ಕೊರಗಜ್ಜ ಚಿತ್ರ ವೀಕ್ಷಿಸಿ ಫಿದಾ ಆಗಿರುವ ನಿರ್ಮಾಪಕರಿಂದ ನಿರ್ದೇಶಕ ಸುಧೀರ್ ಅತ್ತಾವರ್ ಗೆ ಕಿಯಾ ಕೇರನ್ಸ್ ಗಿಫ್ಟ್!!
ತ್ರಿವಿಕ್ರಮ ಸಿನೆಮಾಸ್ ಮತ್ತು ಸಕ್ಸಸ್ ಫ಼ಿಲ್ಮ್ಸ್ ಬ್ಯಾನರ್ ನಡಿ ಬಹುನಿರೀಕ್ಷಿತ, ಬಹುಕೋಟಿ ಬಜೆಟ್ ನ “ಕೊರಗಜ್ಜ” ಸಿನಿಮಾದ ಮೊದಲ ಪ್ರತಿ ಇನ್ನೇನು ಕೈ ಸೇರಲಿದೆ ಎನ್ನುವ ಸಂದರ್ಭದಲ್ಲಿ , ಸಿನಿಮಾ ನೋಡಿ ನಿರ್ಮಾಪಕ ತ್ರಿವಿಕ್ರಮ ಸಪಲ್ಯರವರು , ಸಿನಿಮಾದ ಗುಣಮಟ್ಟ, ತಾಂತ್ರಿಕತೆ ಮತ್ತು ಮಾಸ್ ಅಪೀಲ್ ಗೆ ಫಿದಾ ಆಗಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ನಿರ್ದೇಶಕ ಸುಧೀರ್ ಅತ್ತಾವರ್ ರವರಿಗೆ ಟಾಪ್ ಎಂಡ್ ಕಿಯಾ ಕೇರನ್ಸ್ ಕಾರನ್ನೇ ಗಿಫ಼್ಟ್ ಮಾಡಿದ್ದಾರೆ. ನಿರ್ದೇಶಕರ ಸ್ರಜನಶೀಲ ತಾಂತ್ರಿಕ ನೈಪುಣ್ಯತೆಯೊಂದಿಗೆ […]
ಬಹು ನಿರೀಕ್ಷಿತ “45” ಚಿತ್ರದ ಚಿತ್ರೀಕರಣ ಮುಕ್ತಾಯ .
ಕರುನಾಡ ಚಕ್ರವರ್ತಿ ಡಾ||ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅಭಿನಯದ, ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಹಾಗೂ ಸೂರಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶ್ರೀಮತಿ ಉಮಾ ರಮೇಶ್ ರೆಡ್ಡಿ ಅವರು ನಿರ್ಮಿಸುತ್ತಿರುವ ಬಹು ನಿರೀಕ್ಷಿತ “45” ಚಿತ್ರ ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿರುವ ಚಿತ್ರ. ಅಪಾರವೆಚ್ಚದಲ್ಲಿ ಅದ್ದೂರಿಯಾಗಿ ಮೂಡಿಬಂದಿರುವ ಈ ಪ್ಯಾನ್ ಇಂಡಿಯಾ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿ, ಕುಂಬಳಕಾಯಿ ಒಡೆಯಲಾಗಿದೆ. ಈ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ […]
ಲಾಪತಾ ಲೇಡೀಸ್ ಸಂಭಾಷಣೆಗಾರ ಸೋನು ಆನಂದ್ ಜೊತೆಗೆ ಗುರುರಾಜ್ ಕುಲಕರ್ಣಿ ಮುಂದಿನ ಚಿತ್ರಕ್ಕೆ ತಯಾರಿ!
