ತೀರಾ ಕಡಿಮೆ ಅವಧಿಯಲ್ಲಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಹುಡುಗಿ ಅದಿತಿ ಪ್ರಭುದೇವಾ.  ಸದ್ಯ ಇರುವ ಹೀರೋಯಿನ್‌ ಗಳಲ್ಲಿ ಈಕೆ ಓಡುವ ಕುದುರೆ. ಅದಿತಿ ನಟನೆಯಲ್ಲಿ ಹಂಡ್ರೆಂಡ್‌ ಪರ್ಸೆಂಟ್‌, ಸಿಂಗಲ್‌ ಟೇಕ್‌ ಆರ್ಟಿಸ್ಟ್.‌ ಒಪ್ಪಿಕೊಂಡ ಸಿನಿಮಾದಲ್ಲಿ ಬೇರೆ ಹುಡುಗಿಯರು ಹತ್ತು ದಿನ ತೆಗೆದುಕೊಳ್ಳುವ ಸಮಯವನ್ನು ಈಕೆ ಐದೇ ದಿನದಲ್ಲಿ ಮುಗಿಸಿ, ಎದ್ದು ಹೋಗಬಲ್ಲಳು. ಯಾವುದೇ ನಖರಾ ಇಲ್ಲ. ಪಾತ್ರ ಒಪ್ಪಿಗೆಯಾದರೆ, ಅಚ್ಚುಕಟ್ಟಾಗಿ ನಟಿಸಿ, ಕೊಟ್ಟ ಕಾಸು ಪಡೆದು ಸೈಲೆಂಟಾಗಿ ಮುಂದೆ ನಡೆಯುತ್ತಾಳೆ. ಈ ಕಾರಣಕ್ಕೇ ಬಹುತೇಕ ಸಿನಿಮಾಗಳಲ್ಲಿ ಈಕೆಯೇ ಹೀರೋಯಿನ್ನು – ಎಂಬಿತ್ಯಾದಿ ಕಾಂಪ್ಲಿಮೆಂಟುಗಳು ಕೇಳಿಬರುತ್ತಿದ್ದವು. ಅದಕ್ಕೆ ತಕ್ಕಂತೆ ತೋತಾಪುರಿ, ಗಜಾನನ ಗ್ಯಾಂಗ್‌, ದಿಲ್‌ ಮಾರ್‌, ಒಂಭತ್ತನೇ ದಿಕ್ಕು, ಚಾಂಪಿಯನ್, ಓಲ್ಡ್‌ ಮಾಂಕ್‌, ಆನ, ಥ್ರಿಬಲ್‌ ರೈಡಿಂಗ್‌, 5ಡಿ, ಅದೊಂದಿತ್ತು ಕಾಲ, ಈಗ ಚಿತ್ರೀಕರಣದಲ್ಲಿರುವ ಮಾಫಿಯಾ ಮುಂತಾದ ಸಿನಿಮಾಗಳಲ್ಲೀಕೆ ಹೀರೋಯಿನ್‌ ಕೂಡಾ ಆಗಿದ್ದಾಳೆ.‌

