ಜನರಿಗೆ ಮಂಕು ಬೂದಿ ಎರಚಿ ಸಂಬಂಧಪಟ್ಟ ಸೆಲೆಬ್ರೆಟಿಗಳ ಮೂಲಕ ಜಾಹಿರಾತು ನೀಡಿ ಉತ್ಪನ್ನಗಳನ್ನು ಮಾರಾಟ ಮಾಡುವ ತಯಾರಕರಿಗೆ ಭಾರತ ಸರ್ಕಾರ ಎಚ್ಚರಿಕೆ ನೀಡಿ,  ರಾಜ್ಯಸಭೆಯಲ್ಲಿ ಗ್ರಾಹಕ ರಕ್ಷಣಾ ಮಸೂದೆ 2019ನ್ನು ಲೋಕಸಭೆಯಲ್ಲಿ ಅಂಗೀಕಾರ ಮಾಡಿದೆ.

ಈ ಪ್ರಕಾರವಾಗಿ ಕಳಪೆ ಉತ್ಪನ್ನಗಳ ಪ್ರಚಾರ ಮಾಡಿ ಜನರನ್ನು ದಾರಿತಪ್ಪಿಸುವಂತಿಲ್ಲ. ಅದೇನಾದರೂ ಸರ್ಕಾರದ ಗಮನಕ್ಕೆ ಬಂದದ್ದೇ ಆದರೆ ಮಸೂದೆ ಅನುಸಾರ ಅನುಮೋದಕರು ಹಾಗೂ ತಯಾರಕರಿಗೆ 5 ವರ್ಷ ಜೈಲು ಶಿಕ್ಷೆಯಾಗಬಹುದು. ಜತೆಗೆ 10 ಲಕ್ಷದವರೆಗೆ ದಂಡವನ್ನು ವಿಧಿಸಬಹುದಾಗಿದೆ. ತಪ್ಪು ಪದೇ ಪದೇ ಪುನಾರಾವರ್ತಿಸಿದರೆ 50 ಲಕ್ಷದವರೆಗೆ ದಂಡ ವಿಧಿಸಬಹುದಾಗಿದೆ. ಹಾಗಾಗಿ ಜಾಹೀರಾತು ಕಂಪನಿಗಳು ಹಾಗೂ ಜಾಹಿರಾತು ಪರ ಪ್ರಚಾರ ಮಾಡುವ ಸೆಲೆಬ್ರೆಟಿಗಳು ಇನ್ನಾದರೂ ಎಚ್ಚರಿಕೆ ವಹಿಸಬೇಕಿದೆ.  ಟಿವಿ, ರೇಡಿಯೋ, ಮುದ್ರಣ, ಹೊರಗಿನ ಜಾಹಿರಾತು, ಈ -ಕಾಮರ್ಸ್, ಹೀಗೆ ಎಲ್ಲಿಯೂ ಕೂಡಾ ತಪ್ಪಿಯೂ ತಪ್ಪು ಜಾಹಿರಾತು ನೀಡಿ ಜನರನ್ನು ಮೋಸ ಮಾಡುವಂತಿಲ್ಲ.  ಈಗೀಗ ನಾನಾ ತರದ ಜಾಹಿರಾತುಗಳು, ನಟ-ನಟಿಯರ ಥಳಕು ಬಳಕು ನೋಡಿ ಜನರು ಆ ಉತ್ಪನ್ನಗಳನ್ನು ತೆಗೆದುಕೊಂಡು ಮೋಸ ಹೋಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಗ್ರಾಹಕರ ಹಕ್ಕನ್ನು ರಕ್ಷಿಸಲು, ಮೋಸ ಹೋಗುವುದನ್ನು ತಡೆಗಟ್ಟಲು ಈ ಮಸೂದೆಯನ್ನು ಜಾರಿಗೊಳಿಸಲಾಗಿದೆ. ಜಾಗೋ ಗ್ರಾಹಕ್ ಜಾಗೋ!

CG ARUN

ಜಬಾರಿಯಾ ಜೋಡಿ ಮೇಲೆ ಸೆನ್ಸಾರ್ ಕೆಂಗಣ್ಣು!

Previous article

ವರುಣನ‌ ‘ಮುನಿ’ಸಿಗೆ ಚಿತ್ರರಂಗ ತತ್ತರ…

Next article

You may also like

Comments

Leave a reply

Your email address will not be published. Required fields are marked *