ಕನ್ನಡದಲ್ಲಿ ಈಗಾಗಲೇ ‘ಅಮೃತ್ ಅಪಾರ್ಟ್ಮೆಂಟ್’ ಮತ್ತು ‘ದ ಜಡ್ಜ್ ಮೆಂಟ್’ ಸಿನೆಮಾಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿರುವ ನಿರ್ದೇಶಕ ಕಂ ನಿರ್ಮಾಪಕ ಗುರುರಾಜ ಕುಲಕರ್ಣಿ (ನಾಡಗೌಡ) ಸದ್ದಿಲ್ಲದೆ ಹೊಸ ಸಿನೆಮಾಕ್ಕೆ ತಯಾರಿ ನಡೆಸಿದ್ದಾರೆ. ಬಹುಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ ಈ ಸಿನೆಮಾದ ಕಥಾಹಂದರ ಈಗಾಗಲೇ ಪೂರ್ಣಗೊಂಡಿದ್ದು, ಈ ಸಿನೆಮಾಕ್ಕೆ ಹಿಂದಿಯ ‘ಲಾಪತ ಲೇಡಿಸ್’ ಖ್ಯಾತಿಯ ಸೋನು ಆನಂದ್ ಬರಹಗಾರರಾಗಿ ಎಂಟ್ರಿಯಾಗಿದ್ದಾರೆ. ಇತ್ತೀಚೆಗಷ್ಟೇ ಹಿಂದಿಯ ‘ಲಾಪತ ಲೇಡಿಸ್’ ಸಿನೆಮಾ ಭಾರತದಿಂದ ಅಧಿಕೃತವಾಗಿ ‘ಆಸ್ಕರ್ ಪ್ರಶಸ್ತಿ’ ನಾಮನಿರ್ದೇಶನವಾಗಿದೆ. ‘ಆಮೀರ್ ಖಾನ್ ಪ್ರೊಡಕ್ಷನ್’ ನಿರ್ಮಾಣದ […]
ಸೆ.29ಕ್ಕೆ ದುಬೈನಲ್ಲಿ ಶ್ರೀಮಂತ ಚಿತ್ರದ ವಿಶೇಷ ಪ್ರದರ್ಶನ
ಬಾಲಿವುಡ್ ಸ್ಟಾರ್ ಸೋನು ಸೂದ್ ನಟಿಸಿರುವ, ಹಾಸನ್ ರಮೇಶ್ ನಿರ್ದೇಶನದ ‘ಶ್ರೀಮಂತ’ ಚಿತ್ರದ ವಿಶೇಷ ಪ್ರದರ್ಶನ ಸೆ.29ರಂದು ದುಬೈನಲ್ಲಿ ನಡೆಯಲಿದೆ. ನಮ್ಮ ರೈತರ ಪರಿಶ್ರಮ, ಬದುಕು ಬವಣೆ ಹಾಗೂ ಹೋರಾಟದ ಕಥನವನ್ನು ಒಳಗೊಂಡ ಈ ಚಿತ್ರ ವಿಮರ್ಶಕರ ಹಾಗೂ ವೀಕ್ಷಕರಿಂದ ಪ್ರಶಂಸೆ ಗಳಿಸಿ ಯಶಸ್ವಿ ಪ್ರದರ್ಶನ ಕಂಡಿತ್ತು. ಸೋನು ಸೂದ್ ಅಭಿನಯ ಹಾಗೂ ಹಂಸಲೇಖ ಅವರ ಸಾಹಿತ್ಯ, ಸಂಗೀತದ ಹಾಡುಗಳು ಶ್ರೀಮಂತ ಚಿತ್ರದ ಹೈಲೈಟ್ ಆಗಿತ್ತು. ದುಬೈನ ಅಲ್ ಘುರೈರ್ ಸೆಂಟರ್ ನಲ್ಲಿ ಸೆ.29ರ ಮ.2ಗಂಟೆಗೆ ನಡೆಯಲಿರುವ […]
“ಸಂಗೀತ ಎಂಬುದು ಸಾಗರದಷ್ಟೇ ಆಳ, ಅಷ್ಟೇ ವಿಶಾಲ.. ಕಲಿತಷ್ಟು ಇಲ್ಲಿ ಹೊಸದು ಸಿಗುತ್ತಲೇ ಹೋಗುತ್ತದೆ” ಸಂಗೀತ ನಿರ್ದೇಶಕ ಚೇತನ್ ರಾವ್”
ಒಂದು ಸಿನಿಮಾ ಗೆಲ್ಲಬೇಕಾದರೆ, ನಟರ ನಟನೆ ಮಾತ್ರವಷ್ಟೇ ಅಲ್ಲದೆ, ತೆರೆಹಿಂದಿನ ತಾಂತ್ರಿಕ ಬಳಗದ ಕೆಲಸವೂ ಅಷ್ಟೇ ಪ್ರಮಾಣದಲ್ಲಿರಬೇಕು. ತೆರೆಮೇಲೆ ಕಲಾವಿದರು ಮೋಡಿ ಮಾಡಿದರೆ, ಅವರಿಗೆ ಕ್ಯಾಮರಾ, ಸಂಗೀತ, ಹಿನ್ನೆಲೆ ಸಂಗೀತ ಪೂರಕವಾಗಿರಬೇಕು. ಕಿವಿಗಿಂಪು ನೀಡುವ ಹಾಡುಗಳು ಮನ ಕುಣಿಸಬೇಕು. ಇಷ್ಟೆಲ್ಲ ಪೀಠಿಕೆ ಯಾಕೆ ಅಂದರೆ, ಇದೀಗ ಕನ್ನಡದ ಯುವ ಪ್ರತಿಭಾನ್ವಿತ ಸಂಗೀತ ನಿರ್ದೇಶಕ ಚೇತನ್ ರಾವ್ ಇದೀಗ ತಮ್ಮ ಸಂಗೀತದ ಮೂಲಕವೇ ಗಮನ ಸೆಳೆಯುತ್ತಿದ್ದಾರೆ. ಹೌದು, ಕನ್ನಡಿಗ ಅದರಲ್ಲೂ ಬೆಂಗಳೂರಿಗರಾದ ಚೇತನ್ ರಾವ್, ಆರ್ವಿ ಕಾಲೇಜಿನಲ್ಲಿ ಇಂಜಿನಿಯರಿಂಗ […]
ಚಂದನವನದ ಗಣ್ಯರಿಂದ ಬಿಡುಗಡೆಯಾಯಿತು “ಗೋಪಿಲೋಲ” ಚಿತ್ರದ ಟ್ರೇಲರ್.
