ಬಾಲಿವುಡ್ ನ ಹಿರಿಯ ಸಾಹಸ ನಿರ್ದೇಶಕ ಅಜಯ್ ದೇವಗನ್ ತಂದೆ ವೀರು ದೇವಗನ್ ವಿಧಿವಶರಾಗಿದ್ದಾರೆ. ನಿನ್ನೆ ಮುಂಜಾನೆ ಮುಂಬೈನ ತಮ್ಮ ನಿವಾಸದಲ್ಲಿ ವೀರು ದೇವಗನ್ ಕೊನೆಯುಸಿರೆಳೆದಿದ್ದಾರೆ. ಬಾಲಿವುಡ್ನ ಅನೇಕ ನಟ–ನಟಿಯರು ಸೇರಿದಂತೆ ಹಿರಿಯ ನಿರ್ದೇಶಕರು ವೀರು ದೇವಗನ್ ಸಾವಿಗೆ ಕಂಬನಿ ಮಿಡಿದಿದ್ದಾರೆ. ವೀರು ದೇವಗನ್ 80ಕ್ಕೂ ಹೆಚ್ಚು ಹಿಂದಿ ಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡಿದ್ದಾರೆ. ಅಲ್ಲದೇ, ಅಜಯ್ ದೇವಗನ್ ನಟನೆಯ ಹಿಂದುಸ್ತಾನ್ ಕಿ ಕಸಂ ಅನ್ನೋ ಚಿತ್ರವನ್ನು ನಿರ್ದೇಶಿಸಿದ್ದರು. ಇನ್ಕಾರ್ (1977), ಮಿ. ನಟ್ವರ್ಲಾಲ್ (1979), ಕ್ರಾಂತಿ (1981), ಹಿಮ್ಮತ್ವಾಲಾ (1983), ಶಾಹನ್ ಶಾ(1988), ತ್ರಿದೇವ್ (1989), ಬಾಪ್ ನುಂಬ್ರಿ ಬೇಟಾ ಡಸ್ ನುಂಬ್ರಿ (1990), ಫೂಲ್ ಔರ್ ಕಾಂಟೆ (1991) ) ಮುಂತಾದ ಚಿತ್ರಗಳಿಗೆ ವೀರು ದೇವಗನ್ ಸಾಹಸ ನಿರ್ದೇಶನ ಮಾಡಿದ್ದಾರೆ.
No Comment! Be the first one.