ರಾಕಿಂಗ್ ಸ್ಟಾರ್ ಪತ್ನಿ ರಾಧಿಕಾ ಪಂಡಿತ್ ನಟನೆಯ ಆದಿಲಕ್ಷ್ಮೀ ಪುರಾಣ ಸಿನಿಮಾ ಬಿಡುಗಡೆಗೆ ಡೇಟ್ ಫಿಕ್ಸ್ ಆಗಿದೆ. ನಿರೂಪ್ ಭಂಡಾರಿ ಮತ್ತು ರಾಧಿಕಾ ಜತೆಯಾಗಿ ನಟಿಸುತ್ತಿರುತ್ತಿರುವ ಚಿತ್ರ ಇದಾಗಿದ್ದು, ಜುಲೈ 19ರಂದು ಸಿನಿಮಾವನ್ನು ಬಿಡುಗಡೆ ಮಾಡಲು ಚಿತ್ರತಂಡವು ನಿರ್ಧರಿಸಿದೆ. ಈಗಾಗಲೇ ಸೆನ್ಸಾರ್ ಮಂಡಳಿಯು ಯು/ಎ ಪ್ರಮಾಣ ಪತ್ರವನ್ನೂ ನೀಡಿದೆ. ಸದ್ಯ ವಿಶ್ವಕಪ್ ಬಿಸಿ ಇರುವ ಕಾರಣ ಪ್ರೇಕ್ಷಕರು ಚಿತ್ರ ವೀಕ್ಷಣೆಗೆ ಆಗಮಿಸುವ ಡೌಟಿರುವುದರಿಂದ ರಾಕ್ ಲೈನ್ ವೆಂಕಟೇಶ್ ಸಿನಿಮಾ ಬಿಡುಗಡೆಗೆ ಕೊಂಚ ಬ್ರೇಕ್ ಹಾಕಿದ್ದಾರೆ ಎನ್ನಲಾಗಿದೆ.

ರಾಧಿಕಾ ಪಂಡಿತ್ ಮದುವೆ ಆದ ಬಳಿಕ ನಟಿಸಿರುವ ಸಿನಿಮಾ ಇದಾಗಿದ್ದು, ಸಂತು ಸ್ಟ್ರೇಟ್ ಫಾರ್ವರ್ಡ್ ಬಳಿಕ ಯಾವುದೇ ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ರಾಧಿಕಾ ಪಂಡಿತ್, ನಿರೂಪ್ ಭಂಡಾರಿ ಸೇರಿದಂತೆ ಸೌಮ್ಯ ಜಗನ್ಮೂರ್ತಿ, ಜೋಸೈಮನ್, ಯಶ್ವಂತ್ ಶೆಟ್ಟಿ, ಭರತ್ ಕಲ್ಯಾಣ್ ಮೊದಲಾದ ರಂಗ ಕಲಾವಿದರು ತಾರಾಂಗಣದಲ್ಲಿದ್ದಾರೆ. ಈ ಚಿತ್ರವನ್ನು ಪ್ರಿಯಾ ನಿರ್ದೇಶನ ಮಾಡಿದ್ದಾರೆ. ಇನ್ನು ಪ್ರಶಾಂತ್ ರಾಜಪ್ಪ ಚಿತ್ರದ ಸಂಭಾಷಣೆ ಬರೆದಿದ್ದು, ಪ್ರೀತಾ ಜಯರಾಮನ್ ಛಾಯಾಗ್ರಹಣ ಮಾಡಿದ್ದಾರೆ. ಅನೂಪ್ ಭಂಡಾರಿ ಹಿನ್ನೆಲೆ ಸಂಗೀತವನ್ನು ನೀಡಿದ್ದಾರೆ.

CG ARUN

ಕ್ರೇಜಿಸ್ಟಾರ್ ಹೊಸ ಚಿತ್ರಕ್ಕೆ ಚಾಲನೆ!

Previous article

ಚಾನ್ಸ್ ನೆಪದಲ್ಲಿ ಕೊಲೆಗೆ ಯತ್ನಿಸಿದ ನವ ನಟ!

Next article

You may also like

Comments

Leave a reply

Your email address will not be published. Required fields are marked *