ಕನ್ನಡದ ನಟಿಗೆ ಮಾಲಿವುಡ್ ಕಿರಾತಕರ ಕಿರುಕುಳ! ಗೂಂಡಾಗಿರಿಗಿಳಿದ ನಿರ್ಮಾಪಕ ಅಬ್ದುಲ್ ಲತೀಫ್! ಪೊಲೀಸ್ ಭದ್ರತೆಯ ಮೊರೆ ಹೋದ ನಟಿ ಅಕ್ಷತಾ ಶ್ರೀಧರ್!


ದೇಶಾಧ್ಯಂತ ಮೀಟೂ ಅಭಿಯಾನ ತಾರಕದಲ್ಲಿರುವಾಗಲೇ ಮಲೆಯಾಳಂ ಚಿತ್ರರಂಗದಲ್ಲಿಯೂ ಈ ಅಲೆಯೆದ್ದಿತ್ತು. ಒಂದರ್ಥದಲ್ಲಿ ನಟಿಯರನ್ನು ಕಾಡುವ ಕೆಟ್ಟ ಚಾಳಿಯಲ್ಲಿ ಮಲೆಯಾಳಂ ಚಿತ್ರರಂಗವೂ ಹೊರತಾಗೇನೂ ಇಲ್ಲ. ನಟಿಯರು ಅಂಥಾ ಅಂಕೆಗೆ ಸಿಗುವುದಿಲ್ಲ ಎಂದಾದರೆ ನಾನಾ ರೀತಿಯಲ್ಲಿ ಪಳಗಿಸಿಕೊಳ್ಳಲು ನೋಡುವ ಕ್ರಿಮಿನಲ್ ಮನಸುಗಳು ಮಾಲಿವುಡ್‌ನಲ್ಲಿದ್ದಾವಾ? ಅಂಥಾದ್ದೇ ಕೀಳು ಮನಸ್ಥಿತಿಯಿಂದಲೇ ಕನ್ನಡದ ನಟಿಯೊಬ್ಬಳನ್ನು ಚಿತ್ರೀಕರಣಕ್ಕೆ ಕರೆಸಿಕೊಂಡು ಕಾಟ ಕೊಡಲಾಯ್ತಾ? ಕನ್ನಡದ ನಟಿ ಅಕ್ಷತಾ ಶ್ರೀಧರ್ ಮಾಡುತ್ತಿರೋ ಆರೋಪಗಳು ಇಂಥಾ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿವೆ!

ಈ ಹಿಂದೆ ರಾಹುಲ್ ಐನಾಪುರ ನಟನೆಯ ತ್ರಾಟಕ ಚಿತ್ರದ ನಾಯಕಿಯಾಗಿ ನಟಿಸಿದ್ದವರು ಅಕ್ಷತಾ ಶ್ರೀಧರ್. ಅವರು ಇದೀಗ ಮಲೆಯಾಳಂನ ಕೊಚ್ಚಿನ್ ಶಾದಿ ಚೆನೈ 03 ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದರು. ಒಂದಷ್ಟು ಚಿತ್ರೀಕರಣವಾಗಿರೋ ಈ ಚಿತ್ರತಂಡವೇ ಅವರನ್ನು ಕೆಲ ದಿನಗಳ ಹಿಂದೆ ಕೇರಳಕ್ಕೆ ಕರೆಸಿಕೊಂಡು, ಹೋಟೆಲ್ ಸಿಬ್ಬಂದಿಯ ಮೂಲಕ ಕಾಟ ಕೊಟ್ಟಿದೆ ಎಂಬುದು ಆರೋಪ. ಈ ಬಗೆಗಿನ ಒಂದಷ್ಟು ಮಾಹಿತಿಯನ್ನ ಅಕ್ಷತಾ ಹಂಚಿಕೊಂಡಿದ್ದಾರೆ.

