ್ನು ನಿರ್ದೇಶಿಸಿದ್ದ ಡಿ.ಜಿ. ಉಮೇಶ್ ಗೌಡ ಅವರೀಗ ಮತ್ತೊಂದು ಚಿತ್ರಕ್ಕೆ ಕೈ ಹಾಕಿದ್ದಾರೆ. ಇದು ಅವರ ನಿರ್ದೇಶನದ ನಾಲ್ಕನೇ ಚಿತ್ರವಾಗಿದ್ದು, ಲವ್, ಆಕ್ಷನ್ ಜೊತೆಗೆ ಸೆಂಟಿಮೆಂಟ್ ಡ್ರಾಮಾ ಕಥಾಹಂದರ ಒಳಗೊಂಡಿದೆ. ಆಗಸ್ಟ್ 9 ರಿಂದ ಬೆಳಗಾವಿಯಲ್ಲಿ ಮುಹೂರ್ತ ನಡೆಸಿ, ಬೆಳಗಾವಿ, ಬೆಂಗಳೂರು ಸುತ್ತಮುತ್ತ 50 ದಿನಗಳ ಕಾಲ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ. ಚಿತ್ರದಲ್ಲಿ 5 […]
ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಸೇರಿದಂತೆ ಹಲವು ಗಣ್ಯರ ಉಪಸ್ಥಿತಿಯಲ್ಲಿ ಬಿಡುಗಡೆಯಾಯಿತು “ಕೋಟಿ ಕೋಟಿ ರೊಕ್ಕ ಗಳಿಸಿ” ಹಾಡು .
ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ಜನಪ್ರಿಯರಾಗಿರುವ ಹಾಗೂ ಭಾರತೀಯರ ಸೇವಾ ಸಮಿತಿ ಸ್ಥಾಪಕರೂ ಆಗಿರುವ ಹೆಚ್ ಎಂ ರಾಮಚಂದ್ರ (ಹೂಡಿ ಚಿನ್ನಿ) ಅವರು ಈಗ ಗಾಯಕರಾಗಿದ್ದಾರೆ. ಮಂಜುಕವಿ ಅವರು ಬರೆದು ಸಂಗೀತ ನೀಡಿರುವ ಸಾಮಾಜಿಕ ಸಂದೇಶ ಸಾರುವ “ಕೋಟಿ ಕೋಟಿ ರೊಕ್ಕ ಗಳಿಸಿ” ಹಾಡಿಗೆ ಧ್ವನಿಯಾಗಿದ್ದಾರೆ. ಇತ್ತೀಚೆಗೆ ಈ ಹಾಡು ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಶ್ರೀಮಹದೇವ ಸ್ವಾಮಿಜಿ, ವೃಕ್ಷಮಾತೆ ಸಾಲುಮರದ ತಿಮ್ಮಕ್ಕ, ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗಡೆ, ಚೇತನ್ ಅಹಿಂಸ, ನಿರ್ದೇಶಕ ಋಷಿ, ಭಾರತೀಯ ಸೇವಾ […]
ನೈಸ್ ರೋಡ್ ಸಿನಮಾಗೆ ಕಂಟಕ
ನೈಸ್ ರೋಡ್ ಕನ್ನಡ ಸಿನಾಮಾಕ್ಕೆ ನೈಸ್ ರೋಡ್ ಕಂಪನಿಯವರಿಂದಲೆ ಕಂಟಕ ಎದುರಾಗಿದೆ. ನೈಸ್ ರೋಡ್ ಎಂಬ ಹೆಸರನ್ನು ಬದಲಾಯಿಸದೆ ಇದ್ದರೆ ಕಂಪ್ಲೇಂಟ್ ಕೊಡುವುದಾಗಿ ಈ ಸಿನಿಮಾದ ನಿರ್ಮಾಪಕರಾದ ಗೋಪಾಲ್ ಹಳೆಪಾಳ್ಯ ಅವರಿಗೆ ನೋಟಿಸ್ ನೀಡಿದ್ದಾರೆ. ಸಿನಿಮಾ ಈಗ ರಿಲೀಸ್ ಹಂತಕ್ಕೆ ಬಂದಿದ್ದು ಏಲ್ಲಾ ಕಡೆ ನೈಸ್ ರೋಡ್ ಎಂಬ ಹೆಸರಿನಿಂದನೆ ಪ್ರಚಾರವಾಗಿದೆ ಈ ಹಂತದಲ್ಲಿ ಹೆಸರು ಬದಲಾಯಿಸಲು ತುಂಬಾ ಖರ್ಚುವೆಚ್ಚಗಳಾಗುವುದು ಅಲ್ಲದೆ ತುಂಬಾ ಸಮಯವು ಬೇಕಾಗುತ್ತದೆ. ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೈಸ್ ರೋಡ್ ಎಂಬ ಟೈಟಲ್ ರಿಜಿಸ್ಟರ್ […]
ಲಿಖಿತ್ ಶೆಟ್ಟಿ ಹುಟ್ಟುಹಬ್ಬಕ್ಕೆ ಬಿಡುಗಡೆಯಾಯಿತು “ಫುಲ್ ಮೀಲ್ಸ್” ಚಿತ್ರದ ಮೋಷನ್ ಪೋಸ್ಟರ್ .
