ಸಾಮಾನ್ಯವಾಗಿ ದಸರಾ ರಜೆ ಸಂದರ್ಭದಲ್ಲಿ ಮನೆ ಮಂದಿಯೆಲ್ಲಾ ಸಿನಿಮಾಗಳಿಗೆ ಹೋಗುತ್ತಾರೆ. ಅಪರೂಪಕ್ಕೆ ಸಿಗುವ ದೀರ್ಘ ರಜೆಯ ಹೊತ್ತಿಗೆ ಭರ್ಜರಿ ಕಾಮಿಡಿ ಸಿನಿಮಾಗಳು ಸಿಕ್ಕಿಬಿಟ್ಟರಂತೂ ಪ್ರೇಕ್ಷಕರ ಪಾಲಿಗೆ ನಿಜಕ್ಕೂ ಹಬ್ಬವೇ. ಈ ಸಮಯಕ್ಕೆ ಹೇಳಿ ಮಾಡಿಸಿದಂತೆ ಇರುವ ಕಾರಣಕ್ಕೋ ಏನೋ ಜನ ಅಧ್ಯಕ್ಷನನ್ನು ಬಾಚಿ ತಬ್ಬಿಕೊಂಡಿದ್ದಾರೆ.
ಅಧ್ಯಕ್ಷ ಇನ್ ಅಮೆರಿಕಾ ಭರಪೂರ ಗೆಲುವನ್ನು ತನ್ನದಾಗಿಸಿಕೊಂಡಿದೆ. ಯೋಗಾನಂದ ಮುದ್ದಾನ್ ನಿರ್ದೇಶನದ ಮೊದಲ ಚಿತ್ರ ಇದಾದರೂ ನೋಡುಗರನ್ನು ನಗೆಗಡಲಿನಲ್ಲಿ ತೇಲುವಂತೆ ಮಾಡಿತ್ತು. ಸಾಕಷ್ಟು ಸಿನಿಮಾಗಳಿಗೆ ಬರಹಗಾರರಾಗಿ ಸಹ ನಿರ್ದೇಶಕರಾಗಿ ದುಡಿದಿದ್ದ ಯೋಗಾನಂದ್ ಬರೆದ ಡೈಲಾಗುಗಳು, ಅದರಲ್ಲಿ ರಾಗಿಣಿ ಮತ್ತು ನಟ ಶರಣ್ ಅಭಿನಯಿಸಿರುವ ರೀತಿಗೆ ಜನ ಫಿದಾ ಆಗಿಬಿಟ್ಟಿದ್ದಾರೆ!
ಸಿನಿಮಾ ಆರಂಭವಾದಾಗಿನಿಂದ ಹಿಡಿದು ಕೊನೆಯ ದೃಶ್ಯದ ತನಕ ಜನ ಕುಳಿತ ಸೀಟಿನಲ್ಲಿ ನೆಟ್ಟಗೆ ಕೂರದೇ, ಎದ್ದೆದ್ದು ಕುಣಿಯುತ್ತಿರುತ್ತಾರೆ. ಮಕ್ಕಳು, ಮಹಿಳೆಯರು ಕೂಡಾ ಈ ಚಿತ್ರವನ್ನು ಎಂಜಾಯ್ ಮಾಡುತ್ತಿದ್ದಾರೆ. ಯಾವುದೇ ಅಶ್ಲೀಲ ಕಾಮಿಡಿ ಇಲ್ಲದೆ, ಸಂದರ್ಭಕ್ಕೆ ತಕ್ಕಂತೆ ಹೊಂದಿಸಿರುವ ಸಂಭಾಷಣೆ ಜನರನ್ನು ಖುಷಿಗೊಳಿಸಿದೆ.
ಒಂದೊಳ್ಳೆ ಸ್ಕ್ರಿಪ್ಟು, ಅದಕ್ಕೆ ಒಪ್ಪುವ ಡೈಲಾಗು ಇದ್ದರೆ ನಟ ಶರಣ್ ಪಾತ್ರವನ್ನೇ ನುಂಗಿಕೊಂಡವರಂತೆ ನಟಿಸಿಬಿಡುತ್ತಾರೆ. ‘ಅಧ್ಯಕ್ಷ ಇನ್ ಅಮೆರಿಕಾ ಚಿತ್ರದಲ್ಲಿ ಆಗಿರುವುದೂ ಅದೇ. ಹೇಳಿಮಾಡಿಸಿದಂತೆ ಪಾತ್ರ ಸಿಕ್ಕಿದ್ದೇ ಶರಣ್ ತಮ್ಮ ಎಂದಿನ ಶೈಲಿಯಲ್ಲಿ ಅಮೋಘವಾಗಿ ನಟಿಸಿದ್ದರು. ಇದಕ್ಕೆ ರಾಗಿಣಿ ಕೂಡಾ ಸಾಥ್ ನೀಡಿದರು.
ಇದೆಲ್ಲದರ ಪ್ರತಿಫಲವೆನ್ನುವಂತೆ ಈಗ ಅಧ್ಯಕ್ಷನ ಗೆಲುವಿನ ಓಟ ಯಾವ ಅಡೆತಡೆಯೂ ಇಲ್ಲದೆ ಸಾಗಿದೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿರುವ ಹೈದರಾಬಾದ್ ಮೂಲದ ಪೀಪಲ್ ಮೀಡಿಯಾ ಫ್ಯಾಕ್ಟರಿಯ ವಿಶ್ವಪ್ರಸಾದ್ ಅವರನ್ನು ಕನ್ನಡ ಚಿತ್ರರಂಗ ಕೈ ಹಿಡಿದಂತಾಗಿದೆ.
CG ARUN

ಸಿನಿಮಾ ತರಬೇತಿ ಸಂಸ್ಥೆ ಶುರುವಾಗುತ್ತಿದೆ..

Previous article

ನಮ್ಮ ಸರ್ಕಾರಗಳು ಯಾಕೆ ಹೀಗೆ ಮಾಡಿದವು?

Next article

You may also like

Comments

Leave a reply

Your email address will not be published. Required fields are marked *