ಈ ಚಿತ್ರದ ಒಂದಷ್ಟು ಚಿತ್ರೀಕರಣ ಮುಗಿಸಿಕೊಂಡು ಬೆಂಗಳೂರಿಗೆ ಅಕ್ಷತಾ ವಾಪಾಸಾಗಿದ್ದರು. ಆದರೆ ನಾಲಕ್ಕು ದಿನದ ಹಿಂದೆ ಚಿತ್ರೀಕರಣದಲ್ಲಿ ಭಾಗಿಯಾಗುವಂತೆ ಕರೆ ಬಂದಿತ್ತು. ಅಕ್ಷತಾ ತನ್ನ ತಾಯಿಯೊಂದಿಗೆ ಕೇರಳಕ್ಕೆ ತೆರಳಿದ್ದರು. ಅಲ್ಲವರಿಗೆ ರೂಂ ಕೂಡಾ ಬುಕ್ ಆಗಿತ್ತು. ಆದರೆ ಆ ರೂಮಿನ ತುಂಬಾ ಅಧ್ವಾನದ ವಾತಾವರಣವಿತ್ತು. ಅದನ್ನು ಕ್ಲೀನ್ ಮಾಡಿರಲಿಲ್ಲ. ಈ ಸಂಬಂಧವಾಗಿ ಅಕ್ಷತಾ ಹೋಟೆಲ್ ಸಿಬ್ಬಂದಿಯನ್ನು ಕರೆದು ಕ್ಲೀನು ಮಾಡುವಂತೆ ಸೂಚಿಸಿದ್ದರು. ಆದರೆ ಯಾರಿಂದಲೋ ದುರ್ಧಾನ ಪಡೆದಂತಿದ್ದ ಸಿಬ್ಬಂದಿ ಜಗಳಕ್ಕೆ ನಿಂತು ಬಿಟ್ಟಿದ್ದರು. ಅದು ಯಾವ ಪರಿ ವಿಕೋಪಕ್ಕೆ ತೆರಳಿತ್ತೆಂದರೆ, ಹೋಟೆಲ್ ಸಿಬ್ಬಂದಿ ಓರ್ವ ಹೆಣ್ಣು ಎಂಬದನ್ನೂ ಲೆಕ್ಕಿಸದೆ ಅಕ್ಷತಾ ಮೇಲೆ ಹಲ್ಲೆಗೆ ಮುಂದಾಗಿದ್ದರು. ಇದರಿಂದ ಭಯಗೊಂಡ ಅವರು ಚಿತ್ರತಂಡವನ್ನು ಸಂಪರ್ಕಿಸಲು ಪ್ರಯತ್ನಿಸಿದರೆ ಯಾವ ಪ್ರಯೋಜನವೂ ಆಗಲಿಲ್ಲವಂತೆ.

ಚಿತ್ರೀಕರಣಕ್ಕೆಂದು ಹೀಗೆ ನಟಿಯರನ್ನು ಕರೆಸಿಕೊಂಡಾಗ ಅಲ್ಲಿ ಇಂಥಾ ಪ್ರಕರಣಗಳು ನಡೆದರೆ ಚಿತ್ರತಂಡವೇ ಬಳಿ ಬಂದು ಸಹಾಯ ಮಾಡೋದು ಮಾನವೀಯತೆ. ಆದರೆ,ಮಾಲಿವುಡ್ಡಿನ ಚಿತ್ರತಂಡ ಮಾತ್ರ ಅದಕ್ಕೆ ತದೌಇರುದ್ಧವಾಗಿ ನಡೆದುಕೊಂಡಿತ್ತು. ಇದರಿಂದ ಭಯಗೊಂಡ ಅಕ್ಷತಾ ರೂಮ್ ರೆಂಟ್ ಐವತ್ತಾರು ಸಾವಿರವನ್ನು ತಾವೇ ಪಾವತಿಸಿ ಹೊರ ನಡೆದಿದ್ದರು. ಬಳಿಕ ಪೊಲೀಸರಿಗೂ ಮಾಹಿತಿ ನೀಡೀ ಪ್ರಯತ್ನ ಪಟ್ಟಿದ್ದರು. ಪುಟಾಯರ್‌ನ ನಾಗರ್‍ಕೋಯಿಲ್ ಪೊಲೀಸ್ ಠಾಣೆಗೆ ದೂರು ನೀಡಿದರೂ ಅಲ್ಲಿನ ಪೊಲೀಸರು ಏಫ್‌ಐಆರ್ ದಾಖಲಿಸದೇ ಸತಾಯಿಸಿದ್ದರು.

