ಗಿರ್ ಗಿಟ್ಲೆ ಅನ್ನೋ ವಿಶಿಷ್ಟ ಟೈಟಲ್ಲಿನ ಚಿತ್ರವೀಗ ಪ್ರತೀ ಪ್ರೇಕ್ಷಕರ ಗಮನವನ್ನೂ ತನ್ನತ್ತ ಗಿರಕಿ ಹೊಡೆಯುವಂತೆ ಮಾಡಿದೆ. ಇದರ ನಿರ್ದೇಶಕ ರವಿಕಿರಣ್ ರಿಯಲ್ ಸ್ಟಾರ್ ಉಪೇಂದ್ರ ಅವರ ಅಪ್ಪಟ ಶಿಷ್ಯ. ಹಾಗಿರೋದರಿಂದಲೇ ಈ ಚಿತ್ರದಲ್ಲಿಯೂ ಉಪ್ಪಿ ಫ್ಲೇವರಿನ ಪ್ರಯೋಗಾತ್ಮಕ ವಿಚಾರಗಳೀಗ ಎಲ್ಲರನ್ನು ಸೆಳೆದುಕೊಂಡಿದೆ. ಇದೇ ಮಾರ್ಚ್ 15ರಂದು ತೆರೆ ಕಾಣಲಿರೋ ಈ ಚಿತ್ರದ ಮೂಲಕವೇ ಕಿರುತೆರೆಯ ಸ್ಟಾರ್ ನಟಿ ವೈಶ್ಣವಿ ಗೌಡ ನಾಯಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.
ಈ ವೈಶ್ಣವಿ ಗೌಡ ತಮ್ಮ ಒರಿಜಿನಲ್ ಹೆಸರನ್ನೇ ಮರೆಯಾಗಿಸುವಂತೆ ಧಾರಾವಾಹಿಯ ಸನ್ನಿಧಿ ಎಂಬ ಪಾತ್ರದಿಂದ ಪ್ರಸಿದ್ಧಿ ಪಡೆದಿರುವವರು. ಕಿರುತೆರೆಯಲ್ಲಿ ಫೇಮಸ್ ಆಗಿರೋ ಅಗ್ನಿಸಾಕ್ಷಿ ಎಂಬ ಧಾರಾವಾಹಿಯಲ್ಲಿ ಸನ್ನಿಧಿ ಅನ್ನೋ ಮುಖ್ಯ ಪಾತ್ರ ಮಾಡುತ್ತಿರುವವರು ವೈಶ್ಣವಿ ಗೌಡ. ಈ ಪಾತ್ರದ ಮೂಲಕವೇ ಕಿರುತೆರೆ ಪ್ರೇಕ್ಷಕರ ಪಾಲಿಗಿವರು ಮನೆಮಗಳೇ ಆಗಿ ಹೋಗಿದ್ದಾರೆ.
ಇಂಥಾ ಸನ್ನಿಧಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆಂಬ ಬಗ್ಗೆ ಬಹು ಹಿಂದಿನಿಂದಲೂ ಸುದ್ದಿಯಾಗುತ್ತಲೇ ಇತ್ತು. ಆದರೆ ಗಿರ್ ಗಿಟ್ಲೆ ಚಿತ್ರದ ಮೂಲಕ ಅದು ನಿಜವಾಗಿದೆ. ಆದರೆ ಈ ಚಿತ್ರದಲ್ಲಿ ವೈಶ್ಣವಿ ಪಾತ್ರ ಹೇಗಿರುತ್ತೆ ಎಂಬುದರ ಬಗ್ಗೆ ಚಿತ್ರ ತಂಡ ಸಂಪೂರ್ಣ ಮಾಹಿತಿ ಬಿಟ್ಟು ಕೊಟ್ಟಿಲ್ಲ. ಆದ್ದರಿಂದಲೇ ವೈಷ್ಣವಿ ಇಲ್ಲಿ ಸನ್ನಿಧಿಯಂಥಾದ್ದೇ ಪಾತ್ರ ಮಾಡಿದ್ದಾರಾ ಅನ್ನೋ ಕುತೂಹಲವಿದೆ. ಆದರೆ ಇದೆಲ್ಲದರಾಚೆಗೆ ಅಚ್ಚರಿಯಂತೆ ವೈಶ್ಣವಿ ಪಾತ್ರ ಮೂಡಿ ಬಂದಿದೆಯಂತೆ.
No Comment! Be the first one.