ಮಾಣಿಕ್ಯ ಅನ್ನೋ ಸಿನಿಮಾ ಬಂದಿದ್ದೇ ಬಂದಿದ್ದು ಕ್ರೇಜ಼ಿಸ್ಟಾರ್ ರವಿಚಂದ್ರನ್ ಅವರ ಇಮೇಜೇ ಬದಲಾಗಿಹೋಯ್ತು!
ಕೆಲ ವರ್ಷಗಳಿಂದ ಸ್ಯಾಂಡಲ್‌ವುಡ್ಡು ರವಿಚಂದ್ರನ್ ಅವರನ್ನು ಸತತವಾಗಿ ನಿರ್ದಿಷ್ಟವಾದ ಇಮೇಜೊಂದಿಗೆ ತಗುಲಿಹಾಕಿತ್ತು. ಅದನ್ನು ಬ್ರೇಕ್ ಮಾಡಿಸಿದವರು ಕಿಚ್ಚ ಸುದೀಪ್. ಮಾಣಿಕ್ಯ ಸಿನಿಮಾ ಆದ ನಂತರ ಬಂದ ಚಿತ್ರಗಳಲ್ಲಿ ರವಿಚಂದ್ರನ್ ಒಂದಕ್ಕಿಂತಾ ಒಂದು ಭಿನ್ನ ಗೆಟಪ್ಪುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಈಗ ಬಿಡುಗಡೆಗೆ ತಯಾರಾಗಿರುವ ಆ ದೃಶ್ಯ ಸಿನಿಮಾದಲ್ಲಿ ರವಿಚಂದ್ರನ್ ಮೂವತ್ತು ವರ್ಷದ ಯುವಕನಾಗಿ ಮಿಂಚುತ್ತಿದ್ದಾರೆ.

ಅವರ ಹೇರ್ ಸ್ಟೈಲ್, ಕಾಸ್ಟೂಮ್ ಸೇರಿದಂತೆ ಪ್ರತಿಯೊಂದನ್ನೂ ಬದಲಿಸಿರುವ ಈ ಚಿತ್ರದ ನಿರ್ದೇಶಕ ಶಿವಗಣೇಶ್ ರವಿಚಂದ್ರನ್ ಅವರನ್ನು ಯಂಗ್ ಬಾಯ್ ಥರಾ ರೂಪಾಂತರಗೊಳಿಸಿದ್ದಾರೆ. ಈ ವಿಚಾರವಾಗಿ ಮಾತಾಡುತ್ತಾ ಸ್ವತಃ ರವಿಚಂದ್ರನ್ ಅವರು ಹೇಳಿದ್ದು ಹೀಗೆ ‘ಅದೇನು ಅಂತಾ ಗೊತ್ತಿಲ್ಲ. ಒಬ್ಬೊಬ್ಬರೂ ನನ್ನನ್ನು ಒಂದೊಂದು ರೀತಿಯಲ್ಲಿ ನೋಡುವ ಆಸೆ ವ್ಯಕ್ತಪಡಿಸುತ್ತಿದ್ದಾರೆ. ಕೆಲವರಿಗೆ ಅಪ್ಪನಾಗಿ, ಅಣ್ಣನಾಗಿ ನೋಡುವಾಸೆ, ಮತ್ತೊಬ್ಬರಿಗೆ ಎಪ್ಪತ್ತರ ಮುದುಕನನ್ನಾಗಿಸುವ ಬಯಕೆ. ಮತ್ತೂ ಕೆಲವರಿಗೆ ನನ್ನನ್ನು ಕೃಷ್ಣನನ್ನಾಗಿ ನೋಡುವ ಆಸೆ. ಇಲ್ಲಿ ನೋಡಿದರೆ ನಿರ್ದೇಶಕ ಶಿವಗಣೇಶ್ ನನ್ನನ್ನು ಮೂವತ್ತು ವರ್ಷದ ಯುವಕನನ್ನಾಗಿಸುವ ಕನಸು. ಈ ಸಿನಿಮಾ ಶೂಟಿಂಗ್ ಟೈಮಲ್ಲಿ ನನಗಿರುವ ಹೊಟ್ಟೆ ಕಾಣಿಸಬಾರದು ಅಂತಾ ಯಾವುದೋ ಟೀ ಶರ್ಟ್ ಹಾಕಿಸಿ ನಿಲ್ಲಿಸಿದ್ದರು. ನೋಡೋ ತನಕ ನೋಡಿ ಅದನ್ನು ಬಿಚ್ಚೆಸೆದು ನನ್ನ ಹೊಟ್ಟೆಯನ್ನ ನಾನೇ ಒಳಗೆ ಎಳೆದುಕೊಳ್ತೀನಿ ಬಿಡಪ್ಪಾ’ ಅಂದಿದ್ದೆ. ಒಟ್ಟಿನಲ್ಲಿ ನಾನು ನಿರೀಕ್ಷೆಯೂ ಮಾಡದಂಥಾ ಪಾತ್ರಗಳು ನನ್ನನ್ನು ಅರಸಿ ಬರುತ್ತಿವೆ. ನನ್ನನ್ನು ಹೀಗೆ ಭಿನ್ನಭಿನ್ನವಾಗಿ ನೋಡಲು ಬಯಸುತ್ತಿರುವ ನಿರ್ದೇಶಕರಿಗೂ, ಅದನ್ನು ಒಪ್ಪಿಕೊಳ್ಳುತ್ತಿರುವ ನನ್ನ ಅಭಿಮಾನಿಗಳಿಗೂ ನಾನು ಋಣಿ ಎಂದಿದ್ದಾರೆ ರವಿಮಾಮ!

ನಿಜ ಒಬ್ಬ ನಟ ಕಾಲಕ್ಕೆ ತಕ್ಕಂತೆ, ವಯಸ್ಸಿಗೆ ಹೊಂದುವಂತಾ ಪಾತ್ರಗಳನ್ನು ಸಾಗಬೇಕು. ಹಳೆಯ ಗೆಲುವಿನ ಫಾರ್ಮುಲಾವನ್ನೇ ಜಗ್ಗಾಡುತ್ತಿದ್ದರೆ ಜನ ಸ್ವೀಕರಿಸುವುದಿಲ್ಲ. ಈ ನಿಟ್ಟಿನಲ್ಲಿ ರವಿಚಂದ್ರನ್ ಈ ಹೊತ್ತಿಗೆ ಬೇಕಿರುವ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ನಟಿಸುತ್ತಿರುವುದು ನಿಜಕ್ಕೂ ಮೆಚ್ಚುವಂಥಾ ವಿಷಯ. ಕ್ರೇಜ಼ಿಸ್ಟಾರ್ ಹೀಗೇ ಒಂದಕ್ಕಿಂತಾ ಒಂದು ಹೊಸದೆನಿಸುವ ಪಾತ್ರಗಳಲ್ಲಿ ನಟಿಸುತ್ತಾ ರಂಜಿಸುತ್ತಿರಲಿ…

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ತಮಿಳು ಸೂರ್ಯನ ಮುಂದೆ ನಿಂತು ‘ನಾನು ಕನ್ನಡಿಗ’ ಅಂದರಂತೆ ಕುರಿ ರಂಗ!

Previous article

ಚಿಕ್ಕಣ್ಣನ ಜಾಗ ಹಿಡಿದ ಶಿವಣ್ಣ!

Next article

You may also like

Comments

Leave a reply

Your email address will not be published. Required fields are marked *