ಕೈತುಂಬ ಅವಕಾಶಗಳಿರುವ ಸಮಯದಲ್ಲಿ ಸಿನಿಮಾ ನಟಿಯರು ಮದುವೆಯಾಗುವ ನಿರ್ಧಾರ ಮಾಡೋದು ವಿರಳ. ಆದರೆ ಅದಿತಿ ಪ್ರೀತಿಸಿದ ಹುಡುಗ ಯಶಸ್‌ ಜೊತೆಗೆ  ಮದುವೆಯಾಗುತ್ತಿದ್ದಾರೆ. ಇತ್ತೀಚೆಗೆ ನಿಶ್ಚಿತಾರ್ಥ ನೆರವೇರಿದೆ. ಸಮಸ್ಯೆ ಶುರುವಾಗಿರೋದೇ ಈಗ. ಇಷ್ಟು ದಿನ ಅದಿತಿ ಎಷ್ಟು ಸುಲಭವಾಗಿ ಲಭ್ಯವಾಗುತ್ತಿದ್ದಳೋ ಈಗ ಈಕೆಯನ್ನು ಹಿಡಿಯುವುದು ಅಷ್ಟೇ ಕಷ್ಟವಾಗುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ನಿರ್ದೇಶಕ ದಯಾಳ್‌ ಅದಿತಿ ಜೊತೆಗೆ ಎರಡು ಸಿನಿಮಾದಲ್ಲಿ ಕೆಲಸ ಮಾಡಿದವರು. ಈಗ ಈ ಹುಡುಗಿ ಅವರ ಕೈಗೇ ಸಿಗುತ್ತಿಲ್ಲವಂತೆ. ನಲವತ್ತು ಸಲ ಕರೆ ಮಾಡಿದರೂ ಒಂದು ರಿಪ್ಲೇ ಮಾಡುವುದಿಲ್ಲವಂತೆ. ಅದಿತಿಯ ಪ್ರತಿಭೆ ಬಗ್ಗೆ ಅಪಾರ ಗೌರವವಿಟ್ಟುಕೊಂಡಿರುವ ದಯಾಳ್‌ ತಮ್ಮ ಒಂಬತ್ತನೇ ದಿಕ್ಕು ಸಿನಿಮಾದ ಪಬ್ಲಿಸಿಟಿಗೆ ಬರದೇ ಕೈಕೊಡುತ್ತಿರುವುದನ್ನು ನೇರಾನೇರ ವಿರೋಧಿಸಿದ್ದಾರೆ.

ಅದಿತಿ ಸಿನಿಮಾರಂಗದಲ್ಲಿ ಉತ್ತಮ ಹೆಸರು ಪಡೆದ ನಟಿ. ಈಗ ಪರ್ಸನಲ್‌ ಕಾರಣಗಳಿಗೆ ಪ್ರೊಫೆಷನಲ್‌ ಲೈಫಲ್ಲಿ ಆ ಹೆಸರನ್ನು ಕೆಡಿಸಿಕೊಳ್ಳೋದು ಬೇಡ. ಒಂದು ವೇಳೆ ಮಾದ್ಯಮಕ್ಕೆ ಹೆದರಿ ಈಕೆ ಹೊರಗೆ ಕಾಣಿಸಿಕೊಳ್ಳಲು ಹಿಂದೇಟು ಹಾಕುತ್ತಿರಬಹುದು. ಒಮ್ಮೆ ಮೀಡಿಯಾದವರಿಗೆ ಎದುರಾಗಿ ʻವಿಚಾರ ಹೀಗೀಗೆʼ ಅಂದುಬಿಟ್ಟರೆ ಮುಗೀತು. ಅದಕ್ಕೋಸ್ಕರ ಮುಖ ಮರೆಸಿಕೊಳ್ಳೋದರಲ್ಲಿ ಯಾವ ಅರ್ಥವಿದೆ ಅದಿತಿ? ನಿಮ್ಮನ್ನು ನಂಬಿ ಲೆಕ್ಕವಿಲ್ಲದಷ್ಟು ದುಡ್ಡು ಹಾಕಿ ಸಿನಿಮಾ ಮಾಡಿದವರ ಕಡೆಗೂ ವಸಿ ಗಮನ ನೀಡಿ ಪ್ಲೀಸ್!

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

‘ತೋತಾಪುರಿ’ ಹಾಡಿನ ಝಲಕ್ ಕೇಳಿದ್ರಾ…? ಏನ್ ಲಿರಿಕ್ಸ್ ಸ್ವಾಮಿ ಇದು..?

Previous article

ಹೈ ಬಜೆಟ್‌, ರೆಟ್ರೋ ಸಿನಿಮಾ!

Next article

You may also like

Comments

Leave a reply