ಸುಕೃತಿ ಚಿತ್ರಾಲಯ ಲಾಂಛನದಲ್ಲಿ ಎಸ್ ಆರ್ ಸನತ್ ಕುಮಾರ್ ನಿರ್ಮಿಸಿರುವ, ಮಂಜುನಾಥ್ ಅರಸು ಅವರ ಸಹ ನಿರ್ಮಾಣವಿರುವ ಹಾಗೂ ಆರ್ ರವೀಂದ್ರ ನಿರ್ದೇಶನದ “ಗೋಪಿಲೋಲ” ಚಿತ್ರ ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ ಎಲ್ಲರ ಮನಸ್ಸಿಗೂ ಹತ್ತಿರವಾಗಿದೆ. ಚಿತ್ರ ಅಕ್ಟೋಬರ್ 4ರಂದು ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಇತ್ತೀಚಿಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಎಸ್.ವಿ.ರಾಜೇಂದ್ರಸಿಂಗ್ ಬಾಬು, ಜೋಸೈಮನ್, ದೊಡ್ಡಣ್ಣ, ಶ್ರೀನಗರ ಕಿಟ್ಟಿ, ಕೆ.ಮಂಜು, ಎಂ.ಜಿ.ರಾಮಮೂರ್ತಿ, ಕೃಷ್ಣೇಗೌಡ, ಪಿ.ಸಿ.ಶೇಖರ್ ಮುಂತಾದ ಗಣ್ಯರು “ಗೋಪಿಲೋಲ” ಚಿತ್ರದ […]
ಬಿಗ್ಬಾಸ್ ಕನ್ನಡ ಸೀಸನ್ 11ರ ಆರಂಭಕ್ಕೆ ದಿನಗಣನೆ; ಸೆ. 29ರ ಸಂಜೆ 6ಗಂಟೆಗೆ ಗ್ರ್ಯಾಂಡ್ ಓಪನಿಂಗ್
ಕಿಚ್ಚ ಸುದೀಪ್ ಶೋನ ಸೂತ್ರಧಾರ ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣಲಿರುವ ಬಿಗ್ ಬಾಸ್ ಕನ್ನಡ ಸೀಸನ್ 11ರ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಕಳೆದ ಸೀಸನ್ 10ರ ಬಹುದೊಡ್ಡ ಯಶಸ್ಸಿನ ಬಳಿಕ ದೊಡ್ಡ ಜವಾಬ್ದಾರಿಯೊಂದಿಗೆ ಕಲರ್ಸ್ ಕನ್ನಡ ಮತ್ತೊಂದು ಸೀಸನ್ ಜತೆಗೆ ಆಗಮಿಸುತ್ತಿದೆ. ಈಗಾಗಲೇ ಪ್ರೋಮೋಗಳ ಮೂಲಕವೇ ಗಮನ ಸೆಳೆದಿರುವ ಸೀಸನ್ 11, ಇನ್ನೇನು ಶೀಘ್ರದಲ್ಲಿಯೇ ಆರಂಭವಾಗಲಿದೆ. ಈ ಸಲದ ವಿಶೇಷತೆಗಳ ಬಗ್ಗೆ ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಕಿಚ್ಚ ಸುದೀಪ್, ಅಲೋಕ್ ಜೈನ್ ಸೀನಿಯರ್ ಎಕ್ಸಿಕ್ಯೂಟಿವ್ ವೈಸ್ […]
ಮೊದಲ ಚಿತ್ರದಲ್ಲೇ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಸಮರ್ಜಿತ್ ಲಂಕೇಶ್
