ರಾಘು ಶಿವಮೊಗ್ಗ ಮತ್ತು ದುನಿಯಾ ವಿಜಯ್ ಕಾಂಬಿನೇಷನ್ನಿನ ಮೊದಲ ಚಿತ್ರ ಕುಸ್ತಿ. ಈ ಹಿಂದೆ ಬಿಡುಗಡೆಯಾಗಿದ್ದ ಟೀಸರ್ ಮೂಲಕವೇ ಈ ಚಿತ್ರ ಹುಟ್ಟಿಸಿರೋ ಕ್ರೇಜ್ ಸಣ್ಣದ್ದೇನಲ್ಲ. ಇದನ್ನು ತಮ್ಮ ವೃತ್ತಿ ಬದುಕಿನ ಮಹತ್ವಪೂರ್ಣ ಚಿತ್ರವಾಗಿ ಪರಿಗಣಿಸಿರುವ ವಿಜಿ ಈ ಪಾತ್ರಕ್ಕಾಗಿ ಭಾರೀ ತಯಾರಿ ಮಾಡುತ್ತಿದ್ದಾರೆ. ಇದೀಗ ಈ ಚಿತ್ರಕ್ಕೆ ನಾಯಕಿಯಾಗಿ ಅದಿತಿ ಪ್ರಭುದೇವ್ ಆಯ್ಕೆಯಾಗಿದ್ದಾರೆ!

ನಾಗಕನ್ನಿಕೆ ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ಭಾರೀ ಅಭಿಮಾನಿ ಬಳಗವನ್ನು ಹೊಂದಿರುವವರು ಅದಿತಿ. ಆ ಬಳಿಕ ಶಿವತೇಜಸ್ ನಿರ್ದೇಶನದ ಧೈರ್ಯ ಚಿತ್ರದಲ್ಲಿ ಅಜೇಯ್ ರಾವ್‌ಗೆ ನಾಯಕಿಯಾಗೋ ಮೂಲಕ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದರು. ಇದೀಗ ಸಿಂಪಲ್ ಸುನಿ ನಿರ್ದೇಶನದ ಬಜಾರ್ ಚಿತ್ರದಲ್ಲಿಯೂ ನಟಿಸಿರೋ ಆದಿತಿ ಆ ಚಿತ್ರ ಬಿಡುಗಡೆಯ ಹೊಸ್ತಿಲಲ್ಲಿರುವಾಗಲೇ ಕುಸ್ತಿಗೆ ಸಜ್ಜಾಗಿದ್ದಾರೆ.

ಅದಿತಿ ನಟನೆಗಿಳಿದಿದ್ದೇ ಆಕಸ್ಮಿಕವಾಗಿ. ಅವರಿಗೆ ಮೊದಲಿನಿಂದಲೂ ನಟಿಯಾಗಬೇಕು ಎನ್ನುವ ಕನಸಿತ್ತು. ಎಂ.ಬಿ.ಎ. ಓದಿ ಮುಗಿಸಿದ ನಂತರ ಆ ಬಯಕೆ ಮತ್ತಷ್ಟು ಹೆಚ್ಚಾಗಿತ್ತು. ದಾವಣಗೆರೆಯಲ್ಲಿ ಎಂ.ಬಿ.ಎ. ಮುಗಿದ ನಂತರ ಇಂಟರ್‍ನ್‌ಶಿಪ್‌ಗಾಗಿ ಬೆಂಗಳೂರಿಗೆ ಬಂದಿದ್ದರಲ್ಲಾ ಅದೇ ಹೊತ್ತಿಗೆ `ಗುಂಡ್ಯಾನ ಹೆಂಡ್ತಿ? ಧಾರಾವಾಹಿಗಾಗಿ ಆಡಿಷನ್ ಕರೆದಿದ್ದರು. ಅದಿತಿ ಕೂಡಾ ಹೋಗಿ ಅಟೆಂಡ್ ಮಾಡಿದ್ದರು. ಅದರಲ್ಲಿ ಪಾಸ್ ಆದ ಕಾರಣದಿಂದ ಗುಂಡ್ಯಾನ್ ಹೆಂಡ್ತಿ ಸೀರಿಯಲ್ಲಿನಲ್ಲಿ ಲೀಡ್ ಕ್ಯಾರೆಕ್ಟರ್ ಸಿಕ್ಕಿತ್ತು. ಆದರೆ ಅದು ಪಕ್ಕಾ ಹಳ್ಳಿ ಹುಡುಗಿಯ ಪಾತ್ರ ಮತ್ತು ಡೀಗ್ಲಾಮರಸ್ ರೋಲ್ ಆಗಿತ್ತು. ಆ ಪಾತ್ರ ಅದಿತಿಗೆ ಅಪಾರ ಜನಪ್ರಿಯತೆ ಮತ್ತು ನಟಿಸಬಹುದು ಎನ್ನುವ ಕಾನ್ಫಿಡೆನ್ಸ್ ಅನ್ನು ಹೆಚ್ಚು ಮಾಡಿತ್ತು.

ಆ ಬಳಿಕ ಕಿರುತೆರೆಯಲ್ಲಿ ನಾಗ ಕನ್ನಿಕೆಯಾಗಿ ಅಬ್ಬರಿಸಿದ್ದ ಅದಿತಿ ಈಗ ಕುಸ್ತಿ ಚಿತ್ರಕ್ಕೆ ನಾಯಕಿಯಾಗುದ ದೊಡ್ಡ ಅವಕಾಶವನ್ನು ತಮ್ಮದಾಗಿಸಿಕೊಂಡಿದ್ದಾರೆ. ಕುಸ್ತಿಯ ನಾಯಕಿ ಪಾತ್ರಕ್ಕಾಗಿ ಬಹು ಹಿಂದಿನಿಂದಲೂ ಹುಡುಕಾಟ ನಡೆಯುತ್ತಿತ್ತು. ಆದರೆ ಅದಕ್ಕೆ ಯಾರೂ ಸೂಟ್ ಆಗಿರಲಿಲ್ಲ. ಕಡೆಗೂ ಈಗ ಅದಿತಿ ಆ ಪಾತ್ರವನ್ನು ತನ್ನದಾಗಿಸಿಕೊಂಡಿದ್ದಾರೆ.

#

CG ARUN

ಈ ಸಿನಿಮಾದಲ್ಲಿ ನಾಯಿಯೂ ನಾಯಕ!

Previous article

ರಾಧಿಕಾ ಮತ್ತು ನಿರೂಪ್ ಭಂಡಾರಿಯ ಆದಿ ಲಕ್ಷ್ಮಿ ಪುರಾಣ!

Next article

You may also like

Comments

Leave a reply

Your email address will not be published. Required fields are marked *