ಆದರೆ ಇಷ್ಟೆಲ್ಲ ಆದರೂ ಸಪೋರ್ಟಿಗೆ ನಿಲ್ಲದ ಚಿತ್ರತಂಡ ಅಕ್ಷತಾ ಪೊಲೀಸರಿಗೆ ದೂರು ನೀಡಲು ಹೋದ ವಿಚಾರ ತಿಳಿದಾಕ್ಷಣವೇ ಬಾಲ ಬಿಚ್ಚಿತ್ತು. ಈ ಚಿತ್ರದ ನಿರ್ಮಾಪಕನಾದ ಅಬ್ದುಲ್ ಲತೀಫ್ ಎಂಬಾತ ಅಕ್ಷತಾ ಅಮ್ಮನಿಗೆ ಕರೆ ಮಾಡಿ `ನಿನ್ನ ಮಗಳು ಪೊಲೀಸರಿಗೆ ದೂರು ನೀಡಲು ಹೋಗಿದ್ದಾಳಂತಲ್ಲ ಅವಳೇನು ರೌಡಿನಾ? ಇದು ಕೇರಳ, ಶಿವಾಜಿನಗರದ ರಸೂಲ್ ಮಾರ್ಕೆಟ್ಟಲ್ಲ’ ಅಂತ ಅವಾಜು ಬಿಟ್ಟಿದ್ದನಂತೆ. ಯಾವಾಗ ತನ್ನನ್ನು ಪಾರು ಮಾಡಬೇಕಿದ್ದ ನಿರ್ಮಾಪಕನೇ ಈ ಥರ ರೌಡಿಸಂ ಮಾಡಿದನೋ ಆಗ ಹೋಟೆಲ್ ಸಿಬ್ಬಂದಿ ಕಿರಿಕ್ಕು ಮಾಡಿದ್ದರ ಹಿಂದೆ ಚಿತ್ರತಂಡದ ಕೈವಾಡ ಇದೆ ಎಂಬ ವಿಚಾರ ಅಕ್ಷತಾಗೆ ಖಚಿತಗೊಂಡಿತ್ತು. ಆದರೆ ಕೇರಳದಲ್ಲಿ ತಾನು ನ್ಯಾಯ ಕೇಳಿದರೂ ವ್ಯರ್ಥ ಎಂದರಿತ ಅಕ್ಷತಾ ಬೆಂಗಳೂರಿಗೆ ಮರಳಿದ್ದರು.

ಹಾಗೆ ಬಂದವರೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೂ ದೂರು ನೀಡಿದ್ದಾರೆ. ಕೇರಳದ ಚಿತ್ರತಂಡ ಗೂಂಡಾಗಳ ಮೂಲಕ ಬೆದರಿಕೆ ಹಾಕಿದ್ದರಿಂದ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸುನೀಲ್ ಕುಮಾರ್ ಅವರನ್ನು ಭೇಟಿಯಾಗಿರೋ ಅಕ್ಷತಾ ಭದ್ರತೆಗಾಗಿ ಮೊರೆಯಿಟ್ಟಿದ್ದಾರೆ. ಸುನೀಲ್ ಕುಮಾರ್ ಭದ್ರತೆಯನ್ನೂ ಕೊಟ್ಟಿದ್ದಾರೆ.

ಈ ಎಲ್ಲ ವಿದ್ಯಮಾನಗಳನ್ನು ಗಮನಿಸಿದರೆ ಇದರ ಹಿಂದೆ ಚಿತ್ರತಂಡದ ಕೈವಾಡ ಇದೆ ಎಂಬ ವಿಚಾರ ನಿಖರವಾಗುತ್ತೆ. ಹಾಗಾದರೆ ಅದಕ್ಕೆ ಕಾರಣವೇನು ಅಂತ ಕೆದಕಿದರೆ ಅಕ್ಷತಾಗೆ ಕೊಡಬೇಕಿದ್ದ ಒಂದೂವರೆ ಲಕ್ಷದಷ್ಟು ಸಂಭಾವನೆ ಹಣದ ವಿಚಾರ ಹೊರ ಬೀಳುತ್ತದೆ. ಈ ಹಣದ ವಿಚಾರವಾಗಿ ಚಿತ್ರತಂಡ ನಟಿಯನ್ನು ಕಾಡಿಸುವ ಹುಂಬತನ ಮಾಡಿತಾ? ಲೈಂಗಿಕ ಕಿರುಕುಳದ ಉದ್ದೇಶ ಈಡೇರದೇ ಇಂಥಾ ಚಮಕ್ ಕೊಟ್ಟಿತಾ? ಸರಿಯಾಗೊಂದು ತನಿಖೆ ನಡೆದರೆ ಇದರ ಹಿಂದಿನ ಸತ್ಯ ಹೊರ ಬೀಳುತ್ತದೆ.

#


Posted

in

by

Tags:

Comments

Leave a Reply