ನರೇಂದ್ರ ಮೋದಿಯವ್ರು ನೋಟ್ ಬ್ಯಾನ್ ಮಾಡಿದ ಮೇಲೆ ನೋಟಿನ ಕುರಿತಾಗಿ ಅನೇಕ ಸಿನಿಮಾಗಳು ಸ್ಯಾಂಡಲ್ವುಡ್ ನಲ್ಲಿ ತಯಾರಾಗಿವೆ. ಅದೇ ಸಾಲಿನಲ್ಲಿ ಇದೀಗ ‘ಆ ಒಂದು ನೋಟು’ ಸಿನಿಮಾ ಕೂಡ ಒಂದು. ಈಗಾಗಲೇ ಸಿನಿಮಾ ಶೂಟಿಂಗ್ ಕಂಪ್ಲೀಟ್ ಮಾಡಿದೆ ಚಿತ್ರತಂಡ.
ರತ್ನಾತನಯ್ ನಿರ್ದೇಶನವಿರೋ ಸಿನಿಮಾ ಆ ಒಂದು ನೋಟು.. ಎರಡು ಸಾವಿರ ನೋಟಿನ ಕಥೆಯನ್ನ ಹೊಂದಿರುವ ಸಿನಿಮಾ ಇದಾಗಿದ್ದು, ೨೦೦೦ ರೂಪಾಯಿ ನೋಟು ಇಲ್ಲಿ ಪ್ರಧಾನ ಪಾತ್ರಧಾರಿಯಾಗಿದೆ. ಹಣ ತುಂಬಾ ಕೆಟ್ಟದ್ದು, ಮನುಷ್ಯನನ್ನು ಹಾಳು ಮಾಡುತ್ತಿದೆ. ಎಂದು ಮನುಷ್ಯ ಆರೋಪಿಸುತ್ತಾನೆ. ಆದರೆ ಹಣ ಒಳ್ಳೆಯದೂ ಅಲ್ಲ ಕೆಟ್ಟದ್ದೂ ಅಲ್ಲ ಅದು ಮನುಷ್ಯ ಆ ಹಣವನ್ನು ಯಾವುದಕ್ಕಾಗಿ ಉಪಯೋಗ ಮಾಡುತ್ತಾನೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ. ಈ ಎಳೆ ಇಟ್ಟುಕೊಂಡು ಸಿನಿಮಾ ಮಾಡಿದೆ ಚಿತ್ರತಂಡ..
ಆದಿತ್ಯ, ವೀಣಾ, ಅಶೋಕ್, ಆನಂದ್, ಅಶ್ವತ್, ಸಾಕ್ಷಿ, ಅಕ್ಷತಾ ಪಾಂಡವಪುರ, ಗೋಪಾಲಕೃಷ್ಣ ದೇಶಪಾಂಡೆ, ಸೇರಿದಂತೆ ಅನೇಕ ಕಲಾವಿದರ ದಂಡೇ ಸಿನಿಮಾದಲ್ಲಿದ್ದಾರೆ. ಈ ಎಲ್ಲಾ ಪಾತ್ರಗಳು ನೋಟಿನ ಸುತ್ತ ಹೆಣೆದುಕೊಳ್ಳುವ ಪಾತ್ರಗಳಾಗಿವೆ. ಇನ್ನು ಈ ಸಿನಿಮಾ ಚಿತ್ರೀಕರಣ, ಚಿಕ್ಕಮಗಳೂರು, ಮುಳ್ಳಯ್ಯನ ಗಿರಿ, ಕೆಮ್ಮಣ್ಣುಗುಂಡಿ, ಬೆಂಗಳೂರಿನ ಕೆ.ಆರ್ ಮಾರ್ಕೆಟ್ ಸೇರಿದಂತೆ ಹಲವಾರು ಕಡೆ ಚಿತ್ರೀಕರಣ ಮಾಡಲಾಗಿದೆ.
ಫ್ರೆಂಡ್ಸ್ ಫಿಲ್ಮ್ ಫ್ಯಾಕ್ಟರಿ ಬ್ಯಾನರ್ನಲ್ಲಿ ತಯಾರಾಗಿರೋ ಈ ಸಿನಿಮಾಗೆ ರವಿವರ್ಮ ಛಾಯಾಗ್ರಹವಿದ್ದು, ಅರ್ಜುನ್ ಕಿಟ್ಟು ಸಂಕಲನವನ್ನ ಮಾಡಿದ್ದಾರೆ. ಕೆ.ಕಲ್ಯಾಣ ಹಾಗೂ ಹರೀಶ್ ಗೌಡ ಸಾಹಿತ್ಯ ಒದಗಿಸಿದ್ದಾರೆ.. ಸದ್ಯ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಜೂನ್ ನಲ್ಲಿ ಸಿನಿಮಾ ತೆರೆಗೆ ತರುವ ಪ್ಲ್ಯಾನ್ ನಲ್ಲಿದೆ. ಈಗಾಗಲೇ ಕುರುಡು ಕಾಂಚಾಣ ಹಾಡಿನ ಮೂಲಕ ಸದ್ದು ಮಾಡಿರುವ ಈ ಸಿನಿಮಾದಲ್ಲಿ ಬಹಳಷ್ಟು ಕೌತುಕದ ಸಂಗತಿಗಳಿರಲಿದೆ.
No Comment! Be the first one.