ಈಗ ತೆರೆಗೆ ಬರುತ್ತಿರುವ ಬಡ್ಡಿ ಮಗನ್ ಲೈಫು ಚಿತ್ರದ ನಾಯಕ ನಟಿ ಐಶ್ವರ್ಯ ರಾವ್. ಈಗಾಗಲೇ ರಣ ಹೇಡಿ ಸಿನಿಮಾದಲ್ಲೂ ಕೂಡಾ ಮಾಗಿದ ಅಭಿನಯ ನೀಡಿರುವ ಐಶ್ವರ್ಯ ಬಡ್ಡಿಮಗನ ಮಗಳಾಗಿ ನಟಿಸುತ್ತಿದ್ದಾರೆ. ಈ ಚಿತ್ರ ಮತ್ತು ಅದರ ಪಾತ್ರದ ಕುರಿತು ಐಶ್ವರ್ಯಾ ರಾವ್ ಮಾತಾಡಿದ್ದಾರೆ. ಅದರ ವಿವರ ಇಲ್ಲಿದೆ…

ನಿರೂಪಣೆ: ಸುಮ .ಜಿ 

ಫೋಟೋ : ವಿನಯ್ ಕುಮಾರ್ 

ಇದು ನಾನು ನಟಿಸಿದ ಮೊದಲ ಸಿನಿಮಾ. ಆದರೆ ಬಿಡುಗಡೆಯಾಗುತ್ತಿರುವ ಎರಡನೇ ಚಿತ್ರ. ’ಬಡ್ಡಿಮಗನ್ ಲೈಫು’.. ಈ ಚಿತ್ರ ಒಂದು ಕಂಪ್ಲೀಟ್ ಕಾಮಿಡಿ, ಎಂಟರ್‌ಟೈನ್‌ಮೆಂಟ್, ರೊಮ್ಯಾನ್ಸ್ ಇರುವಂತಹ ಚಿತ್ರ. ಈ ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಮಾಯಾ. ಈಕೆ ಮೇಜರ್ ಆಗಲು ಅಂದ್ರೆ ೧೮ ವರ್ಷ ತುಂಬಲು ಇನ್ನೂ ಒಂದು ವಾರ ಟೈಮ್ ಇದೆ. ಎದುರು ಮನೆ ಹುಡುಗನ್ನ ಇಷ್ಟಪಟ್ಟು ಮನೆಯವರನ್ನೆಲ್ಲಾ ಬಿಟ್ಟು, ಓಡಿಹೋಗ್ತಿದ್ದಾಳೆ. ಅಷ್ಟು ಪ್ರಬುದ್ಧತೆ ಇಲ್ಲದೆ ತಕ್ಷಣಕ್ಕೆ ನಿರ್ಧಾರ ಕೈಗೊಳ್ಳುವಂತಹ ಹುಡುಗಿ, ಮುಂದೆ ಸಮಾಜವನ್ನು ಹೇಗೆ ನಿಭಾಯಿಸುತ್ತಾಳೆ ಅನ್ನೊದನ್ನ ಬಹಳ ಚೆನ್ನಾಗಿ ರೂಪಿಸಿದ್ದಾರೆ ನಿರ್ದೇಶಕರಾದ ಪವನ್ ಹಾಗೂ ಪ್ರಸಾದ್ ಅವರುಗಳು.

ಸಿನಿಮಾದ ಶೂಟಿಂಗ್ ಅನುಭವದ ಬಗ್ಗೆ ಹೇಳಬೇಕೆಂದರೆ, ತುಂಬಾ ಅಡ್ವೆಂಚರಸ್ ಆಗಿತ್ತು ಅಂತಲೇ ಹೇಳಬಹುದು. ನನ್ನ ತಂದೆ ಪಾತ್ರ ಮಾಡಿರುವಂತಹ ರಾಜ್‌ವಾಡಿ ಅವರು ರಂಗಭೂಮಿಯಿಂದ ಬಂದಂತಹ ಕಲಾವಿದರು. ನನಗೆ ಬಹಳ ಪ್ರೋತ್ಸಾಹ ನೀಡಿದ್ದಾರೆ. ಸಂಬಂಧಗಳ ಅರ್ಥವನ್ನು ಈ ಚಿತ್ರದ ಮೂಲಕ ತಿಳಿಸಿದ್ದೇವೆ.

ಪ್ರತಿಯೊಬ್ಬರೂ ನೋಡಲೇ ಬೇಕಾದ ಸಿನಿಮಾ ಇದು. ಮಕ್ಕಳನ್ನು ಹೆತ್ತವರು ಮತ್ತು ಮಕ್ಕಳಿಗೆ ಅಮೂಲ್ಯವಾದ ಸಂದೇಶ ಕೂಡಾ ಈ ಚಿತ್ರದಲ್ಲಿದೆ. ಈ ಚಿತ್ರ ನನಗೆ ದೊಡ್ಡ ಮಟ್ಟದಲ್ಲಿ ಹೆಸರು ಮತ್ತು ಇನ್ನೂ ಹೆಚ್ಚಿನ ಅವಕಾಶ ತಂದುಕೊಡಲಿದೆ ಅನ್ನೋ ನಂಬಿಕೆ ನನ್ನಲ್ಲಿದೆ…

CG ARUN

ಅಭಿನಯ ಚತುರ ಈಗ ಕಿರುತೆರೆಗೆ

Previous article

ಶ್ರೀಮನ್ನಾರಾಯಣನ ಸಾಹಸಗಾಥೆ!

Next article

You may also like

Comments

Leave a reply

Your email address will not be published. Required fields are marked *