“ಸಂಕಷ್ಟಕರ ಗಣಪತಿ”, “ಫ್ಯಾಮಿಲಿ ಪ್ಯಾಕ್”, “ಅಬ್ಬಬ್ಬ” ಚಿತ್ರಗಳ ಖ್ಯಾತಿಯ ನಟ ಲಿಖಿತ್ ಶೆಟ್ಟಿ, ಪ್ರಸ್ತುತ ‘ಫುಲ್ ಮೀಲ್ಸ್’ ಚಿತ್ರವನ್ನು ನಿರ್ಮಿಸುವುದರ ಜೊತೆಗೆ ನಾಯಕ ನಟನಾಗೂ ನಟಿಸುತ್ತಿದ್ದಾರೆ. “ಫುಲ್ ಮೀಲ್ಸ್” ಚಿತ್ರದ ನಾಯಕ ಲಿಖಿತ್ ಶೆಟ್ಟಿ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ “ಫುಲ್ ಮೀಲ್ಸ್” ಚಿತ್ರತಂಡ ಲಿಖಿತ್ ಶೆಟ್ಟಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದೆ. ಲಿಖಿತ್ ಶೆಟ್ಟಿ ಇಬ್ಬರು ನಾಯಕಿಯರ ಸಾಂಗತ್ಯದಲ್ಲಿರುವ ರೊಮ್ಯಾಂಟಿಕ್ ಥೀಮ್ ಹೊಂದಿರುವ ಈ ಸುಂದರವಾದ ಮೋಷನ್ […]
ಮೈಸೂರಿನ ನಂದಗೋಕುಲ ಗೃಹ ನಿರ್ಮಾಣ ಸಹಕಾರ ಸಂಘದಿಂದ ಚಿತ್ರತಂಡದ ಸದಸ್ಯರಿಗೆ ಕಡಿಮೆ ಬೆಲೆಗೆ ನಿವೇಶನ ನೀಡುವ ಯೋಜನೆ .
ನಂದಗೋಕುಲ ಗೃಹ ನಿರ್ಮಾಣ ಸಹಕಾರ ಸಂಘ, ಮೈಸೂರಿನಲ್ಲಿ ಚಿತ್ರನಗರಿ ಬಡವಾಣೆ ಮತ್ತು ಗಂಧದ ಗುಡಿ ಫಮಲ್ಯಾಂಡ್ ನಿರ್ಮಿಸುವ ಪ್ರಯತ್ನದಲ್ಲಿದ್ದು, ಆ ಮೂಲಕ ಚಲನಚಿತ್ರರಂಗದ ಎಲ್ಲಾ ವರ್ಗದವರಿಗೆ ಹಾಗೂ ಸಾರ್ವಜನಿಕರಿಗೆ ಒಂದೇ ಸೂರಿನಡಿ ಕಡಿಮೆ ಬೆಲೆಗೆ ನಿವೇಶನ ನೀಡುವ ಯೋಜನೆ ಹಾಕಿಕೊಂಡಿದೆ. ಈ ಕುರಿತು ಮೈಸೂರು, ಮಂಡ್ಯ, ಕೊಡಗು, ಹಾಸನ ಹಾಗೂ ಚಾಮರಾಜನಗರ ಐದು ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸರ್ಕಾರದಿಂದ ಮಾನ್ಯತೆ ಪಡೆದುಕೊಳ್ಳಲಾಗಿದೆ. ಮೈಸೂರು – ಬನ್ನೂರು ರಸ್ತೆಯಲ್ಲಿ ಈಗಾಗಲೇ 50 ಎಕರೆ ಜಾಗವನ್ನು ನೋಡಲಾಗಿದೆ. ಯಾವುದೇ ಅಡೆತಡೆಗಳಿಲ್ಲದೆ […]
ರೆಡ್ ಗೌನ್ ನಲ್ಲಿ ‘ಪಟಾಕ’ ಮಿಂಚಿಂಗ್..’ಡಾರ್ಲಿಂಗ್’ ಸಿನಿಮಾದಲ್ಲಿ ನಭಾ ನಟೇಶ್ ಧಮಾಕ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ವಜ್ರಕಾಯ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಪರಿಚಯವಾದವರು ನಭಾ ನಟೇಶ್. ಪಟಾಕ ಪಾತ್ರದ ಮೂಲಕ ಗಮನಸೆಳೆದ ಈ ಶೃಂಗೇರಿ ಸುಂದರಿ ಈಗ ಟಾಲಿವುಡ್ ಅಂಗಳದಲ್ಲಿ ಬ್ಯುಸಿಯಾಗಿದ್ದಾರೆ. ಡಾರ್ಲಿಂಗ್ ಸಿನಿಮಾ ಮೂಲಕ ಇತ್ತೀಚೆಗಷ್ಟೇ ಪ್ರೇಕ್ಷಕರ ಎದುರು ಬಂದಿದ್ದ ನಭಾ ನಟೇಶ್ ಹೊಸ ಫೋಟೋಶೂಟ್ ನಲ್ಲಿ ಮಿಂಚಿದ್ದಾರೆ. ಕೆಂಪು ಬಣ್ಣದ ಗೌನ್ ನಲ್ಲಿ ಗುಲಾಬಿಯಂತೆ ಕಂಗೊಳಿಸಿರುವ ಪಟಾಕ ನಯಾ ಸ್ಟೈಲ್ ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದೆ. ರೆಡ್ ಗೌನ್ ನಲ್ಲಿ ಬೋಲ್ಡ್ […]
ಸ್ಟೈಲೀಶ್ ಅವತಾರದಲ್ಲಿ ಆಕ್ಷನ್ ಕಿಂಗ್..ಅಜಿತ್ ‘ವಿಡಮುಯಾರ್ಚಿ’ಯಲ್ಲಿ ಅರ್ಜುನ್ ಸರ್ಜಾ ಲುಕ್ ರಿಲೀಸ್.
