ಆಸ್ಕರ್ ಪ್ರಶಸ್ತಿ ವಿಜೇತೆ ಅಮೆರಿಕಾ ನಟಿ ಆನ್ ಹ್ಯಾಥ್ವೇ ಮದ್ಯಪಾನ ಮಾಡದಿರಲು ನಿರ್ಧರಿಸಿದ್ದಾರೆ. ಮದ್ಯಪಾನ ಬಿಡಲು ಮುಖ್ಯ ಕಾರಣ ಮಗ ಎಂದೂ ನಟಿ ಹೇಳಿದ್ದಾರೆ.ಮೂರು ವರ್ಷದ ಮಗನ ಆರೈಕೆ ಬಹಳ ಮುಖ್ಯ. ಮದ್ಯದ ಚಟದಿಂದ ಮಗನನ್ನು ಸರಿಯಾಗಿ ನೋಡಿಕೊಳ್ಳಲು ಆಗ್ತಿಲ್ಲ ಎಂದಿದ್ದಾರೆ. ನಿಯತಕಾಲಿಕವೊಂದಕ್ಕೆ ಸಂದರ್ಶನ ನೀಡಿದ ನಟಿ, ಮಗುವಾದ್ಮೇಲೆ ತನ್ನ ಜೀವನ ಹೇಗಿದೆ ಎಂಬುದನ್ನು ಹೇಳಿದ್ದಾರೆ.
ಮದ್ಯ ಸೇವನೆಯಿಂದಾಗಿ ಮಗನ ಜವಾಬ್ದಾರಿಯನ್ನು ಸಂಪೂರ್ಣವಾಗಿ ನಿಭಾಯಿಸಲು ಸಾಧ್ಯವಾಗ್ತಿಲ್ಲ ಎಂದಿದ್ದಾರೆ. ಮದ್ಯಪಾನವನ್ನು ತುಂಬಾ ಇಷ್ಟಪಡುವ ಆನ್, ಕಳೆದ ಒಂದು ವರ್ಷಗಳಿಂದ ಮದ್ಯಪಾನ ಕಡಿಮೆ ಮಾಡಿದ್ದರಂತೆ. ಮದ್ಯಪಾನ ಮಾಡಿದ ನಂತ್ರ ಅದ್ರ ಹ್ಯಾಂಗ್ ಓವರ್ 5 ದಿನಗಳವರೆಗೆ ಇರುತ್ತದೆ. ಹಾಗಾಗಿ ಅದ್ರಿಂದ ದೂರವಿರಲು ನಿರ್ಧರಿಸಿದ್ದೇನೆ. ನಟಿಯಾಗದೆ ಹೋಗಿದ್ರೆ ಟೀಚರ್ಅಥವಾ ಸೇನೆಗೆ ಸೇರುತ್ತಿದ್ದೆ. ಎಲ್ಲಕ್ಕಿಂತ ಮುಖ್ಯವಾಗಿ ಮದ್ಯ ವ್ಯಸನಿ ಆಗೋದು ನನಗೆ ಇಷ್ಟವಾಗಿತ್ತು ಎಂದಿದ್ದಾರೆ.
Comments