ಭಾರತದ ಹೆಮ್ಮೆಯ ಪುತ್ರ, ಮಾಜಿ ರಾಷ್ಟ್ರಪತಿ, ವಿಜ್ಞಾನಿ ಅಬ್ದುಲ್ ಕಲಾಂ ಅವರ ಕುರಿತಾದ ಬಯೋಪಿಕ್ ಟಾಲಿವುಡ್ ನಲ್ಲಿ ರೆಡಿಯಾಗುತ್ತಿದೆ. ಎನ್ ಟಿ ಆರ್ ಹಾಗೂ ಮಹಾನಟಿ ಸಾವಿತ್ರಿ ಬಯೋಪಿಕ್ ಗಳ ಬಳಿಕ ಅಬ್ದುಲ್ ಕಲಾಂ ಜೀವನಾಧಾರಿತ ಸಿನಿಮಾ ಮಾಡಲು ತೆಲುಗು ಮಂದಿ ಮುಂದಾಗುತ್ತಿದ್ದಾರೆ. ಅಭಿಷೇಕ್ ಅಗರ್ವಾಲ್ ಈ ಸಿನಿಮಾವನ್ನು ನಿರ್ಮಾಣ ಮಾಡಲಿದ್ದು, ಈ ಹಿಂದೆ ಗೂಡಾಚಾರಿ ಎಂಬ ಸಿನಿಮಾವನ್ನು ಅವರು ಮಾಡಿದ್ದರು.
ಸದ್ಯ ಟೈಗರ್ ನಾಗೇಶ್ವರ್ ರಾವ್ ಹಾಗೂ ಗೂಡಾಚಾರಿ 2 ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಅಭಿಷೇಕ್ ಕನ್ನಡ ಕಿರಿಕ್ ಪಾರ್ಟಿಯ ತೆಲುಗು ರಿಮೇಕ್ ಗೂ ಹಣ ಹೂಡಲಿದ್ದಾರೆ. ಸದ್ಯ ಮಿಸಾಯಿಲ್ ಮ್ಯಾನ್ ನ ಬಯೋಪಿಕ್ ಮಾಡುವುದು ಪಕ್ಕಾ ಆಗಿದ್ದು, ಕಲಾಂ ಕುಟುಂಬದಿಂದ ಪರ್ಮಿಷನ್ ಪಡೆಯುವುದೊಂದು ಬಾಕಿ ಇದೆಯಂತೆ. ಅಂದಹಾಗೆ ಈ ಸಿನಿಮಾದ ಕುರಿತು ಹಾಗೂ ತಾರಾಬಳಗ ಸೇರಿದಂತೆ ಹೆಚ್ಚಿನ ಮಾಹಿತಿ ಸದ್ಯದಲ್ಲಿಯೇ ಅಧಿಕೃತವಾಗಲಿದೆ.
Comments