ಸಮರ್ಜಿತ್ ಲಂಕೇಶ್, ಗೌರಿ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಟ್ಟ ನಟ. ದೊಡ್ಡ ಸ್ಟಾರ್ ಆಗಬೇಕು ಎಂದು ಕನಸನ್ನು ಹೊತ್ತು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ಸಮರ್ಜಿತ್ ಮೊದಲ ಸಿನಿಮಾದಲ್ಲೇ ಕನ್ನಡ ಸಿನಿಮಾ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಅದ್ಭುತ ಅಭಿನಯದ ಮೂಲಕ ಫ್ಯೂಚರ್ ಸ್ಟಾರ್ ಎನ್ನುವ ಭರವಸೆ ಮೂಡಿಸಿರುವ ನಟ ಸಮರ್ಜಿತ್ ಖ್ಯಾತ ನಿರ್ದೇಶಕ, ಪತ್ರಕರ್ತ ಇಂದ್ರಿಜಿತ್ ಲಂಕೇಶ್ ಅವರ ಪುತ್ರ. ಗೌರಿ ಸಿನಿಮಾದ ನಟನೆಗಾಗಿ ಸಮರ್ಜಿತ್ ಅವರಿಗೆ ‘ಲುಮಿಯರ್ ನ್ಯಾಷನಲ್ ಅವಾರ್ಡ್’ ಬಂದಿದೆ. ಅವಾರ್ಡ್ ಪಡೆದ ಖುಷಿಯಲ್ಲಿರುವ ಹ್ಯಾಂಡಮ್ […]
ಪ್ರೇಕ್ಷಕರ ಮನಗೆದ್ದ ಚಿತ್ರ “ರಮ್ಮಿ ಆಟ”
ಸಾಮಾಜಿಕ ಜಾಲತಾಣಗಳಲ್ಲಿ ಮುಗ್ಧ ಯುವಕರನ್ನು ರಂಗು ರಂಗಿನ ಆಟಗಳ ಮೂಲಕ ಸೆಳೆಯುತ್ತ, ಅಧಿಕ ಲಾಭದ ಆಸೆ ತೋರಿಸಿ, ಅವರನ್ನು ವಂಚಿಸುವ ಆನ್ಲೈನ್ ಗೇಮ್ ರೂವಾರಿಗಳನ್ನು ನ್ಯಾಯವಾದಿಯೊಬ್ಬ ಹೇಗೆ ಕಟಕಟೆಗೆ ತಂದು ನಿಲ್ಲಿಸಿದ ಎಂಬುದನ್ನು ರೋಚಕವಾಗಿ ನಿರೂಪಿಸಿರುವ ಚಿತ್ರ ರಮ್ಮಿಆಟ. ಕಳೆದ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾದ ಈ ಚಿತ್ರವೀಗ ಯಶಸ್ವಿ ಪ್ರದರ್ಶನ ಕಾಣುತ್ತಿದೆ, ಬುಕ್ ಮೈ ಷೋದಲ್ಲಿ 9.4 ರೇಟಿಂಗ್ ಪಡೆಯುವ ಮೂಲಕ ಈವಾರ ತೆರೆಕಂಡ ಅತ್ಯುತ್ತಮ ಚಿತ್ರಗಳಲ್ಲಿ ಒಂದು ಎನಿಸಿಕೊಂಡಿದೆ. ಇಂಥ ಆಟಗಳನ್ನು ಪ್ರೊಮೋಷನ್ ಮಾಡುವ ಸಿನಿಮಾ […]
ಅಮರಾವತಿ ಪೋಲಿಸ್ ಸ್ಟೇಷನ್ ಟೀಸರ್ ವಿನೋದ್ ರಾಜ್ ಬಿಡುಗಡೆ
ಕಡಲತೀರದ ಕಾಲ್ಪನಿಕ ಊರು ಅಮರಾವತಿಯಲ್ಲಿ ನಡೆಯುವ ಮಿಸ್ಸಿಂಗ್, ಮರ್ಡರ್, ಅಚ್ಚರಿ ಎನಿಸುವ ಘಟನೆಗಳ ಸುತ್ತ ನಡೆಯುವ ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಒಳಗೊಂಡ ಚಿತ್ರ “ಅಮರಾವತಿ ಪೊಲೀಸ್ ಸ್ಟೇಷನ್”. ಪುನೀತ್ ಅರಸೀಕೆರೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರದ ಟೀಸರನ್ನು ದಿ.ಲೀಲಾವತಿ ಅವರ ಪುತ್ರ, ಹಿರಿಯನಟ ವಿನೋದ್ ರಾಜ್ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ‘ಅಮರಾವತಿ ಕರಾವಳಿಯ ಒಂದು ಭಾಗ, ಇಲ್ಲಿ ಮುತ್ತೂ ಸಿಗುತ್ತೆ, ಮೃತ್ಯುನೂ ಸಿಗುತ್ತೆ, ಇಲ್ಲಿನ ಸಮುದ್ರದ ಅಲೆ ಕಲೆನೂ ಹೇಳುತ್ತೆ, ಎಗ್ರಾಡುದ್ರೆ […]