ಅಜಿತ್ ಕುಮಾರ್ ನಟಿಸುತ್ತಿರುವ ‘ವಿಡಮುಯಾರ್ಚಿ’ ಕಾಲಿವುಡ್ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ. ದಕ್ಷಿಣ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ ನಡಿ ಬಹಳ ಅದ್ಧೂರಿಯಾಗಿ ಈ ಚಿತ್ರ ಮೂಡಿ ಬರುತ್ತಿದೆ. ಅದರಲ್ಲಿಯೂ ಅಜಿತ್ ಡೇಂಜರಸ್ ಸ್ಟಂಟ್ ವಿಡಿಯೋ ವೈರಲ್ ಆದ್ಮೇಲಂತೂ ಪ್ರೇಕ್ಷಕರನ್ನು ಒಂಟಿಗಾಲಲ್ಲಿ ನಿಲ್ಲಿಸಿದೆ. ಇದೀಗ ಮಿಡಮುಯಾರ್ಚಿ ಸಿನಿಮಾದಲ್ಲಿ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಲುಕ್ ಹೇಗಿರಲಿದೆ ಎಂಬ ಕುತೂಹಲಕ್ಕೆ ಬ್ರೇಕ್ ಬಿದ್ದಿದೆ. ತಮ್ಮ ವೈವಿಧ್ಯಮಯ ಪಾತ್ರಗಳ ಮೂಲಕ ದಕ್ಷಿಣ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ […]
“ಮೆಜೆಸ್ಟಿಕ್-2” ನಲ್ಲಿ ದರ್ಶನ್ ಅಭಿಮಾನ
‘ಮೆಜೆಸ್ಟಿಕ್’ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ದೊಡ್ಡ ಹೆಸರು ತಂದುಕೊಟ್ಟ ಚಿತ್ರ. ದಶಕಗಳ ನಂತರ ಹೊಸ ಕಾನ್ಸೆಪ್ಟ್ ಇಟ್ಟುಕೊಂಡು ‘ಮೆಜೆಸ್ಟಿಕ್-2’ ಹೆಸರಿನಡಿ ಚಿತ್ರವೊಂದು ನಿರ್ಮಾಣವಾಗುತ್ತಿದೆ. ಆಗಿನ ಮೆಜೆಸ್ಟಿಕ್ ನಲ್ಲಿ ತೊಂಭತ್ತರ ದಶಕದಲ್ಲಿ ರೌಡಿಸಂ ಹೇಗೆ ನಡೆಯುತ್ತಿತ್ತು ಎಂದು ಹೇಳಿದ್ದರೆ, ಈಗಿನ ಮೆಜೆಸ್ಟಿಕ್-2, ಮೂಲಕ ಅಲ್ಲಿ ನಡೆಯುವ ಕರಾಳ ದಂಧೆಗಳು, ಅಕ್ರಮ ಚಟುವಟಿಕೆಗಳು, ಈಗಲೂ ಅಲ್ಲಿ ರೌಡಿಸಂ ಹೇಗೆ ನಡೆಯುತ್ತೆ ಎಂಬುದನ್ನು ನಿರ್ದೇಶಕ ರಾಮು ಹೇಳ ಹೊರಟಿದ್ದಾರೆ. ಈ ಚಿತ್ರದ ಮೂಲಕ ನಿರ್ಮಾಪಕ, ವಿತರಕ ಶಿಲ್ಪಾ ಶ್ರೀನಿವಾಸ್ ಅವರ […]
ಸಾಮಾಜಿಕ ಜಾಲತಾಣಗಳಲ್ಲಿ ಹೊಸ ದಾಖಲೆ ಬರೆದ “ಕೃಷ್ಣಂ ಪ್ರಣಯ ಸಖಿ” ಚಿತ್ರದ “ದ್ವಾಪರ ದಾಟುತ” ಹಾಡು .
ಪ್ರಶಾಂತ್ ಜಿ ರುದ್ರಪ್ಪ ನಿರ್ಮಾಣದ, ಶ್ರೀನಿವಾಸರಾಜು ಅವರ ನಿರ್ದೇಶನದದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ “ಕಷ್ಣಂ ಪ್ರಣಯ ಸಖಿ” ಚಿತ್ರದ “ಮೈ ಮ್ಯಾರೇಜ್ ಇಸ್ ಫಿಕ್ಸ್ಡ್”, “ಚಿನ್ನಮ್ಮ” ಹಾಗೂ “ದ್ವಾಪರ ದಾಟುತ” ಮೂರು ಹಾಡುಗಳು ಬಿಡುಗಡೆಯಾಗಿದೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಅದರಲ್ಲೂ ಇತ್ತೀಚೆಗೆ ಬಿಡುಗಡೆಯಾದ ಡಾ||ವಿ.ನಾಗೇಂದ್ರ ಪ್ರಸಾದ್ ಬರೆದು, “ಸರಿಗಮಪ” ಖ್ಯಾತಿಯ ಜಸಕರಣ್ ಸಿಂಗ್ ಹಾಡಿರುವ “ದ್ವಾಪರ ದಾಟುತ” ಹಾಡು ಟ್ವಿಟರ್, ಯೂಟ್ಯೂಬ್ ಹಾಗೂ […]