ನಿಂತ ನೆಲವೇ ಕುಸಿದಂತಿದೆ… ಕಂಡ ಕನಸು ಹುಸಿಯಾಗಿದೆ… ಇಂದೇ ಸಾವು ಬಂದು ಬಿಡಲಿ… ಯಾಕೀ ಬದುಕು…
- ಎದೆ ಭಾರವಾಗಿಸುವ ಈ ಸಾಲುಗಳನ್ನು ಗಾಯಕ ರಾಜೇಶ್ ಕೃಷ್ಣನ್ ಅವರ ದನಿಯಲ್ಲಿ ಕೇಳಿದರೆ ಹೇಗಿರುತ್ತೆ?
ಪಂಖುರಿ ಹೆಸರಿನ ಸಿನಿಮಾವೊಂದು ಬರುತ್ತಿದೆ. ದೋಸ್ತಿ ಆನಂದ್ ನಿರ್ದೇಶನದ ಈ ಸಿನಿಮಾದ ಹಾಡೊಂದು ಸದ್ಯ A2 music ನಲ್ಲಿ ಅನಾವರಣಗೊಂಡಿದೆ. ಎಂಥವರನ್ನೂ ಭಾವತೀವ್ರತೆಗೆ ಕೊಂಡೊಯ್ಯುವ ಸಾಲುಗಳು ಮತ್ತು ರಾಜೇಶ್ ಕೃಷ್ಣನ್ ಅವರ ಭಾವ ತುಂಬಿದ ದನಿಯ ಈ ಹಾಡು ಸದ್ಯ ಎಲ್ಲೆಲ್ಲೂ ಮಾರ್ದನಿಸುತ್ತಿದೆ. ಈ ಗೀತೆಯನ್ನು ಹಾಡಿರುವ ರಾಜೇಶ್ ಕೃಷ್ಣನ್ ಅವರೇ ʻʻಸಾಹಿತ್ಯದ ಸಾಲುಗಳನ್ನು ಹಾಡುವಾಗ ನಾನೇ ಗದ್ಗದಿತನಾಗಿದ್ದೆ. ದನಿ ಹೊಮ್ಮದಂತಾಗಿತ್ತು. ಕಣ್ಣು ತೇವವಾಗಿಸಿಕೊಂಡು ಹಾಡಿದ್ದೆ. ಇವತ್ತು ಜನ ಕೂಡಾ ಅಷ್ಟೇ ಭಾವ ಪರವಶರಾಗಿ ಈ ಹಾಡನ್ನು ಆಲಿಸುತ್ತಿದ್ದಾರೆʼ ಎಂದು ಹೇಳಿದ್ದಾರೆ.
ಕುಂದನಾ ನಟಿಸಿರುವ ಪಂಖುರಿ ಸಿನಿಮಾ ಮಹಿಳಾ ದೌರ್ಜನ್ಯದ ವಿರುದ್ಧದ ಕತೆ ಹೊಂದಿದೆ. ಚಿತ್ರದಲ್ಲಿ ಒಂಟಿ ಹೆಣ್ಣೊಬ್ಬಳು ಸಮಾಜದಲ್ಲಿ ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಾಳೆ ಅನ್ನೋ ವಿಚಾರವನ್ನು ಸವಿವರವಾಗಿ ಬಿಚ್ಚಿಡಲಾಗಿದೆ. ಈ ಸಿನಿಮಾದಲ್ಲಿ ಕುಂದನಾ ಜತೆ ಶಶಿಶೇಖರ್ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಒಂದೊಳ್ಳೆ ಪಾತ್ರದ ನಿರೀಕ್ಷೆಯಲ್ಲಿದ್ದ ನನಗೆ ಉತ್ತಮ ಅವಕಾಶ ದೊರಕಿದೆ ಎಂದು ಯುವ ನಟಿ ಕುಂದಾನ ಹೇಳಿದ್ದಾರೆ. ಪ್ರಕೃತಿ ಪಿಕ್ಚರ್ಸ್ ಬ್ಯಾನರ್ ನಲ್ಲಿ , ಅಫ್ಜಲ್ ಅವರ ಸಹಯೋಗದೊಂದಿಗೆ ಸಿನಿಮಾ ನಿರ್ಮಾಣದ ಮೂಲಕ ಯುವ ನಿರ್ಮಾಪಕಿ ಆಗಿಯೂ ಪಂಖುರಿ ಚಿತ್ರದ ನಟಿ ಕುಂದನಾ ಭಡ್ತಿ ಹೊಂದಿದ್ದಾರೆ. ಶಾರದ ಹೆಸರಿನ ಪಾತ್ರದಲ್ಲಿ ಕುಂದನಾ ನಟಿಸುತ್ತಿದ್ದಾರೆ. ಚಿಕ್ಕಂದಿನಲ್ಲೇ ಸೆಲೆಬ್ರಿಟಿಯಾಗುವ ಆಸೆ ಕಂಡಿದ್ದರು ಕುಂದನಾ. ಇದೀಗ ‘ಪಂಖುರಿ’ ಚಿತ್ರದ ಮೂಲಕ ಕನ್ನಡ ಚಂದನವನಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಕುಂದನಾ ಮೂಲತಃ ಆಂಧ್ರದವರು. ಬದುಕು ಕಟ್ಟಿಕೊಂಡಿದ್ದು ಬೆಂಗಳೂರಿನಲ್ಲಿ. ಕನ್ನಡವನ್ನು ಲೀಲಾಜಾಲವಾಗಿ ಮಾತನಾಡುವ ಇವರು ಈಗ ಕನ್ನಡದ ಮನೆ ಮಗಳಾಗಿದ್ದಾಳೆ. ಕುಂದನಾ ಇ ಕಾಮರ್ಸ್ ನಲ್ಲಿ ಸ್ನಾಕೋತ್ತರ ಪದವಿ ಪಡೆದಿದ್ದಾರೆ. ಎಂಎನ್ ಸಿ ಕಂಪನಿಯಲ್ಲಿ ದೊಡ್ಡ ಹುದ್ದೆಯಲ್ಲಿದ್ದಾರೆ.
ಕುಂದನಾ ಸುಂದರವಾದ ಮುಖ ಚಹರೆ, ತಮ್ಮ ಅಭಿನಯದ ಮೂಲಕ ನಿರ್ದೇಶಕ ದೋಸ್ತಿ ವಿ ಆನಂದ ಅವರ ಸಿನಿಮಾಕೆ ಆಯ್ಕೆಯಾದರು. ಇನ್ನೂ ಹೆಸರಿಡದ ಎರಡು ಸಿನಿಮಾಕ್ಕೆ ಆಯ್ಕೆಯಾಗಿ ಗಾಂಧಿನಗರದಲ್ಲಿ ಸುದ್ಧಿಯಾಗಿದ್ದಾರೆ.
ತೀರಾ ಸಣ್ಣ ವಯಸ್ಸಿನಲ್ಲಿಯೇ ನಟಿಯಾಗುವ ಕನಸು ಕಂಡಿದ ಕುಂದನಾ ಸ್ಯಾಂಡಲ್ ವುಡ್ ಹಿರಿಯ ನಟಿ ಲಕ್ಷ್ಮೀಯವರಿಂದ ಹಿಡಿದು ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್ ತನಕ ಬಹುತೇಕರ ಅಭಿನಯಕ್ಕೆ ಮಾರುಹೋಗಿದ್ದಾರೆ. ಆಪ್ತಮಿತ್ರ, ಶ್ರೀ ಮಂಜುನಾಥ ಚಿತ್ರಗಳಲ್ಲಿನ ಸೌಂದರ್ಯ ಅವರ ನಟನೆಯನ್ನು ಬಹುವಾಗಿ ಮೆಚ್ಚುವ ಕುಂದನಾಗೆ ಅಂಥ ಪಾತ್ರಗಳನ್ನ ಮಾಡುವ ಆಸೆ ಇದೆಯಂತೆ. ಒಟ್ಟಾರೆ ಕೇವಲ ಒಂದು ಪಾತ್ರಕ್ಕೆ ಸಿಮೀತವಾಗದೆ ವಿಭಿನ್ನ ಪಾತ್ರಗಳಲ್ಲಿ ಅಭಿನಯನ ಮಾಡುವ ಆಶಯ ಅವರದ್ದು.
ಕುಂದನ ಕೇವಲ ನಟನೆ ಮಾತ್ರವಲ್ಲದೆ ನೃತ್ಯದಲ್ಲೂ ಸೈ ಎನಿಸಿಕೊಂಡಿದ್ದಾರೆ. ಶಾಲಾ ದಿನಗಳು ಮತ್ತು ಕೆಲಸದಲ್ಲಿದ್ದಾಗ ಸಂಸ್ಥೆಯ ಕಾರ್ಯಕ್ರಮಗಳಲ್ಲಿಯೂ ಡ್ಯಾನ್ಸ್ ಮಾಡಿದ ಅನುಭವ ಇದೆ. ನಿತ್ಯ ಯೋಗಾಭ್ಯಾಸ, ವಾಕಿಂಗ್, ಸೈಕ್ಲಿಂಗ್ ಇವರ ದಿನಚರಿಯಲ್ಲೊಂದು….
No Comment! Be the first one.