ಭಾರತದ ಮೊದಲ ವಿಶ್ವಕಪ್ ರುವಾರಿ ಕ್ರಿಕೆಟಿಗ ಕಪಿಲ್ ದೇವ್ ಅವರ ಬಯೋಪಿಕ್ ಸಿನಿಮಾ 83 ತೆರೆಗೆ ಬರಲಿರುವುದು ಎಲ್ಲರಿಗೂ ತಿಳಿದ ವಿಚಾರವೇ. ಚಿತ್ರದಲ್ಲಿ ರಣವೀರ್ ಕಪಿಲ್ ದೇವ್ ಪಾತ್ರವನ್ನು ಮಾಡುತ್ತಿದ್ದಾರೆ ಎಂಬ ಸುದ್ದಿ ರಿವೀಲ್ ಆಗುತ್ತಿದ್ದಂತೆ ಅಭಿಮಾನಿಗಳಲ್ಲಿ ರಣವೀರ್ ಹೇಗೆ ಕಾಣಬಹುದೆಂಬ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿತ್ತು. ಇತ್ತೀಚಿಗಷ್ಟೇ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಇದರಲ್ಲಿ ರಣವೀರ್ ಥೇಟ್ ಕಪಿಲ್ ದೇವ್ ರಂತೆ ಕಾಣುತ್ತಿದ್ದಾರೆ. ಬಿ ಟೌನಿನ ಮಂದಿ ಫಸ್ಟ್ ಲುಕ್ ನೋಡಿ ವಾಹ್ ಎಂದರೆ, ಸ್ವತಃ ಕಪಿಲ್ ದೇವ್ ಅವರೇ ರಣಬೀರ್ ಲುಕ್ಕಿಗೆ ಫಿದಾ ಆಗಿದ್ದಾರೆ.
https://twitter.com/RanveerOfficial/status/1147320290092945408
ಇನ್ನು ಫಸ್ಟ್ ಲುಕ್ ನೋಡಿ ಸಾವಿರಾರು ಅಭಿಮಾನಿಗಳು ಹಾಗೂ ಸ್ನೇಹಿತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಟ ಆಯುಷ್ಮಾನ್ ಖುರಾನ ‘ವಾಹ್ ವಾಹ್ ವಾಹ್’ ಎಂದು ಕಮೆಂಟ್ ಮಾಡಿದ್ದರೆ, ಕ್ರಿಕೆಟಿಗ ಶಿಖರ್ ಧವನ್ ‘ನೋಡಲು ಥೇಟ್ ಕಪಿಲ್ರಂತೆಯೇ ಕಾಣುತ್ತಿದ್ದೀರಾ’ ಎಂದಿದ್ದಾರೆ. ಧಡಕ್ ನಿರ್ದೇಶಕ ಶಶಾಂಕ್ ಖೇತನ್ ಅವರು ‘ಓಹ್, ಪಾತ್ರಗಳಿಗೆ ನೀವು ಜೀವ ತುಂಬಿ ಉಸಿರಾಡುತ್ತೀರಿ’ ಎಂದು ಹೊಗಳಿದ್ದಾರೆ. ಈ ಚಿತ್ರವನ್ನು ಕಬೀರ್ ಖಾನ್ ನಿರ್ದೇಶಿಸುತ್ತಿದ್ದು, ಈ ಚಿತ್ರದಲ್ಲಿ ಕಪಿಲ್ ಪತ್ನಿಯಾಗಿ ದೀಪಿಕಾ ಪಡುಕೋಣೆ ನಟಿಸುತ್ತಿರುವುದು ವಿಶೇಷ.
Comments