ಹೆಣ್ಣಿನ ಮೇಲೆ ಗಂಡಿನ ಶೋಷಣೆ, ಅತ್ಯಾಚಾರದ ಕುರಿತಾದ ಸುದ್ದಿಗಳನ್ನು ನೋಡುತ್ತಲೇ ಕೇಳುತ್ತಲೇ ಇದ್ದೇವೆ. ಸ್ತ್ರೀಯನ್ನು ದೈವೀ ಸ್ವರೂಪದಲ್ಲಿ ಸ್ವೀಕರಿಸಿರುವ ಭಾರತದಂತಹ ರಾಷ್ಟ್ರದಲ್ಲೂ ಸ್ತ್ರೀಯರನ್ನು ನಡೆಸಿಕೊಳ್ಳುತ್ತಿರುವ ರೀತಿಯ ಕುರಿತಾಗಿ ಬೆಂಕಿ ಹತ್ತಿ ಕೆಂಡ ಆರುವವರೆಗೂ ವಿರೋಧಿ ಘೋಷಣೆಗಳು, ಧರಣಿಗಳು, ಮೆರವಣಿಗೆಗಳನ್ನು ಮಾಡುತ್ತಲೇ ಇದ್ದೇವೆ. ಇರಲಿ. ಹಾಗಂತ ಹೆಣ್ಣು ಮಕ್ಕಳು ಮಾತ್ರ ಶೋಷಣೆಗೆ ಒಳಗಾಗುವರೇ? ಎಂಬ ಪ್ರಶ್ನೆ ಸಾಮಾನ್ಯವಾಗಿ ಮೂಡುವುದು ಸಹಜ. ಏಕೆಂದರೆ ಹೆಣ್ಣಿನಂತೆ ಗಂಡು ಸಹ ಕಾಮದ ಕೆಂಗಣ್ಣಿಗೆ ಗುರಿಯಾಗಿ, ದೌರ್ಜನ್ಯಕ್ಕೆ ಗುರಿಯಾದ ಸಾಕಷ್ಟು ಸಂಗತಿಗಳು ನಮ್ಮ ಕಣ್ಣ ಮುಂದೆಯೇ ಇದೆ ಅಲ್ಲವೇ. ಹಾಗಾದರೆ ಗಂಡಿಗಾಗುತ್ತಿರುವ ಶೋಷಣೆಗೆ ಧ್ವನಿ ಎತ್ತುವರಾರು? ಹೆಣ್ಣಿನಿಂದ ಗಂಡು ಸಹ ದೌರ್ಜನ್ಯಕ್ಕೆ ಒಳಗಾಗುತ್ತಾನೆಂಬ ಎಳೆಯನ್ನಿಟ್ಟುಕೊಂಡು ಹೊಸಬರ ಎ ಎನ್ನುವ ಸಿನಿಮಾ ರೆಡಿಯಾಗಿದೆ.
ಇತ್ತೀಚಿಗೆ ಎ ಚಿತ್ರತಂಡ ಟ್ರೇಲರ್ ಒಂದನ್ನು ರಿಲೀಸ್ ಮಾಡಿದ್ದು, ಟ್ರೇಲರ್ ನಲ್ಲಿಯೇ ಮಹಿಳೆಯರಲ್ಲಿಯೂ ಇರಬಹುದಾದ ಕ್ರೌರ್ಯತೆ, ಕಾಮುಕತೆಯನ್ನು ಬಿಚ್ಚಿಡುವ ಪ್ರಯತ್ನವನ್ನು ನಿರ್ದೇಶಕರು ಮಾಡಿರುವುದು ವಿಶೇಷವಾಗಿದೆ. ಟ್ರೇಲರ್ ನಲ್ಲಿ ಮೂಡಿಬಂದಿರುವ ಡಬಲ್ ಮೀನಿಂಗ್ ಡೈಲಾಗ್ ಗಳು, ಪ್ರಸ್ತುತ ಸಮಾಜದ ಸ್ಥಿತಿಗತಿಗಳ ಅನಾವರಣ, ತಾರಾಬಳಗದ ಮೈ ಮರೆತ ನಟನೆ ಎಲ್ಲವೂ ಎ ಚಿತ್ರಕ್ಕೆ ಪ್ಲಸ್ ಆಗಲಿದೆ. ಇನ್ನು ಎ ಧಮ್ಮಿದ್ದವರಿಗೆ ಮಾತ್ರ ಎನ್ನುವ ಅಡಿ ಬರಹ ಪಡ್ಡೆ ಹೈಕಳನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಟ್ರೇಲರ್ ನೋಡುವಾಗ ಚಿತ್ರದಲ್ಲಿ ಸಾಮಾಜಿಕ ಸಂದೇಶವನ್ನು ನೀಡುವ ಜತೆಗೆ, ಹಾರರ್ ಬೇಸ್ಡ್ ಸಿನಿಮಾ ವಾಗಿರಬಹುದೆಂಬ ಅನುಮಾನ ಕಾಡುವುದು ಸಹಜವಾಗಿದ್ದರೂ, ಸದ್ಯದಲ್ಲೇ ಅದಕ್ಕೆ ಉತ್ತರವೂ ದೊರೆಯಲಿದೆ. ಈ ಸಿನಿಮಾವನ್ನು ರಾಘವ ಚಂದ್ರ ನಿರ್ದೇಶನ ಮಾಡಿದ್ದು, ಅವರದೇ ಬ್ಯಾನರ್ ನಲ್ಲಿ ನಿರ್ಮಾಣವನ್ನು ಮಾಡಿದ್ದಾರೆ. ಇನ್ನು ಬೋಲ್ಡ್ ನಟನೆಯಲ್ಲಿ ರಚನಾ, ದಶರತ್, ರಚನಾ ಗೌಡ, ಸ್ವಾತಿ, ರಾಘವ್ ಸೂರ್ಯ ಅಭಿನಯಿಸಿದ್ದಾರೆ.
No Comment! Be the first one.