ಗೂಳಿಹಟ್ಟಿ, ಹಾಲು ತುಪ್ಪ ಮತ್ತು ಈಗಷ್ಟೇ ತೆರೆಗೆಬಂದಿರರುವ ‘ಉಡುಂಬಾ’ ಸಿನಿಮಾಗಳಲ್ಲಿ ಹೀರೋ ಆಗಿ ಕಾಣಿಸಿಕೊಂಡಿರುವ ನಟ ಪವನ್ ಶೌರ್ಯ.
ಈಗ ನಾಲ್ಕನೇ ಸಿನಿಮಾಗೇ ಖ್ಯಾತ ನಿರ್ದೇಶಕ ಎನ್. ಓಂಪ್ರಕಾಶ್ ಕೈಹಿಡಿದಿದ್ದಾರೆ. ಕನ್ನಡ ಚಿತ್ರರಂಗದ ಬಹುತೇಕ ಸ್ಟಾರ್ ನಟನ ಸಿನಿಮಾಗಳನ್ನು ನಿರ್ದೇಶಿಸಿರುವ ಓಂ ಪ್ರಕಾಶ್ ರಾವ್ ಈ ಬಾರಿ ಪವನ್ ಶೌರ್ಯ ಅವರಿಗಾಗಿ ನಿರ್ದೇಶಿಸಲಿರುವ ಚಿತ್ರಕ್ಕೆ ‘ಏಂ ೦೧ ಒಔ ೭೮೬’ ಎನ್ನುವ ಹೆಸರಿಟ್ಟಿದ್ದಾರೆ.
ಪವನ್ ಶೌರ್ಯ ಜೊತೆಗೆ ಮೆಘನಾ ಭಾರದ್ವಾಜ್, ಕೃತಿಕಾ, ಮಂಜೇಶ್, ಸ್ವಸ್ತಿಕ್ ಶಂಕರ್, ಅಚ್ಯುತ್ ಕುಮಾರ್, ಸುಧಾ ಬೆಳವಾಡಿ, ಚಿತ್ರಾ ಶೆಣೈ ಮುಂತಾದವರು ನಟಿಸಲಿದ್ದಾರೆ. ಚಿತ್ರಕ್ಕೆ ಕತೆ, ಚಿತ್ರಕತೆ ಬರೆದು ಎನ್. ಓಂ ಪ್ರಕಾಶ್ ರಾವ್ ನಿರ್ದೇಶಿಸಲಿದ್ದಾರೆ.
ಮೂಲತಃ ಬೆಂಗಳೂರಿನ ಕೆಂಗೇರಿಯವರಾದ ಪವನ್ ಜಿಮ್ ತರಬೇತುದಾರನಾಗಿ ಕೆಲಸ ಮಾಡಿಕೊಂಡಿದ್ದವರು. ಆರಂಭದ ದಿನಗಳಲ್ಲಿ ಅವಕಾಶಕ್ಕಾಗಿ ಸಿಕ್ಕ ಸಿಕ್ಕಲ್ಲೆಲ್ಲಾ ಆಡಿಷನ್ ಕೊಟ್ಟು ಬರುತ್ತಿದ್ದರು. ಅದೊಂದು ದಿನ ಉಪ್ಪಿ-೨ ಚಿತ್ರಕ್ಕಾಗಿ ಆಡಿಷನ್ ನಡೆದಿತ್ತು. ಹೇಗಾದರೂ ಮಾಡಿ ಈ ಸಿನಿಮಾದಲ್ಲೊಂದು ಛಾನ್ಸು ಪಡೆಯಬೇಕು ಅನ್ನೋ ಆಸೆಯಿಂದ ಹೋದ ಪವನ್ ಎದುರಾಗಿದ್ದು ದೊಡ್ಡ ಅವಮಾನ. ಆವತ್ತೇ ಪವನ್ ‘ನಾನು ಸಿನಿಮಾ ಹೀರೋ ಆಗಲೇಬೇಕು’ ಅಂತಾ ಡಿಸೈಡು ಮಾಡಿದ್ದರು. ಅದೇ ಹೊತ್ತಿಗೆ ನಿರ್ದೇಶಕ ಶಶಾಂಕ್ ರಾಜ್ ತಮ್ಮ ಗೂಳಿ ಹಟ್ಟಿ ಚಿತ್ರ ಆರಂಭಿಸುವ ತಯಾರಿಯಲ್ಲಿದ್ದರು. ಎಂದಿನಂತೆ ಅಲ್ಲಿಗೂ ಹೋಗಿ ಆಡಿಷನ್ ನೀಡಿದ್ದ ಪವನ್ ಸೂರ್ಯಗೆ ಆ ಚಿತ್ರದಲ್ಲಿ ನಿರೀಕ್ಷೆಗೂ ಮೀರಿದ ಪಾತ್ರವೊಂದು ಸಿಕ್ಕಿತ್ತು. ಪವನ್ಗಿದ್ದ ಪ್ರತಿಭೆಗೆ ತಕ್ಕಂತಾ ಅವಕಾಶ ನೀಡಿದ್ದರು ಶಶಾಂಕ್ ರಾಜ್. ಆ ನಂತರ ಹಾಲು ತುಪ್ಪ, ಉಡುಂಬಾ ತಮಿಳು ಮತ್ತು ತೆಲುಗಿನ ಒಂದೊಂದು ಸಿನಿಮಾಗಳಲ್ಲೂ ಪವನ್ ಪಾತ್ರ ನಿರ್ವಹಿಸುವಂತಾಯಿತು. ಈಗ ಓಂಪ್ರಕಾಶ್ ರಂಥಾ ಅನುಭವೀ ನಿರ್ದೇಶಕರೊಟ್ಟಿಗೆ ಸಿನಿಮಾ ಆರಂಭಿಸುತ್ತಿರುವುದರಿಂದ ಪವನ್ ಶೌರ್ಯ ಸಹಜವಾಗಿಯೇ ಖುಷಿಯಾಗಿದ್ದಾರೆ.
Comments