‘ಆದತ್’ ಸಿನಿಮಾದಲ್ಲಿ ಬಾಲಿವುಡ್ನ ಜೋಡಿ ಬಿಪಾಶಾ ಬಸು ಹಾಗೂ ಕರಣ್ ಸಿಂಗ್ ಗ್ರೋವರ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ರಿಯಲ್ ಲೈಫ್ ನಲ್ಲಿ ದಂಪತಿಗಳಾಗಿ ಇರುವ ಇವರು ಇದೀಗ ರೀಲ್ ಲೈಫ್ ನಲ್ಲೂ ಒಂದಾಗಿದ್ದಾರೆ. ಭೂಷಣ್ ಪಟೇಲ್ ನಿರ್ದೇಶನದ ಈ ಚಿತ್ರದಲ್ಲಿ ಈ ಜೋಡಿ ಒಂದಾಗಿದೆ. ಈ ಮೊದಲು 2015ರಲ್ಲಿ ‘ಅಲೋನ್’ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದರು.
‘ಬಿಪಾಶಾ ಜತೆ ಕೆಲಸ ಮಾಡುವುದೆಂದರೆ ಒಂದು ಅತ್ಯದ್ಭುತ ಫೀಲಿಂಗ್. ಅವಳು ತುಂಬಾ ಶಿಸ್ತು ಬದ್ಧ ವ್ಯಕ್ತಿ. ಜೊತೆಗೆ ಶಿಸ್ತುಬದ್ಧ ಆಗಿರುವುದು ಹೇಗೆ ಎಂದು ನಾನು ಅವಳ ಬಳಿಯಿಂದ ಕಲಿತಿದ್ದೇನೆ. ಅವಳು ಸದಾ ತುಂಬಾ ಎನರ್ಜಿಯಿಂದಿರುತ್ತಾಳೆ, ತಮಾಷೆ ಮಾಡುತ್ತಿರುತ್ತಾಳೆ’ ಎಂದು ಕರಣ್ ಸಿಂಗ್ ತಮ್ಮ ಪತ್ನಿಯ ಜೊತೆ ನಟಿಸುತ್ತಿರುವುದಕ್ಕೆ ಸಂತಸವನ್ನು ವ್ಯಕ್ತ ಪಡಿಸಿದ್ದಾರೆ.