ಪಾಪಿ ಪಾಕಿಸ್ತಾನದ ಬಂಧಿಯಾದರೂ ಕೆಚ್ಚೆದೆಯಿಂದಲೇ ವರ್ತಿಸಿ ದೇಶಕ್ಕೆ ಮರಳಿರೋ ಏರ್ ಫೋರ್ಸ್ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಈಗ ಇಂಡಿಯಾದ ರಿಯಲ್ ಹೀರೋ. ಶತ್ರು ದೇಶದ ವಶದಲ್ಲಿದ್ದ ಇವರು ಸುರಕ್ಷಿತವಾಗಿ ಮರಳಲೆಂದು ಪ್ರಾರ್ಥಿಸಿದ್ದ ಕೋಟ್ಯಾಂತರ ಮನಸುಗಳ ಪ್ರಾರ್ಥನೆಯ ಫಲವಾಗಿ ಅವರು ಮರಳಿದ್ದಾರೆ. ಈ ಬಗ್ಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೂ ಅಭಿಮಾನದ ಮಾತುಗಳನ್ನಾಡಿದ್ದಾರೆ.
ಅಭಿನಂದನ್ ಸುರಕ್ಷಿತವಾಗಿ ಮರಳಿರೋದು ನಮ್ಮೆಲ್ಲರ ಪುಣ್ಯ ಅನ್ನುತ್ತಲೇ, ಅವರೇ ನಿಜವಾದ ಹೀರೋ ಅಂತಲೂ ಪವರ್ ಸ್ಟಾರ್ ಪನೀತ್ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ತಮ್ಮ ಮನದಾಳದ ಆಸೆಯೊಂದನ್ನೂ ಕೂಡಾ ಅವರು ಹೊರ ಹಾಕಿದ್ದಾರೆ. ಅವಕಾಶ ಸಿಕ್ಕರೆ ತಾವೂ ಕೂಡಾ ಅಭಿನಂದನ್ ಪಾತ್ರದಲ್ಲಿ ನಟಿಸಲು ಕಾತರರಾಗಿರೋದಾಗಿ ಪುನೀತ್ ಹೇಳಿದ್ದಾರೆ. ಬಹುಶಃ ಆ ಕ್ಷಣಗಳು ಹತ್ತಿರದಲ್ಲಿಯೂ ಇದ್ದಾವೆ. ಇಡೀ ದೇಶವೇ ಅಭಿನಂದನ್ ಅವರನ್ನು ಹೀರೋ ಆಗಿ ನೋಡುತ್ತಿರುವ ಈ ಸಂದರ್ಭದಲ್ಲಿ ಚಿತ್ರರಂಗದವರ ಕಣ್ಣೂ ಸಹಜವಾಗಿಯೇ ಅವರತ್ತ ನೆಟ್ಟಿದೆ. ಈಗಾಗಲೇ ಬಾಲಿವುಡ್ ಸೇರಿದಂತೆ ಎಲ್ಲೆಡೆ ಇಂಥಾ ಪ್ರಯತ್ನಗಳು ನಡೆಯುತ್ತಿವೆ. ಅಪ್ಪು ಕೂಡಾ ಅಭಿನಂದನ್ ಪಾತ್ರ ನಿರ್ವಹಿಸಿದರೂ ಅಚ್ಚರಿಯೇನಿಲ್ಲ.