ಮಾಸ್ ಚಿತ್ರಗಳಲ್ಲಿ ಚಾಪು ಮೂಡಿಸಿದ್ದ ಡೆಡ್ಲಿ ಹೀರೋ ಆದಿತ್ಯ ಹೊಸ ಸಿನಿಮಾದತ್ತ ಮುಖ ಮಾಡಿದ್ದಾರೆ. ಈ ಬಾರಿ ಆದಿ ಜತೆಯಾಗಿರುವುದು ಮಾಸ್ ನಿರ್ದೇಶಕನ ಜತೆ. ಹೌದು ಮಾಸ್ ಸಿನಿಮಾಗಳ ಮೂಲಕ ಬೇಡಿಕೆ ಸೃಷ್ಟಿಸಿಕೊಂಡ ಓಂ ಪ್ರಕಾಶ್ ರಾವ್ ಜತೆ ಹೊಸ ಸಿನಿಮಾವೊಂದನ್ನು ಆದಿತ್ಯ ಮಾಡುತ್ತಿದ್ದಾರೆ. ಚಿತ್ರಕ್ಕೆ ಮಾಸ್ಟರ್ ಎಂದು ಟೈಟಲ್ ಇಡಲಾಗಿದ್ದು, ಇದೇ ಮೊದಲ ಬಾರಿಗೆ ಆದಿತ್ಯಕ್ಕೆ ಓಂ ಪ್ರಕಾಶ್ ರಾವ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಆದಿ ತಮ್ಮ
ಹೊಸ ಸಿನಿಮಾದ ಮಾಹಿತಿಯನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್, ತಾರಾಂಗಣ, ತಂತ್ರಜ್ಞರ ವಿವರ ಸದ್ಯದಲ್ಲಿಯೇ ರಿವೀಲ್ ಆಗಲಿದೆ. ಮಾಸ್ಟರ್ ಹೊರತಾಗಿ ಆದಿತ್ಯ ‘ಮುಂದುವರೆದ ಅಧ್ಯಾಯ’, ‘ರಾಕ್ಕರ್’, ‘ರತಾಕ್ಷಾ’, ‘ಮಾಸ್’ ಹೀಗೆ ಏಂಟು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
No Comment! Be the first one.